ಮಾರ್ಚ್ 31 ರೊಳಗೆ ಆಧಾರ್ ಜೊತೆ ಲಿಂಕ್ ಮಾಡದಿದ್ರೆ ಪಾನ್ ನಿಷ್ಕ್ರಿಯವಾಗುತ್ತೆ!

By Kannadaprabha NewsFirst Published Feb 15, 2020, 11:16 AM IST
Highlights

ಆಧಾರ್ ಕಾರ್ಡ್ ಜೊತೆ ಪಾನ್ ಜೋಡಣೆ ಮಾಡಿರದಿದ್ದರೆ ಮಾರ್ಚ್ 31 ರೊಳಗೆ ಮಾಡಿಸಿ. ಇಲ್ಲದಿದ್ದರೆ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ. 

ನವದೆಹಲಿ (ಫೆ. 15): ಆಧಾರ್‌ ಸಂಖ್ಯೆ ಜೊತೆ ಪಾನ್‌ ಜೋಡಣೆಗೆ ಹಲವು ಗಡುವುಗಳನ್ನು ನೀಡುತ್ತಾ ಬಂದಿದ್ದ ಆದಾಯ ತೆರಿಗೆ ಇಲಾಖೆ ಇದೀಗ, 2020ರ ಮಾ.31ರ ಒಳಗೆ ಆಧಾರ್‌ ಸಂಖ್ಯೆಯೊಂದಿಗೆ ಜೋಡಣೆಯಾಗದ ಪಾನ್‌ ಸಂಖ್ಯೆ ನಿಷ್ಕ್ರಿಯವಾಗಲಿವೆ ಎಂದು ಎಚ್ಚರಿಕೆ ನೀಡಿದೆ.

7 ರಾಜ್ಯಗಳಲ್ಲಿ ಜನಸಂಖ್ಯೆಗಿಂತ ಆಧಾರ್‌ ಕಾರ್ಡುಗಳೇ ಹೆಚ್ಚು!

Latest Videos

ಈ ಬಗ್ಗೆ ಶುಕ್ರವಾರ ಮಾಹಿತಿ ನೀಡಿದ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ(ಸಿಬಿಡಿಟಿ), 2020ರ ಜನವರಿ 27ರವರೆಗೆ 30.75 ಕೋಟಿಗಿಂತ ಹೆಚ್ಚು ಪಾನ್‌ಗಳು ಆಧಾರ್‌ ಜೊತೆ ಜೋಡಣೆಯಾಗಿವೆ. ಆದರೆ, 17.58 ಕೋಟಿ ಪಾನ್‌ಗಳು ಆಧಾರ್‌ ಜೊತೆ ಲಿಂಕ್‌ ಆಗಬೇಕಿವೆ ಎಂದು ಹೇಳಿದೆ.

ಫಟಾಫಟ್ ಪ್ಯಾನ್ ಮತ್ತು ಆಧಾರ್: ಮೋದಿ ಸರ್ಕಾರದ ಕೊಡುಗೆ ಬಂಪರ್!

ಪಾನ್‌ ಅನ್ನು ನಿಷ್ಕ್ರಿಯಗೊಳಿಸುವ ಅಂಶವನ್ನು ಆದಾಯ ತೆರಿಗೆ ನಿಯಮಗಳಲ್ಲಿ ತಿದ್ದುಪಡಿ ಮೂಲಕ ಸೇರ್ಪಡೆ ಮಾಡಲಾಗಿದ್ದು, ಈ ಪ್ರಕಾರ ಮಾ.31ರ ಒಳಗೆ ಎಲ್ಲರೂ ತಮ್ಮ ಪಾನ್‌ ಸಂಖ್ಯೆಯನ್ನು ಆಧಾರ್‌ಗೆ ಜೋಡಿಸಬೇಕು. ಇಲ್ಲದಿದ್ದರೆ, ಪಾನ್‌ ಸಂಖ್ಯೆ ನಿಷ್ಕ್ರಿಯವಾಗಲಿದೆ ಎಂದಿದೆ.

ಫೆಬ್ರವರಿ 15ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!