ಅಮೆರಿಕದ ಹೊರಗೆ ಅತಿ ಹೆಚ್ಚು ಟ್ರಂಪ್ ಟವರ್‌ಗಳನ್ನು ಹೊಂದಿರುವ ದೇಶವಾಗಿ ಭಾರತ ಹೊರಹೊಮ್ಮಲಿದೆ. ಮುಂದಿನ ಆರು ವರ್ಷಗಳಲ್ಲಿ ಭಾರತದಲ್ಲಿ ಟ್ರಂಪ್ ಟವರ್‌ಗಳ ಸಂಖ್ಯೆ ನಾಲ್ಕರಿಂದ ಹತ್ತಕ್ಕೆ ಏರಲಿದೆ. ಹೊಸ ಪ್ರಾಜೆಕ್ಟ್‌ನಲ್ಲಿ ಕಚೇರಿ ಕಟ್ಟಡಗಳು, ಗಾಲ್ಫ್ ಕೋರ್ಸ್‌ಗಳು ಮತ್ತು ವಿಲ್ಲಾಗಳನ್ನು ಒಳಗೊಂಡಿರುತ್ತವೆ.
ನವದೆಹಲಿ (ನ.11): ಅಮೆರಿಕದ ಹೊರಗೆ ಅತಿ ಹೆಚ್ಚು ಟ್ರಂಪ್ ಟವರ್‌ಗಳನ್ನು ಹೊಂದಿರುವ ದೇಶವಾಗಿ ಭಾರತ ಹೊರಹೊಮ್ಮಲಿದೆ. ಟ್ರಂಪ್ ಬ್ರ್ಯಾಂಡ್‌ನ ಆರು ಹೊಸ ಪ್ರಾಜೆಕ್ಟ್‌ಗಳನ್ನು ದೇಶದ ಪ್ರಮುಖ ನಗರಗಳಲ್ಲಿ ನಿರ್ಮಾಣ ಮಾಡುವ ಘೋಷಣೆಯಾಗಿದೆ. ಪ್ರಸ್ತುತ ನಾಲ್ಕು ಐಷಾರಾಮಿ ವಸತಿ ಸಮುಚ್ಚಯಗಳನ್ನು ಮುಂಬೈ, ಪುಣೆ, ಗುರುಗ್ರಾಮ ಹಾಗೂ ಕೋಲ್ಕತ್ತಾದಲ್ಲಿ ಟ್ರಂಪ್ ಹೊಂದಿದ್ದಾರೆ. ಮುಂದಿನ ಆರು ವರ್ಷಗಳಲ್ಲಿ ಇದು 10ಕ್ಕೆ ಏರಿಕೆಯಾಗಲಿದೆ. ಮುಂಬರುವ ಯೋಜನೆಗಳಲ್ಲಿ ಬಹುಮಹಡಿ ವಸತಿ ಸಮುಚ್ಚಯ ಮಾತ್ರವಲ್ಲದೆ, ಆಫೀಸ್ ಸ್ಪೇಷನ್‌ಗಳು ವಿಲ್ಲಾ ಹಾಗೂ ಗಾಲ್ಫ್ ಕೋರ್ಸ್‌ಗಳನ್ನು ಒಳಗೊಂಡಿರುತ್ತದೆ. ನೋಯ್ಡಾ, ಹೈದರಾಬಾದ್, ಪುಣೆ ಹಾಗೂ ಬೆಂಗಳೂರಿನಲ್ಲಿ ಈ ಆರು ಟ್ರಂಪ್ ಟವರ್‌ಗಳು ನಿರ್ಮಾಣವಾಗಲಿದೆ.
