ನಿಮ್ ದಮಯ್ಯ ಸಾಲ ಕೊಡಿ: ಐಎಂಎಫ್ ಗೆ ಅಂಗಲಾಚುತ್ತಿದೆ ಪಾಕ್!

Published : Oct 12, 2018, 01:11 PM IST
ನಿಮ್ ದಮಯ್ಯ ಸಾಲ ಕೊಡಿ: ಐಎಂಎಫ್ ಗೆ ಅಂಗಲಾಚುತ್ತಿದೆ ಪಾಕ್!

ಸಾರಾಂಶ

ಸಾಲಕ್ಕಾಗಿ ಎಎಂಎಫ್ ಮುಂದೆ ಮಂಡಿಯೂರಿದ ಪಾಕ್! 800 ಕೋಟಿ ಡಾಲರ್‌ ಸಾಲಕ್ಕಾಗಿ ಐಎಂಎಫ್ ಗೆ ಮನವಿ! ಅಮೆರಿಕದಿಂದ ಬರುತ್ತಿದ್ದ ಸಾಲದ ಪ್ರಮಾಣ ಕಡಿತ! ಚೀನಾದ ಸಾಲ ತೀರಿಸುವ ಅನಿವಾರ್ಯತೆಯಲ್ಲಿ ಸಿಲುಕಿದ ಪಾಕ್! ಸಾಲಕ್ಕಾಗಿ ಐಎಂಎಫ್ ಕದ ತಟ್ಟುತ್ತಿರುವ ಇಮ್ರಾನ್ ಖಾನ್ ಸರ್ಕಾರ  

ಇಸ್ಲಾಮಾಬಾದ್‌(ಅ.12): ದಿವಾಳಿಯ ಅಂಚಿನಲ್ಲಿರುವ ಪಾಕಿಸ್ತಾನ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ 800 ಕೋಟಿ ಡಾಲರ್‌ (ಅಂದಾಜು 59,000 ಕೋಟಿ ರೂ. ) ಸಾಲ ಪಡೆಯುವ ನಿರೀಕ್ಷೆಯಲ್ಲಿದೆ.

ಅತ್ತ ಅಮೆರಿಕದಿಂದ ಬರುತ್ತಿದ್ದ ಸಾಲದ ಪ್ರಮಾಣ ಕಡಿಮೆಯಾಗಿದ್ದು ಇತ್ತ ಚೀನಾದ ಸಾಲ ತೀರಿಸಬೇಕಾದ ಅನಿವಾರ್ಯತೆಗೆ ಸಿಲುಕಿರುವ ಪಾಕಿಸ್ತಾನ, ಐಎಂಎಫ್ ಮುಂದೆ ಸಾಲಕ್ಕಾಗಿ ಮಂಡಿಯೂರಿ ಕುಳಿತಿದೆ.

ಪಾಕಿಸ್ತಾನದ ಆರ್ಥಿಕ ಸ್ಥಿತಿ ಈಗಾಗಲೇ ಪಾತಾಳ ಕಂಡಿದ್ದು, ದೇಶವನ್ನು ಮುನ್ನಡೆಸಲು ಖಜಾನೆಯಲ್ಲಿ ಹಣ ಇಲ್ಲ ಎಂದು ಈಗಾಗಲೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಘೋಷಿಸಿಯಾಗಿದೆ. ಇದೇ ಹಿನ್ನೆಲೆಯಲ್ಲಿ ಸರ್ಕಾರಿ ವೆಚ್ಚಗಳನ್ನು ಕಡಿಮೆ ಮಾಡಲೂ ಇಮ್ರಾನ್ ಖಾನ್ ಸರ್ಕಾರ ನಿರ್ಧಾರ ಕೈಗೊಂಡಿದೆ.

ಈ ಮಧ್ಯೆ ಐಎಂಎಫ್ ನಿಂದ ಸಾಲದ ನಿರೀಕ್ಷೆಯಲ್ಲಿರುವ ಪಾಕಿಸ್ತಾನ, ಹೇಗಾದರೂ ಮಾಡಿ ಚೀನಾದ ಸಾಲದ ಕಂತು ತುಂಬಿ ಕೊಂಚ ಉಸಿರಾಡುವ ಪ್ರಯತ್ನದಲ್ಲಿದೆ. ಆದರೆ ಐಎಂಎಫ್ ಇದಕ್ಕೆ ಕಠಿಣ ಷರತ್ತುಗಳನ್ನು ಒಡ್ಡುವ ಸಾಧ್ಯತೆ ಕೂಡ ಇದೆ.

ಇನ್ನು ಪಾಕಿಸ್ತಾನದ ಷೇರು ಮಾರುಕಟ್ಟೆ 1,300ಕ್ಕೂ ಹೆಚ್ಚು ಅಂಕ ಪತನ ಕಂಡಿದ್ದು, ಸಂಪೂರ್ಣ ದಿವಾಳಿಯಾಗುವ ದಿನ ದೂರವಿಲ್ಲ ಎನ್ನುತ್ತಾರೆ ಆರ್ಥಿಕ ತಜ್ಞರು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Gold Jewellery: ಚಿನ್ನ ಖರೀದಿಸಲು ಈಗ ಲಕ್ಷಗಟ್ಟಲೆ ಹಣ ಬೇಕಿಲ್ಲ: ಹೀಗೆ ಪ್ಲಾನ್ ಮಾಡಿದ್ರೆ ಸಾಕು!
Gold Rate Today: ಬಂಗಾರದ ಬೆಲೆ ದಿಢೀರ್ ₹1,860 ಇಳಿಕೆ! ಗೃಹಿಣಿಯರು ಫುಲ್ ಖುಷ್, ಇಂದಿನ ರೇಟ್ ಎಷ್ಟು?