
ನವದೆಹಲಿ (ಜು.20): ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂಧನ ರಫ್ತುಗಳ ಮೇಲಿನ ವಿಂಡ್ ಫಾಲ್ ತೆರಿಗೆಯನ್ನು ಕಡಿತಗೊಳಿಸಿದೆ. ಜು.1ರಂದು ಕೇಂದ್ರ ಸರ್ಕಾರ ದೇಶೀಯ ಸಂಸ್ಥೆಗಳು ವಿದೇಶಕ್ಕೆ ರಫ್ತು ಮಾಡುವ ಪೆಟ್ರೋಲ್ , ಡೀಸೆಲ್ ಹಾಗೂ ಜೆಟ್ ಇಂಧನ (ಎಟಿಎಫ್) ಮೇಲೆ ವಿಂಡ್ ಫಾಲ್ ಅಥವಾ ಅನಿರೀಕ್ಷಿತ ತೆರಿಗೆ ವಿಧಿಸಿತ್ತು. ಸರ್ಕಾರವು ದೇಶೀಯ ಉತ್ಪಾದನೆಯ ಕಚ್ಚಾ ತೈಲದ ಮೇಲಿನ ವಿಂಡ್ ಫಾಲ್ ತೆರಿಗೆಯನ್ನು ಪ್ರತಿ ಟನ್ ಗೆ 17,000ರೂ. ಇಳಿಕೆ ಮಾಡಿದೆ. ಇನ್ನು ಡೀಸೆಲ್ ಹಾಗೂ ಜೆಟ್ ಇಂಧನ ರಫ್ತಿನ ಮೇಲಿನ ತೆರಿಗೆಯನ್ನು ಪ್ರತಿ ಲೀಟರ್ ಗೆ ತಲಾ 2 ರೂ. ಕಡಿತಗೊಳಿಸಿದೆ. ಅಲ್ಲದೆ, ವಿಶೇಷ ಆರ್ಥಿಕ ವಲಯದಿಂದ (SEZ) ರಫ್ತಾಗುವ ವಸ್ತುಗಳ ಮೇಲೆ ವಿಶೇಷ ಹೆಚ್ಚುವರಿ ಅಬಕಾರಿ ಸುಂಕದಿಂದ ವಿನಾಯ್ತಿ ನೀಡಲಾಗಿದೆ. ಸರ್ಕಾರದ ಈ ನಿರ್ಧಾರದಿಂದ ದೇಶದ ಪ್ರಮುಖ ಕಚ್ಚಾ ತೈಲ ರಫ್ತು ಕಂಪನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಸರ್ಕಾರಿ ಸ್ವಾಮ್ಯದ ತೈಲ ರಫ್ತುದಾರ ಸಂಸ್ಥೆ ನೈಸರ್ಗಿಕ ಅನಿಲ ನಿಗಮಕ್ಕೆ ದೊಡ್ಡ ನೆಮ್ಮದಿ ಸಿಕ್ಕಿರುವ ಜೊತೆಗೆ ಅನುಕೂಲವೂ ಒದಗಿಸಿದೆ.
ವಿಂಡ್ ಫಾಲ್ ತೆರಿಗೆ ಅಂದ್ರೆ?
ಯಾವುದೇ ಕೈಗಾರಿಕೆಗಳು ಅನಿರೀಕ್ಷಿತ ಮಟ್ಟದ ಲಾಭ ಗಳಿಸಿದಾಗ ಸರ್ಕಾರ ಅವುಗಳ ಮೇಲೆ ವಿಧಿಸುವ ಒಂದು ವಿಧದ ತೆರಿಗೆಯೇ ವಿಂಡ್ ಫಾಲ್ ತೆರಿಗೆ (windfall tax). ವಿಂಡ್ ಫಾಲ್ ತೆರಿಗೆಯನ್ನು ಪ್ರತಿ 15 ದಿನಗಳಿಗೊಮ್ಮೆ ಪರಿಷ್ಕರಿಸಲಾಗೋದು ಎಂದು ಕೇಂದ್ರ ಸರ್ಕಾರ ( Central Government) ಈಗಾಗಲೇ ಘೋಷಿಸಿದೆ.ಭಾರತದ ಒಟ್ಟು ಗ್ಯಾಸೋಲಿನ್ (Gasolin) ಹಾಗೂ ಡೀಸೆಲ್ (Diesel) ರಫ್ತಿನ ಶೇ. 80ರಿಂದ ಶೇ.85ರಷ್ಟು ಭಾಗವನ್ನು ಪೂರೈಕೆ ಮಾಡುವ ಖಾಸಗಿ ಸ್ವಾಮ್ಯದ ಸಂಸ್ಥೆಗಳೆಂದರೆ ಅದು ರಿಲಯನ್ಸ್ (Reliance) ಹಾಗೂ ರೋಸ್ ನೆಫ್ಟ್ ಬೆಂಬಲಿತ ನಯರ ಎನರ್ಜಿ ಲಿಮಿಟೆಡ್ (Nayara Energy Ltd) ಮಾತ್ರ.
ದುಡ್ಡೇ ದೊಡ್ಡಪ್ಪ..! ಒಂದೂವರೆ ಲಕ್ಷಕ್ಕೆ Instagram ಖಾತೆಗೆ ಬ್ಲ್ಯೂಟಿಕ್, 10 ಸಾವಿರ ರೂಪಾಯಿಗೆ 10 ಲಕ್ಷ ವೀವ್ಸ್!
