ದೇಶದ ಭವಿಷ್ಯಕ್ಕೆ ಆದ್ಯತೆ ನೀಡಿರುವ ನಿರ್ಮಲಾ ಸೀತಾರಾಮನ್ ಬಜೆಟ್‌

By Kannadaprabha News  |  First Published Feb 2, 2023, 9:47 AM IST

ದೇಶದ ಭವಿಷ್ಯಕ್ಕಾಗಿ ಶಿಕ್ಷಣ, ವೈದ್ಯಕೀಯ, ಕೃಷಿ, ಕೈಗಾರಿಕಾ ಕ್ಷೇತ್ರಗಳ ಉತ್ತೇಜನದ ಜೊತೆ ಮೂಲಸೌಕರ್ಯ ಅಭಿವೃದ್ಧಿ. ಬದಲಾದ ಸಮಯದಲ್ಲಿ ಮುಂಬರುವ ಅವಕಾಶಗಳಿಗೆ ಸಿದ್ಧತೆಗಳು ಮಹತ್ವವೆನಿಸುತ್ತದೆ-  ವಿಜಯ ರಾಜೇಶ್‌, ತೆರಿಗೆ ಸಲಹೆಗಾರರು.


ದೇಶದ ಭವಿಷ್ಯಕ್ಕಾಗಿ ಶಿಕ್ಷಣ, ವೈದ್ಯಕೀಯ, ಕೃಷಿ, ಕೈಗಾರಿಕಾ ಕ್ಷೇತ್ರಗಳ ಉತ್ತೇಜನದ ಜೊತೆ ಮೂಲಸೌಕರ್ಯ ಅಭಿವೃದ್ಧಿ. ಬದಲಾದ ಸಮಯದಲ್ಲಿ ಮುಂಬರುವ ಅವಕಾಶಗಳಿಗೆ ಸಿದ್ಧತೆಗಳು ಮಹತ್ವವೆನಿಸುತ್ತದೆ. ಈ ಬಾರಿಯ ಬಜೆಟ್‌ ಭವಿಷ್ಯಕ್ಕೆ ಅವಕಶ್ಯಕತೆಗೆ ತಕ್ಕಂತೆ ಎಲ್ಲ ಕ್ಷೇತ್ರಗಳಿಗೆ ಒತ್ತು ನೀಡುವುದರ ಜೊತೆಗೆ, ತಂತ್ರಜ್ಞಾನದ ಬೆಳವಣಿಗೆಗೆ ಪೂಕರವಾಗಿ ಕೃತಕ ಬುದ್ಧಿಮತ್ತೆ (ಎ.ಐ), ಡಿಜಿಟಲ್‌ ಇಂಡಿಯಾಗೆ ಹೆಚ್ಚು ಒತ್ತು ನೀಡಿದೆ. ಸಾಮಾನ್ಯ ಜನರಿಗೆ ಉದ್ಯೋಗದ ಅವಕಾಶದ ಜೊತೆ, ಹಣ ಸಿಗುವಂತ ಯೋಜನೆಗಳನ್ನು ಕೈಗೊಳ್ಳಲು ಪೂರಕವಾಗಿದೆ. ನಮ್ಮ ಆರ್ಥಿಕತೆ ಪೆಟ್ರೋಲ್‌ ಮೇಲಿನ ಅವಲಂಬನೆಯಿಂದ ಹೊರ ಬರಲು ಸಿಎನ್‌ಜಿ, ಎಥನಾಲ್‌ ಉತ್ಪಾದನೆ ಜನರಿಗೆ ಆದಾಯದ ಜೊತೆ, ವಿದೇಶಿ ವಿನಿಮಯಕ್ಕೆ ಕೂಡ ಅನುಕೂಲವಾಗುತ್ತದೆ.

ಕಳೆದ 3 ವರ್ಷಗಳಲ್ಲಿ ಆದಾಯ ತೆರಿಗೆಯಡಿಯಲ್ಲಿ ಕೊಡುಗೆಗಳು ಸಿಕ್ಕಿರಲಿಲ್ಲ. ಈ ಬಾರಿ ಹಲವು ಕೋಟಿಗಳು ಸಿಕ್ಕಿವೆ. 

Latest Videos

undefined

1. ಸಣ್ಣ ವ್ಯಾಪಾರಸ್ಥರು ಈವರೆಗೆ .2 ಕೋಟಿ ವಹಿವಾಟು ಇದ್ದಲ್ಲಿ ಶೇ.8ರಷ್ಟುಲಾಭ ಪೋಷಿಸಿ ತೆರಿಗೆ ಕಟ್ಟಬೇಕಿತ್ತು. ಈ ವಹಿವಾಟು ಮಿತಿಯನ್ನು .3 ಕೋಟಿಗೆ ಏರಿಸಲಾಗಿದೆ. ಹಾಗೆಯೇ ವೃತ್ತಿಪರರು ಅಂದರೆ ಡಾಕ್ಟರ್‌, ವಕೀಲರು ಮುಂತಾದವರು .50 ಲಕ್ಷ ವಹಿವಾಟಿಗೆ ಶೇ.50ರಷ್ಟುತೆರಿಗೆ ಕಟ್ಟಬೇಕಿತ್ತು. ಈಗ ಮಿತಿಯನ್ನು .75 ಲಕ್ಷಕ್ಕೆ ಏರಿಸಲಾಗಿದೆ.

