ಭಾರತದ ಜೊತೆ ಜೆಟ್‌ ಇಂಜಿನ್‌ ಟೆಕ್ನಾಲಜಿ ಹಂಚಿಕೊಳ್ಳಲು ಸಿದ್ಧ: Safran ಘೋಷಣೆ

By Santosh Naik  |  First Published Jan 26, 2024, 5:50 PM IST

ಫ್ರೆಂಚ್ ಎಂಜಿನ್ ತಯಾರಕ ದೈತ್ಯ ಕಂಪನಿಯಾಗಿರುವ ಸಫ್ರಾನ್ ಫೈಟರ್ ಜೆಟ್ ಎಂಜಿನ್‌ಗಳ ಅಭಿವೃದ್ಧಿಗಾಗಿ ಭಾರತದೊಂದಿಗೆ ತಂತ್ರಜ್ಞಾನವನ್ನು ಹಂಚಿಕೊಳ್ಳಲು ಆಸಕ್ತಿ ತೋರಿಸುತ್ತಿದೆ ಎಂದು ಫ್ರಾನ್ಸ್‌ನಲ್ಲಿರುವ ಭಾರತದ ರಾಯಭಾರಿ ಹೇಳಿದ್ದಾರೆ.


ನವದೆಹಲಿ (ಜ.25): ಫ್ರಾನ್ಸ್‌ ಅಧ್ಯಕ್ಷ ಇಮಾನ್ಯುಯೆಲ್‌ ಮ್ಯಾಕ್ರನ್‌ ಗಣರಾಜ್ಯೋತ್ಸವದ ಅತಿಥಿಯಾಗಿ ಭಾರತಕ್ಕೆ ಆಗಮಿಸಿರುವ ನಡುವೆ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಭಾರತದಲ್ಲಿ ಫೈಟರ್ ಜೆಟ್ ಇಂಜಿನ್‌ಗಳ ಅಭಿವೃದ್ಧಿಗೆ ತಂತ್ರಜ್ಞಾನವನ್ನು ಸಹಯೋಗಿಸಲು ಮತ್ತು ಹಂಚಿಕೊಳ್ಳಲು ಸಫ್ರಾನ್ ಸಿಂದ್ಧವಿದೆ ಎಂದು ಫ್ರಾನ್ಸ್‌ನಲ್ಲಿರುವ ಭಾರತದ ರಾಯಭಾರಿ ಜಾವೇದ್ ಅಶ್ರಫ್ ಹೇಳಿದ್ದಾರೆ. ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ, ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಅವರು ಜೈಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷರ ನಡುವಿನ ಮಾತುಕತೆಯ ಪ್ರಮುಖ ವಿವರಗಳನ್ನು ತಿಳಿಸಿದರು. ಭಾರತದ ಟಾಟಾ ಸಮೂಹ ಮತ್ತು ಫ್ರಾನ್ಸ್‌ನ ಏರ್‌ಬಸ್ ನಾಗರಿಕ ಹೆಲಿಕಾಪ್ಟರ್‌ಗಳನ್ನು ತಯಾರಿಸಲು ಒಪ್ಪಂದಕ್ಕೆ ಸಹಿ ಹಾಕಿವೆ. ಅದರೊಂದಿಗೆ ಸ್ಥಳೀಯ ಉತ್ಪನ್ನ ಮತ್ತು ಸ್ಥಳೀಕರಣ ಘಟಕವನ್ನು ಇದು ಹೊಂದಿರಲಿದೆ ಎಂದಿದ್ದರು. ಇದರೊಂದಿಗೆ ಜೆಟ್‌ ಇಂಜಿನ್‌ ಉತ್ಪಾದಕ ದೈತ್ಯ ಕಂಪನಿಯಾದ ಸಫ್ರಾನ್‌ ಭಾರತದೊಂದಿಗೆ ಈ ತಂತ್ರಜ್ಞಾನ ಹಂಚಿಕೊಳ್ಳಲು ಸಿದ್ಧವಿರುವುದಾಗಿ ಘೋಷಣೆ ಮಾಡಿದೆ.

ಭಾರತ ಮತ್ತು ಫ್ರಾನ್ಸ್ ರಕ್ಷಣಾ-ಕೈಗಾರಿಕಾ ಪಾಲುದಾರಿಕೆಯ ಮಾರ್ಗಸೂಚಿ ದೃಢವಾಗಿದೆ ಎಂದು ಕ್ವಾತ್ರಾ ಹೇಳಿದ್ದಾರೆ.. ಇದು ಪ್ರಮುಖ ಮಿಲಿಟರಿ ಹಾರ್ಡ್‌ವೇರ್ ಮತ್ತು ಪ್ಲಾಟ್‌ಫಾರ್ಮ್‌ಗಳ ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಯನ್ನು ಒದಗಿಸುತ್ತದೆ ಮತ್ತು ಬಾಹ್ಯಾಕಾಶ, ಭೂ ಯುದ್ಧ, ಸೈಬರ್‌ಸ್ಪೇಸ್ ಮತ್ತು ಕೃತಕ ಬುದ್ಧಿಮತ್ತೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತಂತ್ರಜ್ಞಾನ ಸಹಯೋಗವನ್ನು ಸುಗಮಗೊಳಿಸುತ್ತದೆ ಎಂದು ಅವರು ಹೇಳಿದರು.

