ಡಿಮ್ಯಾಟ್ ಖಾತೆ ತೆರೆಯುವ ಮೂಲಕ ತೆರಿಗೆ ಭಾರ ತಗ್ಗಿಸಬಹುದು,ಅದು ಹೇಗೆ? ಇಲ್ಲಿದೆ ಮಾಹಿತಿ

Published : Jun 22, 2023, 12:09 PM IST
ಡಿಮ್ಯಾಟ್ ಖಾತೆ ತೆರೆಯುವ ಮೂಲಕ ತೆರಿಗೆ ಭಾರ ತಗ್ಗಿಸಬಹುದು,ಅದು ಹೇಗೆ? ಇಲ್ಲಿದೆ ಮಾಹಿತಿ

ಸಾರಾಂಶ

ತೆರಿಗೆದಾರರು ತೆರಿಗೆ ಉಳಿತಾಯ ಮಾಡಲು ಏನೆಲ್ಲ ಮಾರ್ಗಗಳಿವೆ ಎಂಬ ಬಗ್ಗೆ ಸದಾ ಯೋಚಿಸುತ್ತಿರುತ್ತಾರೆ. ಡಿಮ್ಯಾಟ್ ಖಾತೆ ಮೂಲಕ ಕೂಡ ತೆರಿಗೆ ಉಳಿತಾಯ ಮಾಡಬಹುದು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಹಾಗಾದ್ರೆ ಡಿಮ್ಯಾಟ್ ಖಾತೆ ತೆರೆಯೋದ್ರಿಂದ ಹೇಗೆ ತೆರಿಗೆ ಉಳಿತಾಯ ಮಾಡಬಹುದು? ಇಲ್ಲಿದೆ ಮಾಹಿತಿ.   

Business Desk: ದುಡಿಯುವ ಪ್ರತಿಯೊಬ್ಬರೂ ತೆರಿಗೆ ಬಗ್ಗೆ ಯೋಚಿಸಲೇಬೇಕಾಗುತ್ತದೆ. ನಿಗದಿತ ಮಿತಿಗಿಂತ ಹೆಚ್ಚಿನ ಆದಾಯ ಹೊಂದಿರೋರು ತೆರಿಗೆ ಪಾವತಿಸೋದು ಕಡ್ಡಾಯ. ಹೀಗಿರುವಾಗ ತೆರಿಗೆ ಪ್ಲ್ಯಾನಿಂಗ್ ಮಾಡೋದು ಅಗತ್ಯ. ತೆರಿಗೆ ಉಳಿತಾಯ ಮಾಡಲು ಅನೇಕ ಮಾರ್ಗಗಳು ಕೂಡ ಇವೆ. ಕೆಲವೊಂದು ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ತೆರಿಗೆ ಉಳಿತಾಯ ಮಾಡಬಹುದು. ಇನ್ನು ಡಿಮ್ಯಾಟ್ ಖಾತೆ ತೆರೆಯುವ ಮೂಲಕ ಕೂಡ ತೆರಿಗೆ ಉಳಿತಾಯ ಮಾಡಬಹುದು. ಹೌದು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಡಿಮ್ಯಾಟ್ ಖಾತೆ ಹೊಂದಿರೋದು ಅಗತ್ಯ. ಡಿಮ್ಯಾಟ್ ಖಾತೆ ಎಲೆಕ್ಟ್ರಾನಿಕ್ ರೂಪದಲ್ಲಿ ಷೇರುಗಳು, ಬಾಂಡ್, ಮ್ಯೂಚುವಲ್ ಫಂಡ್ಸ್  ಹಾಗೂ ಸರ್ಕಾರದ ಸೆಕ್ಯುರಿಟಿಗಳನ್ನು ಸಂಗ್ರಹಿಸಿಡುವ ಖಾತೆ. ಈ ಖಾತೆ ತೆರೆಯುವ ಮೂಲಕ ಷೇರುಗಳ ವ್ಯವಹಾರವನ್ನು ನೀವು ಸುರಕ್ಷಿತವಾಗಿ ಮಾಡಬಹುದು. ಹಾಗಾದ್ರೆ ಡಿಮ್ಯಾಟ್ ಖಾತೆ ತೆರೆಯೋದ್ರಿಂದ ತೆರಿಗೆ ಉಳಿತಾಯ ಮಾಡೋದು ಹೇಗೆ? ತೆರಿಗೆ ಉಳಿತಾಯಕ್ಕೂ ಡಿಮ್ಯಾಟ್ ಖಾತೆಗೂ ಹೇಗೆ ಸಂಬಂಧ? ಇಲ್ಲಿದೆ ಮಾಹಿತಿ.

