ಇಡೀ ಜಗತ್ತು ನಮ್ಮ ಕೈನಲ್ಲಿದೆ. ಸ್ಮಾರ್ಟ್ಫೋನ್, ಲ್ಯಾಪ್ ಟಾಪ್ ಮೂಲಕವೇ ನಾವು ಜಗತ್ತಿನ ಎಲ್ಲ ಕೆಲಸವನ್ನು ಮಾಡ್ಬಹುದು. ಹಾಗಿರುವಾಗ ಗೃಹಿಣಿ ಎನ್ನುವ ನೋವೇಕೆ. ನೀವೂ ಈಗಿನಿಂದ್ಲೇ ಸಣ್ಣ ಗಳಿಕೆ ಶುರು ಮಾಡುವ ವಿಧಾನ ಕಂಡುಕೊಳ್ಳಿ.
ಮನೆಯ ಎಲ್ಲ ಕೆಲಸ ಮುಗಿಸಿ, ಮಕ್ಕಳನ್ನು ಡೇಕ್ ಕೇರ್ ಗೆ ಸೇರಿಸಿ, ಟ್ರಾಫಿಕ್ ಜಾಮ್ ನಲ್ಲಿ ಗುದ್ದಾಡಿ ಕೆಲಸಕ್ಕೆ ಹೋಗೋದು ಎಲ್ಲರಿಗೂ ಸಾಧ್ಯವಾಗದ್ದು. ನಾನಾ ಕಾರಣಕ್ಕೆ ಮಹಿಳೆಯರು ಮನೆಯಲ್ಲಿರ್ತಾರೆ. ಕೈನಲ್ಲಿ ವಿದ್ಯೆಯಿದೆ, ಕೆಲಸ ಮಾಡುವ ಹುಮ್ಮಸ್ಸಿದೆ ಆದ್ರೆ ಮನೆಯಿಂದ ಹೊರಬಿದ್ದು, ಕಚೇರಿಗೆ ಹೋಗಲು ಸಾಧ್ಯವಿಲ್ಲ ಎನ್ನುವ ಮಹಿಳೆಯರ ಸಂಖ್ಯೆ ಭಾರತದಲ್ಲಿ ಹೆಚ್ಚಿದೆ. ಮದುವೆ ನಂತ್ರ ಹಾಗೂ ಮಕ್ಕಳಾದ್ಮೇಲೆ ಉದ್ಯೋಗ ಬಿಡುವ ಮಹಿಳೆಯರು, ಒಂದು ಹಂತದ ನಂತ್ರ ಮತ್ತೆ ವೃತ್ತಿ ಶುರು ಮಾಡುವ ಆಸೆಯಲ್ಲಿರ್ತಾರೆ. ಇಂಥ ಮಹಿಳೆಯರಿಗಾಗಿಯೇ ಅನೇಕ ಕಂಪನಿಗಳಿವೆ. ಮಾತೃತ್ವದ ನಂತ್ರ ಕೆಲಸ ನೀಡುವ ಕಂಪನಿಗಳನ್ನು ನೀವು ನೋಡಿರಬಹುದು. ಕೆಲಸ ಸಿಕ್ಕಿದ್ರೂ ಮನೆ ಬಿಡಲು ಸಾಧ್ಯವೇ ಇಲ್ಲ ಎನ್ನುವ ಮಹಿಳೆಯರು ನಿರಾಸೆಯಾಗ್ಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ಕೆಲಸ ಮಾಡಲು ಈಗ ಸಾಕಷ್ಟು ಅವಕಾಶವಿದೆ.
ಈಗಿನ ದಿನಗಳಲ್ಲಿ ಕೈನಲ್ಲೊಂದು ಸ್ಮಾರ್ಟ್ಫೋನ್ (Smartphone) , ಲ್ಯಾಪ್ ಟಾಪ್ ಇದ್ರೆ ಸಾಕು. ತಿಂಗಳಿಗೆ ಕೈತುಂಬಾ ಆದಾಯ (Income) ಗಳಿಸಬಹುದು. ನಿಮ್ಮ ಬಳಿ ಪ್ರತ್ಯೇಕ ಟ್ಯಾಲೆಂಟ್ ಇದ್ರೆ ಅದನ್ನೇ ಬಳಸಿಕೊಂಡು ನೀವು ಹಣ ಸಂಪಾದನೆ ಮಾಡಬಹುದು. ಕೆಲಸವಿಲ್ಲ ಅಂತಾ ಬೇಸರಪಟ್ಟುಕೊಳ್ತಾ ಸಮಯವನ್ನು ವ್ಯರ್ಥ ಮಾಡುವ ಬದಲು, ಇಂಟರ್ನೆಟ್ ಒಳಹೊಕ್ಕು, ಹುಡುಕಾಟ ನಡೆಸಿದ್ರೆ ಸಾಕಷ್ಟು ಉದ್ಯೋಗ (Employment) ನಿಮ್ಮನ್ನು ಸೆಳೆಯುತ್ತದೆ. ನಾವಿಂದು ಮನೆಯಲ್ಲಿಯೇ ನೀವು ಮಾಡಬಹುದಾದ ಒಂದೆರಡು ಕೆಲಸದ ಬಗ್ಗೆ ಹೇಳ್ತೇವೆ.
ಮನೆ ಕೆಲಸದ ಜೊತೆ ಇದನ್ನೂ ಮಾಡಿದ್ರೆ ಹಣ ಗಳಿಸ್ಬಹುದು ಗೃಹಣಿಯರು!
