ಪಲ್ಲವಿ ಧನರಾಜ್ ವಾಲೆ ಬ್ಯಾಂಕ್ ಉದ್ಯೋಗ ತೊರೆದು ಸ್ವಂತ ವ್ಯವಹಾರ ಪ್ರಾರಂಭಿಸಿ ಯಶಸ್ವಿಯಾಗಿದ್ದಾರೆ. ಅವರು ತಿಂಗಳಿಗೆ 5 ಲಕ್ಷ ರೂಪಾಯಿ ಸಂಪಾದಿಸುತ್ತಿದ್ದಾರೆ ಮತ್ತು ಅವರ ಉತ್ಪನ್ನಗಳು ಸ್ಥಳೀಯವಾಗಿ ಪ್ರಸಿದ್ಧವಾಗಿವೆ.
Success Story Of Woman Entrepreneur: ಇಂದಿನ ಸಮಯದಲ್ಲಿ ಸರ್ಕಾರಿ ಉದ್ಯೋಗಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ ಹಾಗೆ ಮಲ್ಟಿನ್ಯಾಷನಲ್ ಖಾಸಗಿ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಅಷ್ಟೇ ಮಹತ್ವವನ್ನು ಪಡೆದುಕೊಂಡಿದೆ. ದೊಡ್ಡ ದೊಡ್ಡ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಸಿಕ್ಕರೆ ಉತ್ತಮ ಸಂಬಳವನ್ನು ನೀಡಲಾಗುತ್ತದೆ. 9 ಟು 5 ಜಾಬ್ ಮಾಡುವ ಜನರಲ್ಲಿ ಯಾವಾಗಲೂ ಸ್ವಂತ ವ್ಯವಹಾರ ಆರಂಭಿಸಬೇಕೆಂಬ ತುಡಿತ ಇರುತ್ತದೆ. ಇಂದು ನಾವು ಹೇಳುತ್ತಿರುವ ಮಹಿಳೆ ಬ್ಯಾಂಕ್ ಉದ್ಯೋಗ ತ್ಯಜಿಸಿ ತಮ್ಮದೇ ಸ್ವಂತ ವ್ಯವಹಾರ ಕಟ್ಟಿಕೊಂಡು ತಿಂಗಳಿಗೆ 5 ಲಕ್ಷ ರೂಪಾಯಿವರೆಗೂ ಸಂಪಾದನೆ ಮಾಡುತ್ತಿದ್ದಾರೆ. ಬ್ಯಾಂಕ್ ಉದ್ಯೋಗ ಬಿಟ್ಟು ತಾನೂ ಉದ್ಯಮಿಯಾಗಬೇಕು ಎಂದು ಯೋಚಿಸಿದ ಮಹಿಳೆ ಇದೀಗ ಯಶಸ್ವಿ ಉದ್ಯಮಿಯಾಗಿದ್ದಾರೆ. ಈ ಯಶಸ್ಸನ್ನು ಹೇಗೆ ಸಾಧಿಸಿದರು ಎಂಬುದನ್ನು ನೋಡೋಣ ಬನ್ನಿ.
ಮಹಾರಾಷ್ಟ್ರದ ಸೋಲಾಪುರ ನಿವಾಸಿ ಪಲ್ಲವಿ ಧನರಾಜ್ ವಾಲೆ ಮಹಿಳೆ ಮನಸ್ಸು ಮಾಡಿದ್ರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ತೋರಿಸಿದ್ದಾರೆ. ನಾಲ್ಕೈದು ವರ್ಷಗಳ ಹಿಂದೆ ಚಹಾದಲ್ಲಿ ಬಳಕೆಯಾಗುವ ಉತ್ತಮ ಗುಣಮಟ್ಟದ ಬೆಲ್ಲದ ಪುಡಿ ತಯಾರಿಸುವ ಕಂಪನಿ ಆರಂಭಿಸಿದರು. ವರದಿಗಳ ಪ್ರಕಾರ, ಪಲ್ಲವಿ ಆರಂಭದಲ್ಲಿ ಬ್ಯಾಂಕ್ ಉದ್ಯೋಗಿಯಾಗಿ ತಮ್ಮ ವೃತ್ತಿಜೀವನ ಆರಂಭಿಸಿದ್ದರು. ಆದ್ರೆ ಈ ಕೆಲಸದಿಂದಾಗಿ ಮಕ್ಕಳು ಮತ್ತು ಕುಟುಂಬಕ್ಕೆ ಹೆಚ್ಚು ಸಮಯ ನೀಡಲು ಆಗುತ್ತಿರಲಿಲ್ಲ. ಇದೇ ಕಾರಣಕ್ಕಾಗಿ ಬ್ಯಾಂಕ್ ಉದ್ಯೋಗಕ್ಕೆ ರಾಜೀನಾಮೆ ನೀಡಿ ಮನೆಯಲ್ಲಿ ಸ್ವಂತ ವ್ಯಾಪಾರ ಆರಂಭಿಸಿದರು.
ಹಂತ ಹಂತವಾಗಿ ವ್ಯವಹಾರದ ವಿಸ್ತರಣೆ
ಎಲ್ಲರ ಮನೆಯಲ್ಲಿಯೂ ಚಹಾ ಕುಡಿಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಬೆಲ್ಲದ ಚಹ ಹೆಚ್ಚು ಟ್ರೆಂಡಿಂಗ್‌ನಲ್ಲಿದೆ. ಉತ್ತಮ ಗುಣಮಟ್ಟದ ಬೆಲ್ಲದ ಪುಡಿ ತಯಾರಿಸಿ ಮಾರಾಟ ಮಾಡಬಾರದು ಎಂಬ ಕಲ್ಪನೆ ಪಲ್ಲವಿ ಅವರಿಗೆ ಬಂದಿತ್ತು. ಇದೇ ಕಲ್ಪನೆಯಲ್ಲಿ ಟೀಗಾಗಿ ಬೆಲ್ಲದ ಪುಡಿಯ ಪ್ರಿಮಿಕ್ಸ್ ಮಾಡಲು ಆರಂಭಿಸಿದರು.