ಅಮೆರಿಕ ಚುನಾವಣೆಯಲ್ಲಿ ಡೊನಾಲ್ಟ್ ಟ್ರಂಪ್ ದಿಗ್ವಿಜಯದ ಬಳಿಕ ಭಾರತದಲ್ಲಿ ಟ್ರಂಪ್ ಆರ್ಗನೈಸೇಶನ್‌ನ ರಿಯಲ್ ಎಸ್ಟೇಟ್ ಪಾಲುದಾರರಾದ ಟ್ರಿಬೆಕಾ ಡೆವಲಪರ್ಸ್ ಬೆಳವಣಿಗೆಯ ಆಶಾವಾದವನ್ನು ಹೆಚ್ಚಿಸಿದೆ. ಟ್ರಿಬೆಕಾ ಡೆವಲಪರ್ಸ್‌ನ ಸಂಸ್ಥಾಪಕ ಕಲ್ಪೇಶ್ ಮೆಹ್ತಾ, ಈ ವಿಜಯವು ಭಾರತ ಮೂಲದ ಟ್ರಂಪ್ ರಿಯಲ್ ಎಸ್ಟೇಟ್ ಬ್ರ್ಯಾಂಡ್ ಅನ್ನು ಹೆಚ್ಚಿಸುತ್ತದೆ ಎಂದು ನಂಬುತ್ತಾರೆ. ಟ್ರಂಪ್ ಅವರ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ ಅವರೊಂದಿಗಿನ ಅವರ ಆರಂಭಿಕ ಭೇಟಿಯ ಬಗ್ಗೆ ಮಾತನಾಡಿದ ಮೆಹ್ತಾ ಅವರು ನ್ಯೂಯಾರ್ಕ್‌ನ ಬಾರ್‌ನಲ್ಲಿ ಒಂದು ದಶಕದ ಹಿಂದೆ ತಮ್ಮ ಸಹಯೋಗವು ಹೇಗೆ ಪ್ರಾರಂಭವಾಯಿತು ಎಂಬುದನ್ನು ಹಂಚಿಕೊಂಡರು.
“ನಾನು ನನ್ನ MBA ಅನ್ನು ವಾರ್ಟನ್‌ನಲ್ಲಿ ಮಾಡಿದ್ದೇನೆ, ಅಲ್ಲಿ ಡೊನಾಲ್ಡ್ ಟ್ರಂಪ್ ಸೇರಿದಂತೆ ಟ್ರಂಪ್ ಕುಟುಂಬ ವಿದ್ಯಾಭ್ಯಾಸ ಮಾಡಿದೆ. ಅಲ್ಲಿನ ಪ್ರಾಧ್ಯಾಪಕರೊಬ್ಬರು ನನ್ನನ್ನು ಡೊನಾಲ್ಡ್ ಟ್ರಂಪ್ ಜೂನಿಯರ್‌ಗೆ ಸಂಪರ್ಕಿಸಿದರು. ನಾವು 13-14 ವರ್ಷಗಳ ಹಿಂದೆ ನ್ಯೂಯಾರ್ಕ್‌ನ ಬಾರ್‌ನಲ್ಲಿ ಭೇಟಿಯಾದೆವು ಮತ್ತು ಕಾಕ್‌ಟೈಲ್ ಪಿಯರ್ ನ್ಯಾಪ್‌ಕಿನ್‌ನ ಹಿಂಭಾಗದಲ್ಲಿ ಚರ್ಚಿಸಿ ನಮ್ಮ ಆರಂಭಿಕ ಯೋಜನೆಗಳನ್ನು ಮಾಡಿದೆವು ಅದು ಅಂತಿಮವಾಗಿ ನಿಜವಾಯಿತು' ಎಂದು ಮೆಹ್ತಾ ತಿಳಿಸಿದ್ದಾರೆ. ಆ ಬಳಿಕ ಅವರ ಭೇಟಿಯಲ್ಲಿ ಜೂನಿಯರ್ ನೀಡಿದ ಸಲಹೆಯನ್ನೂ ನೆನಪಿಸಿಕೊಂಡಿದ್ದಾರೆ. ನಾವು ತೀರಾ ಹೆಚ್ಚಿನ ಪ್ರಾಜೆಕ್ಟ್‌ಗಳನ್ನು ಮಾಡೋದಿಲ್ಲ. ಆದರೆ, ನಾವು ಮಾಡುವ ಪ್ರಾಜೆಕ್ಟ್ ಅತ್ಯುತ್ತಮವಾಗಿರಬೇಕು' ಎಂದಿದ್ದರು.
ಭಾರತದಲ್ಲಿ ಮೊದಲ ಟ್ರಂಪ್ ಟವರ್ ಉದ್ಘಾಟನೆಯಾಗಿದ್ದು 2014ರಲ್ಲಿ ಮುಂಬೈನಲ್ಲಿ ಮೊದಲ ಟವರ್ ಉದ್ಘಾಟನೆಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಗೆಲುವಿನ ಬೆನ್ನಲ್ಲಿಯೇ ಡೊನಾಲ್ಟ್ ಟ್ರಂಪ್ ಭಾರತಕ್ಕೆ ಸಣ್ಣ ಭೇಟಿ ನೀಡಿದ್ದರು. ಮೋದಿಯವರ ನಾಯಕತ್ವದಲ್ಲಿ ಇನ್ನಷ್ಟು ಬಲವಾಗಿ ಬೆಳೆದ ಭಾರತದ ಸಾಮರ್ಥ್ಯದ ಬಗ್ಗೆ ಟ್ರಂಪ್ ಆಶಾವಾದ ವ್ಯಕ್ತಪಡಿಸಿದ್ದಾರೆ ಎಂದು ಮೆಹ್ತಾ ನೆನಪಿಸಿಕೊಂಡರು. “ಟ್ರಂಪ್ ಯಾವಾಗಲೂ ಭಾರತದ ಸಾಮರ್ಥ್ಯವನ್ನು ದೃಢವಾಗಿ ನಂಬಿದ್ದಾರೆ. ಮೋದಿ ಪ್ರಧಾನಿಯಾದ ನಂತರ ಅವರು ಹೆಚ್ಚು ಬುಲಿಷ್ ಆದರು. ಮತ್ತು ಈಗ, ಭಾರತವು ಯುಎಸ್ ಹೊರಗೆ ಗರಿಷ್ಠ ಟ್ರಂಪ್ ಟವರ್‌ಅನ್ನು ಹೊಂದಿರುತ್ತದೆ, ”ಎಂದು ಅವರು ಹೇಳಿದರು.
