ಕೆಲವೇ ಕೆಲವು ವಸ್ತುಗಳಿಗೆ ʼಬೈ ಒನ್ ಗೆಟ್ ಒನ್ʼ ಆಫರ್ ಇರುವುದು. ಈಗ ಈ ಆಫರ್ ಮದ್ಯಕ್ಕೂ ಅಪ್ಲೈ ಆಗಿದೆ. ಹೌದು, ಮದ್ಯ ಪ್ರಿಯರಿಗೆ ಹಬ್ಬದ ವಾತಾವರಣ ಸೃಷ್ಟಿ ಆಗಿದೆ.
ಸಾರಾಯಿ ಸೀಸೆಯಲ್ಲಿ ದೇವಿಯನ್ನು ಕಾಣುವವರಿದ್ದಾರಂತೆ. ಎಷ್ಟೋ ಜನರಿಗೆ ಸಾರಾಯಿ ಖರೀದಿ ಮಾಡುವುದೇ ಕಷ್ಟ. ಇನ್ನು ವಿದೇಶಿ ಬ್ರ್ಯಾಂಡ್ ಅರ್ಧ ರೇಟ್‌ಗೆ ಸಿಕ್ಕಿದರೆ ಏನಾಗುವುದು? ಅಷ್ಟೇ ಅಲ್ಲದೆ ಬೈ ಒನ್ ಗೆಟ್ ಒನ್ ಆಫರ್ ಸಿಕ್ಕರೆ ಮಾತ್ರ ಅಂಗಡಿ ಮುಂದೆ ಜನವೋ ಜನ. ಹೌದು, ಉತ್ತರ ಪ್ರದೇಶದಲ್ಲಿ ಈ ವಾತಾವರಣ ಸೃಷ್ಟಿ ಆಗಿದೆ.
ಎಷ್ಟು ಆಫರ್ ಸಿಗುತ್ತಿದೆ?
ನೋಯಿಡಾದಲ್ಲಿ ಹತ್ತು ಸಾವಿರ ಬಿಯರ್ ಬಾಟಲಿಗಳು, ಮೂವತ್ತು ಸಾವಿರ ಲಿಕ್ಕರ್ ಬಾಟಲಿಗಳು, ನಲವತ್ತು ಸಾವಿರ ಕಂಟ್ರಿ ಲಿಕ್ಕರ್ ಬಾಟಲಿಗಳು ನಿತ್ಯ ಮಾರಾಟ ಆಗುತ್ತಿವೆ. ಒಟ್ಟಾರೆಯಾಗಿ ನಿತ್ಯ 3-4 ಕೋಟಿ ರೂಪಾಯಿ ಆದಾಯ ಬರುತ್ತಿದೆ. ಈಗ ಸಿಗುತ್ತಿರುವ ಆಫರ್‌ಗಳ ಮೇರೆಗೆ ಈ ವಾರ ಮಾರಾಟದಲ್ಲಿ 30-40% ಉಲ್ಬಣ ಆಗಲಿದೆ ಎನ್ನಲಾಗಿದೆ.
Chamarajanagar Students Protest: ಸಾರಾಯಿ ಬೇಡ, ವಿವಿ ಬೇಕು: ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ | Suvarna News
ಉಚಿತ ಮದ್ಯದ ಆಫರ್ ಏಕೆ ನೀಡಲಾಗುತ್ತಿದೆ?
ಮಾರ್ಚ್ 31, 2025 ರ ಒಳಗಡೆ ಉತ್ತರ ಪ್ರದೇಶದ ಮದ್ಯದಂಗಡಿಗಳು ತಮ್ಮ ಹಳೆಯ ದಾಸ್ತಾನುಗಳನ್ನು ಖಾಲಿ ಮಾಡಬೇಕು. ಏಕೆಂದರೆ ಏಪ್ರಿಲ್ 1 ರಿಂದ ಹೊಸ ಅಬಕಾರಿ ನೀತಿ ಜಾರಿಗೆ ಬರಲಿದೆ. ಹೊಸ ನೀತಿಯ ಅಡಿಯಲ್ಲಿ, ಇ-ಲಾಟರಿ ಮೂಲಕ ಹೊಸ ಮದ್ಯದಂಗಡಿಗಳನ್ನು ಹಂಚಿಕೆ ಮಾಡಲಾಗುತ್ತದೆ. ಹೀಗಾಗಿ, ಈಗಿನ ಅಂಗಡಿಯವರು ದಾಸ್ತಾನುಗಳನ್ನು ಬೇಗನೆ ಖಾಲಿ ಮಾಡಲು ಈ ಆಫರ್‌ನ ಸಹಾಯ ಪಡೆಯುತ್ತಿದ್ದಾರೆ. ಮದ್ಯದಂಗಡಿಗಳಲ್ಲಿ ಈ ಆಫರ್ ಮಾರ್ಚ್ 31 ರವರೆಗೆ ಮುಂದುವರಿಯುವ ಸಾಧ್ಯತೆಯಿದೆ. ಮದ್ಯ ಪ್ರಿಯರಿಗೆ ಇದು ಸುವರ್ಣಾವಕಾಶ, ಆದರೆ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸ್ ಆಡಳಿತ ಸನ್ನದ್ಧವಾಗಿದೆ.
