ಒಡಿಶಾ ರೈಲು ದುರಂತದ ಭೀಕರತೆಯನ್ನು ಇಡೀ ದೇಶ ಮರೆಯಲು ಸಾಧ್ಯವಿಲ್ಲ. ದುರಂತದಲ್ಲಿ ಮೃತಪಟ್ಟವರಿಗೆ ಸಿಗುವ ಪರಿಹಾರದ ಬಗ್ಗೆ ಸುದ್ದಿಗಳು ಪ್ರಕಟವಾಗುತ್ತಿವೆ ಕೂಡ. ಆದರೆ, ಭಾರತೀಯ ರೈಲ್ವೆ ಕೇವಲ 35 ಪೈಸೆಗೆ ಪ್ರಯಾಣಿಕರಿಗೆ ನೀಡುತ್ತಿರುವ 10 ಲಕ್ಷ ರೂ. ವಿಮಾ ಕವರೇಜ್ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಹಾಗಾದ್ರೆ ಈ ಪ್ರಯಾಣ ವಿಮೆಯನ್ನು ಯಾರು, ಹೇಗೆ ಖರೀದಿಸಬಹುದು? ಇಲ್ಲಿದೆ ಮಾಹಿತಿ.
Business Desk:ಒಡಿಶಾದಲ್ಲಿ ಜೂ.2ರಂದು ನಡೆದ ಭೀಕರ ರೈಲು ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಅಪಘಾತದಲ್ಲಿ 288 ಮಂದಿ ಮೃತಪಟ್ಟಿದ್ದರೆ, 1000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಪ್ರಯಾಣ ವಿಮೆ (ಟ್ರಾವೆಲ್ ಇನ್ಯುರೆನ್ಸ್) ಮಹತ್ವದ ಕುರಿತ ಚರ್ಚೆಯನ್ನು ಮುನ್ನಲೆಗೆ ತಂದಿದೆ. ಭಾರತೀಯ ರೈಲ್ವೆ ಇಲಾಖೆ ಕೇವಲ 35 ಪೈಸೆಗೆ ಪ್ರತಿ ಪ್ರಯಾಣಿಕರಿಗೆ ಪ್ರಯಾಣ ವಿಮೆ ಪಡೆಯಲು ಅವಕಾಶ ಕಲ್ಪಿಸಿದೆ. ಈ ಸೌಲಭ್ಯದ ಅಡಿಯಲ್ಲಿ ಐಆರ್ ಸಿಟಿಸಿ ರೈಲ್ವೆ ಪ್ರಯಾಣದ ವೇಳೆಯಲ್ಲಿ ಪ್ರಯಾಣಿಕ ಅಪಘಾತದಿಂದ ಮರಣ ಹೊಂದಿದ್ರೆ, ಕಾಯಂ ಅಂಗವೈಕಲ್ಯಕ್ಕೆ ತುತ್ತಾದ್ರೆ ಅಥವಾ ಆಸ್ಪತ್ರೆಗೆ ಸೇರ್ಪಡೆಗೊಂಡರೆ 10ಲಕ್ಷ ರೂ. ತನಕ ವಿಮಾ ಕವರೇಜ್ ಒದಗಿಸುತ್ತದೆ. ಒಡಿಶಾ ರೈಲ್ವೆ ದುರಂತದಲ್ಲಿ ಸಾವನ್ನಪ್ಪಿದವರಿಗೆ ತಲಾ 10ಲಕ್ಷ ರೂ. ವಿಮೆ ಸಿಗಲಿದೆ. ಇನ್ನು ತೀವ್ರ ಗಾಯಗೊಂಡವರಿಗೆ 2ಲಕ್ಷ ರೂ. ಹಾಗೂ ಸಣ್ಣಪುಟ್ಟ ಗಾಯಗೊಂಡವರಿಗೆ 50 ಸಾವಿರ ರೂ. ನೆರವು ದೊರೆಯಲಿದೆ. ಹಾಗಾದ್ರೆ ಈ ಪ್ರಯಾಣ ವಿಮೆ ಪಡೆಯುವುದು ಹೇಗೆ? ಯಾರು ಇದನ್ನು ಪಡೆಯಲು ಅರ್ಹತೆ ಹೊಂದಿದ್ದಾರೆ? ಇಲ್ಲಿದೆ ಮಾಹಿತಿ.