ಭಾರತ ಬಿಟ್ಟು ಲಂಡನ್‌ಗೆ ಹೋದ ಸಾಲಗಾರ ಮಲ್ಯ, ಇಂಗ್ಲೆಂಡ್‌ಗೇ 'ಕಿಂಗ್‌ಫಿಶರ್ ಬಿಯರ್' ಕರೆಸಿಕೊಂಡ್ರು!
ಟ್ರಂಪ್ ಸಂಸ್ಥೆಯು ಭಾರತದಲ್ಲಿ ತನ್ನ ರಿಯಲ್ ಎಸ್ಟೇಟ್ ವ್ಯವಹಾರವನ್ನು ನಿರ್ವಹಣಾ ಮಾದರಿಯ ಆಧಾರದ ಮೇಲೆ ನಿರ್ವಹಿಸುತ್ತದೆ. ಇಲ್ಲಿ, ಭಾರತೀಯ ಪಾಲುದಾರರು ನಿರ್ಮಾಣದಲ್ಲಿ ಹೂಡಿಕೆ ಮಾಡುತ್ತಾರೆ, ಆದರೆ ಟ್ರಂಪ್ ಸಂಸ್ಥೆಯು ಅದರ ಹೆಸರಿನೊಂದಿಗೆ ಸಂಬಂಧಿಸಿದ ಐಷಾರಾಮಿ ಆಕರ್ಷಣೆಯನ್ನು ರಚಿಸಲು ಅದರ ಬ್ರ್ಯಾಂಡಿಂಗ್ ಮತ್ತು ಸೇವಾ ಪರಿಣತಿಯನ್ನು ತರುತ್ತದೆ.
ಬೆಂಗಳೂರಿನಲ್ಲಿ 2500 ಕೋಟಿ ಮೌಲ್ಯದ ಜಾಗತಿಕ ಸಾಮರ್ಥ್ಯ ಕೇಂದ್ರ ಸ್ಥಾಪಿಸಿದ ಝೈಸ್ ಇಂಡಿಯಾ, 600 ಜನರಿಗೆ ಉದ್ಯೋಗ
ಪ್ರಸ್ತುತ, ಭಾರತದಲ್ಲಿನ ನಾಲ್ಕು ಟ್ರಂಪ್ ಟವರ್‌ಗಳು ಒಟ್ಟು 3 ಮಿಲಿಯನ್ ಚದರ ಅಡಿಗಳನ್ನು ವ್ಯಾಪಿಸಿದ್ದು, ಸರಿಸುಮಾರು 800 ನಿವಾಸಗಳನ್ನು ಹೊಂದಿದೆ. 6 ಕೋಟಿಯಿಂದ 25 ಕೋಟಿ ರೂಪಾಯಿವರೆಗಿನ ಮೌಲ್ಯ ಇದರಾಗಿದೆ. ಈ ನಿವಾಸಗಳ ಒಟ್ಟು ಮಾರಾಟ ಮೌಲ್ಯವು 7,500 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಪೈಪ್‌ಲೈನ್‌ನಲ್ಲಿ ಆರು ಹೊಸ ಟ್ರಂಪ್-ಬ್ರಾಂಡ್ ಇರುವ ಕಾರಣ, ಭಾರತದಲ್ಲಿ ನೆಲದ ವಿಸ್ತೀರ್ಣವು 8 ಮಿಲಿಯನ್ ಚದರ ಅಡಿಗಳಿಗೆ ಹೆಚ್ಚಾಗುತ್ತದೆ ಮತ್ತು ಒಟ್ಟು ಮಾರಾಟ ಮೌಲ್ಯವು 15,000 ಕೋಟಿ ರೂಪಾಯಿ ಎನ್ನಲಾಗಿದೆ.