ಆನ್ಲೈನ್ ವ್ಯವಹಾರ ಆರಾಮದಾಯಕವಾಗಿದ್ದರೂ ಎಚ್ಚರ ತಪ್ಪಿದ್ರೆ ಖಾತೆ ಖಾಲಿಯಾಗುತ್ತೆ. ಸೈಬರ್ ಮೋಸಗಾರರ ಬಲೆಗೆ ಬೀಳುವ ಅಪಾಯ ಇಲ್ಲಿ ಹೆಚ್ಚು. ಗಂಡ ಆಸ್ಪತ್ರೆಯಲ್ಲಿರುವಾಗ ಮನೆಗೆ ಬಂದ ವಸ್ತು ಹಾಗೂ ಬೆಲೆ ನೋಡಿ ಈ ಮಹಿಳೆ ಕೂಡ ದಂಗಾಗಿದ್ದಾಳೆ.
ಇಂದಿನ ದಿನಗಳಲ್ಲಿ ಆನ್ಲೈನ್ ಶಾಪಿಂಗ್ ಮಾಮೂಲಿಯಾಗಿದೆ. ಜನರು ಮನೆಯಲ್ಲಿ ಆರಾಮವಾಗಿ ಕುಳಿತು ತಮಗಿಷ್ಟವಾದ ವಸ್ತುಗಳನ್ನು ಖರೀದಿ ಮಾಡ್ತಾರೆ. ಇದ್ರಿಂದ ಸಮಯ ಉಳಿಯುತ್ತೆ ಎನ್ನುವುದು ಅವರ ವಾದ. ಆನ್ಲೈನ್ ಶಾಪಿಂಗ್ ಹೆಚ್ಚಾದಂತೆ ಆನ್ಲೈನ್ ಮೋಸದ ಸಂಖ್ಯೆ ಕೂಡ ಹೆಚ್ಚಾಗಿದೆ. ಜನರನ್ನು ಮೋಸಗೊಳಿಸಿ ಹಣ ಲೂಟಿ ಮಾಡ್ತಿರುವ ಅನೇಕ ಘಟನೆಗಳು ಆಗಾಗ ಬೆಳಕಿಗೆ ಬರ್ತಿರುತ್ತವೆ.
ಸಾಮಾನ್ಯವಾಗಿ ನಾವು ಆನ್ಲೈನ್ (Online) ನಲ್ಲಿ ಏನೇ ಆರ್ಡರ್ ಮಾಡ್ಲಿ, ಅದು ಮನೆಗೆ ಬಂದಾಗ ವಿಶೇಷ ಉತ್ಸಾಹ ಇರುತ್ತದೆ. ಪಾರ್ಸಲ್ ಬರ್ತಿದ್ದಂತೆ ಅದನ್ನು ತೆಗೆದು ಆರ್ಡರ್ (Order) ಮಾಡಿದ ವಸ್ತು ಸರಿಯಾಗಿದ್ಯಾ ಎಂಬುದನ್ನು ನೋಡುವವರೆಗೆ ಸಮಾಧಾನ ಇರೋದಿಲ್ಲ. ನಾವು ಆರ್ಡರ್ ಮಾಡದೆ ಪಾರ್ಸ್ ನಮ್ಮ ಮನೆಗೆ ಬಂದಾಗ ಏನಿರಬಹುದು ಎಂಬ ಕುತೂಹಲ, ಭಯ ಸಾಮಾನ್ಯ. ಈ ಮಹಿಳೆಗೂ ಅದೇ ಆಗಿದೆ. ಬರೀ ಆರ್ಡರ್ ಮಾಡದ ವಸ್ತು ಮನೆಗೆ ಬಂದಿದ್ದು ಮಾತ್ರವಲ್ಲದೆ ಖಾತೆಯಿಂದ ಹಣ ಕೂಡ ಕಟ್ ಆಗಿದೆ. ಇದ್ರಿಂದ ಮಹಿಳೆ ಚಿಂತಿತಳಾಗಿದ್ದಾಳೆ.
ಘಟನೆ ಒಂಟಾರಿಯನ್ ನಲ್ಲಿ ನಡೆದಿದೆ. ಇಲ್ಲಿನ ಮಹಿಳೆ ಜೋಯಲ್ ಎಂಗಲ್ಹಾರ್ಟ್ ಆರ್ಡರ್ ನೋಡಿ ದಂಗಾಗಿದ್ದಾಳೆ.
ಬೆಲೆ ನೋಡ್ದೆ ಪಾಸ್ತಾ ಆರ್ಡರ್ ಮಾಡಿ ದಂಗಾದ ಗರ್ಲ್ಸ್
ಮನೆಗೆ ಬಂತು ಇಷ್ಟೊಂದು ಕಾಂಡೋಮ್ : ಒಂಟಾರಿಯನ್ ಜೋಯಲ್ ಎಂಗಲ್ಹಾರ್ಟ್ ಪ್ರಕಾರ, ಆಕೆ ಮನೆಗೆ ಕಾಂಡೋಮ್ ಇರುವ ಒಂದು ಬಾಕ್ಸ್ ಪಾರ್ಸಲ್ ಬಂದಿದೆ. ಅದ್ರಲ್ಲಿ 1020 ಕಾಂಡೋಮ್ ಇದೆ. ಆದ್ರೆ ಇದನ್ನು ಜೋಯಲ್ ಎಂಗಲ್ಹಾರ್ಟ್ ಆರ್ಡರ್ ಮಾಡಿಲ್ಲ. ಇದಕ್ಕೆ ಮಹಿಳೆ 500 ಡಾಲರ್ ಅಂದ್ರೆ ಸುಮಾರು 41 ಸಾವಿರ ಖರ್ಚು ಮಾಡಿದ್ದಾಳೆ. ಆರ್ಡರ್ ಬಗ್ಗೆ ಅಮೆಜಾನ್ (Amazon) ನಿಂದ ಇಮೇಲ್ ಬಂದಿದೆಯಂತೆ. ನಾನು ಹಾಗೂ ನನ್ನ ಪತಿ ಇಬ್ಬರೂ ಆರ್ಡರ್ ಮಾಡದ ಕಾರಣ ಇದು ತಪ್ಪಾಗಿ ಬಂದಿದೆ ಎಂದು ನಾವು ಭಾವಿಸಿದ್ದೆವು. ಆದ್ರೆ ಬಾಕ್ಸ್ ಬಂದ್ಮೇಲೆ ಸತ್ಯ ಗೊತ್ತಾಗಿದೆ ಎನ್ನುತ್ತಾಳೆ ಜೋಯಲ್ ಎಂಗಲ್ಹಾರ್ಟ್.
