ಕೇಂದ್ರ ಬಜೆಟ್‌ 2025: ಹಳೆ ತೆರಿಗೆ ಪದ್ಧತಿ ರದ್ದಾಗುತ್ತಾ?

Published : Feb 02, 2025, 07:06 AM IST
ಕೇಂದ್ರ ಬಜೆಟ್‌ 2025: ಹಳೆ ತೆರಿಗೆ ಪದ್ಧತಿ ರದ್ದಾಗುತ್ತಾ?

ಸಾರಾಂಶ

ಹಳೆ ತೆರಿಗೆ ಪದ್ಧತಿ ತೆಗೆದು ಹಾಕುವ ಬಗ್ಗೆ ಬಜೆಟ್‌ನಲ್ಲೂ ನಿರ್ಮಲಾ ಯಾವುದೇ ಪ್ರಸ್ತಾಪ ಮಾಡಲಿಲ್ಲ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆಯೂ ಅಂಥದ್ದೇನಾದರೂ ಪ್ರಸ್ತಾಪ ಇದ್ದರೆ ನಾನೇ ಹೇಳಿರುತ್ತಿದ್ದೆ ಎಂದಷ್ಟೇ ಹೇಳಿ ಸುಮ್ಮನಾಗಿದ್ದಾರೆ.

ನವದೆಹಲಿ(ಫೆ.02):  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶನಿವಾರ ಮಂಡಿಸಿದ ಬಜೆಟ್‌ನಲ್ಲಿ ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಳ್ಳುವ ಮಧ್ಯಮ ಆದಾಯ ವರ್ಗದ ಜನರಿಗೆ ಭರ್ಜರಿ ರಿಯಾಯ್ತಿ ಪ್ರಕಟಿಸಿರುವುದು, ಸರ್ಕಾರ ಹಳೆಯ ತೆರಿಗೆ ಪದ್ಧತಿಯನ್ನು ತೆಗೆದು ಹಾಕುವುದರ ಸುಳಿವಿರಬಹುದು ಎಂದು ವಿಶ್ಲೇಷಣೆ ಕೇಳಿಬಂದಿದೆ.

ಹಳೆ ತೆರಿಗೆ ಪದ್ಧತಿ ತೆಗೆದು ಹಾಕುವ ಬಗ್ಗೆ ಬಜೆಟ್‌ನಲ್ಲೂ ನಿರ್ಮಲಾ ಯಾವುದೇ ಪ್ರಸ್ತಾಪ ಮಾಡಲಿಲ್ಲ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆಯೂ ಅಂಥದ್ದೇನಾದರೂ ಪ್ರಸ್ತಾಪ ಇದ್ದರೆ ನಾನೇ ಹೇಳಿರುತ್ತಿದ್ದೆ ಎಂದಷ್ಟೇ ಹೇಳಿ ಸುಮ್ಮನಾಗಿದ್ದಾರೆ. ಆದರೆ ಬಜೆಟ್‌ನಲ್ಲಿ ಘೋಷಿಸಿರುವ ರಿಯಾಯ್ತಿಗಳೆಲ್ಲವೂ ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಂಡವರಿಗೆ ಮಾತ್ರವೇ ಎಂದು ಸ್ಪಷ್ಟಪಡಿಸಿದೆ. ಇನ್ನೊಂದೆಡೆ ಈಗಾಗಲೇ ಶೇ.75ರಷ್ಟು ತೆರಿಗೆ ಪಾವತಿದಾರರು ಹೊಸ ಪದ್ಧತಿ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಸರ್ಕಾರ ಹಳೆ ತೆರಿಗೆ ಪದ್ಧತಿ ರದ್ದು ಮಾಡಬೇಕಾದ ಪ್ರಮೇಯ ಉದ್ಭವಿಸುವುದು ಕಡಿಮೆ. ಜನ ಹೆಚ್ಚಿನ ರಿಯಾಯ್ತಿಗೆ ಮೊರೆ ಹೋದಂತೆ ಹಳೆ ತೆರಿಗೆ ಪದ್ಧತಿ ತಂತಾನೇ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ ಎಂಬ ನಿಲುವಿನಲ್ಲಿ ಸರ್ಕಾರ ಇದೆ ಎನ್ನಲಾಗಿದೆ.

Budget 2025: ನಿವೃತ್ತರು ಹಾಗೂ ಪಿಂಚಣಿ ಪಡೆಯೋರಿಗೆ ಬಜೆಟ್‌ನ ಲಾಭಗಳೇನು?

ಹಳೆ ತೆರಿಗೆ ಪದ್ಧತಿ ಹೇಗಿತ್ತು?

