ಶಿಷ್ಯೆಯನ್ನೇ ವಿವಾಹವಾಗಿರುವ ಬೈಜುಸ್ ಸಂಸ್ಥಾಪಕ ಬೈಜು ರವೀಂದ್ರನ್, ಎಷ್ಟು ಕೋಟಿ ಒಡೆಯ ಗೊತ್ತಾ?

By Suvarna News  |  First Published Apr 30, 2023, 12:00 PM IST

ಬೈಜುಸ್ ಸಂಸ್ಥೆಯ ಕಚೇರಿ ಹಾಗೂ ಸಿಇಒ ಬೈಜು ರವೀಂದ್ರನ್ ಮನೆ ಮೇಲೆ ಶನಿವಾರ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.ವಿದೇಶಿ ಹೂಡಿಕೆ ನಿಯಮಗಳ ಉಲ್ಲಂಘನೆ ಆರೋಪದಡಿ ಈ ದಾಳಿ ನಡೆಸಲಾಗಿದೆ.ಇತ್ತೀಚಿನ ದಿನಗಳಲ್ಲಿ ಬೈಜುಸ್ ವಿರುದ್ಧ ವಿದ್ಯಾರ್ಥಿಗಳ ಪೋಷಕರು ಕೂಡ ದೂರುಗಳನ್ನು ದಾಖಲಿಸಿದ್ದರು.ಹಾಗಾದ್ರೆ ಈ ಬೈಜು ರವೀಂದ್ರನ್ ಯಾರು? ಅವರ ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ. 
 


Business DesK: ಆನ್ ಲೈನ್ ಶಿಕ್ಷಣ ಪೋರ್ಟಲ್ ಸಂಸ್ಥೆ ಬೈಜುಸ್ ಸಿಇಒ ಬೈಜು ರವೀಂದ್ರನ್ ಅವರ ಬೆಂಗಳೂರಿನ ಕಚೇರಿ ಹಾಗೂ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿ ಶೋಧ ಕಾರ್ಯ ನಡೆಸಿದೆ. ಬೆಂಗಳೂರಿನ ಬೈಜುಸ್ ಮೂರು ಕಚೇರಿ ಮೇಲೆ ದಾಳಿ ನಡೆಸಿರುವ ಇಡಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ ಕೂಡ. ವಿದೇಶಿ ಹೂಡಿಕೆ ನಿಯಮಗಳ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ.  ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿಯಲ್ಲಿ ಈ ಶೋಧ ಕಾರ್ಯ ಕೈಗೊಳ್ಳಲಾಗಿದ್ದು, ದೋಪಾರೋಪದ ದಾಖಲೆಗಳು ಹಾಗೂ ಡಿಜಿಟಲ್ ಮಾಹಿತಿಗಳನ್ನು ಕಲೆ ಹಾಕಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಖಾಸಗಿ ವ್ಯಕ್ತಿಗಳು ನೀಡಿದ ದೂರನ್ನು ಪರಿಗಣಿಸಿ ಈ ದಾಳಿ ನಡೆಸಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. 2011 ರಿಂದ 2023 ರ ಅವಧಿಯಲ್ಲಿ ಬೈಜುಸ್ ಮಾತೃಸಂಸ್ಥೆ 'ಥಿಂಕ್ & ಲರ್ನ್ ಪ್ರೈವೇಟ್ ಲಿಮಿಟೆಡ್’28,000 ಕೋಟಿ ರೂ. ವಿದೇಶಿ ನೇರ ಹೂಡಿಕೆಯನ್ನು ಸ್ವೀಕರಿಸಿದೆ ಎಂದು ಆರೋಪಿಸಲಾಗಿದೆ. ಹೀಗಿರುವಾಗ ಬೈಜುಸ್ ಸಂಸ್ಥೆ ಸ್ಥಾಪನೆಗೊಂಡಿದ್ದು ಹೇಗೆ? ಸಿಇಒ ಬೈಜು ರವೀಂದ್ರನ್ ಯಾರು? ಇಲ್ಲಿದೆ ಮಾಹಿತಿ.

