Chitra Ramkrishna Case : ಚಿತ್ರಾ ಅವರ ಅಕ್ರಮ ಗೊತ್ತಿದ್ದರೂ ಸುಮ್ಮನಿದ್ದ NSE ಮಂಡಳಿ!

By Suvarna NewsFirst Published Feb 20, 2022, 5:48 PM IST
Highlights

ಮಾರ್ಕೆಟ್ ಮ್ಯಾನಿಪ್ಯುಲೇಷನ್ ಪ್ರಕರಣದಲ್ಲಿ ದಿನಕ್ಕೊಂದು ಹೊಸ ಸುದ್ದಿ
NSE ಮಾಜಿ ಮುಖ್ಯಸ್ಥೆಯ ದುರ್ನಡತೆ ಬಗ್ಗೆ ತಿಳಿದಿದ್ದ ಆಡಳಿತ ಮಂಡಳಿ
ಕ್ರಮ ಕೈಗೊಳ್ಳದೇ ಸುಮ್ಮನಿದ್ದ ಆಡಳಿತ ಮಂಡಳಿ
 

ಮುಂಬೈ (ಫೆ. 20): ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್‌ಎಸ್‌ಇ) ತನ್ನ ಆಗಿನ ಸಿಇಒ ಚಿತ್ರಾ ರಾಮಕೃಷ್ಣ(Chitra Ramkrishna) ಅವರಿಂದ ಗಂಭೀರ ಅಕ್ರಮಗಳು ಮತ್ತು ದುಷ್ಕೃತ್ಯಗಳ ಬಗ್ಗೆ ತಿಳಿದಿದ್ದರೂ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಅವರು ರಾಜೀನಾಮೆ ನೀಡಿದ ಹಂತದಲ್ಲಿ ಸಾಕಷ್ಟು ಹೊಗಳಿಕೆ ನೀಡಿ ಅವರ ನಿರ್ಗಮನಕ್ಕೆ ಅವಕಾಶ ನೀಡಿತ್ತು. ಈ ಯಾವುದೇ ವಿಚಾರಗಳನ್ನು ಎನ್‌ಎಸ್‌ಇ ಮಾರುಕಟ್ಟೆ ನಿಯಂತ್ರಕರಾಗಿದ್ದ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (Securities Exchange Board of India) (ಸೆಬಿ) ಗೆ ತಿಳಿಸಲು ವಿಫಲವಾಗಿತ್ತು.

ಅವರು ಡಿಸೆಂಬರ್ 2, 2016 ರಂದು ರಾಜೀನಾಮೆ ನೀಡಿದಾಗ, ಎನ್‌ಎಸ್‌ಇ ಮಂಡಳಿಯಲ್ಲಿ (NSE Board) ಮಾಜಿ ಹಣಕಾಸು ಕಾರ್ಯದರ್ಶಿ ಅಶೋಕ್ ಚಾವ್ಲಾ ಅಧ್ಯಕ್ಷರಾಗಿದ್ದರು ಮತ್ತು ಸೆಬಿಯ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕರಾದ ಧರ್ಮಿಷ್ಟ ರಾವಲ್, ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿಎನ್ ಶ್ರೀಕೃಷ್ಣ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಮಾಜಿ ಕಾರ್ಯದರ್ಶಿ ನವೇದ್ ಮಸೂದ್, ಕೆಪಿಎಂಜಿ ಇಂಡಿಯಾ ಮಾಜಿ ಉಪ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಕಣಬರ್, ಮಣಿಪಾಲ್ ಗ್ಲೋಬಲ್ ಎಜುಕೇಶನ್ ಸರ್ವಿಸಸ್‌ನ ಅಧ್ಯಕ್ಷ ಮೋಹನ್‌ದಾಸ್ ಪೈ, ಅಟ್ಲಾಂಟಿಕ್ ಜನರಲ್ ಅಡ್ವೈಸರಿ ಡೈರೆಕ್ಟರ್ ಅಭಯ್ ಹವಾಲ್ದಾರ್, ಅಜೀಂ ಪ್ರೇಮ್‌ಜಿ ಇನ್ವೆಸ್ಟ್‌ಮೆಂಟ್ ಸಿಐಒ ಪ್ರಕಾಶ್ ಪಾರ್ಥಸಾರಥಿ, ಉಪಾಧ್ಯಕ್ಷ ರವಿ ನಾರಾಯಣ್ ಹಾಗೂ ಸ್ವತಃ ಚಿತ್ರಾ ರಾಮಕೃಷ್ಣ ಅವರಿದ್ದರು.

ಸೆಬಿ ಪ್ರಕಾರ, ರಾಮಕೃಷ್ಣ ಅವರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅಪರಿಚಿತ ವ್ಯಕ್ತಿಯ ಸಲಹೆಯನ್ನು ಅವಲಂಬಿಸಿದ್ದಾರೆ ಎಂದು ತಿಳಿದ ನಂತರವೂ, ಎನ್‌ಎಸ್‌ಇ ಮಂಡಳಿಯು ರಾಜೀನಾಮೆಯ ಮೂಲಕ ಅವರನ್ನು ಕೆಳಗಿಳಿಸಲು ಅವಕಾಶ ಮಾಡಿಕೊಟ್ಟಿತು ಅದಲ್ಲದೆ, ಅವರ ನಿರ್ಗಮನದ ಕೊನೆಯ ದಿನ ನಡೆದ ಸಭೆಯಲ್ಲಿ ಅವರ ಕುರಿತಾಗಿ ಮೆಚ್ಚುಗೆಯ ಸುರಿಮಳೆಯನ್ನೇ ಹರಿಸಿತ್ತು. 2016ರ ಡಿಸೆಂಬರ್ 2 ರಂದು ನಡೆದ  ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಎನ್ ಎಸ್ ಇ ಅಭಿವೃದ್ಧಿಗೆ ಚಿತ್ರಾ ರಾಮಕೃಷ್ಣ ಅವರು ನೀಡಿದ ಕೊಡುಗೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದವು.