ಇದು ಮನೆ ಬಾಡಿಗೆ ಭತ್ಯೆ, ಜೀವ ವಿಮಾ ಪ್ರೀಮಿಯಂ, ಪಿಪಿಎಫ್‌ನಲ್ಲಿ ಹೂಡಿಕೆ, ವೈದ್ಯಕೀಯ ವಿಮಾ ಪಾಲಿಸಿ ಮೊದಲಾದವುಗಳ ಮೇಲಿನ ವೆಚ್ಚವನ್ನು ತೋರಿಸಿ ಅಷ್ಟು ಹಣವನ್ನು ತಮ್ಮ ತೆರಿಗೆ ಪಾವತಿಯಲ್ಲಿ ರಿಯಾಯ್ತಿ ಪಡೆಯಲು ತೆರಿಗೆ ಪಾವತಿದಾರರಿಗೆ ಅವಕಾಶ ಕಲ್ಪಿಸುತ್ತಿತ್ತು. ಈ ಪದ್ಧತಿ ಆಯ್ಕೆ ಮಾಡಿಕೊಂಡವರ ತೆರಿಗೆ ಆದಾಯವನ್ನು ಅವರ ವೆಚ್ಚವನ್ನು ಕಡಿತ ಮಾಡಿದ ಬಳಿಕ ನಿರ್ಧರಿಸಲಾಗುತ್ತಿತ್ತು. ಹೀಗೆ ಸಿಗುವ ತೆರಿಗೆ ಆದಾಯಕ್ಕೆ ತೆರಿಗೆ ನಿಗದಿಗೆ ಹಲವು ಸ್ತರಗಳಿದ್ದವು. 2.5 ಲಕ್ಷ ರು.ವರೆಗೆ ಶೂನ್ಯ ತೆರಿಗೆ; 2.5 -3 ಲಕ್ಷ ರು.ಗೆ ಶೇ.5; 3-5 ಲಕ್ಷ ರು.ಗೆ ಶೇ.10; 5-10 ಲಕ್ಷ ರು.ಗೆ ಶೇ.20; 10 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ಆದಾಯ ತೆರಿಗೆ ವಿಧಿಸಲಾಗುತ್ತಿತ್ತು.

ಬಡವರು, ಮಧ್ಯಮ ವರ್ಗ, ರೈತರಿಗೆ ಅನುಕೂಲಕರ ಬಜೆಟ್: ಜೋಶಿ

ಹೊಸ ತೆರಿಗೆ ಪದ್ಧತಿ ಹೇಗಿದೆ?

2020-21ರಲ್ಲಿ ಮೋದಿ ಸರ್ಕಾರ ಹೊಸ ತೆರಿಗೆ ಪದ್ಧತಿ ಜಾರಿಗೆ ತಂದಿತ್ತು. ಇದರಲ್ಲಿ ಎಲ್ಲಾ ರೀತಿಯ ರಿಯಾಯ್ತಿ ತೆಗೆದು ಹಾಕಲಾಗಿತ್ತು. ಆದರೆ ಇಂಥ ನೀತಿ ಜಾರಿಗೆ ತಂದ ನಂತರದ ವರ್ಷಗಳಲ್ಲೂ ಬಹುತೇಕ ತೆರಿಗೆದಾರರ ಹಳೆಯ ತೆರಿಗೆ ಪದ್ಧತಿಯಲ್ಲೇ ಮುಂದುವರೆದಿದ್ದರು. ಆದರೆ ಇದೀಗ ಸರ್ಕಾರ ಹೊಸ ಪದ್ಧತಿಯನ್ನು ಮೊದಲ ಆಯ್ಕೆಯನ್ನಾಗಿ ಇರಿಸಿದೆ. ಒಂದು ವೇಳೆ ಗ್ರಾಹಕರು ಬಯಸಿದರೆ, ಅವರು ನಿರ್ದಿಷ್ಟವಾಗಿ ಹಳೆಯ ಪದ್ಧತಿ ಆಯ್ಕೆ ಮಾಡಿಕೊಳ್ಳಬೇಕು.
2023-24ರಲ್ಲಿ ತೆರಿಗೆ ಪಾವತಿ ಮಾಡಿದವರ ಪೈಕಿ ಶೇ.72ರಷ್ಟು ಜನರು ಹೊಸ ಪದ್ಧತಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಸರ್ಕಾರ ಹೇಳಿತ್ತು. ಹೀಗಾಗಿ ಈ ಪದ್ಧತಿಯವರಿಗೆ ಇದೀಗ ಇನ್ನಷ್ಟು ಬಂಪರ್‌ ಕೊಡುಗೆ ಮೂಲಕ ಉಳಿದವರನ್ನೂ ಹೊಸ ಪದ್ಧತಿಗೆ ಆಹ್ವಾನಿಸುವ ಕೆಲಸವನ್ನು ಸರ್ಕಾರ ಮಾಡಿದೆ ಎನ್ನಲಾಗಿದೆ.

ಹೊಸ ಪದ್ಧತಿಯಲ್ಲಿ 4 ಲಕ್ಷದವರೆಗಿನ ಆದಾಯಕ್ಕೆ ಶೂನ್ಯ ತೆರಿಗೆ; 4-8 ಲಕ್ಷಕ್ಕೆ ಶೇ.5; 8-12 ಲಕ್ಷಕ್ಕೆ ಶೇ.10; 12-16 ಲಕ್ಷ ಶೇ.15; 16- 20 ಲಕ್ಷಕ್ಕೆ ಶೇ.20; 24 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!