ಸತತ 6 ಬಾರಿ ಕೇಂದ್ರ ಬಜೆಟ್‌ ಮಂಡಿಸಿ 2ನೇ ಸಚಿವೆಯಾಗಲಿರೋ ನಿರ್ಮಲಾ ಸೀತಾರಾಮನ್: ಈ ಸಾಧನೆ ಮಾಡಿದ ಮೊದಲ ವ್ಯಕ್ತಿ ಇವರೇ!

By BK Ashwin  |  First Published Jan 27, 2024, 2:44 PM IST

ಫೆಬ್ರವರಿ 1 ರಂದು ಮಧ್ಯಂತರ ಬಜೆಟ್ ಮಂಡನೆಯೊಂದಿಗೆ, ಶ್ರೀಮತಿ ನಿರ್ಮಲಾ ಸೀತಾರಾಮನ್ ಸತತ ಐದು ಬಜೆಟ್‌ಗಳನ್ನು ಮಂಡಿಸಿದ ಮನಮೋಹನ್ ಸಿಂಗ್, ಅರುಣ್ ಜೇಟ್ಲಿ, ಪಿ. ಚಿದಂಬರಂ ಮತ್ತು ಯಶವಂತ್ ಸಿನ್ಹಾ ಅವರ ಹಿಂದಿನ ದಾಖಲೆಗಳನ್ನು ಮುರಿಯಲಿದ್ದಾರೆ. 


ದೆಹಲಿ (ಜನವರಿ 27, 2024): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತವಾಗಿ 6ನೇ ಬಜೆಟ್ ಮಂಡಿಸುವ ಮೂಲಕ ದಾಖಲೆ ನಿರ್ಮಿಸಲಿದ್ದಾರೆ. ಈವರೆಗೆ ಐದು ವಾರ್ಷಿಕ ಬಜೆಟ್‌ ಮಂಡಿಸಿರೋ ಇವರು ಈಗ ಒಂದು ಮಧ್ಯಂತರ ಬಜೆಟ್‌ ಮಂಡಿಸಲಿದ್ದಾರೆ. ಇದುವರೆಗೆ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಮಾತ್ರ ಈ ಸಾಧನೆ ಮಾಡಿದ್ದಾರೆ.

ಫೆಬ್ರವರಿ 1 ರಂದು ಮಧ್ಯಂತರ ಬಜೆಟ್ ಮಂಡನೆಯೊಂದಿಗೆ, ಶ್ರೀಮತಿ ನಿರ್ಮಲಾ ಸೀತಾರಾಮನ್ ಸತತ ಐದು ಬಜೆಟ್‌ಗಳನ್ನು ಮಂಡಿಸಿದ ಮನಮೋಹನ್ ಸಿಂಗ್, ಅರುಣ್ ಜೇಟ್ಲಿ, ಪಿ. ಚಿದಂಬರಂ ಮತ್ತು ಯಶವಂತ್ ಸಿನ್ಹಾ ಅವರ ಹಿಂದಿನ ದಾಖಲೆಗಳನ್ನು ಮುರಿಯಲಿದ್ದಾರೆ. 

Tap to resize

Latest Videos

undefined

ಮುಂದಿನ ಕೇಂದ್ರ ಬಜೆಟ್‌ ಲೇಖಾನುದಾನ ಮಾತ್ರ; ಅದ್ಭುತ ಘೋಷಣೆಗಳಿಗೆ ಜುಲೈವರೆಗೆ ಕಾಯಬೇಕು: ನಿರ್ಮಲಾ ಸೀತಾರಾಮನ್

ಮೊರಾರ್ಜಿ ದೇಸಾಯಿ ಹಣಕಾಸು ಸಚಿವರಾಗಿ ಐದು ವಾರ್ಷಿಕ ಬಜೆಟ್ ಮತ್ತು ಒಂದು ಮಧ್ಯಂತರ ಬಜೆಟ್ ಅನ್ನು 1959-1964 ರ ನಡುವೆ ಮಂಡಿಸಿದ್ದರು. ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ 10 ಬಜೆಟ್‌ಗಳನ್ನು ಮಂಡಿಸಿರುವ ದಾಖಲೆಯನ್ನೂ ಹೊಂದಿದ್ದು, ಇದು ಯಾವುದೇ ಹಣಕಾಸು ಸಚಿವರಿಗಿಂತ ಈವರೆಗಿನ ಗರಿಷ್ಠ ದಾಖಲೆಯಾಗಿದೆ. ಸತತವಾಗಿ ಒಂದು ಮಧ್ಯಂತರ ಸೇರಿದಂತೆ ಆರು ಬಜೆಟ್‌ಗಳನ್ನು ಸಹ ಇವರು ಮಂಡಿಸಿದ್ದರು.

