Ola Hyper chargers: BPCL ಪಂಪ್ ಗಳಲ್ಲಿ ಹೈಪರ್ ಚಾರ್ಜಸ್ ಸ್ಥಾಪನೆಗೆ ಮುಂದಾದ ಓಲಾ; ಜೂನ್ ತನಕ ಗ್ರಾಹಕರಿಗೆ ಉಚಿತ ಸೇವೆ

By Suvarna News  |  First Published Dec 29, 2021, 5:35 PM IST

*ಮುಂದಿನ ವರ್ಷದೊಳಗೆ ದೇಶದ ಪ್ರಮುಖ ನಗರಗಳಲ್ಲಿ 4ಸಾವಿರಕ್ಕೂ ಅಧಿಕ ಚಾರ್ಜಿಂಗ್  ಪಾಯಿಂಟ್ ಗಳ ಸ್ಥಾಪನೆ ಗುರಿ
* ಹೈಪರ್ ಚಾರ್ಜಸ್ ಅಳವಡಿಕೆಯಾದ  6-8 ವಾರಗಳಲ್ಲಿ ಕಾರ್ಯಾರಂಭ ಮಾಡಲಿವೆ
*ವಸತಿ ಸಂಕೀರ್ಣಗಳಲ್ಲೂ ಚಾರ್ಜಿಂಗ್ ಪಾಯಿಂಟ್ ಸ್ಥಾಪನೆಗೆ ಚಿಂತನೆ 
 


ನವದೆಹಲಿ (ಡಿ.29): ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮೂಲಕ ಸಾಕಷ್ಟು ಸದ್ದು ಮಾಡುತ್ತಿರೋ ಓಲಾ(Ola) ಸಂಸ್ಥೆ ಈಗ ದೇಶಾದ್ಯಂತ  ಭಾರತ್ ಪೆಟ್ರೋಲಿಯಂ ನಿಗಮ ಲಿಮಿಟೆಡ್ ನ (BPCL) ಪ್ರಮುಖ ಪಂಪ್ ಗಳಲ್ಲಿ ಹೈಪರ್ ಚಾರ್ಜಸ್ (hyperchargers) ಪಾಯಿಂಟ್ ಗಳ ಸ್ಥಾಪನೆಗೆ ಮುಂದಾಗಿದೆ. ಈ ಬಗ್ಗೆ ಕಂಪನಿ ಸಿಇಒ(CEO) ಭವಿಷ್ ಅಗರ್ವಾಲ್ ( Bhavish Aggarwal) ಮಾಹಿತಿ ನೀಡಿದ್ದು, ಮುಂದಿನ ವರ್ಷದೊಳಗೆ ಇಂಥ 4,000ಕ್ಕೂ ಅಧಿಕ ಚಾರ್ಜಿಂಗ್ ಪಾಯಿಂಟ್ ಗಳನ್ನು(Charging points) ಸ್ಥಾಪಿಸಲಾಗೋದು ಎಂದಿದ್ದಾರೆ. ದೇಶಾದ್ಯಂತ ಈ ಹೈಪರ್ ಚಾರ್ಜಸ್ (hyperchargers)ಅಳವಡಿಸಲಾಗೋದು ಹಾಗೂ ಇವು  6-8 ವಾರಗಳೊಳಗೆ ಕಾರ್ಯಾರಂಭ ಮಾಡಲಿವೆ ಎಂದು ಎಂದು ಅರ್ಗವಾಲ್ ತಿಳಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಮುಂದಿನ ವರ್ಷ ಜೂನ್ ಕೊನೆಯ ತನಕ ಎಲ್ಲ ಗ್ರಾಹಕರು ಈ ಹೈಪರ್ ಚಾರ್ಜಸ್ ಅನ್ನು ಉಚಿತವಾಗಿ ಬಳಸಿಕೊಳ್ಳಬಹುದಾಗಿದೆ. 

