ಟ್ವಿಟ್ಟರ್‌ನಲ್ಲಿ ಇನ್ನು ಆರ್ಟಿಕಲ್‌ ಓದೋಕು ಕೊಡಬೇಕು ದುಡ್ಡು!

By Santosh NaikFirst Published Apr 30, 2023, 12:53 PM IST
Highlights

ಇನ್ನು ಮುಂದೆ ಟ್ವಿಟರ್‌ನಲ್ಲಿ ಆರ್ಟಿಕಲ್‌ನಲ್ಲಿ ಓದೋಕು ಹಣ ಪಾವತಿ ಮಾಡಬೇಕಾಗುತ್ತದೆ. ಈ ಕುರಿತಾಗಿ ಎಲಾನ್‌ ಮಸ್ಕ್‌ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ಮೀಡಿಯಾ ಪಬ್ಲಿಷರ್‌ಗೆ ಇದರ ಸಂಪೂರ್ಣ ಸ್ವಾತಂತ್ರ್ಯ ಇರಲಿದ್ದು, ಕಂಟೆಂಟ್‌ ಕ್ರಿಯೇಟರ್‌ಗಳು ಕೂಡ ಇದರಿಂದ ಹಣ ಮಾಡಿಕೊಳ್ಳಬಹುದು.

ನವದೆಹಲಿ (ಏ.30): ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಎಲಾನ್‌ ಮಸ್ಕ್‌, ಶನಿವಾರ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ಪ್ರಮುಖ ಬದಲಾವಣೆಗಳನ್ನು ಘೋಷಿಸಿದ್ದಾರೆ. ಮುಂದಿನ ತಿಂಗಳಿನಿಂದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಆರ್ಟಿಕಲ್‌ಗಳನ್ನು ಓದಲು ಬಳಕೆದಾರರಿಗೆ ಶುಲ್ಕ ವಿಧಿಸಲು ಮೀಡಿಯಾ ಪಬ್ಲಿಷರ್‌ಗೆ ಈಗ ಅನುಮತಿ ಸಿಗಲಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಈ ವೈಶಿಷ್ಟ್ಯವನ್ನು ಹೊರತಂದ ನಂತರ, ಟ್ವಿಟರ್ ಬಳಕೆದಾರರು ಲೇಖನವನ್ನು ಓದಲು ಮಾಸಿಕ ಚಂದಾದಾರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಮತ್ತೊಂದೆಡೆ, ಅಪರೂಪಕ್ಕೆ ಲೇಖನಗಳನ್ನು ಓದಲು ಬಯಸುವ ಬಳಕೆದಾರರು ಪ್ರತಿ ಲೇಖನಕ್ಕೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಎಲೋನ್ ಮಸ್ಕ್ ಇದು ಮಾಧ್ಯಮ ಸಂಸ್ಥೆ ಮತ್ತು ಸಾರ್ವಜನಿಕರಿಗೆ ದೊಡ್ಡ ಗೆಲುವು ಎಂದು ಕರೆದಿದ್ದಾರೆ. ಟ್ವಿಟರ್ ಈ ಕುರಿತಾಗಿ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿದ್ದು, 'ವಿಶ್ವದಾದ್ಯಂತದ ಕ್ರಿಯೆಟರ್‌ಗಳು ಈಗ ಸೈನ್ ಅಪ್ ಮಾಡಬಹುದು ಮತ್ತು ಟ್ವಿಟರ್‌ನಲ್ಲಿ ಹಣ ಗಳಿಸಬಹುದು. ಇದಕ್ಕೆ ಅಪ್ಲೈ ಮಾಡಬೇಕಾದಲ್ಲಿ ಸೆಟಿಂಗ್ಸ್‌ನಲ್ಲಿ ಮಾನೆಟೈಜೇಷನ್‌ಅನ್ನು ಕ್ಲಿಕ್‌ ಮಾಡಬೇಕಾಗುತ್ತದೆ. ಅದರೆ, ಇದಕ್ಕಾಗಿ ತಮ್ಮ ಖಾತೆಯಲ್ಲಿ ಕನಿಷ್ಠ 500 ಫಾಲೋವರ್‌ಗಳು ಹೊಂದಿರಬೇಕು. ಹಾಗಿದ್ದಲ್ಲಿ ಮಾತ್ರವೇ ಮಾನಿಟೈಜೇಷನ್‌ ಮೂಲಕ ಹಣ ಗಳಿಸಲು ಸಾಧ್ಯವಾಗುತ್ತದೆ. ಹಾಗೇನಾದರೂ ಅಕೌಂಟ್‌ ವೆರಿಫೈ ಆಗಿದ್ದರೆ, ಇದು 30 ದಿನಗಳವರೆಗೆ ಆಕ್ಟೀವ್‌ ಆಗಿರಲಿದೆ ಎಂದು ತಿಳಿಸಿದ್ದಾರೆ.

