ನಿರ್ಮಲಾ ಚೊಚ್ಚಲ ಬಜೆಟ್ ಮಂಡನೆ: ಮಗಳಿಗೆ ಸಾಥ್ ಕೊಟ್ಟ ಅಪ್ಪ, ಅಮ್ಮ!

Published : Jul 05, 2019, 11:19 AM ISTUpdated : Jul 05, 2019, 11:55 AM IST
ನಿರ್ಮಲಾ ಚೊಚ್ಚಲ ಬಜೆಟ್ ಮಂಡನೆ: ಮಗಳಿಗೆ ಸಾಥ್ ಕೊಟ್ಟ ಅಪ್ಪ, ಅಮ್ಮ!

ಸಾರಾಂಶ

ದೇಶದ ಮೊಟ್ಟ ಮೊದಲ ಪೂರ್ಣಾವಧಿ ಹಣಕಾಸು ಸಚಿವೆ ನಿರ್ಮಲಾರಿಂದ ಚೊಚ್ಚಲ ಬಜೆಟ್ ಮಂಡನೆ| ಸಂಸತ್ತಿಗೆ ಆಗಮಿಸಿ ಮಗಳಿಗೆ ಸಾಥ್ ಕೊಟ್ಟ ತಂದೆ, ತಾಯಿ

ನವದೆಹಲಿ[ಜು.05]: ದೇಶದ ಮೊಟ್ಟ ಮೊದಲ ಪೂರ್ಣಾವಧಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಚೊಚ್ಚಲ ಬಜೆಟ್ ಮಂಡಿಸುತ್ತಿದ್ದಾರೆ. ಇಂದಿರಾ ಗಾಂಧಿ ನಂತರ ಇದೇ ಮೊದಲ ಬಾರಿಗೆ ಮಹಿಳಾ ವಿತ್ತ ಸಚಿವೆಯೊಬ್ಬರು ಬಜೆಟ್ ಮಂಡಿಸುತ್ತಿದ್ದಾರೆ. ಮಹಿಳೆಯೊಬ್ಬರು ಈ ಬಾರಿ ಬಜೆಟ್ ಮಂಡಿಸುತ್ತಿರುವುದರಿಂದ ನಿರೀಕ್ಷೆಗಳೂ ಹಲವಿದೆ. ಇದೇ ವೇಳೆ ಬಜೆಟ್ ಮಂಡಿಸುತ್ತಿರುವ ಮಗಳಿಗೆ ಸಾಥ್ ನೀಡಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಂದೆ ನಾರಾಯಣ ಸೀತಾರಾಮನ್ ಹಾಗೂ ತಾಯಿ ಸಾವಿತ್ರಿ ಸಂಸತ್ತಿಗೆ ಆಗಮಿಸಿದ್ದಾರೆ. 

ಬಜೆಟ್ 2019: ಬ್ರಿಟಿಷ್ ಬ್ರೀಫ್‌ಕೇಸ್‌ಗೆ ಗುಡ್ ಬೈ ಹೇಳಿದ ನಿರ್ಮಾಲಾ

Live| 'ರಾಷ್ಟ್ರೀಯ ಭದ್ರತೆ, ಆರ್ಥಿಕ ಅಭಿವೃದ್ಧಿ: ಜನತೆಗಾಗಿ ಕೇಂದ್ರದ ಬದ್ಧತೆ'!

ಈಗಾಗಲೇ ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ ಪಾಶ್ಚಾತ್ಯ ಸಂಸ್ಕೃತಿ, ಬಜೆಟ್ ಪ್ರತಿಗಳನ್ನು ಸೂಟ್‌ಕೇಸ್‌ನಲ್ಲಿ ತರುತ್ತಿದ್ದ ಪರಂಪರೆಗೆ ನಿರ್ಮಲಾ ತಿಲಾಂಜಲಿ ಇಟ್ಟಿದ್ದಾರೆ. ಬಜೆಟ್ ಪ್ರತಿಗಳನ್ನು ಕೆಂಪು ರೇಷ್ಮೆ ವಸ್ತ್ರದಲ್ಲಿ ಬಾಹಿ ಖಾತಾ (ಲೆಡ್ಜರ್)ದಂತೆ ಬಜೆಟ್ ಪ್ರತಿಗಳನ್ನು ತರಲಾಗಿದೆ. ಈ ಮೂಲಕ ದೇಸಿ ಸಂಸ್ಕೃತಿಯನ್ನು ಅನುಸರಿಸಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಚಿನ್ನ ಖರೀದಿಯಲ್ಲಿ ದೈತ್ಯ ರಾಷ್ಟ್ರಗಳಾದ ಭಾರತ-ಚೀನಾವನ್ನು ಹಿಂದಿಕ್ಕಿದ 2 ಪುಟ್ಟ ದೇಶಗಳು!
ಕೊಡಗಿನ 60 ಎಕರೆ ಕಾಫಿ ತೋಟವನ್ನ ಆನಂದ್ ಮಹೀಂದ್ರಾ ಕುಟುಂಬ ಇಂದಿಗೂ ಕಾಪಾಡಿಕೊಂಡು ಬಂದಿರುವುದೇಕೆ?