ಪದವಿ ಇಲ್ಲ.. ಜೇಬಿನಲ್ಲಿ ಐವತ್ತೇ ರೂಪಾಯಿ ಇದ್ರೂ 10,000 ಕೋಟಿ ವ್ಯವಹಾರ ನಡೆಸಿದ ವ್ಯಕ್ತಿ

By Suvarna News  |  First Published Jan 22, 2024, 4:49 PM IST

ಜೇಬಿನಲ್ಲಿ ಒಂದು ರೂಪಾಯಿ ಇದ್ರೂ ಅದನ್ನು ಐವತ್ತು ರೂಪಾಯಿ ಮಾಡುವ ಕಲೆ ಗೊತ್ತಿರಬೇಕು. ಈ ಬುದ್ಧಿವಂತಿಕೆ ಇದ್ದಲ್ಲಿ ವ್ಯಕ್ತಿ ಶ್ರೀಮಂತನಾಗುತ್ತಾನೆ, ಯಶಸ್ವಿಯಾಗ್ತಾರೆ. ಅದಕ್ಕೆ ಕೇರಳ ಮೂಲಕ ಈ ವ್ಯಕ್ತಿ ಉತ್ತಮ ಉದಾಹರಣೆ.
 


ಕಷ್ಟಪಟ್ಟು ಮುಂದೆ ಬಂದು ಕೋಟ್ಯಾಧಿಪತಿಗಳಾದ, ಸಾಧಕರಾದವರು ಭಾರತದಲ್ಲಿ ಬಹಳ ಮಂದಿ ಇದ್ದಾರೆ. ಕೈನಲ್ಲಿ ಹಣವಿಲ್ಲದೆ ಮನೆಯಿಂದ ಹೊರಗೆ ಬಂದು, ದಿನವಿಡಿ ದುಡಿದು, ಶ್ರಮವಹಿಸಿ ತಮ್ಮದೇ ಜಗತ್ತು ಕಟ್ಟಿದ ಅನೇಕ ಮಂದಿ ನಮ್ಮಲ್ಲಿದ್ದಾರೆ. ಇನ್ನು ಕೆಲವರು ಸರಿಯಾಗಿ ಊಟವಿಲ್ಲದೆ, ರಾತ್ರಿ ನೆಲೆಸಲು ಜಾಗವಿಲ್ಲದೆ ಎಲ್ಲೋ ಉಳಿದುಕೊಂಡು, ಇನ್ನೆಲ್ಲೋ ಕೆಲಸ ಮಾಡಿ ಸಾಧಿಸಿದವರಿದ್ದಾರೆ. ಈ ಯಶಸ್ವಿ ಉದ್ಯಮಿಗಳಲ್ಲಿ ರಿಯಲ್ ಎಸ್ಟೇಟ್ ಕಂಪನಿ ಶೋಭಾ ಲಿಮಿಟೆಡ್‌ನ ಸಂಸ್ಥಾಪಕರು ಸೇರ್ತಾರೆ. ಕೇವಲ ಐದು ರೂಪಾಯಿ ಹಿಡಿದು ಮನೆಯಿಂದ ಬಂದ ಅವರ ಬಳಿ ಈಗ  10,000 ಕೋಟಿಗಿಂತಲೂ ಹೆಚ್ಚು ಆಸ್ತಿ ಇದೆ. ನಾವಿಂದು ಶೋಭಾ ಲಿಮಿಟೆಡ್ ಸಂಸ್ಥಾಪಕರ ಸಾಧನೆ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ.

ಯಾರು ಶೋಭಾ ಲಿಮಿಟೆಡ್ (Shobha Limited) ನ ಸಂಸ್ಥಾಪಕರು : ರಿಯಲ್ ಎಸ್ಟೇಟ್ (Relay Estate) ನಲ್ಲಿ ಶೋಭಾ ಲಿಮಿಟೆಡ್ ಗೆ ಉತ್ತಮ ಹೆಸರಿದೆ. ಗುಣ ಮಟ್ಟದ ಮನೆ ನಿರ್ಮಾಣ ಮಾಡುವುದ್ರಲ್ಲಿ ಈ ಕಂಪನಿ (Company) ಮುಂದಿದೆ. ಈ ಕಂಪನಿ ಸ್ಥಾಪಕ ಹಾಗೂ ಮಾಜಿ ಅಧ್ಯಕ್ಷರ ಹೆಸರು ಪಿಎನ್ ಸಿ ಮೆನನ್. ತಂದೆ ಆಸ್ತಿ ಅಥವಾ ಕುಟುಂಬಸ್ಥರ ಆಸ್ತಿಯಿಂದ ಮುಂದೆ ಬಂದ ವ್ಯಕ್ತಿ ಇವರಲ್ಲ. ಓದಿದ್ದು ಒಂದು ವಿಷ್ಯ ಮಾಡಿದ್ದು ಇನ್ನೊಂದು ಕೆಲಸ ಎನ್ನುವ ಹಾಗೆಯೇ ಪಿಎನ್ ಸಿ ಮೆನನ್ ಕೂಡ, ಓದದ ಕ್ಷೇತ್ರಕ್ಕೆ ಧುಮುಖಿ ಯಶಸ್ಸು ಕಂಡಿದ್ದಾರೆ.

