Passport ಹರಿದ್ರೆ ಭಯಬೇಡ : ಮರು ಮುದ್ರಣ ನಿಯಮ ಗೊತ್ತಿರಲಿ ಯಾವುದಕ್ಕೂ

Published : Jul 20, 2022, 04:33 PM IST
Passport ಹರಿದ್ರೆ ಭಯಬೇಡ : ಮರು ಮುದ್ರಣ ನಿಯಮ ಗೊತ್ತಿರಲಿ ಯಾವುದಕ್ಕೂ

ಸಾರಾಂಶ

ಪಾಸ್ಪೋರ್ಟ್ ಬಹಳ ಮುಖ್ಯ. ವಿದೇಶಿ ಪ್ರವಾಸಕ್ಕೆ ಆಗಾಗ ಹೋಗ್ತಿರುವವರು ಇದನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು. ಕೆಲವೊಮ್ಮೆ ಅರಿವಿಲ್ಲದೆ ಪಾಸ್ಪೋರ್ಟ್ ಹಾಳಾಗಿರುತ್ತದೆ. ಆಗ ಆತಂಕಪಡುವ ಅಗತ್ಯವಿಲ್ಲ.  

ವಿದೇಶಿ ಪ್ರವಾಸಕ್ಕೆ ಪಾಸ್ಪೋರ್ಟ್ ಅತ್ಯಗತ್ಯ. ಇದಲ್ಲದೆ ಪಾಸ್ಪೋರ್ಟನ್ನು ದಾಖಲೆ ರೂಪದಲ್ಲಿ ಬಳಸಲಾಗುತ್ತದೆ.  ಪಾಸ್ಪೋರ್ಟನ್ನು ಅನೇಕ ಕಚೇರಿಗಳಲ್ಲಿ ದಾಖಲೆ ರೂಪದಲ್ಲಿ ಸ್ವೀಕಾರ ಮಾಡುತ್ತಾರೆ. ಭಾರತದಲ್ಲಿ ಪಾಸ್ಪೋರ್ಟ್ ಗೆ ಸಂಬಂಧಿಸಿದಂತೆ ಅದರದೆ ಆದ ಕಾನೂನುಗಳಿವೆ. ಕಾನೂನು ಉಲ್ಲಂಘನೆ ಮಾಡಿದ್ರೆ ವಿಚಾರಣೆಗೊಳಪಡಬೇಕಾಗುತ್ತದೆ. ಹಾಗೆ ಕೆಲವೊಮ್ಮೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಪಾಸ್ಪೋರ್ಟ್ ಸುರಕ್ಷಿತವಾಗಿಟ್ಟುಕೊಳ್ಳಬೇಕು. ಮಕ್ಕಳ ಕೈಗೆ ಸಿಕ್ಕರೆ ಅಥವಾ ಮಳೆಯಲ್ಲಿ ತೋಯ್ದರೆ ಇಲ್ಲವೇ ಬೇರೆ ಅನೇಕ ಕಾರಣಕ್ಕೆ ಪಾಸ್ಪೋರ್ಟ್ (Passport ) ಹರಿದು ಹೋಗುತ್ತದೆ. ಇತ್ತೀಚಿಗೆ ಪಾಸ್ಪೋರ್ಟ್ ಗೆ ಸಂಬಂಧಿಸಿದಂತೆ ಎರಡು ಘಟನೆ ವರದಿಯಾಗಿದೆ. ಭೋಪಾಲ್ (Bhopal) ನಲ್ಲಿ ವ್ಯಕ್ತಿಯೊಬ್ಬನ ಪಾಸ್ಪೋರ್ಟ್ ಮೇಲೆ ಮಗು ಚಿತ್ರ ಬಿಡಿಸಿದೆ. ಇನ್ನೊಂದು ಪ್ರಕರಣದಲ್ಲಿ ಗರ್ಲ್ ಫ್ರೆಂಡ್ (Girlfriend ) ಜೊತೆ ಪ್ರವಾಸಕ್ಕೆ ಹೋದ ವಿಷ್ಯ ಪತ್ನಿಗೆ ತಿಳಿಯಬಾರದು ಎಂಬ ಕಾರಣಕ್ಕೆ ಪತಿ, ಪಾಸ್ಪೋರ್ಟ್ ನ ಕೆಲ ಪೇಜ್ ಹರಿದಿದ್ದಾನೆ. ಇದ್ರ ಬಗ್ಗೆ ಪೊಲೀಸರು ವಿಚಾರಣೆ ಕೂಡ ನಡೆಸಿದ್ದಾರೆ. ನಿಮ್ಮ ಪಾಸ್ಪೋರ್ಟ್ ಹರಿದ್ರೆ ನೀವು ಭಯಪಡಬೇಕಾಗಿಲ್ಲ. ಅದರ ಮರು ಮುದ್ರಣವನ್ನು ನೀವು ಪಡೆಯಬಹುದು. ಪಾಸ್ಪೋರ್ಟ್ ಹರಿದ್ರೆ ಏನು ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ. 