ಯಾರು ಈ ಬೈಜು ರವೀಂದ್ರನ್?
ಬೈಜು ರವೀಂದ್ರನ್ ಕೇರಳ ಮೂಲದವರು. ಇವರ ಪೋಷಕರು ಶಿಕ್ಷಕರು. ರವೀಂದ್ರನ್ ಕಣ್ಣೂರು ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಿಂದ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ಬಳಿಕ ಗಣಿತ ಶಿಕ್ಷಕರಾಗಿ ವೃತ್ತಿ ಪ್ರಾರಂಭಿಸಿದ ಅವರು, 2011ರಲ್ಲಿ ಪತ್ನಿ ದಿವ್ಯಾ ಗೋಕುಲ್ ನಾಥ್ ಜೊತೆ ಸೇರಿ ಬೈಜುಸ್ ಸಂಸ್ಥೆ ಸ್ಥಾಪಿಸಿದರು. ಇವರು ಸಹೋದರ್ ರೀಜು ರವೀಂದರನ್ ಅವರೊಂದಿಗೆ ಈ ಸಂಸ್ಥೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಪಾಲು ಹೊಂದಿದ್ದಾರೆ. ಫೋರ್ಬ್ಸ್ ದಾಖಲೆಗಳ ಅನ್ವಯ ಇವರ ಒಟ್ಟು ನಿವ್ವಳ ಸಂಪತ್ತು 26, 700 ಕೋಟಿ ರೂ. ಇದೆ. ಇನ್ನು ಇವರ ಕಂಪನಿಯ ಮೌಲ್ಯ 1,89,000 ಕೋಟಿ ರೂ.ಗಿಂತ ಹೆಚ್ಚಿದೆ. 2021ರಲ್ಲಿ ಈ ಕಂಪನಿ 573 ಮಿಲಿಯನ್ ಡಾಲರ್‌ ನಷ್ಟ ದಾಖಲಿಸಿತ್ತು. 

Tap to resize

Latest Videos

ಶಾರುಖ್‌ ಜಾಹೀರಾತು ನೀಡುವ ಬೈಜುಸ್‌ ಮೇಲೆ ಇಡಿ ರೇಡ್‌: 28,000 ಕೋಟಿ ಮೌಲ್ಯದ ವಿದೇಶಿ ಹೂಡಿಕೆ ಮೇಲೆ ಹದ್ದಿನ ಕಣ್ಣು

ವಿದ್ಯಾರ್ಥಿನಿಯನ್ನೇ ವಿವಾಹವಾದ ರವೀಂದ್ರನ್
ದಿವ್ಯಾ ಗೋಕುಲ್ ನಾಥ್ ಬೈಜು ರವೀಂದ್ರನ್ ಅವರ ವಿದ್ಯಾರ್ಥಿನಿಯಾಗಿದ್ದರು. ದಿವ್ಯಾ, ರವೀಂದ್ರನ್ ವಿದ್ಯಾರ್ಥಿನಿಯಾಗಿ ಅವರ ಟ್ಯೂಷನ್‌ (Tuition) ಗೆ ಹೋಗಿದ್ದರು. ನಂತರ ಇವರಿಬ್ಬರೂ ಮದುವೆಯಾಗಿ 2011ರಲ್ಲಿ ಆನ್ ಲೈನ್ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದರು. ಇವರ ಕುಟುಂಬ ಸಂಸ್ಥೆಯಲ್ಲಿ ಶೇ.25ರಷ್ಟು ಪಾಲು ಹೊಂದಿದ್ದಾರೆ. ಪ್ರಸ್ತುತ ಈ ಸಂಸ್ಥೆ ಭಾರೀ ನಷ್ಟದಲ್ಲಿದೆ. ಬೈಜುಸ್  150 ಮಿಲಿಯನ್ ಬಳಕೆದಾರರನ್ನು ಹೊಂದಿದೆ. 