Tap to resize

Latest Videos

ಅಯೋಧ್ಯೆ ಭಕ್ತಿಗೆ ಮಾತ್ರವಲ್ಲ,ಹೂಡಿಕೆಗೂ ನೆಚ್ಚಿನ ತಾಣ;ಇಂದು 250 ನಿವೇಶನ ಬಿಡುಗಡೆಗೊಳಿಸಿದ ರಿಯಲ್ ಎಸ್ಟೇಟ್ ಸಂಸ್ಥೆ

ಪಿಎನ್ಸಿ ಮೆನನ್ ಕೇರಳದ ಪಾಲ್ಘಾಟ್ ಮೂಲದವರು. ಅವರು ಕೃಷಿ ಕುಟುಂಬದಲ್ಲಿ ಜನಿಸಿದವರು. ಬಾಲ್ಯದಲ್ಲಿಯೇ ತಂದೆ ನೆರಳನ್ನು ಕಳೆದುಕೊಳ್ಳಬೇಕಾಯ್ತು. ಕುಟುಂಬದಲ್ಲಿ ನಾನಾ ಸಮಸ್ಯೆಗಳು ಕಾಡಲು ಶುರುವಾಯ್ತು. ಇದ್ರಿಂದಾಗಿ ಮೆನನ್ ಗೆ ಓದಲು ಸಾಧ್ಯವಾಗ್ತಿಲ್ಲ. ಕುಟುಂಬದ ಜವಾಬ್ದಾರಿ ಮೆನನ್ ಮೇಲೆ ಬಿದ್ದ ಕಾರಣ ಓದು ಬಿಟ್ಟು ಕೆಲಸ ಶುರು ಮಾಡಿದ್ರು ಮೆನನ್. ಸ್ಥಳೀಯ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಮೆನನ್ ಕೇವಲ ಐವತ್ತು ರೂಪಾಯಿ ತೆಗೆದುಕೊಂಡು ಮನೆಯಿಂದ ಹೊರ ಬಿದ್ದಿದ್ದರು.

ರಿಯಲ್ ಎಸ್ಟೇಟ್ ಬಗ್ಗೆ ಅವರು ಮಾಡಿದ ಆಲೋಚನೆ ಅವರ ದಿಕ್ಕನ್ನು ಬದಲಿಸಿತು. 1990 ರ ದಶಕದಲ್ಲಿ ಕಟ್ಟಡ ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದ ಸಾಮರ್ಥ್ಯವನ್ನು ಅರಿತುಕೊಂಡು ಮೆನನ್, ಆ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ರು. 1995 ರಲ್ಲಿ ಶೋಭಾ ಡೆವಲಪರ್ಸ್ ಶುರು ಮಾಡಿದ್ರು. ಅಲ್ಲಿಂದ ಪಿಎನ್ ಸಿ ಮೆನನ್ ತಿರುಗಿ ನೋಡ್ಲಿಲ್ಲ.

ವಿದೇಶದಲ್ಲಿ ಫೇಮಸ್ ಶೋಭಾ ಡೆವಲಪರ್ಸ್ : ಮಧ್ಯ ಪ್ರಾಚ್ಯದಲ್ಲಿ ಶೋಭಾ ಡೆವಲಪರ್ಸ್ ಹೆಚ್ಚು ಕಾರ್ಯನಿರ್ವಹಿಸುತ್ತಿದೆ. ರಿಯಲ್ ಎಸ್ಟೇಟ್, ಒಳಾಂಗಣ ವಿನ್ಯಾಸದಲ್ಲಿ ಮೆನನ್ ಪದವಿ ಪಡೆಯಲಿಲ್ಲ. ಆದ್ರೆ ಆ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಅಪಾರ. ಮೆನನ್ ಯುಎಇಯ ಹೆಸರಾಂತ ವಾಸ್ತುಶಿಲ್ಪಿ. ಒಮಾನ್‌ನ ಸುಲ್ತಾನ್ ಕಬೂಸ್ ಗ್ರ್ಯಾಂಡ್ ಮಸೀದಿ ಮತ್ತು ಅಲ್ ಬುಸ್ತಾನ್ ಅರಮನೆಯಂತಹ ಗಮನಾರ್ಹ ರಚನೆಗಳ ಒಳಾಂಗಣವನ್ನು ಮೆನನ್ ವಿನ್ಯಾಸಗೊಳಿಸಿದ್ದಾರೆ. ಬ್ರೂನಿ ಸುಲ್ತಾನ್ ಮನೆಯನ್ನು ಮೊದಲು ವಿನ್ಯಾಸಗೊಳಿಸಿದ್ದೇ ಮೆನನ್. 

ಭಾರತೀಯರ ದೈವ ನಂಬಿಕೆ ಮುಂದೆ 27 ಟ್ರಿಲಿಯನ್ ಅಮೆರಿಕನ್ ಆರ್ಥಿಕತೆ ತೃಣಕ್ಕೆ ಸಮಾನ

ಭಾರತದ ಇಷ್ಟು ರಾಜ್ಯಗಳಲ್ಲಿದೆ ಕಂಪನಿ :  ಓಮನ್ ಸೇರಿದಂತೆ ಅರಬ್ ದೇಶದಲ್ಲಿ ಇವರ ಕಂಪನಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಭಾರತದಲ್ಲಿ ಶೋಭಾ ಲಿಮಿಡೆಟ್ ಹೆಸರಿನಲ್ಲಿ ಅವರ ಕಂಪನಿ ಇದೆ. ಶೋಭಾ ಡೆವಲಪರ್ಸ್ ಕಂಪನಿಯ ಮಾರುಕಟ್ಟೆ ಮೌಲ್ಯ 14,100 ಕೋಟಿ ರೂಪಾಯಿ. ಗಲ್ಫ್ ದೇಶಗಳಲ್ಲಿ ರಿಯಲ್ ಎಸ್ಟೇಟ್ ಕಂಪನಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ  ಶೋಭಾ ಡೆವಲಪರ್ಸ್ ಭಾರತದಲ್ಲಿ ಹನ್ನೆರಡು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. 
 

click me!