ಲಂಡನ್(ಫೆ.20): ವಿಶ್ವದ ಶ್ರೀಮಂತರ(World Richest) ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವದು ಸುಲಭದ ಮಾತಲ್ಲ. ಸದ್ಯ ಈ ಸ್ಥಾನ ಟೆಸ್ಲಾ(Tesla) ಎಲೆಕ್ಟ್ರಿಕ್ ಕಾರು ಕಂಪನಿಯ ಸಿಇಒ ಎಲಾನ್ ಮಸ್ಕ್‌ನಲ್ಲಿದೆ(Elon Musk). ಸತತ ಪರಿಶ್ರಮ, ಸಾಧನೆಯಿಂದ ಎಲಾನ್ ಮಸ್ಕ್ ಇಂದು ವಿಶ್ವದ ಶ್ರೀಮಂತ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಆದರೆ ಈ ನಂಬರ್ 1 ಶ್ರೀಮಂತ ಸ್ಥಾನವನ್ನು ಯೂಟ್ಯೂಬರ್(Youtuber) ಕಸಿದು ಕೊಂಡ ಘಟನೆ ಯುಕೆಯಲ್ಲಿ ನಡೆದಿದೆ.
ಯೂಟ್ಯೂಬ್ ಚಾನೆಲ್ ಮೂಲಕ ಜನಪ್ರಿಯವಾಗಿರುವ ಲಂಡನ್(London) ಮೂಲದ ಮ್ಯಾಕ್ಸ್ ಫೋಶ್(Max Fosh) ಇದೀಗ ಭಾರಿ ಸದ್ದು ಮಾಡಿದ್ದಾರೆ. ಮ್ಯಾಕ್ಸ್ ಫೋಶ್ ದಿಢೀರ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಆದರೆ ಈ ಸ್ಥಾನ ಆತನ ಬಳಿ ಕೇವಲ 7 ನಿಮಿಷ ಮಾತ್ರ ಇತ್ತು ಅನ್ನೋದು ಸತ್ಯ.
ಯೂಟ್ಯೂಬ್ ಸ್ಟಾರ್‌ನನ್ನು ಬೆನ್ನಟ್ಟಿ ದೋಚಿದ ಕೋತಿಗಳು... ವಿಡಿಯೋ ನೋಡಿ
ಯೂಟ್ಯೂಬ್‌ನಲ್ಲಿ 6 ಲಕ್ಷ ಫಾಲೋವರ್ಸ್ ಹೊಂದಿರುವ ಮ್ಯಾಕ್ಸ್ ಬುದ್ದಿಯಿಂತ ಎಲಾನ್ ಮಸ್ಕ್ ಆದಾಯಕ್ಕಿಂತ ಡಬಲ್ ಆದಾಯದ ಮೂಲಕ ಮೊದಲ ಸ್ಥಾನ ಕಸಿದುಕೊಂಡಿದ್ದ. 7 ನಿಮಿಷದ ಬಳಿಕ ಮತ್ತೆ ಯಥಾ ಸ್ಥಿತಿಗೆ ಯೂಟ್ಯೂಬರ್ ಮರಳಿದ್ದಾನೆ.
ಎಲಾನ್ ಮಸ್ಕ್ ಒಟ್ಟು ನಿವ್ವಳ ಮೌಲ್ಯ 24,930 ಕೋಟಿ ಅಮೆರಿಕನ್ ಡಾಲರ್. 7 ನಿಮಿಷದ ವರೆಗೆ ಮ್ಯಾಕ್ಸ್ ಆದಾಯ ಇದರ ದುಪ್ಪಟ್ಟಾಗಿತ್ತು. ತಾನು ಶ್ರೀಮಂತ ವ್ಯಕ್ತಿಯಾಗಿದ್ದು ಹೇಗ? ಎಲಾನ್ ಮಸ್ಕ್ ಹಿಂದಿಕ್ಕಿದ್ದು ಹೇಗೆ ಅನ್ನೋದನ್ನು ತನ್ನ ಯೂಟ್ಯೂಬ್ ಚಾನೆಲ್ ಮೂಲಕ ವಿವರಿಸಿದ್ದಾನೆ. ಈ ವಿಡಿಯೋವನ್ನು 6 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಕೇವಲ 4 ಲಕ್ಷ ರೂಪಾಯಿಗೆ ಟೆಸ್ಲಾ ಎಲೆಕ್ಟ್ರಿಕ್ ಕಾರು ಖರೀದಿಸಿದ ಯುಟ್ಯೂಬರ್!
