ಶೇ.50ಕ್ಕಿಂತಲೂ ಹೆಚ್ಚಿನ ಭಾರತೀಯರು ಸಕ್ರಿಯ ಇಂಟರ್ನೆಟ್ ಬಳಕೆದಾರರು; ಡಿಜಿಟಲ್ ಪಾವತಿಯಲ್ಲಿ ಶೇ.13ರಷ್ಟು ಹೆಚ್ಚಳ

By Suvarna NewsFirst Published May 4, 2023, 5:54 PM IST
Highlights

ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಪ್ರಮಾಣದಲ್ಲಿ ಇತ್ತೀಚಿನ ದಿನಗಳಲ್ಲಿ ಏರಿಕೆ ಕಂಡುಬಂದಿದೆ. ಶೇ.50ಕ್ಕಿಂತಲೂ ಹೆಚ್ಚಿನ ಜನರು ಸಕ್ರಿಯ ಇಂಟರ್ನೆಟ್ ಬಳಕೆದಾರರಾಗಿದ್ದಾರೆ ಎಂದು ಕೈಗಾರಿಕಾ ಸಂಸ್ಥೆ ಐಎಎಂಎಐ ಹಾಗೂ ಮಾರುಕಟ್ಟೆ ಡೇಟಾ ವಿಶ್ಲೇಷಣೆ ಸಂಸ್ಥೆ ಕಾಂತರ್ ಜಂಟಿ ವರದಿ ತಿಳಿಸಿದೆ.
 

ನವದೆಹಲಿ (ಮೇ 4): ಇದೇ ಮೊದಲ ಬಾರಿಗೆ ಅರ್ಧಕ್ಕಿಂತಲೂ ಹೆಚ್ಚಿನ ಭಾರತೀಯರು ಅಂದರೆ 759 ಮಿಲಿಯನ್ ನಾಗರಿಕರು ಸಕ್ರಿಯ ಇಂಟರ್ನೆಟ್ ಬಳಕೆದಾರರಾಗಿದ್ದಾರೆ. ಅಲ್ಲದೆ, ಇವರು ತಿಂಗಳಿಗೆ ಕನಿಷ್ಠ ಒಮ್ಮೆಯಾದರೂ ಇಂಟರ್ನೆಟ್ ಬಳಕೆ ಮಾಡುತ್ತಾರೆ ಎಂದು ಕೈಗಾರಿಕಾ ಸಂಸ್ಥೆ ಐಎಎಂಎಐ ಹಾಗೂ ಮಾರುಕಟ್ಟೆ ಡೇಟಾ ವಿಶ್ಲೇಷಣೆ ಸಂಸ್ಥೆ ಕಾಂತರ್ ಜಂಟಿ ವರದಿ ತಿಳಿಸಿದೆ. ಈ ವರದಿ ಅನ್ವಯ ಭಾರತದಲ್ಲಿ ಸಕ್ರಿಯ ಇಂಟರ್ನೆಟ್ ಬೇಸ್ 2025ರ ವೇಳೆಗೆ 900 ಮಿಲಿಯನ್ ಗೆ ಬೆಳವಣಿಗೆ ಹೊಂದುವ ನಿರೀಕ್ಷೆಯಿದೆ. ಇನ್ನು ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಭಾರತೀಯರು ಇಂಟರ್ನೆಟ್ ಬಳಕೆ ಮಾಡುತ್ತಿದ್ದಾರೆ ಎಂದು ಇಂಟರ್ನೆಟ್ ಇನ್ ಇಂಡಿಯಾ ವರದಿ 2022 ತಿಳಿಸಿದೆ.  ಇನ್ನು ವರದಿ ಅನ್ವಯ 2022ರಲ್ಲಿ ಭಾರತದಲ್ಲಿ 759 ಮಿಲಿಯನ್ ಸಕ್ರಿಯ ಇಂಟರ್ನೆಟ್ ಬಳಕೆದಾರರಲ್ಲಿ 399 ಮಿಲಿಯನ್ ಜನರು ಗ್ರಾಮೀಣ ಭಾರತದವರು. ಇನ್ನು 360 ಮಿಲಿಯನ್ ಜನರು ನಗರ ಪ್ರದೇಶದವರು.ಇದು ದೇಶದಲ್ಲಿ ಇಂಟರ್ನೆಟ್ ಬೆಳವಣಿಗೆಯಲ್ಲಿ ಗ್ರಾಮೀಣ ಭಾರತದ ಕೊಡುಗೆ ಮುಂದುವರಿದಿದೆ ಎಂಬುದರ ಸೂಚನೆಯಾಗಿದೆ.ಇನ್ನು ದೇಶದಲ್ಲಿ ಡಿಜಿಟಲ್ ಪಾವತಿಯಲ್ಲಿ ಕೂಡ ಶೇ.13ರಷ್ಟು ಹೆಚ್ಚಳ ಕಂಡುಬಂದಿದೆ ಎಂದು ವರದಿ ತಿಳಿಸಿದೆ. 

