ಎಸ್‌ಬಿಐನ ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್

By Kannadaprabha NewsFirst Published Aug 20, 2020, 1:05 PM IST
Highlights

‘ಎಸ್‌ಬಿಐ ಉಳಿತಾಯ ಖಾತೆ ಗ್ರಾಹಕರಿಗೆ ಸಿಹಿ ಸುದ್ದಿ! ಇನ್ನುಮುಂದೆ ನೀವು ಎಸ್‌ಎಂಎಸ್‌ ಸೇವೆಗೆ ಹಾಗೂ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್‌ ಇರಿಸದಿರುವುದಕ್ಕೆ ಶುಲ್ಕ ಪಾವತಿಸಬೇಕಿಲ್ಲ’ 

ನವದೆಹಲಿ (ಆ.20): ದೇಶದ ಅತಿದೊಡ್ಡ ಬ್ಯಾಂಕ್‌ ಎಸ್‌ಬಿಐ ತನ್ನ ಎಲ್ಲಾ ಗ್ರಾಹಕರಿಗೆ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್‌ ಇರಿಸದಿದ್ದರೆ ವಿಧಿಸುತ್ತಿದ್ದ ಶುಲ್ಕ ಹಾಗೂ ಎಸ್‌ಎಂಎಸ್‌ ಸೇವೆಗೆ ವಿಧಿಸುತ್ತಿದ್ದ ಶುಲ್ಕಗಳನ್ನು ರದ್ದುಪಡಿಸಿದೆ.

‘ಎಸ್‌ಬಿಐ ಉಳಿತಾಯ ಖಾತೆ ಗ್ರಾಹಕರಿಗೆ ಸಿಹಿ ಸುದ್ದಿ! ಇನ್ನುಮುಂದೆ ನೀವು ಎಸ್‌ಎಂಎಸ್‌ ಸೇವೆಗೆ ಹಾಗೂ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್‌ ಇರಿಸದಿರುವುದಕ್ಕೆ ಶುಲ್ಕ ಪಾವತಿಸಬೇಕಿಲ್ಲ’ ಎಂದು ಎಸ್‌ಬಿಐ ಬುಧವಾರ ಟ್ವೀಟ್‌ ಮಾಡಿದೆ. 

ಚಿನ್ನದ ಸಾಲ ಪಡೆದ ಗ್ರಾಹಕರಿಗೆ ಮುತ್ತೂಟ್‌ ಉಚಿತ ಕೋವಿಡ್‌ ವಿಮೆ

ಇಷ್ಟುದಿನ ಎಸ್‌ಬಿಐನ ಉಳಿತಾಯ ಖಾತೆದಾರರು ನಗರ ಪ್ರದೇಶದ ಶಾಖೆಗಳಲ್ಲಿ 3000 ರು., ಪಟ್ಟಣ ಪ್ರದೇಶದ ಶಾಖೆಗಳಲ್ಲಿ 2000 ರು. ಹಾಗೂ ಗ್ರಾಮೀಣ ಶಾಖೆಗಳಲ್ಲಿ 1000 ರು. ಕನಿಷ್ಠ ಮಾಸಿಕ ಬ್ಯಾಲೆನ್ಸ್‌ ಇರಿಸಬೇಕಿತ್ತು. ಇಲ್ಲದಿದ್ದರೆ ತಿಂಗಳಿಗೆ 5 ರು.ನಿಂದ 15 ರು. ಮತ್ತು ತೆರಿಗೆಯನ್ನು ದಂಡದ ರೂಪದಲ್ಲಿ ಪಾವತಿಸಬೇಕಿತ್ತು. ಇನ್ನುಮುಂದೆ ಈ ಹೊರೆ ಗ್ರಾಹಕರ ಮೇಲೆ ಬೀಳುವುದಿಲ್ಲ. ಗ್ರಾಹಕರು ಶೂನ್ಯ ಬ್ಯಾಲೆನ್ಸ್‌ ಇರಿಸಿದರೂ ದಂಡ ವಿಧಿಸಲಾಗುವುದಿಲ್ಲ.

ಕೊರೋನಾ ವೈರಸ್‌ ಲಾಕ್‌ಡೌನ್‌ ಜಾರಿಯಾದ ಮೇಲೆ ಎಸ್‌ಬಿಐ ತನ್ನ ಗ್ರಾಹಕರಿಗೆ ಎಟಿಎಂ ಕಾರ್ಡ್‌ ಬಳಕೆಯ ಶುಲ್ಕವನ್ನೂ ರದ್ದುಪಡಿಸಿತ್ತು.

click me!