Chitra Ramakrishna Case : ಯೋಗಿಗಳಿಗೆ ಈಮೇಲ್ ಬಳಸಲು, ಇಂಟರ್ನೆಟ್ ಬೇಕಿಲ್ಲ ಎಂದ NSE ಮಾಜಿ ಮುಖ್ಯಸ್ಥೆ!
ಪ್ರಕರಣ ಹಿನ್ನೆಲೆ: 2013-16ರ ಅವಧಿಯಲ್ಲಿ ಎನ್‌ಎಸ್‌ಇದ ಸಿಇಒ ಆಗಿದ್ದ ಚಿತ್ರಾ ಕೃಷ್ಣಮೂರ್ತಿ, ಗಂಭೀರ ಆರೋಪವೊಂದು ಕೇಳಿಬಂದ ಬಳಿಕ ದಿಢೀರನೆ ವೈಯಕ್ತಿಕ ಕಾರಣ ನೀಡಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ ಅಧಿಕಾರದಲ್ಲಿದ್ದ ಅವಧಿಯಲ್ಲಿ ಅವರು ಭಾರೀ ತೆರಿಗೆ ವಂಚನೆ, ಅಕ್ರಮ ನಡೆಸಿದ್ದಾರೆ. ಅಕ್ರಮ ನೇಮಕಾತಿ ಮಾಡಿದ್ದಾರೆ. ಸಂಸ್ಥೆಯ ರಹಸ್ಯ ಮಾಹಿತಿಯನ್ನು ಮೂರನೇ ವ್ಯಕ್ತಿಗೆ ಸೋರಿಕೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ತನಿಖೆ ನಡೆಸಿದ್ದ ಷೇರುಮಾರುಕಟ್ಟೆನಿಯಂತ್ರಣಾ ಸಂಸ್ಥೆಯಾದ ಸೆಬಿ ಇತ್ತೀಚೆಗೆ ತನಿಖಾ ವರದಿಯನ್ನು ಬಿಡುಗಡೆ ಮಾಡಿತ್ತು.

NSE Scam: ಷೇರುಪೇಟೆ ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣಗೆ ಐಟಿ ಶಾಕ್‌!
ಚಿತ್ರಾ ಅವರು ಸಿಇಒ ಆಗಿದ್ದ ವೇಳೆ ನಿತ್ಯ ಷೇರುಪೇಟೆ ಆರಂಭಕ್ಕೂ ಮುನ್ನವೇ ಅಂದಿನ ವಹಿವಾಟಿನ ಮನ್ಸೂಚನೆ ಮಾಹಿತಿ ಒಳಗೊಂಡಿರುವ ಸರ್ವರ್‌ಗಳನ್ನು ಅಕ್ರಮವಾಗಿ ಬಳಸಿಕೊಳ್ಳಲು ದೆಹಲಿ ಮೂಲದ ಒಪಿಜಿ ಸೆಕ್ಯುರಿಟೀಸ್‌ ಲಿ.ಗೆ ಅವಕಾಶ ಕಲ್ಪಿಸಿದ್ದರು. ಈ ಪ್ರಕರಣ 4 ವರ್ಷದ ಹಿಂದೆಯೇ ಬೆಳಕಿಗೆ ಬಂದು ಕಂಪನಿ ವಿರುದ್ಧ ಸಿಬಿಐ ಕೇಸು ದಾಖಲಿಸಿ ತನಿಖೆ ನಡೆಸುತ್ತಿದೆ. ಅದರ ಭಾಗವಾಗಿ ಇದೀಗ ಚಿತ್ರಾ ಅವರ ಮನೆ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ.

ಚಿತ್ರಾ ರಾಮಕೃಷ್ಣ, ಎನ್‌ಎಸ್‌ಇದ ಮತ್ತೋರ್ವ ಮಾಜಿ ಸಿಇಒ ರವಿ ನಾರಾಯಣ್‌ ಮತ್ತು ಎನ್‌ಎಸ್‌ಇದ ಮಾಜಿ ಗ್ರೂಪ್‌ ಅಪರೇಟಿಂಗ್‌ ಆಫೀಸರ್‌ ಆನಂದ್‌ ಸುಬ್ರಮಣಿಯನ್‌ ಅವರು ದೇಶಬಿಟ್ಟು ಪರಾರಿಯಾಗದಂತೆ ತಡೆಯುವ ನಿಟ್ಟಿನಲ್ಲಿ ಮೂವರ ವಿರುದ್ಧವೂ ಸಿಬಿಐ ಲುಕೌಟ್‌ ನೋಟಿಸ್‌ ಜಾರಿ ಮಾಡಿದೆ.

click me!