ಫೆಬ್ರವರಿ 1 ರಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ 2024-25 ರ ಮಧ್ಯಂತರ ಬಜೆಟ್ ವೋಟ್-ಆನ್-ಅಕೌಂಟ್ ಆಗಿದ್ದು, ಏಪ್ರಿಲ್-ಮೇ ಚುನಾವಣೆ ನಂತರ ಹೊಸ ಸರ್ಕಾರ ಅಧಿಕಾರಕ್ಕೆ ಬರುವವರೆಗೆ ಸ್ವಲ್ಪ ಹಣ ಖರ್ಚು ಮಾಡಲು ಸರ್ಕಾರಕ್ಕೆ ಅಧಿಕಾರವನ್ನು ನೀಡುತ್ತದೆ. 

 

'ಯಾರಪ್ಪನ ಮನೆಯ ಹಣ ಕೇಳ್ತಿಲ್ಲ' ಎಂದ ಉದಯನಿಧಿ, ನಾಲಿಗೆಯ ಮೇಲೆ ಹಿಡಿತವಿರಲಿ, ಎಚ್ಚರಿಸಿದ ವಿತ್ತ ಸಚಿವೆ!

ಸಂಸತ್ತಿನ ಚುನಾವಣೆ ನಡೆಯಲಿರುವುದರಿಂದ, ಈ ಮಧ್ಯಂತರ ಬಜೆಟ್ ಯಾವುದೇ ಪ್ರಮುಖ ನೀತಿ ಬದಲಾವಣೆಗಳನ್ನು ಹೊಂದಿರುವುದಿಲ್ಲ. ಈ ಸಂಬಂಧ ಕಳೆದ ತಿಂಗಳು ಉದ್ಯಮದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ಮಧ್ಯಂತರ ಬಜೆಟ್‌ನಲ್ಲಿ ಯಾವುದೇ ಅದ್ಭುತ ಘೋಷಣೆಯನ್ನು ತಳ್ಳಿಹಾಕಿದ್ದು, ಇದು ಸಾರ್ವತ್ರಿಕ ಚುನಾವಣೆಯ ಮೊದಲು ನಡೆಯೋ ವೋಟ್-ಆನ್-ಅಕೌಂಟ್‌ ಎಂದು ಹೇಳಿದರು.

ವೋಟ್ ಆನ್ ಅಕೌಂಟ್, ಒಮ್ಮೆ ಸಂಸತ್ತಿನಿಂದ ಅನುಮೋದಿಸಿದರೆ, ಏಪ್ರಿಲ್ - ಜುಲೈ ಅವಧಿಯ ವೆಚ್ಚವನ್ನು ಪೂರೈಸಲು ಅನುಪಾತದ ಆಧಾರದ ಮೇಲೆ ಕನ್ಸಾಲಿಡೇಟೆಡ್ ಫಂಡ್ ಆಫ್ ಇಂಡಿಯಾದಿಂದ ಹಣವನ್ನು ಹಿಂಪಡೆಯಲು ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ಜೂನ್‌ನಲ್ಲಿ ರಚನೆಯಾಗುವ ಸಾಧ್ಯತೆಯಿರುವ ಹೊಸ ಸರ್ಕಾರವು ಜುಲೈನಲ್ಲಿ 2024-25 ರ ಬಜೆಟ್‌ ಅನ್ನು ಮಂಡಿಸಲಿದೆ.

ಸಾಮಾನ್ಯವಾಗಿ, ಮಧ್ಯಂತರ ಬಜೆಟ್‌ಗಳು ಪ್ರಮುಖ ನೀತಿ ಪ್ರಕಟಣೆಗಳನ್ನು ಒಳಗೊಂಡಿರುವುದಿಲ್ಲ. ಆದರೆ ಆರ್ಥಿಕತೆ ಎದುರಿಸುತ್ತಿರುವ ತುರ್ತು ಸಮಸ್ಯೆಗಳನ್ನು ಎದುರಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಯಾರೂ ತಡೆಯುವುದಿಲ್ಲ.

2014 ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಅರುಣ್ ಜೇಟ್ಲಿ ಹಣಕಾಸು ಸಚಿವಾಲಯದ ಉಸ್ತುವಾರಿ ವಹಿಸಿಕೊಂಡಿದ್ದರು ಮತ್ತು 2014-15 ರಿಂದ 2018-19 ರವರೆಗೆ ಸತತ ಐದು ಬಜೆಟ್ ಮಂಡಿಸಿದರು. 

1970-71ರ ಆರ್ಥಿಕ ವರ್ಷಕ್ಕೆ ಬಜೆಟ್ ಮಂಡಿಸಿದ ಇಂದಿರಾ ಗಾಂಧಿ ನಂತರ ಕೇಂದ್ರ ಬಜೆಟ್ ಮಂಡಿಸಿದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಸಹ ನಿರ್ಮಲಾ ಸೀತಾರಾಮನ್‌ ಪಾತ್ರರಾಗಿದ್ದಾರೆ.

click me!