ಇಂದು ಪಲ್ಲವಿ ಐದು ಬಗೆಯ ಬೆಲ್ಲದ ಪುಡಿಯನ್ನು ಮಾರಾಟ ಮಾಡುತ್ತಿದ್ದಾರೆ. ಹರ್ಬಲ್ ಚಾಯ್, ತುಳಸಿ ಚಾಯ್, ಮಸಾಲಾ ಚಾಯ್, ಏಲಕ್ಕಿ ಚಾಯ್ ಮತ್ತು ಆಯುರ್ವೇದಿಕ್ ಚಾಯ್ ಎಂಬ ಐದು ಬಗೆಯ ಪ್ರಿಮಿಕ್ಸ್ ಟೀ ಪೌಡರ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ. ಇಂದು ಸ್ಥಳೀಯ ಮತ್ತು ಸುತ್ತಮುತ್ತಲಿನ ಮಾರುಕಟ್ಟೆಯಲ್ಲಿ ಪಲ್ಲವಿ ಅವರು ತಯಾರಿಸುವ ಪ್ರಿಮಿಕ್ಸ್ ಪೌಡರ್‌ಗೆ ಒಳ್ಳೆಯ ಮಾರುಕಟ್ಟೆ ಸೃಷ್ಟಿಯಾಗಿದೆ.
ಇದನ್ನೂ ಓದಿ: ಗೂಗಲ್, ಮೈಕ್ರೋಸಾಫ್ಟ್, ಆ್ಯಪಲ್‌ಗೆ ಅಂಬಾನಿ ಸೆಡ್ಡು, ಜಿಯೋ ಗ್ರಾಹಕರಿಗೆ ಉಚಿತ ಕೊಡುಗೆ ಘೋಷಣೆ
ತಿಂಗಳಿಗೆ 700 ರಿಂದ 800 ಕೆಜಿ ಬೆಲ್ಲದ ಟೀ ಪುಡಿ ಮಾರಾಟ
ತಮ್ಮ ವ್ಯಾಪಾರದ ಪರಿಕಲ್ಪನೆ ಕ್ಲಿಕ್ ಆಗುತ್ತಿದ್ದಂತೆ ಪಲ್ಲವಿ ಮತ್ತೆ ಹೊಸ ಉತ್ಪನ್ನಗಳನ್ನು ತರುವ ವ್ಯವಹಾರದ ವಿಸ್ತರಣೆ ಮಾಡಿಕೊಂಡಿದ್ದಾರೆ. ಇದೀಗ ಬೆಲ್ಲದ ಬಿಸ್ಕಟ್, ಸಾಂಬಾರ್ ಪೌಡರ್, ಧಾನ್ಯಗಳ ಪುಡಿ, ಮೊರಿಂಗಾ ಪುಡಿ ಮತ್ತು ವಿವಿಧ ರೀತಿಯ ಚಟ್ನಿ ಪುಡಿಗಳನ್ನು ಮಾರಾಟ ಮಾಡುತ್ತಿದ್ದಾರೆ. ತ್ವರಿತವಾಗಿ ಮಾಡಲು ಸಹಾಯವಾಗುವ ಇನ್‌ಸ್ಟಂಟ್ ಹೋಳಿಗೆ ಮಿಕ್ಸ್ ಪೌಡರ್ ಸಹ ಪಲ್ಲವಿ ಅವರ ಅಂಗಡಿಯಲ್ಲಿ ಸಿಗುತ್ತಿದೆ. ಪಲ್ಲವಿ ಅವರ ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದಾಗಿ ಪ್ರತಿ ತಿಂಗಳು 700 ರಿಂದ 800 ಕೆಜಿ ಬೆಲ್ಲದ ಟೀ ಪುಡಿ ಮಾರಾಟ ಮಾಡುತ್ತಿದ್ದಾರೆ.
ಸಣ್ಣ ಪ್ರಮಾಣದಲ್ಲಿ ಪಲ್ಲವಿ ಸ್ವಂತ ವ್ಯವಹಾರ ಆರಂಭಿಸಿದ ಇಂದುಇ ತಿಂಗಳಿಗೆ 4 ರಿಂದ 5 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ತಮ್ಮ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾದಂತೆ ವ್ಯಾಪಾರವನ್ನು ವಿಸ್ತರಣೆ ಮಾಡಿಕೊಳ್ಳುತ್ತಿದ್ದಾರೆ ಚಹಾ ಮತ್ತು ಇತರ ಉತ್ಪನ್ನಗಳು ಸೊಲ್ಲಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಸಿದ್ಧವಾಗಿವೆ.
ಇದನ್ನೂ ಓದಿ: ಸಾರಾಯಿಗೆ ಬೈ ಒನ್ ಗೆಟ್ ಒನ್ ಆಫರ್; ವಿದೇಶಿ ಮದ್ಯಕ್ಕೆ ಅರ್ಧ ಬೆಲೆ; ಅಂಗಡಿ ಮುಂದೆ ಜನವೋ ಜನ!