'ನಗರ ಭಾರತದಲ್ಲಿ ಅಂದಾಜು ಶೇ.71ರಷ್ಟು ಇಂಟರ್ನೆಟ್ ಬಳಕೆ ಇದ್ದರೂ ಬೆಳವಣಿಗೆ ದರ ಮಾತ್ರ ಶೇ.6ರಷ್ಟಿದೆ. ಹೀಗಾಗಿ ಇಂಟರ್ನೆಟ್ ಬಳಕೆದಾರರ ಸಂಖ್ಯೆಯಲ್ಲಿನ ಸಮಗ್ರ ಹೆಚ್ಚಳದಲ್ಲಿ ಗ್ರಾಮೀಣ ಭಾರತದ ಕೊಡುಗೆ ಹೆಚ್ಚಿದ್ದು, ಕಳೆದ ಒಂದು ವರ್ಷದಲ್ಲಿ ಶೇ.14ರಷ್ಟು ಬೆಳವಣಿಗೆ ಕಂಡಿದೆ. ಇನ್ನು 2025ರ ವೇಳೆಗೆ ಭಾರತದಲ್ಲಿನ ಎಲ್ಲ ಹೊಸ ಇಂಟರ್ನೆಟ್ ಬಳಕೆದಾರರು ಗ್ರಾಮೀಣ ಭಾಗದವರಾಗಿದ್ದಾರೆ' ಎಂದು ವರದಿ ತಿಳಿಸಿದೆ.

Latest Videos

10 ವರ್ಷಗಳ ಹಿಂದೆ ಈ ಕಂಪನಿಗೆ 10,000 ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 27 ಲಕ್ಷ ರೂ ಇರ್ತಿತ್ತು!

ಇನ್ನು ರಾಜ್ಯಗಳ ನಡುವೆ ಇಂಟರ್ನೆಟ್ ಬಳಕೆಯಲ್ಲಿ ಭಾರೀ ಅಸಮಾನ್ಯತೆ ಕಂಡುಬಂದಿದೆ.ಬಿಹಾರದಲ್ಲಿ ಶೇ.32ರಷ್ಟು ಇಂಟರ್ನೆಟ್ ಬಳಕೆದಾರರಿದ್ದಾರೆ. ಇದು ಅರ್ಧದಕ್ಕಿಂತಲೂ ಕಡಿಮೆ.ಇನ್ನು ಗೋವಾದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಅಂದರೆ ಶೇ.70ರಷ್ಟು ಜನ ಇಂಟರ್ನೆಟ್ ಬಳಸುತ್ತಾರೆ. ಈ ರೀತಿ ಇಂಟರ್ನೆಟ್ ಬಳಕೆದಾರರ ಪ್ರಮಾಣದಲ್ಲಿ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಿದೆ. 