1.ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್: ಹೂಡಿಕೆ ಮಾಡುವಾಗ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಷೇರುಗಳು, ಮ್ಯೂಚುವಲ್ ಫಂಡ್ ಗಳು ಅಥವಾ ರಿಯಲ್ ಎಸ್ಟೇಟ್ ಮಾರಾಟದಿಂದ ಗಳಿಸಿದ ಲಾಭದ ಮೇಲೆ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ವಿಧಿಸಲಾಗುತ್ತದೆ. ಡಿಮ್ಯಾಟ್ ಖಾತೆ ತೆರೆಯುವ ಮೂಲಕ ನೀವು ನಿಮ್ಮ ಕ್ಯಾಪಿಟಲ್ ಗೇನ್ಸ್ ತೆರಿಗೆ ಭಾರ ತಗ್ಗಿಸಿಕೊಳ್ಳಬಹುದು.  ಡಿಮ್ಯಾಟ್ ಖಾತೆ ಮೂಲಕ ನಿಮ್ಮ ಪೋರ್ಟ್ ಪೋಲಿಯೋ ಅನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಮೂಲಕ ನೀವು ವಿವಿಧ ತೆರಿಗೆ ವಿನಾಯ್ತಿಗಳು ಹಾಗೂ ಕಡಿತಗಳ ಪ್ರಯೋಜನ ಪಡೆಯಬಹುದು.

ದೇಶದಲ್ಲಿ ಕಳೆದ ಆರ್ಥಿಕ ಸಾಲಿನಲ್ಲಿ ಅತೀಹೆಚ್ಚು ತೆರಿಗೆ ಪಾವತಿಸಿದ ಕಂಪನಿ ಯಾವುದು? ಇಲ್ಲಿದೆ ಟಾಪ್ 10 ಪಟ್ಟಿ

2.ದೀರ್ಘಾವಧಿ ಕ್ಯಾಪಿಟಲ್ ಗೇನ್ಸ್: ದೀರ್ಘಾವಧಿ ಬಂಡವಾಳ ಗಳಿಕೆ ಅಥವಾ ಕ್ಯಾಪಿಟಲ್ ಗೇನ್ಸ್ ಮೇಲೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಒಂದು ವರ್ಷಕ್ಕಿಂತ ಹೆಚ್ಚು ಅವಧಿಯ ಹೂಡಿಕೆ ಮೇಲಿನ ಗಳಿಕೆಯನ್ನು ದೀರ್ಘಾವಧಿ ಕ್ಯಾಪಿಟಲ್ ಗೇನ್ಸ್ ಎಂದು ಕರೆಯಲಾಗುತ್ತದೆ. ಪ್ರಸ್ತುತ ಡಿಮ್ಯಾಟ್ ಖಾತೆಯಲ್ಲಿನ ಈಕ್ವಿಟಿ ಹೂಡಿಕೆ ಮೇಲಿನ ದೀರ್ಘಾವಧಿ ಕ್ಯಾಪಿಟಲ್ ಗೇನ್ಸ್ ಮೇಲಿನ ತೆರಿಗೆ ದರದಲ್ಲಿ ಶೇ.10 (ಒಂದು ಲಕ್ಷ ರೂ. ಮಿತಿ ಇದೆ) ರಿಯಾಯ್ತಿ ನೀಡಲಾಗಿದೆ. ಹೀಗಾಗಿ ನಿಮ್ಮ ಹೂಡಿಕೆಗಳನ್ನು ಡಿಮ್ಯಾಟ್ ಖಾತೆಯಲ್ಲಿಡುವ ಮೂಲಕ ನೀವು ಗಣನೀಯ ಪ್ರಮಾಣದಲ್ಲಿ ತೆರಿಗೆ ಉಳಿತಾಯ ಮಾಡಬಹುದು.