ಹೈಪರ್ ಚಾರ್ಜಸ್ ಗೆ ಸಂಬಂಧಿಸಿ ಕೆಲವು ಫೋಟೋಗಳೊಂದಿಗೆ ಟ್ವೀಟ್ ಮಾಡಿರೋ ಅಗರ್ವಾಲ್ 'ದೇಶಾದ್ಯಂತ ಹಲವು ನಗರಗಳಲ್ಲಿ BPCL ಪೆಟ್ರೋಲ್ ಪಂಪ್ ಗಳು ಹಾಗೂ ವಸತಿ ಸಂಕೀರ್ಣಗಳಲ್ಲಿ ಹೈಪರ್ ಚಾರ್ಜಸ್ ಸ್ಥಾಪಿಸಲಾಗೋದು. ಮುಂದಿನ ವರ್ಷದೊಳಗೆ 4ಸಾವಿರಕ್ಕೂ ಅಧಿಕ ಪಾಯಿಂಟ್ ಗಳನ್ನು ಸ್ಥಾಪಿಸಲಾಗೋದು. ಹೈಪರ್ ಚಾರ್ಜಸ್ ಅಳವಡಿಕೆಯಾದ  6-8 ವಾರಗಳಲ್ಲಿ ಕಾರ್ಯಾರಂಭ ಮಾಡಲಿವೆ. ಎಲ್ಲ ಗ್ರಾಹಕರಿಗೂ 2022ರ ಜೂನ್ ಕೊನೆಯ ತನಕ ಇವು ಉಚತವಾಗಿ ಬಳಕೆಗೆ ಲಭ್ಯವಾಗಲಿವೆ' ಎಂದಿದ್ದಾರೆ. ಅಗರ್ವಾಲ್ ಟ್ವೀಟ್ ಅನ್ನು ರೀಟ್ವೀಟ್ ಮಾಡಿರೋ ಓಲಾ ಎಲೆಕ್ಟ್ರಿಕ್  ಹೀಗೆ ಬರೆದುಕೊಂಡಿದೆ-'ಭಾರತ, ಭವಿಷ್ಯದ ಚಾರ್ಜಿಂಗ್ ಗೆ ನಾವು ಸಿದ್ಧರಾಗಿದ್ದೇವೆ. ನೀವು ಸಿದ್ಧರಿದ್ದೀರಾ?'

Tap to resize

Latest Videos

undefined

EV Charging : ಸ್ವಂತ ಉದ್ಯೋಗ ಶುರು ಮಾಡುವ ಪ್ಲಾನ್‌ನಲ್ಲಿದ್ದರೆ ಇಲ್ಲಿದೆ ದಿ ಬೆಸ್ಟ್ ಬ್ಯುಸಿನೆಸ್!

ಪೆಟ್ರೋಲ್ ಪಂಪ್ ಗಳು ಹಾಗೂ ವಸತಿ ಸಂಕೀರ್ಣಗಳಷ್ಟೇ ಅಲ್ಲದೆ, ಮಾಲ್ ಗಳು, ಐಟಿ ಪಾರ್ಕ್ ಗಳು ಹಾಗೂ ಜನಪ್ರಿಯ ತಾಣಗಳಲ್ಲಿ ಕೂಡ ಚಾರ್ಜಿಂಗ್ ಪಾಯಿಂಟ್ ಗಳನ್ನು ಸ್ಥಾಪಿಸಲು ಓಲಾ ಉದ್ದೇಶಿಸಿದೆ. ಈ ಮೂಲಕ ಎಲೆಕ್ಟ್ರಿಕ್ ವಾಹನಗಳು  ಯಾವುದೇ ತಡೆಯಿಲ್ಲದೆ ಚಲಿಸುವಂತಾಗಬೇಕೆಂಬುದು ಕಂಪನಿಯ ಉದ್ದೇಶವಾಗಿದೆ.  ಬೆಂಗಳೂರು ಮೂಲದ ಓಲಾ ಕಂಪನಿ ಈ ಹಿಂದೆ ತನ್ನ ಎಲೆಕ್ಟ್ರಿಕ್ ಸ್ಕೂಟರ್ ನೊಂದಿಗೆ ಹೋಮ್ ಚಾರ್ಜರ್ ಕೂಡ ನೀಡಲಾಗೋದು ಎಂದು ತಿಳಿಸಿತ್ತು. ಓಲಾ ಹೈಪರ ಚಾರ್ಜಸ್ ಕೇವಲ ಓಲಾ ಗ್ರಾಹಕರ ಬಳಕೆಗಷ್ಟೇ ಸೀಮಿತವಾಗಿರಲಿದೆ ಎಂದು ಹೇಳಲಾಗುತ್ತಿದೆ.