2,500 ಉದ್ಯೋಗಿಗಳನ್ನು ವಜಾ ಮಾಡಿದ Byju's: ಭಾವನಾತ್ಮಕ ಪತ್ರ ಬರೆದ ಸಂಸ್ಥೆಯ ಸ್ಥಾಪಕ

ಗಣಿತದಲ್ಲಿ ಪರಿಣತ
ರವೀಂದ್ರನ್ ಗಣಿತದಲ್ಲಿ ತುಂಬಾ ಪರಿಣತರಾಗಿದ್ದರು. 2000 ಪ್ರಾರಂಭದಲ್ಲಿ ಸತತವಾಗಿ ಎರಡು ಬಾರಿ ಕ್ಯಾಟ್ ಪರೀಕ್ಷೆಗಳನ್ನು (CAT exams) ಉತ್ತೀರ್ಣರಾಗಿದ್ದರು. 2007ರಲ್ಲಿ ಅವರು ಕೆಲಸ ತೊರೆದು, ಕ್ಯಾಟ್ ಪರೀಕ್ಷೆಗೆ ತರಬೇತಿ ನೀಡುವ ಕೋಚಿಂಗ್ ಕೇಂದ್ರ ಪ್ರಾರಂಭಿಸಿದರು. ಇಂಥ ಒಂದು ತರಗತಿಯಲ್ಲೇ ಅವರು ದಿವ್ಯಾ ಗೋಪಿನಾಥನ್ ಅವರನ್ನು ಭೇಟಿಯಾಗುತ್ತಾರೆ.  ಆ ಬಳಿಕ ವಿವಾಹವಾದ ಇವರು, ಬೈಜುಸ್ ಸ್ಥಾಪಿಸುತ್ತಾರೆ. ಈ ಸಂಸ್ಥೆಯ ಸಹಪಾಲುದಾರರಾಗಿರುವ ದಿವ್ಯಾ ಗೋಪಿನಾಥನ್ ಭಾರತದ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ.1987ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ದಿವ್ಯಾ ಗೋಪಿನಾಥನ್ ಅವರ ತಂದೆ ವೈದ್ಯರಾಗಿದ್ದರು. ಅವರ ತಾಯಿ ದೂರದರ್ಶನ ಕಾರ್ಯಕ್ರಮಗಳಲ್ಲಿ ಕಾರ್ಯನಿರ್ವಾಹಕರಾಗಿ ಕೆಲಸ ಮಾಡಿದ್ದಾರೆ. ತಂದೆ ತಾಯಿಗೆ ದಿವ್ಯಾ ಒಬ್ಬರೇ ಮಗಳು. ಕಾಲೇಜಿನಲ್ಲಿ ಸೈನ್ಸ್ ತೆಗೆದುಕೊಂಡಿದ್ದ ದಿವ್ಯಾ, ಫ್ರಾಂಕ್ ಆಂಥೋನಿ ಶಾಲೆಯ ನಂತರ ಆರ್ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಯೋಟೆಕ್ನಾಲಜಿಯಲ್ಲಿ ಬಿಟೆಕ್ ಮಾಡಿದರು. ಓದುತ್ತಿರುವಾಗಲೇ ರವೀಂದ್ರನ್ ಅವರನ್ನು ದಿವ್ಯಾ ಭೇಟಿಯಾಗಿದ್ದರು. ಅವರ ಓದುವ ಆಸೆಯನ್ನು ಕಂಡು ರವೀಂದ್ರನ್ ಅವರು ಶಿಕ್ಷಕರ ವೃತ್ತಿಗೆ ಸೇರಲು ಪ್ರೋತ್ಸಾಹಿಸಿದರು.

click me!