ಯಾರು ಈ ವಿಮೆ ಪಡೆಯಬಹುದು?
ಈ ಯೋಜನೆ ಐಆರ್ ಸಿಟಿಸಿ (IRCTC) ವೆಬ್ ಸೈಟ್ ಅಥವಾ ಅಪ್ಲಿಕೇಷನ್ ಮೂಲಕ ಇ-ಟಿಕೆಟ್ ಬುಕ್ ಮಾಡುವ ಭಾರತೀಯ ನಾಗರಿಕರಿಗೆ ಮಾತ್ರ ಅನ್ವಯಿಸುತ್ತದೆ. ವಿದೇಶಿ ಪ್ರಜೆಗಳು ಈ ಯೋಜನೆ ಪ್ರಯೋಜನ ಪಡೆಯಲು ಅರ್ಹತೆ ಹೊಂದಿಲ್ಲ. ವಿದೇಶಿ ಪ್ರಜೆಗಳು ಸೌಲಭ್ಯ ಪಡೆಯಲು ಅರ್ಹತೆ ಹೊಂದಿಲ್ಲ ಈ ವಿಮಾ ಕವರೇಜ್ ಆಯ್ಕೆಯಾಗದೆ. ಆದರೆ, ಇದನ್ನು ಆಯ್ಕೆ ಮಾಡಿದ ಬಳಿಕ ಒಂದೇ ಪಿಎನ್ ಆರ್ ಸಂಖ್ಯೆಯಲ್ಲಿರುವ ಎಲ್ಲ ಪ್ರಯಾಣಿಕರಿಗೂ ಇದು ಕಡ್ಡಾಯವಾಗಲಿದೆ. ಆದರೆ, ಈ ಸೌಲಭ್ಯವನ್ನು ಸಿನ್ ಎಫ್/ಆರ್ ಎಸಿ/ಸಿಎನ್ ಎಫ್ ಪಾರ್ಟ್ ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ಮಾತ್ರ ನೀಡಲಾಗುತ್ತದೆ.
ಅಮ್ಮಂದಿರ ದಿನಕ್ಕೆ ಗುಡ್ ನ್ಯೂಸ್, ಇನ್ಮುಂದೆ ಆರೋಗ್ಯ ವಿಮೆ ಪಾಲಿಸಿಗಳಲ್ಲಿ ಕವರ್ ಆಗಲಿದೆ 'ಬಾಡಿಗೆ ತಾಯ್ತನ'!
ಟಿಕೆಟ್ ಗಳನ್ನು ಬುಕ್ ಮಾಡಿದ ಬಳಿಕ ಗ್ರಾಹಕರು ಎಸ್ ಎಂಎಸ್ ಹಾಗೂ ಇ-ಮೇಲ್ ಐಡಿ ಮೂಲಕ ವಿಮಾ ಕಂಪನಿಗಳಿಂದ ನೇರವಾಗಿ ಪಾಲಿಸಿ ಮಾಹಿತಿಗಳನ್ನು ಪಡೆಯುತ್ತಾರೆ. ಇದರ ಜೊತೆಗೆ ನಾಮನಿರ್ದೇಶನ ಭರ್ತಿ ಮಾಡುವ ಲಿಂಕ್ ಕೂಡ ಪಡೆಯುತ್ತಾರೆ. ಪಾಲಿಸಿ ಸಂಖ್ಯೆಯನ್ನು ಐಆರ್ ಸಿಟಿಸಿ ಪುಟದಲ್ಲಿರುವ ಟಿಕೆಟ್ ಬುಕ್ಕಿಂಗ್ ಹಿಸ್ಟರಿಯಲ್ಲಿ ನೋಡಬಹುದು. ಇನ್ನು ಈ ಪ್ರಯಾಣ ವಿಮೆಯನ್ನು ಸೀಟ್ ಇಲ್ಲದೆ ಟಿಕೆಟ್ ಬುಕ್ ಮಾಡಿದ 5 ವರ್ಷದ ಕೆಳಗಿನ ಮಕ್ಕಳಿಗೆ ನೀಡಲಾಗದು. ಪ್ರಯಾಣಿಕರಿಗೆ ವಿಮಾ ಕವರೇಜ್ ನೀಡಲು ಐಆರ್ ಸಿಟಿಸಿ ಲಿಬರ್ಟಿ ಜನರಲ್ ಇನ್ಯುರೆನ್ಸ್ ಹಾಗೂ ಎಸ್ ಬಿಐ ಜನರ್ ಇನ್ಯುರೆನ್ಸ್ ಕೋ.ಲಿ. ಅನ್ನು ಆಯ್ಕೆ ಮಾಡಿದೆ.
