
ನವದೆಹಲಿ(ಏ.04): ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಭಾರೀ ಇಳಿಕೆ ಕಂಡಿರುವ ಹಿನ್ನೆಲೆಯಲ್ಲಿ, ಭಾರತದಲ್ಲೂ ವೈಮಾನಿಕ ಇಂಧನಗಳ ದರವನ್ನು ಭಾನುವಾರ ಶೇ.23.2ರಷ್ಟು ಭಾರೀ ಪ್ರಮಾಣದಲ್ಲಿ ಇಳಿಕೆ ಮಾಡಲಾಗಿದೆ. ಅಂದರೆ ಇದುವರೆಗೆ ಪ್ರತಿ 1000 ಲೀ.ಗೆ 29536 ರು. ಇದ್ದ ದರವನ್ನು 6812 ರು. ನಷ್ಟು ಇಳಿಸಲಾಗಿದೆ. ಅಂದರೆ 22544 ರು.ಗೆ ದರ ಇಳಿದಿದೆ.
2ನೇ ಆರ್ಥಿಕ ಪ್ಯಾಕೇಜ್‌ಗೆ ಮೋದಿ ಸಿದ್ಧತೆ!
ಆದರೆ ಪ್ರತಿ ಲೀಗೆ. ಕೇವಲ 22.54 ರು. ಇದು ಭಾರತದಲ್ಲಿ ಜನಸಾಮಾನ್ಯರು ಬೈಕ್, ಕಾರಿಗೆ ಬಳಸುವ ಪೆಟ್ರೋಲ್‌ಗಿಂತ ಶೇ.70ರಷ್ಟುಅಗ್ಗ. ಭಾನುವರ ದೆಹಲಿಯಲ್ಲಿ ಸಾಮಾನ್ಯ ಪೆಟ್ರೋಲ್ ಬೆಲೆ 69.59 ರು. ಇದ್ದರೆ, ವೈಮಾನಿಕ ಇಂಧನ (ಉತ್ಕೃಷ್ಟದರ್ಜೆಯ ಪೆಟ್ರೋಲ್) ದರ ಕೇವ 22.54 ರು.ನಷ್ಟಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆ ಆರಂಭವಾಗಿ ಸುಮಾರು 2 ತಿಂಗಲೇ ಆದರೂ, ಭಾರತ ಸರ್ಕಾರ, ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಹೆಚ್ಚಿಸುವ ಮೂಲಕ, ಇಳಿಕೆಯ ಲಾಭ ಗ್ರಾಹಕರಿಗೆ ವರ್ಗ ಆಗುವುದನ್ನು ತಡೆದಿದೆ. ಪರಿಣಾಮ ಕಳೆದ 50 ದಿನಗಳಿಂದ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಯಥಾಸ್ಥಿಯಲ್ಲಿದೆ.
ಸಬ್ಸಿಡಿ ರಹಿತ LPG ಗ್ಯಾಸ್ ದರ ದಾಖಲೆಯ ಇಳಿಕೆ!
ಫೆಬ್ರವರಿಯಿಂದ ಈವರೆಗೆ ವಿಮಾನ ಇಂಧನ ಬೆಲೆಯಲ್ಲಿ ಮೂರನೇ ಎರಡರಷ್ಟುಇಳಿಕೆಯಾಗಿದ್ದು, ಫೆಬ್ರವರಿಯಲ್ಲಿ ಪ್ರತೀ ಸಾವಿರ ಲೀಟರ್‌ಗೆ 64,323 ರು. ಇದ್ದ ಬೆಲೆ ಈಗ 22,544 ರು. ಗೆ ಮುಟ್ಟಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.