ಡಿಜಿಟಲ್ ಮಾರ್ಕೆಟಿಂಗ್ : ಡಿಜಿಟಲ್ ಮಾರ್ಕೆಟಿಂಗ್ ಮೂಲಕ ಯಾರು ಬೇಕಾದರೂ ಸುಲಭವಾಗಿ ಹಣ ಗಳಿಸಬಹುದು. ಡಿಜಿಟಲ್ ಮಾರ್ಕೆಟಿಂಗ್ ಎಂದರೆ ಇಂಟರ್ನೆಟ್, ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಮಾಡುವ ಮಾರ್ಕೆಟಿಂಗ್. ಡಿಜಿಟಲ್ ಮಾರ್ಕೆಟಿಂಗ್ ಮೂಲಕ ನೀವು ಅನೇಕ ಕೆಲಸಗಳನ್ನು ಮಾಡಬಹುದು. ನೀವು ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಮಾಡಿದ್ರೆ ಹೆಚ್ಚಿನ ಪ್ರಮಾಣದಲ್ಲಿ ಆದಾಯ ಗಳಿಸಬಹುದು. ಮೊದಲು ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ಸರಿಯಾಗಿ ತಿಳಿದು ನಂತ್ರ ಇದನ್ನು ಆರಂಭಿಸಿ.
ಫೋಟೋಗ್ರಾಫಿ ಮಾಡಿ ಹಣ ಸಂಪಾದನೆ ಮಾಡಿ : ಮನೆಯಲ್ಲಿ ಕ್ಯಾಮರಾ ಇದೆ, ಫೋಟೋಗ್ರಾಫಿಯಲ್ಲಿ ಆಸಕ್ತಿಯಿದೆ ಅಂದ್ರೆ ನೀವು ಅದ್ರ ಮೂಲಕವೂ ಹಣ ಸಂಪಾದನೆ ಮಾಡಬಹುದು. ಮೊದಲು ನೀವು ಸುಂದರ ಫೋಟೋಗಳನ್ನು ಕ್ಲಿಕ್ಕಿಸಬೇಕಾಗುತ್ತದೆ. ಅನೇಕ ಕಂಪನಿಗಳು ನಿಮ್ಮ ಫೋಟೋಗಳನ್ನು ಹಣ ನೀಡಿ ಖರೀದಿ ಮಾಡುತ್ತದೆ. ಆ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡು, ಪೋಟೋ ನೀಡುವ ಮೂಲಕ ನೀವು ಆದಾಯಗಳಿಸಬಹುದು.
10 ವರ್ಷಗಳ ಹಿಂದೆ ಈ ಕಂಪನಿಗೆ 10,000 ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 27 ಲಕ್ಷ ರೂ ಇರ್ತಿತ್ತು!
ಡೇಟಾ ಎಂಟ್ರಿ : ಇದು ಹೊಸದೇನಲ್ಲ. ಅನೇಕ ವರ್ಷಗಳಿಂದ ಇದಕ್ಕೆ ಸದಾ ಬೇಡಿಕೆಯಿದೆ. ಡೇಟಾ ಎಂಟ್ರಿ ನಿಮಗೆ ತಿಳಿದಿದ್ದರೆ ನೀವು ಮನೆಯಲ್ಲಿಯೇ ಈ ಕೆಲಸ ಮಾಡಬಹುದು. ಕೆಲ ಕಂಪನಿಗಳು ಡೇಟಾ ಎಂಟ್ರಿಗೆ ಉತ್ತಮ ಹಣ ನೀಡುತ್ತವೆ. ಈಗಿನ ದಿನಗಳಲ್ಲಿ ಮೋಸ ಮಾಡುವವರ ಸಂಖ್ಯೆ ಕೂಡ ಹೆಚ್ಚಿದೆ. ಹಾಗಾಗಿ ನೀವು ಕೆಲಸ ಮಾಡುವ ಮೊದಲು ಆ ಕಂಪನಿ ಹಣ ಪಾವತಿ ಮಾಡುತ್ತದೆಯೇ ಎಂಬುದನ್ನು ತಿಳಿಯಿರಿ. ನಿಮ್ಮಿಂದಲೇ ಹಣ ಪಡೆದು ಕೆಲಸ ನೀಡುವ ಕಂಪನಿ ಸಹವಾಸಕ್ಕೆ ಹೋಗ್ಬೇಡಿ.
ವೆಬ್‌ಸೈಟ್‌ಗಳನ್ನು ಖರೀದಿಸಿ ಮತ್ತು ಮಾರಾಟ ಮಾಡಿ : ಇದನ್ನು ಫ್ಲಿಪ್ಪಿಂಗ್ ವೆಬ್‌ಸೈಟ್‌ಗಳು ಎಂದೂ ಕರೆಯುತ್ತಾರೆ. ವೆಬ್‌ಸೈಟ್ ನಿರ್ಮಿಸಿ ಮತ್ತು ಅದನ್ನು ಅಂತರ್ಜಾಲದಲ್ಲಿ ಜನಪ್ರಿಯಗೊಳಿಸಿ. ನಂತ್ರ ಅದನ್ನು ಮಾರಾಟ ಮಾಡಬಹುದು. ವೆಬ್‌ಸೈಟ್‌ಗಳು ಮಾತ್ರವಲ್ಲ, ನೀವು ಡೊಮೇನ್ ಹೆಸರನ್ನು ಸಹ ಮಾರಾಟ ಮಾಡಬಹುದು. ಮುಂದಿನ ದಿನಗಳಲ್ಲಿ ಹೆಚ್ಚು ಬೆಲೆ ಬರುವ ಡೊಮೇನ್ ಖರೀದಿ ಮಾಡಿ, ಬೆಲೆ ಹೆಚ್ಚಾಗ್ತಿದ್ದಂತೆ ಅದನ್ನು ಮಾರಾಟ ಮಾಡಿ.