ಅಂಚೆ ಕಚೇರಿ ಯಾವೆಲ್ಲ ಯೋಜನೆಗಳಿಗೆ ಟಿಡಿಎಸ್ ಅನ್ವಯಿಸುತ್ತದೆ? ತೆರಿಗೆ ವಿನಾಯ್ತಿಯಾವುದಕ್ಕಿದೆ?

By Suvarna News  |  First Published Jun 5, 2023, 1:31 PM IST

ಅಂಚೆ ಕಚೇರಿಯ ಕೆಲವು ಯೋಜನೆಗಳು ತೆರಿಗೆ ಕಡಿತದ  ಪ್ರಯೋಜನ ಒದಗಿಸಿದರೆ, ಇನ್ನೂ ಕೆಲವು ತೆರಿಗೆ ವಿನಾಯ್ತಿ ಒದಗಿಸುತ್ತವೆ. ಆದರೆ, ಕೆಲವು ಯೋಜನೆಗಳು ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ತೆರಿಗೆ ವಿನಾಯ್ತಿಗೆ ಆರ್ಹತೆ ಹೊಂದಿಲ್ಲ.ಹೀಗಿರುವಾಗ ಅಂಚೆ ಕಚೇರಿಯ ಯಾವೆಲ್ಲ ಯೋಜನೆಗಳಿಗೆ ಟಿಡಿಎಸ್ ಕಡಿತವಾಗುತ್ತದೆ? ಯಾವೆಲ್ಲ ಯೋಜನೆಗಳಿಗೆ ತೆರಿಗೆ ವಿನಾಯ್ತಿ ಸಿಗುತ್ತೆ? ಇಲ್ಲಿದೆ ಮಾಹಿತಿ.


Business Desk: ಹೂಡಿಕೆ ಅಥವಾ ಉಳಿತಾಯದ ವಿಚಾರ ಬಂದಾಗ ಎಷ್ಟು ತೆರಿಗೆ ಉಳಿಸಬಹುದು ಎಂಬುದನ್ನು ಲೆಕ್ಕ ಹಾಕುತ್ತೇವೆ. ಅಂಚೆ ಕಚೇರಿಯ ಹೂಡಿಕೆ ಯೋಜನೆಗಳು ತೆರಿಗೆ ಪ್ರಯೋಜನವನ್ನು ಒಳಗೊಂಡಿರುವ ಕಾರಣ ಬಹುತೇಕರು ಈ ಯೋಜನೆಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರುತ್ತಾರೆ. ಅಂಚೆ ಕಚೇರಿಯ ಕೆಲವು ಯೋಜನೆಗಳು ತೆರಿಗೆ ಕಡಿತಕ್ಕೊಳಪಟ್ಟರೆ, ಇನ್ನೂ ಕೆಲವು ತೆರಿಗೆ ವಿನಾಯ್ತಿ ಒದಗಿಸುತ್ತವೆ. ಆದರೆ, ಕೆಲವು ಯೋಜನೆಗಳು ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ತೆರಿಗೆ ವಿನಾಯ್ತಿಗೆ ಆರ್ಹತೆ ಹೊಂದಿಲ್ಲ. ಅಲ್ಲದೆ, ವಹಿವಾಟು ನಿಗದಿತ ಮಿತಿಯನ್ನು ದಾಟಿದರೆ ಟಿಡಿಎಸ್ (ಮೂಲದಲ್ಲಿ ತೆರಿಗೆ ಕಡಿತ) ಕೂಡ ಅನ್ವಯಿಸುತ್ತದೆ. ಹಾಗೆಯೇ ಯೋಜನೆಗೆ ಸಂಬಂಧಿಸಿದ ವಹಿವಾಟುಗಳು ನಿಗದಿತ ಮಿತಿಯೊಳಗೆ ನಡೆದರೆ ಟಿಡಿಎಸ್ ಕಡಿತವಾಗೋದಿಲ್ಲ. ಟಿಡಿಎಸ್ ಅಂದ್ರೆ 'ಮೂಲದಲ್ಲಿ ತೆರಿಗೆ ಕಡಿತ'. ಒಬ್ಬ ವ್ಯಕ್ತಿಗೆ ಆದಾಯ ಉತ್ಪಾದನೆಯಾಗುವ ಮೂಲದಲ್ಲೇ ತೆರಿಗೆ ಸಂಗ್ರಹಿಸಲು ಟಿಡಿಎಸ್ ಪರಿಚಯಿಸಲಾಯಿತು. ತೆರಿಗೆ ವಂಚನೆಯನ್ನು ಕಡಿಮೆಗೊಳಿಸಲು ಆದಾಯದ ಮೂಲದಲ್ಲೇ ತೆರಿಗೆ ಸಂಗ್ರಹಿಸಲು ಸರ್ಕಾರ ಟಿಡಿಎಸ್ ಅನ್ನು ಬಳಸಿಕೊಳ್ಳುತ್ತಿದೆ. ವೇತನ, ಬಡ್ಡಿ, ಕಮೀಷನ್ ಗಳು, ಡಿವಿಡೆಂಡ್ಸ್ ಸೇರಿದತೆ ವಿವಿಧ ಆದಾಯಗಳ ಮೇಲೆ ಸರ್ಕಾರ ಟಿಡಿಎಸ್ ವಿಧಿಸುತ್ತದೆ.  ಹಾಗಾದ್ರೆ ಅಂಚೆ ಕಚೇರಿ ಯಾವೆಲ್ಲ ಯೋಜನೆಗಳು ಟಿಡಿಎಸ್ ಕಡಿತಕ್ಕೊಳಪಡುತ್ತವೆ? ಯಾವೆಲ್ಲ ಯೋಜನೆಗಳು ತೆರಿಗೆ ವಿನಾಯ್ತಿ ಪಡೆದಿವೆ? ಇಲ್ಲಿದೆ ಮಾಹಿತಿ.

