ಮದ್ಯ ಮಾರಾಟ ಸ್ಥಗಿತದಿಂದ ಕೇಂದ್ರಕ್ಕೆ 27,000 ಕೋಟಿ ರೂ. ನಷ್ಟ!

By Kannadaprabha News  |  First Published May 5, 2020, 9:05 AM IST

ಮದ್ಯ ಮಾರಾಟ ಸ್ಥಗಿತದಿಂದ ಕೇಂದ್ರಕ್ಕೆ 27,000 ಕೋಟಿ ನಷ್ಟ| ಕರ್ನಾಟಕಕ್ಕೆ ಲಾಕ್‌ಡೌನ್‌ ವೇಳೆ 2050 ಕೋಟಿ ರು. ಆದಾಯ ಖೋತಾ


ನವದೆಹಲಿ(ಮೇ.05): ಸರ್ಕಾರಗಳಿಗೆ ಆದಾಯದ ದೊಡ್ಡ ಮೂಲವಾಗಿರುವ ಮದ್ಯದ ಮಾರಾಟವನ್ನು ಲಾಕ್‌ಡೌನ್‌ ವೇಳೆ ಸ್ಥಗಿತಗೊಳಿಸಿದ್ದರಿಂದ ಕೇಂದ್ರ ಸರ್ಕಾರಕ್ಕೆ ಕಳೆದ 1 ತಿಂಗಳಲ್ಲಿ 27,000 ಕೋಟಿ ರು. ನಷ್ಟವಾಗಿದೆ. ವಿವಿಧ ರಾಜ್ಯ ಸರ್ಕಾರಗಳಿಗೂ ಮದ್ಯದ ಮೇಲಿನ ತೆರಿಗೆ ಆದಾಯ ನಿಂತುಹೋಗಿದ್ದರಿಂದ ಭಾರಿ ನಷ್ಟವಾಗಿದ್ದು, ಕರ್ನಾಟಕಕ್ಕೆ 2050 ಕೋಟಿ ರು. ನಷ್ಟವಾಗಿದೆ.

900 ಹೊಸ ಮದ್ಯದಂಗಡಿ ತೆರೆಯಲು ನಿರ್ಧಾರ!

Tap to resize

Latest Videos

ಇಂಟರ್‌ನ್ಯಾಷನಲ್‌ ಸ್ಪಿರಿಟ್ಸ್‌ ಆ್ಯಂಡ್‌ ವೈನ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾದ ವರದಿ ಪ್ರಕಾರ ಕಳೆದ ವರ್ಷ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಮದ್ಯ ಮಾರಾಟದಿಂದ 2.48 ಲಕ್ಷ ಕೋಟಿ ರು. ಆದಾಯ ಬಂದಿತ್ತು. ಅದರ ಪ್ರಕಾರ, ಕಳೆದ ತಿಂಗಳು ಲಾಕ್‌ಡೌನ್‌ ವೇಳೆ ಮದ್ಯದಂಗಡಿಗಳನ್ನು ಮುಚ್ಚಿದ್ದರಿಂದ 27,000 ಕೋಟಿ ರು. ನಷ್ಟವಾಗಿದೆ. ಕರ್ನಾಟಕಕ್ಕೆ ಒಂದು ತಿಂಗಳಿಗೆ 2050 ಕೋಟಿ ರು. ತೆರಿಗೆ ಆದಾಯ ಖೋತಾ ಆಗಿದ್ದು, ದಿನಕ್ಕೆ 50 ಕೋಟಿ ರು. ನಷ್ಟವಾಗಿದೆ. ತಮಿಳುನಾಡಿಗೆ ದಿನಕ್ಕೆ 90 ಕೋಟಿ ರು. ನಷ್ಟವಾಗಿದೆ. ದೆಹಲಿ ಸರ್ಕಾರಕ್ಕೆ ಲಾಕ್‌ಡೌನ್‌ನಿಂದ 500 ಕೋಟಿ ರು. ನಷ್ಟವಾಗಿದೆ.

ಅಷ್ಟಕ್ಕೂ ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ಮದ್ಯಪ್ರಿಯರ ಕೊಡುಗೆ!

ಈ ಹಿನ್ನೆಲೆಯಲ್ಲಿ ಪಂಜಾಬ್‌, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳು ಮದ್ಯ ಮಾರಾಟಕ್ಕೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದವು. ಅದರಂತೆ ರೆಡ್‌ ಜೋನ್‌ಗಳಲ್ಲೂ ಮದ್ಯ ಮಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಸೋಮವಾರದಿಂದ ದೇಶದ 70,000 ಮದ್ಯದಂಗಡಿಗಳು ತೆರೆದಿವೆ ಎಂದು ಹೇಳಲಾಗಿದೆ. ದೇಶದಲ್ಲಿ ಮಾರಾಟವಾಗುವ ಶೇ.70ರಷ್ಟುಮದ್ಯ ವೈನ್‌ ಸ್ಟೋರ್‌ಗಳಲ್ಲಿ ಮಾರಾಟವಾಗುತ್ತದೆ. ಇನ್ನುಳಿದ ಮದ್ಯ ಬಾರ್‌, ಪಬ್‌ ಮತ್ತು ಹೋಟೆಲ್‌ಗಳಲ್ಲಿ ಮಾರಾಟವಾಗುತ್ತದೆ.

click me!