ದಿನಕ್ಕೆ 1 ಕೋಟಿ ಗಳಿಸುವ ಡೆಲಿವರಿ ಬಾಯ್‌ಗೆ ವೇತನವಿಲ್ಲ, ಆದ್ರೂ 700 ಕೋಟಿ ರೂ ದಾನ ಮಾಡಿದ!
ಡೆಲಿವರಿ ಬಾಕ್ಸ್ ನಲ್ಲಿ 30 ಪ್ಯಾಕೆಟ್ ಇತ್ತಂತೆ. ಒಂದೊಂದು ಪ್ಯಾಕೆಟ್ ನಲ್ಲಿ 34 ಕಾಂಡೋಮ್ ಇತ್ತಂತೆ. ನಾನು ಯಾವುದೇ ಆರ್ಡರ್ ಮಾಡಿಲ್ಲವಾದ್ರೂ ಈ ಪಾರ್ಸಲ್ ಬಂದಿದ್ದಲ್ಲದೆ ನನ್ನ ಕ್ರೆಡಿಟ್ ಕಾರ್ಡ್ ನಿಂದ 41 ಸಾವಿರ ರೂಪಾಯಿ ಕಟ್ ಆಗಿದೆ. ನನ್ನ ಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಮಯದಲ್ಲಿ ನಾವ್ಯಾಕೆ ಕಾಂಡೋಮ್ ಆರ್ಡರ್ ಮಾಡಲಿ ಎಂದು ಜೋಯಲ್ ಎಂಗಲ್ಹಾರ್ಟ್ ಪ್ರಶ್ನೆ ಮಾಡಿದ್ದಲ್ಲದೆ ಈ ಬಗ್ಗೆ ಅಮೆಜಾನ್ ಗೆ ದೂರು ನೀಡಿದ್ದಾಳೆ.
ಅಮೆಜಾನ್ ನಲ್ಲಿ ಈ ಹಿಂದೆ ಕೂಡ ಇಂಥ ಘಟನೆಗಳು ನಡೆದಿದ್ದವು. ಆರ್ಡರ್ ಮಾಡದೆ ಕೆಲ ವಸ್ತುಗಳು ಮನೆಗೆ ಬಂದಿದ್ದಿದೆ. ವರ್ಜೀನಿಯಾದ ಸಿಂಡಿ ಸ್ಮಿತ್ ಮನೆಗೆ 100ಕಿಂತ ಹೆಚ್ಚು ಅಮೆಜಾನ್ ಪ್ಯಾಕೆಟ್ ಸಿಕ್ಕಿತ್ತು. ಆದ್ರೆ ಯಾವುದೇ ಹಣ ಕಟ್ ಆಗಿರಲಿಲ್ಲ. ಹಳೆ ಸ್ಟಾಕ್ ಕ್ಲಿಯರ್ ಮಾಡಲು ಮನಸ್ಸು ಕಂಡ ವಿಳಾಸಕ್ಕೆ ವಸ್ತುಗಳನ್ನು ಕಳುಹಿಸಲಾಗುತ್ತದೆ ಎಂದು ಅಮೆಜಾನ್ ಹೇಳಿತ್ತು. ಆದ್ರೆ ಜೋಯಲ್ ಎಂಗಲ್ಹಾರ್ಟ್ ಪ್ರಕರಣ ಸ್ವಲ್ಪ ಭಿನ್ನವಾಗಿದೆ. ಅವರ ಕ್ರೆಡಿಟ್ ಕಾರ್ಡ್ ಹ್ಯಾಕ್ ಆಗಿರುವ ಕಾರಣಕ್ಕೆ ಈ ರೀತಿ ಆಗಿರಬಹುದು ಎಂದು ಅಂದಾಜಿಸಲಾಗಿದೆ.
ವಾಪಸ್ ಮಾಡದ ವಸ್ತು ಇದು ಎಂದು ಲೇಬಲ್ ಮಾಡಿದ್ದ ಕಾರಣ ಅಮೆಜಾನ್ ಕಾಡೋಮ್ ವಾಪಸ್ ಪಡೆಯಲು ಮೊದಲು ನಿರಾಕರಿಸಿತ್ತು. ಆದ್ರೆ ನಂತ್ರ ಅಮೆಜಾನ್, ಗ್ರಾಹಕಿಗೆ ಕಾರ್ಡ್ ಕ್ರೆಡಿಟ್ ನೀಡೋದಾಗಿ ಹೇಳಿದೆ. ಮಹಿಳೆ ಹಣವನ್ನು ವಾಪಸ್ ಮಾಡೋದಾಗಿ ಕಂಪನಿ ತಿಳಿಸಿದೆ.