ಅನ್‌ಲಿಮಿಟೆಡ್ ಮನಿ ಲಿಮಿಟೆಡ್ ಕಂಪನಿಯನ್ನು ರಚಿಸಿದ್ದಾರೆ. ಕಂಪನಿ 10 ಬಿಲಿಯನ್ ಷೇರುಗಳನ್ನು ಪ್ರತಿ ಷೇರಿಗೆ 140 ಪೌಂಡ್ ರೀತಿಯಲ್ಲಿ ಮಾರಾಟ ಮಾಡಿದ್ದಾರೆ.ಇದರಿಂದ 500 ಶತಕಕೋಟಿ ಪೌಂಡ್ ಆದಾಯ ಬಂದಿದೆ. ಇದು ಎಲನ್ ಮಸ್ಕ್ ಆದಾಯಕ್ಕಿಂತ ಹೆಚ್ಚಾಗಿದೆ. ಆದರೆ ಷೇರು ನಿಯಮ ಪ್ರಕಾರ ಆದಾಯ ಚಟುವಟಿಕೆಯ ಕೊರತೆ ಹಾಗೂ ಮೋಸದ ಚಟುವಟಿಕೆಯಿಂದ ಅನ್‌ಲಿಮಿಟೆಡ್ ಮನಿ ಲಿಮಿಟೆಡ್ ಕಂಪನಿಯನ್ನು ತಕ್ಷಣವೇ ವಿಸರ್ಜಿಸಬೇಕು ಎಂದು ಸೂಚಿಸಲಾಗಿತ್ತು.
ಈ ಸೂಚನೆಯಂತೆ ಮ್ಯಾಕ್ಸ್ ತನ್ನ ಅನ್‌ಲಿಮಿಟೆಡ್ ಮನಿ ಲಿಮಿಟೆಡ್ ಕಂಪನಿಯನ್ನು ಡಿಸಾಲ್ವ್ ಮಾಡಿದ್ದಾರೆ. ಈ ಮೂಲಕ 7 ನಿಮಿಷಗಳ ವರೆಗೆ 500 ಬಿಲಿಯನ್ ಪೌಂಡ್ ಆದಾಯ ಗಳಿಸಿದ್ದ ಮ್ಯಾಕ್ಸ್ ಒಂದೇ ಸಮನೆ ಮತ್ತೆ ಯಥಾ ಸ್ಥಿತಿಗೆ ಮರಳಿದ್ದಾರೆ. ಈ ಸಂಪೂರ್ಣ ಘಟನೆ ಹಾಗೂ ವಿವರಣೆಯನ್ನು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಹಾಕಿದ್ದಾನೆ.
7 ನಿಮಿಷಗಳ ಕಾಲ ಎಲಾನ್ ಮಸ್ಕ್ ಹಿಂದಿಕ್ಕಿದ ಮ್ಯಾಕ್ಸ್ ಇದೀಗ ವಿಶ್ವದಲ್ಲೇ ಜನಪ್ರಿಯರಾಗಿದ್ದಾನೆ. ಒಂದೇ ಸಮನೆ ತನ್ನ ಯೂಟ್ಯೂಬ್ ಫಾಲೋವರ್ಸ್ ಸಂಖ್ಯೆಯೂ ಹೆಚ್ಚಾಗಿದೆ. ಈತನ ವಿಡಿಯೋಗಳಿಗೆ ಲೈಕ್ಸ್ ಕಮೆಂಟ್ಸ್ ಕೂಡ ಹೆಚ್ಚಾಗಿದೆ. ಶ್ರೀಮಂತನಾಗಿದ್ದು ಹೇಗೆ ಅನ್ನೋ ವಿಡಿಯೋಗೆ 1 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ಸ್ ಮಾಡಿದ್ದರೆ, 1 ಲಕ್ಷಕ್ಕೂ ಹೆಚ್ಚು ಕಮೆಂಟ್ಸ್ ಬಂದಿದೆ. ಇನ್ನು ಈತನ ಇತರ ವಿಡಿಯೋಗಳು 10 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆ ಕಂಡಿದೆ. ಯೂಟ್ಯೂಬ್ ಚಾನೆಲ್ ಮೂಲಕವೇ ಮ್ಯಾಕ್ಸ್ ಫೋಶ್ ಶ್ರೀಮಂತನಾಗಿದ್ದಾನೆ.