ಜುಲೈ 1 ರಂದು ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಎಟಿಎಫ್ (ATF) ರಫ್ತಿನ ಮೇಲೆ ಲೀಟರ್‌ಗೆ 6 ರೂಪಾಯಿ ತೆರಿಗೆ ಮತ್ತು ಡೀಸೆಲ್ ರಫ್ತಿನ ಮೇಲೆ 13 ರೂಪಾಯಿ ತೆರಿಗೆಯನ್ನು ವಿಧಿಸಿತ್ತು. ದೇಶೀಯವಾಗಿ ಉತ್ಪಾದಿಸುವ ಕಚ್ಚಾ ತೈಲದ ಪ್ರತಿ ಟನ್‌ಗೆ 23,250 ರೂಪಾಯಿ ಹೆಚ್ಚುವರಿ ತೆರಿಗೆ ವಿಧಿಸಿತ್ತು ಕೂಡ.
ರಷ್ಯಾ-ಉಕ್ರೇನ್ ಯುದ್ಧದ ಬಳಿಕ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಏರಿಕೆಯಾಯ್ತು. ರಷ್ಯಾದ ಮೇಲೆ ಕೆಲವು ರಾಷ್ಟ್ರಗಳ ನಿರ್ಬಂಧದ ಹಿನ್ನೆಲೆಯಲ್ಲಿ ಅಲ್ಲಿಂದ ಕಚ್ಚಾ ತೈಲ ಪೂರೈಕೆ ನಿಂತು ಹೋಗಿತ್ತು. ಹೀಗಾಗಿ ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ರೋಸ್ನೆಫ್ಟ್-ಬೆಂಬಲಿತ ನಯಾರಾ ಎನರ್ಜಿಯಂತಹ ಕಂಪನಿಗಳು ಯುರೋಪ್, ಅಮೆರಿಕ ಸೇರಿದಂತೆ ಇಂಧನ ಕೊರತೆ ಅನುಭವಿಸುತ್ತಿರುವ ಪ್ರದೇಶಗಳಿಗೆ ಇಂಧನ ರಫ್ತು ಮಾಡುತ್ತಿವೆ. ಇನ್ನೂ ಒಂದು ವಿಶೇಷವೆಂದ್ರೆ ಏಪ್ರಿಲ್ ನಿಂದ ಜೂನ್ ತನಕ ಭಾರತವು (India) ರಷ್ಯಾದಿಂದ (Russia) ಆಮದು (Import) ಮಾಡಿಕೊಂಡಿರುವ ಕಚ್ಚಾ ತೈಲದ (Crude oil) ಪ್ರಮಾಣದಲ್ಲಿ 50 ಪಟ್ಟು ಹೆಚ್ಚಳವಾಗಿದೆ. ಅಲ್ಲದೆ, ಇದು ವಿದೇಶದಿಂದ ಆಮದು ಮಾಡಿಕೊಂಡಿರುವ ಒಟ್ಟು ಕಚ್ಚಾ ತೈಲದ ಶೇ.10ರಷ್ಟಾಗಿದೆ.ಉಕ್ರೇನ್ (Ukraine) ಯುದ್ಧಕ್ಕೂ ಮುನ್ನ ಭಾರತ (India) ರಷ್ಯಾದಿಂದ (Russia) ಆಮದು ಮಾಡಿಕೊಳ್ಳುತ್ತಿದ್ದ ತೈಲದ ಪ್ರಮಾಣ ಒಟ್ಟು ಕಚ್ಚಾ ತೈಲದ ಕೇವಲ ಶೇ. 0.2ರಷ್ಟಿತ್ತು.
ಸಾವಿತ್ರಿ ಜಿಂದಾಲ್ ಭಾರತದ ಶ್ರೀಮಂತ ಮಹಿಳೆ; ಕೇವಲ ಎರಡೇ ವರ್ಷಗಳಲ್ಲಿ ಇವರ ಸಂಪತ್ತು ಮೂರು ಪಟ್ಟು ಹೆಚ್ಚಳ
ಉಕ್ರೇನ್ ಜೊತೆಗಿನ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾದ ಕಚ್ಚಾ ತೈಲ ಅತ್ಯಂತ ಹೆಚ್ಚಿನ ಡಿಸ್ಕೌಂಟ್ (Discount) ಮೂಲಕ ಸಿಗುತ್ತಿರುವ ಕಾರಣ ರಿಫೈನರಿಗಳು ಅತ್ತ ಮುಖ ಮಾಡಿವೆ. ಮೇನಲ್ಲಿ ಭಾರತದ ರಿಫೈನರಿಗಳು 25 ಮಿಲಿಯನ್ ಬ್ಯಾರೆಲ್ಸ್ ಕಚ್ಚಾ ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಂಡಿವೆ. ಈ ಮೂಲಕ ಭಾರತದ ರಿಫೈನರಿಗಳು ಸಾಕಷ್ಟು ಲಾಭ ಗಳಿಸಿವೆ ಎಂದು ಹೇಳಲಾಗಿತ್ತು. ಹೀಗಾಗಿಯೇ ಸರ್ಕಾರ ವಿಂಡ್ ಫಾಲ್ ತೆರಿಗೆ ವಿಧಿಸಿತ್ತು ಎನ್ನಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.