
ನವದೆಹಲಿ(ಸೆ.12): ಕಳೆದ ಆಗಸ್ಟ್ ತಿಂಗಳಲ್ಲಿ ದೇಶಿ ಪ್ರಯಾಣಿಕ ವಾಹನಗಳ ಮಾರಾಟ ಶೇ.2.46ರಷ್ಟು ಹಾಗೂ ಕಾರು ಮಾರಾಟ ಶೇ.1ರಷ್ಟು ಕುಸಿತ ಕಂಡಿದೆ ಎಂದು ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ(ಎಸ್ ಐಎಎಂ) ತಿಳಿಸಿದೆ.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ 2,94, 416 ಪ್ರಯಾಣಿಕ ವಾಹನಗಳು ಮಾರಾಟವಾಗಿದ್ದರೆ, ಈ ವರ್ಷದ ಆಗಸ್ಟ್ ತಿಂಗಳಲ್ಲಿ 2,87,186 ವಾಹನಗಳು ಮಾರಾಟವಾಗಿವೆ.
ಅದರಂತೆ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ 2,98, 892 ಕಾರುಗಳು ಮಾರಾಟವಾಗಿದ್ದರೆ, ಈ ವರ್ಷದ ಆಗಸ್ಟ್ ತಿಂಗಳಲ್ಲಿ 2,91,179 ಕಾರುಗಳು ಮಾರಾಟವಾಗಿವೆ ಎಂದು ಎಸ್ ಐಎಎಂ ಮಾಹಿತಿ ನೀಡಿದೆ.
ಕಳೆದ ಜುಲೈ ತಿಂಗಳಲ್ಲೂ ಪ್ರಯಾಣಿಕ ವಾಹನ ಮಾರಾಟ ಶೇ.2.71ರಷ್ಟು ಹಾಗೂ ಕಾರು ಮಾರಾಟ ಪ್ರಮಾಣ ಸಹ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿತ್ತು.
ಈ ಮಧ್ಯೆ, ದ್ವಿಚಕ್ರ ವಾಹನ ಮಾರಾಟ ಪ್ರಮಾಣ ಶೇ.2.91ರಷ್ಟು ಹೆಚ್ಚಾಗಿದ್ದು, ಆಗಸ್ಟ್ ತಿಂಗಳಲ್ಲಿ 19, 46, 811 ಬೈಕ್ ಗಳು ಮಾರಾಟವಾಗಿವೆ. ಕಳೆದ ವರ್ಷ ಆಗಸ್ಟ್ ನಲ್ಲಿ 18,91,685 ಬೈಕ್ ಗಳು ಮಾರಾಟವಾಗಿದ್ದವು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.