ಕಂಟೆಂಟ್‌ ಕ್ರಿಯೆಟರ್‌ಗಳಿಗೆ ಬೆಂಬಲ: ಟ್ವಿಟರ್‌ನ ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿದ  ಮಸ್ಕ್, ಪ್ರಪಂಚದಾದ್ಯಂತದ ಕಂಟೆಂಟ್‌ ಕ್ರಿಯೆಟರ್‌ಗಳ ಬೆಂಬಲಕ್ಕೆ ಇದು ನಿಲ್ಲಲಿದೆ ಎಂದು ಹೇಳಿದ್ದಾರೆ. ಇದು ಅನೇಕ ಜನರ ಆದಾಯದ ಪ್ರಮುಖ ಮೂಲವಾಗಲಿದೆ. ನಿಮಗಾಗಿ ಉತ್ತಮ ವಿಷಯವನ್ನು ರಚಿಸಲು ಹೆಚ್ಚಿನ ಸಮಯವನ್ನು ಕಳೆಯಲು ಇದು ಅವರನ್ನು ಪ್ರೋತ್ಸಾಹಿಸುತ್ತದೆ ಎಂದಿದ್ದಾರೆ.

ಕಾರ್ಯವಿಧಾನ ಹೇಗೆ: ಏಪ್ರಿಲ್ 14 ರಂದು ಈ ಕುರಿತು ಟ್ವೀಟ್ ಮಾಡಿದ್ದ ಮಸ್ಕ್‌, 'ಲಾಂಗ್‌ಫಾರ್ಮ್ ಪಠ್ಯದಿಂದ ಗಂಟೆ ಅವಧಿಯ ವೀಡಿಯೊಗಳವರೆಗೆ ಯಾವುದೇ ವಸ್ತುಗಳಿಗೆ ಚಂದಾದಾರಿಕೆಗಳನ್ನು ನೀಡಲು ನಿಮ್ಮ ಫಾಲೋವರ್‌ಗಳಿಗೆ ಅವಕಾಶ ನೀಡಿದೆ. ಅದರೊಂದಿಗೆ  ಸೆಟಿಂಗ್ಸ್‌ನಲ್ಲಿರುವ ಮಾನೆಟೈಜೇಷನ್‌ಅನ್ನು ಟ್ಯಾಪ್ ಮಾಡಿ. ಮುಂದಿನ 12 ತಿಂಗಳುಗಳವರೆಗೆ ಹಣಗಳಿಕೆ ಗಳಿಕೆಯ ಯಾವುದೇ ಪಾಲನ್ನು ಟ್ವಿಟರ್‌ ತೆಗೆದುಕೊಳ್ಳುವುದಿಲ್ಲ. ಆದರೆ, ಆಂಡ್ರಾಯ್ಡ್‌ ಮತ್ತು ಐಓಎಸ್‌ 30% ಶುಲ್ಕವನ್ನು ವಿಧಿಸುತ್ತದೆ. ಈ ಶುಲ್ಕವನ್ನು ಕ್ರಿಯೆಟರ್‌ಗಳ ಆದಾಯದಿಂದ ಕಡಿತಗೊಳಿಸಲಾಗುತ್ತದೆ. ವೆಬ್‌ನಲ್ಲಿ ಶುಲ್ಕವು 8% ಇರಲಿದೆ ಎಂದು ಹೇಳಿದ್ದರು. ಮೊದಲ ವರ್ಷದ ನಂತರ, 'ಐಒಎಸ್ ಮತ್ತು ಆಂಡ್ರಾಯ್ಡ್ ಶುಲ್ಕಗಳು 15% ರಷ್ಟು ಕಡಿಮೆಯಾಗುತ್ತವೆ. ಇದರ ಹೊರತಾಗಿ ಟ್ವಿಟರ್ ಪರಿಮಾಣದ ಆಧಾರದ ಮೇಲೆ ಅದರ ಮೇಲೆ ಸಣ್ಣ ಶುಲ್ಕವನ್ನು ಸೇರಿಸುತ್ತದೆ. ನಿಮ್ಮ ಕಂಟೆಂಟ್‌ ಪ್ರಚಾರ ಮಾಡಲು ಟ್ವಿಟರ್‌ ಕೂಡ ಸಹ ಸಹಾಯ ಮಾಡುತ್ತದೆ.