ಓಲಾ ಈ ವರ್ಷ ಓಲಾ ಎಸ್ 1(Ola S1) ಹಾಗೂ ಓಲಾ ಎಸ್ 1 ಪ್ರೊ(Ola S1 pro) ಎಲೆಕ್ಟ್ರಿಕ್ ಸ್ಕೂಟರ್(Electric Scooter) ಬಿಡುಗಡೆ ಮಾಡಿದೆ. ಕೆಲವು ನಗರಗಳಲ್ಲಿ ಈಗಾಗಲೇ ಈ ಸ್ಕೂಟರ್ ಗ್ರಾಹಕರಿಗೆ ದೊರಕಿದೆ ಕೂಡ. ಓಲಾ ಎಲೆಕ್ಟ್ರಿಕ್ ಅಕ್ಟೋಬರ್ ನಲ್ಲಿ ತನ್ನ ಮೊದಲ ಹೈಪರ್ ಚಾರ್ಜರ್ ಬಿಡುಗಡೆಗೊಳಿಸೋದಾಗಿ ತಿಳಿಸಿತ್ತು. ಓಲಾ ಎಲೆಕ್ಟ್ರಿಕ್ ಸ್ಕೂಟರ್ ಒಂದು ಚಾರ್ಜ್ ನಲ್ಲಿ 75ಕಿ.ಮೀ. ತನಕ ಕ್ರಮಿಸೋ ಸಾಮರ್ಥ್ಯ ಹೊಂದಿದೆ. 

Ola Electric Scooter ಮುಂದಿನ ವಾರದಿಂದ ಹೊಸ ನಗರ, ಪಟ್ಟಣದಲ್ಲಿ ಸ್ಕೂಟರ್ ಲಭ್ಯ!

2030ರ ಸುಮಾರಿಗೆ ರಸ್ತೆಗಿಳಿಯುವ ವಾಹನಗಳು ವಿದ್ಯುತ್ (Electricity)ಅಥವಾ ಬ್ಯಾಟರಿಯಿಂದ ಚಲಿಸಲಿವೆ. ಈಗಾಗಲೇ ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ಓಡುತ್ತಿವೆ. ಹೀಗಾಗಿ ಚಾರ್ಜಿಂಗ್ ಸ್ಟೇಷನ್ ಗಳಿಗೆ ಮುಂದಿನ ದಿನಗಳಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಲಿದೆ. ಇದನ್ನು ಅರಿತಿರೋ ಓಲಾ ಈಗಲೇ ಈ ಕ್ಷೇತ್ರಕ್ಕೆ ಕಾಲಿಟ್ಟಿದೆ. ಇನ್ನು ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್ ಜಿಎಸ್‌ಟಿಗೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ಹಿಂದೆ, ಇವಿ ಚಾರ್ಜಿಂಗ್ (EV Charging )ಸ್ಟೇಷನ್‌ಗಳಿಗೆ ಶೇಕಡಾ 18ರಷ್ಟು ಜಿಎಸ್‌ಟಿಯನ್ನು ವಿಧಿಸಲಾಗುತ್ತಿತ್ತು.  ಅದನ್ನು ಈಗ ಶೇಕಡಾ 5 ಕ್ಕೆ ಇಳಿಸಲಾಗಿದೆ. ಚಾರ್ಜಿಂಗ್ ಸ್ಟೇಷನ್ ಗೆ ಪ್ರತ್ಯೇಕ ಪ್ಲಾಟ್ ತೆಗೆದುಕೊಂಡು ಅದರ ಮೇಲೆ ಸ್ಟೇಷನ್ ಗಳನ್ನು ನಿರ್ಮಿಸಬೇಕು ಎಂಬುದು ಮೊದಲ ನಿಯಮ. ಈಗ ಈ ನಿಯಮವನ್ನು ರದ್ದುಪಡಿಸಲಾಗಿದ್ದು,ಯಾವುದೇ ವಾಣಿಜ್ಯ ಅಥವಾ ಖಾಸಗಿ ಭೂಮಿಯಲ್ಲಿ ಚಾರ್ಜಿಂಗ್ ಸ್ಟೇಷನ್  ನಿರ್ಮಿಸಬಹುದು. 

click me!