ಪಾಸ್ಪೋರ್ಟ್ ಹರಿದರೆ, ಹಾಳಾದ್ರೆ ಹೀಗೆ ಮಾಡಿ : ಹರಿದ ಪಾಸ್ಪೋರ್ಟ್ ಬದಲು ಹೊಸ ಪಾಸ್ಪೋರ್ಟ್ ನಿಮಗೆ ಬೇಕು ಎಂದಾದ್ರೆ ಮೊದಲು ನೀವು ಪೊಲೀಸ್ ಠಾಣೆಗೆ ಹೋಗಬೇಕು. ಅಲ್ಲಿ ನೀವು ಪಾಸ್ಪೋರ್ಟ್ ಹರಿದ ಬಗ್ಗೆ ದೂರು ನೀಡಬೇಕಾಗುತ್ತದೆ. ಇದರ ನಂತರ, ನೀವು ಪಾಸ್ಪೋರ್ಟ್ ಸೇವಾ ಕೇಂದ್ರ ಅಥವಾ ಪ್ರಾದೇಶಿಕ ಕಚೇರಿಯಲ್ಲಿ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲಿ ನಿಮ್ಮ ವಿವರಗಳು ಮತ್ತು ಅಗತ್ಯ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಪೊಲೀಸರಿಗೆ ನೀಡಿದ ದೂರಿನ ಪ್ರತಿಯನ್ನು ಕೂಡ ನೀವು ನೀಡಬೇಕಾಗುತ್ತದೆ. ನಂತರ ನಿಮ್ಮ ವಿಷಯ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯನ್ನು ತಲುಪುತ್ತದೆ. ಅಲ್ಲಿ ಪರಿಶೀಲನೆ ನಂತ್ರ ಮೂರರಿಂದ ಒಂದು ವಾರದೊಳಗೆ ಪಾಸ್ಪೋರ್ಟ್ ಮರು ಮುದ್ರಣವಾಗಿ ನಿಮ್ಮ ಕೈಗೆ ಬರುತ್ತದೆ.

ಬರೀ ಬಟ್ಟೆ ಅಂಗಡಿ ಮಾತ್ರವಲ್ಲ, ಈಸಿಯಾಗಿ ಶುರು ಮಾಡ್ಬಹುದು ಈ ಬ್ಯುಸಿನೆಸ್

ಪಾಸ್‌ಪೋರ್ಟ್ ಮರು ವಿತರಣೆಗೆ ಎಷ್ಟು ಖರ್ಚು ? : ನಿಮ್ಮ ಪಾಸ್‌ಪೋರ್ಟ್ ಹಾಳಾಗಿದ್ದರೆ ಹಾಗೆ ನೀವು ಪಾಸ್‌ಪೋರ್ಟ್ ಅನ್ನು ಮರು ನೀಡಲು ಬಯಸಿದ್ದರೆ ವಿದೇಶಿ ಮಂತ್ರಾಲಯದ ನಿಯಮಗಳನ್ನು ಪಾಲಿಸಬೇಕು. ಪಾಸ್ಪೋರ್ಟ್ ಮರು ಪಡೆಯಲು ನೀವು ಸುಮಾರು 3 ಸಾವಿರ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ.  