3.ತೆರಿಗೆ ಉಳಿತಾಯ ಹೂಡಿಕೆಗಳು
ಡಿಮ್ಯಾಟ್ ಖತೆಗಳು ವಿವಿಧ ತೆರಿಗೆ ಉಳಿತಾಯ ಹೂಡಿಕೆ ಆಯ್ಕೆಗಳನ್ನು ಒದಗಿಸುತ್ತವೆ. ಇವು ನಿಮ್ಮ ತೆರಿಗೆ ಭಾರವನ್ನು ತಗ್ಗಿಸುತ್ತವೆ. ಉದಾಹರಣೆಗೆ  ಇಎಲ್ ಎಸ್ಎಸ್ ರೀತಿಯ ತೆರಿಗೆ ಉಳಿತಾಯದ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಆಡುವ ಮೂಲಕ ನೀವು ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80C ಅಡಿಯಲ್ಲಿ  1.5ಲಕ್ಷ ರೂ. ತನಕ ತೆರಿಗೆ ಕಡಿತ ಕ್ಲೇಮ್ ಮಾಡಬಹುದು.

ITR ಫೈಲ್ ಮಾಡಿದ ಬಳಿಕ ತೆರಿಗೆ ರೀಫಂಡ್ ಪಡೆಯಲು ಎಷ್ಟು ಸಮಯ ಬೇಕು? ಇಲ್ಲಿದೆ ಮಾಹಿತಿ

4.ಡಿವಿಡೆಂಡ್ ಆದಾಯ ಹಾಗೂ ತೆರಿಗೆ ಕಡಿತಗಳು
ಒಂದು ವೇಳೆ ನೀವು ನಿಮ್ಮ ಹೂಡಿಕೆಗಳ ಮೇಲೆ ಡಿವಿಡೆಂಡ್ಸ್ ಪಡೆಯುತ್ತಿದ್ದರೆ, ಅದನ್ನು ಡಿಮ್ಯಾಟ್ ಖಾತೆಯಲ್ಲಿಡುವ ಮೂಲಕ ಹೆಚ್ಚುವರಿ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು. ಷೇರುಗಳಿಂದ ಪಡೆದ 10ಲಕ್ಷ ರೂ. ತನಕದ ಡಿವಿಡೆಂಡ್ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ. ಹೀಗಾಹಿ ನಿಮ್ಮ ಹೂಡಿಕೆಗಳನ್ನು ಡಿಮ್ಯಾಟ್ ಖಾತೆಯಲ್ಲಿಡುವ ಮೂಲಕ ತೆರಿಗೆಮುಕ್ತ ಡಿವಿಡೆಂಡ್ಸ್ ಪ್ರಯೋಜನ ಪಡೆಯಬಹುದು. 

5.ಐಟಿಆರ್ ಫೈಲಿಂಗ್ ಸಮಯದಲ್ಲಿ ನೆರವು
ಹೂಡಿಕೆಗಳನ್ನು ಡಿಮ್ಯಾಟ್ ಖಾತೆಯಲ್ಲಿ ನಿರ್ವಹಣೆ ಮಾಡುವುದರಿಂದ ನಿಮ್ಮ ವಹಿವಾಟುಗಳನ್ನು ಟ್ರ್ಯಾಕ್ ಮಾಡಲು ಹಾಗೂ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ಇದು ಐಟಿಆರ್ ಫೈಲಿಂಗ್ ಸಮಯದಲ್ಲಿ ನಿಮಗೆ ನೆರವು ನೀಡುತ್ತದೆ. ಅಲ್ಲದೆ, ಕಾಗದ ವ್ಯವಹಾರಗಳನ್ನು ಇದು ತಗ್ಗಿಸುತ್ತದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