ಸಾರಾಯಿ ಮಾರಿ ಹಣ ಮಾಡಲಿದ್ದಾರೆ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್, ಆದರೆ ಇದು ಭಾರತದಲ್ಲಲ್ಲ!
ಅಂಗಡಿ ತುಂಬೆಲ್ಲ ಜನರು!
ಕಳೆದ ಆರು ವರ್ಷಗಳಲ್ಲಿ ಲೈಸನ್ಸ್ ಬಹಳ ಸರಳವಾಗಿ ರಿನ್ಯೂವಲ್ ಆಗುತ್ತಿತ್ತು. ಈ ಬಾರಿ ಈ ಲಾಟರಿ ಸಿಸ್ಟಮ್ ಚಾಲ್ತಿಯಲ್ಲಿದೆ. ಈ ಮೂಲಕ ಮಾರುಕಟ್ಟೆಗೆ ಹೊಸಬರ ಆಗಮನ ಆಗುವುದು. ಇನ್ನು ರಾಜ್ಯ ಸರ್ಕಾರವು ಬಿಯರ್ ಬಾಟಲಿ, ಭಾರತೀಯ ನಿರ್ಮಿತ ವಿದೇಶಿ ಮದ್ಯವನ್ನು ಒಟ್ಟಿಗೆ ಮಾರಬಹುದು ಎಂದು ಹೇಳಿದೆ. ಇನ್ನು ಲಿಕ್ಕರ್ ಖರೀದಿದಾರರಿಗೆ ಹೊಸ ನೀತಿಯಿಂದ ಒಂದಷ್ಟು ಶಕ್ತಿ ಸಿಕ್ಕಿದ ಹಾಗೆ ಆಗಿದೆ. ಹೀಗಾಗಿ ಅವರು ಹಳೇ ಸ್ಟಾಕ್ ಕ್ಲಿಯರ್ ಮಾಡಬೇಕಿದೆ. ವಿದೇಶಿ ಮದ್ಯವನ್ನು ಅರ್ಧ ರೇಟ್‌ಗೆ ಮಾರಲಾಗುತ್ತಿರೋದರಿಂದ ಅಂಗಡಿ ತುಂಬೆಲ್ಲ ಜನವೋ ಜನ.
ಪೊಲೀಸರ ಆಗಮನವಾಗಿದೆ!
ನಿಜಕ್ಕೂ ಉತ್ತರ ಪ್ರದೇಶದ ಮದ್ಯ ಪ್ರಿಯರಿಗೆ ಇದು ಯಾವ ಹಬ್ಬಕ್ಕಿಂತ ಕಡಿಮೆ ಇಲ್ಲ ಎನ್ನಬಹುದು! ಇಲ್ಲಿನ ಅನೇಕ ಕಡೆ ʼಒಂದು ಬಾಟಲಿ ತೆಗೆದುಕೊಂಡರೆ, ಒಂದು ಬಾಟಲಿ ಉಚಿತʼ ಎಂಬ ಆಫರ್ ನೀಡಲಾಗಿದೆ. ಈ ಆಫರ್ ಗೊತ್ತಾಗುತ್ತಿದ್ದಂತೆ ಅಂಗಡಿ ಮುಂದೆಲ್ಲ ಜನವೋ ಜನ. ಹೀಗಾಗಿ ಮುಜಾಫರ್‌ನಗರ, ಹಾಪುರದಲ್ಲಿ ಪೊಲೀಸರನ್ನು ಕರೆಸಬೇಕಾಯಿತು.