 

Latest Videos

ಮೆಟ್ರೋ ಸಿಟಿಯಲ್ಲಿ ಫಸ್ಟ್ ಜಾಬ್‌ಗೆ 50 ಸಾವಿರ ಸಂಬಳ, ಸಾಲಲ್ಲ ಅಂದ ಯುವತಿಗೆ ನೆಟ್ಟಿಗರ ಕ್ಲಾಸ್‌!

ಕ್ರಿಯೆಟರ್‌ಗಳ ಆದಾಯ ಹೆಚ್ಚಿಸುವುದು ನಮ್ಮ ಗುರಿಯಾಗಿದೆ. ಯಾವುದೇ ಸಮಯದಲ್ಲಿ, ನೀವು ನಮ್ಮ ವೇದಿಕೆಯನ್ನು ತೊರೆಯಬಹುದು ಮತ್ತು ನಿಮ್ಮ ಕೆಲಸವನ್ನು ನಿಮ್ಮೊಂದಿಗೆ ತೆಗೆದುಕೊಳ್ಳಬಹುದು ಎಂದು ಮಸ್ಕ್‌ ತಿಳಿಸಿದ್ದರು.

 

Royal Challengers Bangalore: ಲಕ್ನೋ ಅಬ್ಬರದ ನಡುವೆ 'ಓನ್ಲಿ ಆರ್‌ಸಿಬಿ' ಟ್ವಿಟರ್‌ನಲ್ಲಿ ಫುಲ್‌ ಟ್ರೆಂಡ್‌!

ಏಪ್ರಿಲ್‌ 21 ರಂದು ಟ್ವಿಟರ್‌ ವಿಶ್ವದ ಬಹುತೇಕ ಸೆಲೆಬ್ರಿಟಿಗಳ ಬ್ಲ್ಯೂಟಿಕ್‌ಗಳನ್ನು ತೆಗೆದುಹಾಕಿದ್ದಲ್ಲದೆ, ಅವರರೆಲ್ಲರೂ ಟ್ವಿಟರ್ ಬ್ಲ್ಯೂಗೆ ಚಂದಾದಾರರಾಗಬೇಕು ಎಂದು ಹೇಳಿದ್ದರು. ಆದರೆ, ಏಪ್ರಿಲ್‌ 23ರ ವೇಳೆಗೆ ಟ್ವಿಟರ್‌ನಲ್ಲಿ 10 ಲಕ್ಷಕ್ಕೂ ಅಧಿಕ ಫಾಲೋವರ್‌ಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಉಚಿತವಾಗಿ ವೆರಿಫಿಕೇಶನ್‌ ಬ್ಯಾಡ್ಜ್‌ಗಳನ್ನು ನೀಡಲಾಗಿತ್ತು. ನಿಧನರಾಗಿರುವ ವ್ಯಕ್ತಿಗಳಾದ ಸುಶಾಂತ್‌ ಸಿಂಗ್‌ ರಜಪೂತ್‌, ಇರ್ಫಾನ್‌ ಖಾನ್ ಹಾಗೂ ರಿಷಿ ಕಪೂರ್‌ಗೂ ಈ ಬ್ಯಾಡ್ಜ್‌ ಮರಳಿಸಲಾಗಿತ್ತು.

click me!