ಅಂಚೆ ಕಚೇರಿ ಆರ್ ಡಿ ಯೋಜನೆ: ಸಾಮಾನ್ಯ ನಾಗರಿಕರಿಗೆ ಅಂಚೆ ಕಚೇರಿ ಆರ್ ಡಿ ಯೋಜನೆ ಮಿತಿ 40 ಸಾವಿರ ರೂ. ಆದರೆ, ಹಿರಿಯ ನಾಗರಿಕರಿಗೆ 50,000 ರೂ. ತನಕ ಅಧಿಕ ಮಿತಿ ವಿಧಿಸಲಾಗಿದೆ. 

Tap to resize

Latest Videos

ಅಂಚೆ ಕಚೇರಿ ಅವಧಿ ಠೇವಣಿ: ಅಂಚೆ ಕಚೇರಿ ಅವಧಿ ಠೇವಣಿ ಯೋಜನೆಯಲ್ಲಿ ಐದು ವರ್ಷಗಳ ಅವಧಿಗೆ ಹೂಡಿಕೆ ಮಾಡಿರುವ ಹಣಕ್ಕೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ 1.5ಲಕ್ಷ ರೂ. ತನಕ ತೆರಿಗೆವಿನಾಯ್ತಿ ಪಡೆಯಲು ಅವಕಾಶವಿದೆ. ಆದರೆ, ಒಂದು, ಎರಡು ಹಾಗೂ ಮೂರು ವರ್ಷಗಳ ಅವಧಿಗೆ ತೆರಿಗೆ ವಿಧಿಸಲಾಗುತ್ತದೆ. ಹಾಗೆಯೇ ಈ ಅವಧಿಯಲ್ಲಿ ಗಳಿಸಿದ ಬಡ್ಡಿಗೂ ತೆರಿಗೆ ವಿಧಿಸಲಾಗುತ್ತದೆ.

Personal Finance: ಮಹಿಳೆ ಭವಿಷ್ಯ ಸುರಕ್ಷಿತವಾಗಿರಬೇಕೆಂದ್ರೆ ಈ ವಿಮೆ ಬೆಸ್ಟ್

ಅಂಚೆ ಕಚೇರಿ ಎಂಐಎಸ್ ಖಾತೆ: ಈ ಯೋಜನೆ ಅಡಿಯಲ್ಲಿ ಗಳಿಸಿದ ಬಡ್ಡಿ 40,000ರೂ.-50,000ರೂ. ಗಡಿ ದಾಟಿದರೆ ತೆರಿಗೆ ಅನ್ವಯಿಸುತ್ತದೆ. ಸೆಕ್ಷನ್ 80 ಸಿ ಅಡಿಯಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣ ತೆರಿಗೆ ಕಡಿತಕ್ಕೊಳಪಡುವುದಿಲ್ಲ. 

ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಹಾಗೂ ಎಸ್ ಸಿಎಸ್ ಎಸ್ ಯೋಜನೆ: ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರದಲ್ಲಿನ ಹೂಡಿಕೆಗೆ ಟಿಡಿಎಸ್ ಕಡಿತ ಮಾಡಲಾಗುತ್ತದೆ. ಇನ್ನು ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯ್ತಿ ಸೌಲಭ್ಯವನ್ನು ಹೊಂದಿದೆ.

ಅಂಚೆ ಕಚೇರಿ ಈ ಯೋಜನೆಯಲ್ಲಿ 10 ಲಕ್ಷ ರೂ. ಹೂಡಿಕೆ ಮಾಡಿ, ದುಪ್ಪಟ್ಟು ಹಣ ಗಳಿಸಿ!

ಎನ್ ಎಸ್ ಸಿ ಹಾಗೂ ಪಿಪಿಎಫ್: ರಾಷ್ಟ್ರೀಯ ಉಳಿತಾಯ ಯೋಜನೆ (ಎನ್ ಎಸ್ ಸಿ) ಅಡಿಯಲ್ಲಿ 1.5ಲಕ್ಷ ರೂ. ತನಕ ತೆರಿಗೆ ವಿನಾಯ್ತಿ ಸಿಗುತ್ತದೆ. ಹಾಗೆಯೇ ಈ ಯೋಜನೆಯಲ್ಲಿ ಗಳಿಸಿದ ಬಡ್ಡಿ ಹಣಕ್ಕೆ ಯಾವುದೇ ಟಿಡಿಎಸ್ ಅನ್ವಯಿಸುವುದಿಲ್ಲ. ಇನ್ನು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಯೋಜನೆ ತೆರಿಗೆಯಿಂದ ಸಂಪೂರ್ಣವಾಗಿ ವಿನಾಯ್ತಿ ಪಡೆದಿದೆ.

ಕಿಸಾನ್ ವಿಕಾಸ್ ಪತ್ರ: ಈ ಯೋಜನೆ ತೆರಿಗೆ ವಿನಾಯ್ತಿಗೆ ಅರ್ಹತೆ ಹೊಂದಿಲ್ಲವಾದರೂ ಈ ಯೋಜನೆ ಮೆಚ್ಯುರಿಟಿ ಬಳಿಕ ವಿತ್ ಡ್ರಾ ಮಾಡಿದ ಮೊತ್ತಕ್ಕೆ ಟಿಡಿಎಸ್ ಅನ್ವಯಿಸೋದಿಲ್ಲ. 


 

click me!