ಎಷ್ಟು ಕವರೇಜ್ ನೀಡಲಾಗುತ್ತೆ?
ಅಪಘಾತದಲ್ಲಿ ಸಂತ್ರಸ್ತ ವ್ಯಕ್ತಿ/ಆತನ ಕುಟುಂಬ ಅಥವಾ ನ್ಯಾಯಯುತ ವಾರಸುದಾರರಿಗೆ ಈ ಕೆಳಗೆ ನೀಡಿರುವ ಮೊತ್ತದ ಪರಿಹಾರ ನೀಡಲಾಗುವುದು:
1.ಮರಣ ಹೊಂದಿದ ಸಂದರ್ಭದಲ್ಲಿ 10ಲಕ್ಷ ರೂ.
2.ಕಾಯಂ ಅಂಗವೈಕಲ್ಯ ಹೊಂದಿದ್ದರೆ 10ಲಕ್ಷ ರೂ.
3.ಕಾಯಂ ಭಾಗಶಃ ಅಂಗವೈಕಲ್ಯ ಹೊಂದಿದ್ದರೆ 7.5ಲಕ್ಷ ರೂ. ತನಕ
4.ಗಾಯಕ್ಕೆ ಆಸ್ಪತ್ರೆ ವೆಚ್ಚ 2ಲಕ್ಷ ರೂ.
5.ಮೃತದೇಹದ ಸಾಗಣೆಗೆ 10 ಸಾವಿರ ರೂ.
ವಿಮಾ ಕ್ಷೇತ್ರದಲ್ಲಿ ನಿಯಮ ಬದಲಾವಣೆ; ಹೊಸ ವಿಮೆ ಖರೀದಿಸುವ ಮುನ್ನಈ ವಿಷಯ ಗಮನಿಸಿ
ಪಾಲಿಸಿ ಮಾಹಿತಿಗಳು
ಈ ವಿಮಾ ಪಾಲಿಸಿಗಳು ವಿಮಾ ಕಂಪನಿಗಳು ಹಾಗೂ ಪ್ರಯಾಣಿಕರ ನಡುವಿನ ಒಪ್ಪಂದವಾಗಿದೆ . ಪ್ರಯಾಣಿಕರು ವಿಮೆ ಆಯ್ಕೆ ಮಾಡಿಕೊಂಡ ಬಳಿಕ ಕ್ಲೇಮ್ ಪ್ರಕ್ರಿಯೆ ಇವರಿಬ್ಬರ ನಡುವೆ ನಡೆಯುತ್ತದೆ. ಅಂದರೆ ವಿಮಾ ಕಂಪನಿ ಪಾಲಿಸಿ ನೀಡಿಕೆ ಹಾಗೂ ಕ್ಲೇಮ್ ಸೆಟ್ಲಮೆಂಟ್ ಗೆ ಜವಾಬ್ದಾರರಾಗಿದೆ.
ಕ್ಲೇಮ್ ಮಾಡೋದು ಹೇಗೆ?
ಪ್ರಯಾಣಿಕರು ಅಥವಾ ನಾಮಿನಿ ರೈಲು ಅಪಘಾತವಾದ 4 ತಿಂಗಳೊಳಗೆ ವಿಮೆ ಕ್ಲೇಮ್ ಮಾಡಬಹುದು. ವಿಮಾ ಕಂಪನಿಯನ್ನು ಸಂಪರ್ಕಿಸುವ ಮೂಲಕ ಅವರು ಈ ಕೆಲಸ ಮಾಡಬಹುದು. ಒಂದು ವೇಳೆ ನಾಮಿನಿಯನ್ನು ಹೆಸರಿದರೆ ಇದ್ದಲ್ಲಿ ಕಾನೂನುಬದ್ಧ ವಾರಸುದಾರರಿಗೆ ಸೆಟ್ಲಮೆಂಟ್ ಮಾಡಬಹುದು.