ಇಂಟರ್ನೆಟ್ ಬಳಕೆಯಲ್ಲಿ ಕೂಡ ಇಲ್ಲಿಯ ತನಕ ಲಿಂಗ ಅಸಮಾನತೆ ಕಂಡುಬಂದಿದ್ದರೂ 2022ರಲ್ಲಿ ಶೇ.57ರಷ್ಟು ಎಲ್ಲ ಹೊಸ ಬಳಕೆದಾರರು ಮಹಿಳೆಯರಾಗಿದ್ದಾರೆ. ಈ ವರದಿ ಅಂದಾಜಿನ ಪ್ರಕಾರ 2025ರ ವೇಳೆಗೆ ಶೇ.65ರಷ್ಟು ಎಲ್ಲ ಹೊಸ ಬಳಕೆದಾರರು ಮಹಿಳೆಯರಾಗಿರುತ್ತಾರೆ. ಇದು ಶೇ.65ರಷ್ಟು ಎಲ್ಲ ಹೊಸ ಬಳಕೆದಾರರು ಮಹಿಳೆಯರಾಗಿರುವ ಸಾಧ್ಯತೆಯಿದೆ.  ಇದು ಲಿಂಗ ಅಸಮಾನತೆಯನ್ನು ಸರಿಪಡಿಸಲು ನೆರವು ನೀಡುತ್ತದೆ.

ಇನ್ನು ಡಿಜಿಟಲ್ ಬಳಕೆ ಎಲ್ಲ ಆಯಾಮಗಳಲ್ಲೂ ಅಭಿವೃದ್ಧಿ ಕಂಡಿದೆ. 'ಬಳಕೆ ಆಧಾರದಲ್ಲಿ ಡಿಜಿಟಲ್ ಎಂಟರ್ ಟೈನ್ ಮೆಂಟ್, ಡಿಜಿಟಲ್ ಕಮ್ಯೂನಿಕೇಷನ್ಸ್ ಹಾಗೂ ಸಾಮಾಜಿಕ ಮಾಧ್ಯಮ ಭಾರತದಲ್ಲಿ ಅತ್ಯಂತ ಜನಪ್ರಿಯ ಸೇವೆಗಳಾಗಿ ಮುಂದುವರಿದಿವೆ. ಇನ್ನು ಭಾರತೀಯರು ಕೂಡ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಮುಂದಿನ ಇ-ಕಾಮರ್ಸ್ ತಾಣಗಳನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಇ-ಕಾಮರ್ಸ್ ತಾಣಗಳಲ್ಲಿ ಕೂಡ ವರ್ಷದಿಂದ ವರ್ಷಕ್ಕೆ ಶೇ.51ರಷ್ಟು ಪ್ರಗತಿ ಕಂಡುಬರುತ್ತಿದೆ' ಎಂದು ವರದಿ ತಿಳಿಸಿದೆ. ಅಂದರೆ ಇ-ಕಾಮರ್ಸ್ ತಾಣಗಳನ್ನು ಬಳಸೋರ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡುಬಂದಿದೆ. 

ಎಐ ಪ್ರಭಾವ: ಮುಂದಿನ 5 ವರ್ಷದಲ್ಲಿ ಜಾಗತಿಕವಾಗಿ 1.40 ಕೋಟಿ ಹುದ್ದೆ ಕಡಿತ

ಇನ್ನು ಈ ವರದಿ ಅನ್ವಯ 2021ರ ವೇಳೆಗೆ ಡಿಜಿಟಲ್ ಪಾವತಿ ಶೇ.13ರಷ್ಟು ಬೆಳವಣಿಗೆ ದಾಖಲಿಸಿದೆ. ಹಾಗೆಯೇ 338 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಅದರಲ್ಲಿ ಶೇ.36ರಷ್ಟು ಮಂದಿ ಗ್ರಾಮೀಣ ಭಾರತದವರಾಗಿದ್ದಾರೆ. ಇನ್ನು ವರದಿ ಅನ್ವಯ 'ಶೇ.99ರಷ್ಟು ಎಲ್ಲ ಡಿಜಿಟಲ್ ಪಾವತಿ ಬಳಕೆದಾರರು ಯುಪಿಐ ಬಳಕೆದಾರರಾಗಿದ್ದಾರೆ.'

click me!