ಪಾಸ್ಪೋರ್ಟ್ ಕಳೆದು ಹೋದರೆ ಏನು ಮಾಡಬೇಕು? : ನಿಮ್ಮ ಪಾಸ್‌ಪೋರ್ಟ್ ಹರಿದು ಹೋದ್ರೆ ಮಾತ್ರವಲ್ಲ ಕಳೆದುಹೋದರೂ  ನೀವು ಭಯಪಡುವ ಅಗತ್ಯವಿಲ್ಲ. ನಿಮ್ಮ ಪಾಸ್‌ಪೋರ್ಟ್ ಅನ್ನು ನೀವು ಮರು ಪಡೆಯಬಹುದು. ನೀವು ಪಾಸ್‌ಪೋರ್ಟ್ ಕಳೆದುಕೊಂಡರೆ ವಿದೇಶಿ ಸಚಿವಾಲಯದ ನಿಯಮಗಳನ್ನು ಪಾಲನೆ ಮಾಡ್ಬೇಕು. ಮೂರು ಹಂತಗಳನ್ನು ಅನುಸರಿಸಬೇಕು. ಮೊದಲು ಪೊಲೀಸ್ ಠಾಣೆಗೆ ಹೋಗಿ ನಿಮ್ಮ ಪಾಸ್‌ಪೋರ್ಟ್ ಕಳೆದು ಹೋಗಿದೆ ಎಂದು ದೂರು ನೀಡಿ. ನಂತರ ಈ ಮಾಹಿತಿಯನ್ನು ಪಾಸ್‌ಪೋರ್ಟ್ ಕಚೇರಿ ಮತ್ತು ರಾಯಭಾರ ಕಚೇರಿಗೆ ನೀಡಿ. ಇದರ ನಂತರ  ಪಾಸ್ಪೋರ್ಟ್ ಸೇವಾ ಕೇಂದ್ರದಲ್ಲಿ ಪಾಸ್ಪೋರ್ಟ್ ಮರು-ವಿತರಣೆಗಾಗಿ ಅರ್ಜಿ ಸಲ್ಲಿಸಿ. ಪಾಸ್ಪೋರ್ಟ್ ಪಡೆಯಲು ನೀವು ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು ಮತ್ತು ಇದಕ್ಕಾಗಿ ನೀವು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.

ಬ್ಯುಸಿನೆಸ್ ಮಾಡ್ಬೇಕಾ? ಸ್ಟೇಷನರಿ ಅಂಗಡಿ ಹೇಗೆ ತೆರೆಯೋದು?

ನಿಮ್ಮ ಪಾಸ್ಪೋರ್ಟ್ ಹಾಳಾಗಿದೆ ಎಂಬುದನ್ನು ಹೀಗೆ ಪತ್ತೆ ಮಾಡಿ : ನಿಮ್ಮ ಪಾಸ್ಪೋರ್ಟ್ ನೀರಿನಲ್ಲಿ ಒದ್ದೆಯಾಗಿದ್ದರೆ ಅದು ಹಾಳಾಗಿದೆ ಎಂದೇ ಅರ್ಥ. ಮರು ಪ್ರಯಾಣದ ವೇಳೆ ಇದು ಮಾನ್ಯವಾಗುವುದಿಲ್ಲ. ಪಾಸ್ಪೋರ್ಟ್ ನ ಪೇಜ್ ಕ್ರಮವಾಗಿ ಇರಬೇಕು. ಅದು ಮಿಸ್ ಆಗಿದ್ದರೆ ಹಾಳಾಗಿದೆ ಎಂದೇ ಅರ್ಥ. ಬೈಂಡಿಂಗ್ ಲೂಸ್ ಆಗಿದ್ದರೂ ಪಾಸ್ಪೋರ್ಟ್ ಮರು ಮುದ್ರಣಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಮೇಲಿನ ಕವರ್ ಹರಿದಿದ್ದರೆ ಅದು ಮಾನ್ಯವಾಗುವುದಿಲ್ಲ.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!