ರಕ್ಷಣೆ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶದಲ್ಲಿ ಸಹಕಾರವನ್ನು ಗಾಢಗೊಳಿಸುವ 25 ವರ್ಷಗಳ ಯೋಜನೆಯೊಂದಿಗೆ ಫ್ರಾನ್ಸ್ ಮತ್ತು ಭಾರತದ ನಡುವಿನ ಸಂಬಂಧಗಳು ಬಲಗೊಂಡಿವೆ. ಕಳೆದ ವರ್ಷ ಫ್ರಾನ್ಸ್‌ನಲ್ಲಿ ನಡೆದ ಬಾಸ್ಟಿಲ್ ಡೇ ಆಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಲಾಗಿತ್ತು, ಫ್ರಾನ್ಸ್‌ನ ನೇವಲ್ ಗ್ರೂಪ್‌ನಿಂದ ಹೆಚ್ಚುವರಿ ಜಲಾಂತರ್ಗಾಮಿ ನೌಕೆಗಳನ್ನು ಮತ್ತು ಡಸಾಲ್ಟ್ ಏವಿಯೇಷನ್ ಎಸ್‌ಎಯಿಂದ 26 ಸಾಗರ ರಫೇಲ್ ಯುದ್ಧ ವಿಮಾನಗಳನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆಗಳನ್ನು ಅನಾವರಣಗೊಳಿಸಲಾಯಿತು.

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಗುರುವಾರ ಜೈಪುರಕ್ಕೆ ಬಂದಿಳಿದಿದ್ದರು, ಏರ್‌ಬಸ್ ಸಿಇಒ ಗುಯಿಲೌಮ್ ಫೌರಿ, ಸಫ್ರಾನ್ ಎಸ್‌ಎ ಸಿಇಒ ಒಲಿವಿಯರ್ ಆಂಡ್ರೀಸ್ ಮತ್ತು ಇಡಿಎಫ್ ಎಸ್‌ಎ ಮತ್ತು ಡಸ್ಸಾಲ್ಟ್ ಏವಿಯೇಷನ್ ಎಸ್‌ಎಯ ಉನ್ನತ ಕಾರ್ಯನಿರ್ವಾಹಕರನ್ನು ಒಳಗೊಂಡ ಉನ್ನತ ನಿಯೋಗ ಅವರೊಂದಿಗೆ ಆಗಮಿಸಿತ್ತು.

ಗುಜರಾತ್‌ನಲ್ಲಿ ತಯಾರಾಗಲಿದೆ H125 ಸಿಂಗಲ್ ಎಂಜಿನ್‌ ಹೆಲಿಕಾಪ್ಟರ್‌: ಟಾಟಾ - ಏರ್‌ಬಸ್‌ ನಡುವೆ ಮಹತ್ವದ ಒಪ್ಪಂದ!

ಪ್ರಸ್ತುತ ಭಾರತದ ತಯಾರಿಸುತ್ತಿರುವ ಬ್ರಹ್ಮೋಸ್‌ ಕ್ಷಿಪಣಿಯ ಮೂಲ ತಂತ್ರಜ್ಞಾನ ರಷ್ಯಾ ದೇಶದ್ದು. ಭಾರತದ ಜೊತೆಗಿನ ಒಪ್ಪಂದದ ಬಳಿಕ ಈ ಕ್ಷಿಪಣಿ ತಂತ್ರಜ್ಞಾನವನ್ನು ರಷ್ಯಾ ಭಾರತದ ಜೊತೆ ಹಂಚಿಕೊಂಡಿತ್ತು. ಇದರಿಂದ ಭಾರತವೇ ಈಗ ತನ್ನ ಬ್ರಹ್ಮೋಸ್‌ ಕ್ಷಿಪಣಿಯನ್ನು ಅಭಿವೃದ್ಧಿ ಮಾಡುತ್ತಿದೆ. ಹಾಗೇನಾದರೂ ಸಫ್ರಾನ್‌ ತನ್ನ ತಂತ್ರಜ್ಞಾನ ಹಂಚಿಕೊಳ್ಳಲು ಮುಂದಾದರೆ, ಜೆಟ್‌ ಇಂಜಿನ್‌ ಅಭಿವೃದ್ಧಿಯಲ್ಲೂ ಭಾರತ ಸ್ವಾವಲಂಬಿಯಾಗಲಿದೆ.

Tap to resize

Latest Videos

ಮೋದಿ ಜತೆ ಇಂದು ಫ್ರೆಂಚ್‌ ಅಧ್ಯಕ್ಷರ ರೋಡ್‌ಶೋ: ರಾಜಸ್ಥಾನದ ಪಾರಂಪರಿಕ ತಾಣಗಳ ಪ್ರವಾಸ

click me!