5 ನಿಮಿಷದಲ್ಲಿ 4 ಲಕ್ಷ ಕೋಟಿ ರೂ ಲಾಸ್: ಷೇರು ಮಾರುಕಟ್ಟೆ ಬಾಗಿಲು ಬಂದ್!

Published : Oct 11, 2018, 08:26 PM ISTUpdated : Oct 11, 2018, 08:28 PM IST
5 ನಿಮಿಷದಲ್ಲಿ 4 ಲಕ್ಷ ಕೋಟಿ ರೂ ಲಾಸ್: ಷೇರು ಮಾರುಕಟ್ಟೆ ಬಾಗಿಲು ಬಂದ್!

ಸಾರಾಂಶ

ಪಾತಾಳಕ್ಕೆ ಕುಸಿದ ಸೆನ್ಸೆಕ್ಸ್! 5 ನಿಮಿಷದಲ್ಲಿ4 ಲಕ್ಷ ಕೋಟಿ ರೂ. ನಷ್ಟ! ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಭಾರಿ ಕುಸಿತ! 10,00ಕ್ಕೂ ಹೆಚ್ಚು ಅಂಕ ಕುಸಿತ ಕಂಡ ಷೇರು ಸೂಚ್ಯಂಕ 

ಮುಂಬೈ(ಅ.11): ಇಂದಿನ ಷೇರು ಮಾರುಕಟ್ಟೆ ಆರಂಭವಾದ ಬೆನ್ನಲ್ಲೇ ಮುಂಬೈ ಷೇರುಪೇಟೆ ಹಾಗೂ ರಾಷ್ಟ್ರೀಯ ಶೇರು ಸೂಚ್ಯಂಕ ನಿಫ್ಟಿ ಭಾರಿ ಕುಸಿತವನ್ನು ಅನುಭವಿಸಿದೆ. 

ಮುಂಬೈನ ಬಿಎಸ್‌ಇ ಸೆನೆಕ್ಸ್ 1000ಕ್ಕೂ ಅಂಕಗಳ ಕುಸಿತ ಕಂಡು 34,000ಕ್ಕೂ ಕೆಳಗಿನ ಅಂಕಗಳಿಗೆ ಇಳಿದಿದೆ. ಈ ಮೂಲಕ ಕಳೆದ ಆರು ತಿಂಗಳಲ್ಲೇ ಅತ್ಯಂತ ಕೆಟ್ಟ ಸೂಚ್ಯಂಕ ದಾಖಲಿಸಿದೆ. ಅತ್ತ 307 ಅಂಕ ಕಳೆದುಕೊಂಡಿರುವ ನಿಫ್ಟಿ 10,000 ಅಂಕಗಳ ಸನಿಹದಲ್ಲಿದೆ. ಬಿಎಸ್‌ಇ ಹಾಗೂ ಎನ್‌ಎಸ್‌ಇ ನಿಫ್ಟಿ ಸೂಚ್ಯಂಕಗಳು ಶೇಕಡಾ 2.5ರಷ್ಟು ಇಳಿಕೆ ಕಂಡಿದೆ.

ಪರಿಣಾಮ ಹೂಡಿಕೆದಾರರು ಕೇವಲ ಐದು ನಿಮಿಷಗಳಲ್ಲಿ4 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆ. ಈ ಮುನ್ನ ಕಳೆದ ರಾತ್ರಿ ಅಮೆರಿಕ ಷೇರು ಮಾರುಕಟ್ಟೆಯೂ ಭಾರಿ ಕುಸಿತವನ್ನು ಕಂಡಿತ್ತು. ಅತ್ತ ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತಕ್ಕೊಳಗಾಗಿದ್ದು, ಪ್ರತಿ ಡಾಲರ್‌ಗೆ 74.45 ರೂ.ಗೆ ತಲುಪಿದೆ.

ಕಳೆದ ಕೆಲವು ದಿನಗಳಿಂದ ಷೇರು ಮಾರುಕಟ್ಟೆಯಲ್ಲಿ ಏರಿಳಿತ ಕಂಡು ಬರುತ್ತಲೇ ಇದೆ ಎಂದು ಷೇರು ವಿಶ್ಲೇಷಕರು ವರದಿ ಮಾಡಿದ್ದಾರೆ. ರೂಪಾಯಿ ಜತೆಗೆ ಜಾಗತಿಕ ಮಾರುಕಟ್ಟೆ ಸೂಚ್ಯಂಕ ಸಹ ಅಡ್ಡ ಪರಿಣಾಮ ಬೀರಿದೆ. ಪ್ರಮುಖವಾಗಿಯೂ ಅಮೆರಿಕ ಶೇರುಪೇಟೆ ಕುಸಿತವು ಹೂಡಿಕೆದಾರರ ಭಾವನೆಗಳ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಬೆಂಗಳೂರಿನಲ್ಲಿ ಊಬರ್‌ ಕ್ರಾಂತಿಯ ಹೆಜ್ಜೆ, B2B ಲಾಜಿಸ್ಟಿಕ್ಸ್, ಮೆಟ್ರೋ ಟಿಕೆಟ್‌ ಕೂಡ ಲಭ್ಯ!
Vastu Tips: ಮನೆಯಲ್ಲಿ 'ಓಡುತ್ತಿರುವ ಏಳು ಕುದುರೆ' ಫೋಟೋ ಯಾಕೆ ಹಾಕ್ತಾರೆ? ಸೀಕ್ರೆಟ್ ಗೊತ್ತಾದ್ರೆ ಈಗ್ಲೇ ಹಾಕ್ತೀರಾ..