2. ಸ್ಟಾರ್ಚ್‌ಅಪ್‌ ಕಂಪನಿಗಳಿಗೆ ಹಲವು ತೆರಿಗೆ ರಿಯಾಯಿತಿ, ವಿನಾಯಿತಿಗಳ ಜೊತೆಗೆ ಸ್ಥಾಪಿಸಲು ಉತ್ತೇಜನ ನೀಡಲಾಗಿದೆ.

3. ನಿಮ್ಮ ಚಿನ್ನವನ್ನು ಬ್ಯಾಂಕಿಗೆ ಡೆಪಾಸಿಟ್‌ ಮಾಡಿದಾಗ ಕ್ಯಾಪಿಟಲ್‌ ಗೇನ್‌ ತೆರಿಗೆ ಬರುವುದಿಲ್ಲ.

4. ಕಳೆದ 2020ನೇ ಸಾಲಿನಿಂದ ನಮಗೆ ಹೊಸ ಮತ್ತು ಹಳೆಯ ತೆರಿಗೆ ಪದ್ಧತಿ ಆಯ್ಕೆಗಳಿದ್ದವು. ಹಳೆ ಪದ್ಧತಿಯಲ್ಲಿ ತೆರಿಗೆ ವಿನಾಯಿತಿ/ ರಿಯಾಯಿತಿ ದೊರಕುತ್ತಿದ್ದು, ಹೊಸ ಪದ್ಧತಿಯಲ್ಲಿ ಯಾವುದೇ ವಿನಾಯಿತಿ ಇರಲಿಲ್ಲ. ಈ ಹೊಸ ಪದ್ಧತಿ ಅಡಿಯಲ್ಲಿ ಮಾತ್ರ .7 ಲಕ್ಷ ಆದಾಯಕ್ಕೆ ತೆರಿಗೆ ಇಲ್ಲ. ಹಳೆ ಪದ್ಧತಿಯಲ್ಲಿ .5 ಲಕ್ಷಕ್ಕೆ ತೆರಿಗೆ ಇರಲಿಲ್ಲ. ಮುಂದಿನ ಸಾಲಿನಿಂದ ಹೊಸ ತೆರಿಗೆ ಪದ್ಧತಿ ಎಲ್ಲರಿಗೂ ಅನ್ವಯವಾಗುತ್ತದೆ.

5. ಹೊಸ ತೆರಿಗೆ ಪದ್ಧತಿಗೆ ಮಾತ್ರ ಅನ್ವಯವಾಗುವಂತೆ ತೆರಿಗೆ ದರಗಳನ್ನು ಬದಲಿಸಲಾಗಿದೆ.

6. ನಿವೃತ್ತಿ ಹೊಂದುವವರಿಗೆ ಅನುಕೂಲವಾಗುವಂತೆ  ವಿನಾಯಿತಿ ಮೊತ್ತ  3 ಲಕ್ಷದಿಂದ  25 ಲಕ್ಷಕ್ಕೆ ಏರಿಸಲಾಗಿದೆ.

7. ಅಗ್ನಿವೀರರಿಗೆ ನಿರ್ದಿಷ್ಟತೆರಿಗೆ ವಿನಾಯಿತಿ ನೀಡಲಾಗಿದೆ.

8. ಕ್ಯಾಪಿಟಲ್‌ ಗೇನ್‌ ಅಡಿಯಲ್ಲಿ ತೆರಿಗೆ ವಿನಾಯಿತಿಗೆ ನೀವು .10 ಕೋಟಿಯವರೆಗಿನ ಮನೆ ತೆಗೆದುಕೊಳ್ಳಲು ಅನುಮತಿ ನೀಡಲಾಗಿದೆ. ಈವರೆಗೆ ಈ ಮಿತಿ .2 ಕೋಟಿ ಇತ್ತು.

ಒಟ್ಟಾರೆಯಾಗಿ ಎಲ್ಲ ಕ್ಷೇತ್ರಗಳಿಗೆ ಒತ್ತು ನೀಡುವುದು ಜೊತೆ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ದೇಶದ ಭವಿಷ್ಯಕ್ಕೆ ಪೂರಕವಾದ ಬಜೆಟ್‌ ಮಂಡನೆಯಾಗಿದೆ.

 ವಿಜಯರಾಜೇಶ್‌, ತೆರಿಗೆ ಸಲಹೆಗಾರರು.

 ಬಜೆಟ್‌ ಹಂಚಿಕೆ: ಉತ್ತರ ಪ್ರದೇಶಕ್ಕೆ ಶೇ.18, ರಾಜ್ಯಕ್ಕೆ ಕೇವಲ ಶೇ.3

2023ನೇ ಸಾಲಿನ ಬಜೆಟ್‌ ಕೃಷಿ, ಮಹಿಳಾ ಸಬಲೀಕರಣ, ಯುವ ಸಬಲೀಕರಣ, ಹಸಿರು ಬೆಳವಣಿಗೆಗೆ ಹೆಚ್ಚು ಒತ್ತು ಕೊಟ್ಟು ಒಟ್ಟು .45,03,097 ಲಕ್ಷ ಕೋಟಿ ಸರ್ವವ್ಯಾಪಿ, ಸರ್ವಸ್ಪರ್ಶಿ ಬಜೆಟ್‌ನ್ನು ವಿಧಾನ ಪರಿಷತ್‌ ಸದಸ್ಯರಾದ ಎಸ್‌.ವಿ. ಸಂಕನೂರ ಸ್ವಾಗತಿಸಿದ್ದಾರೆ. ಈ ಹಿಂದೆ ಯುಪಿಎ ಸರ್ಕಾರದಲ್ಲಿ ಕೃಷಿಕ್ಷೇತ್ರಕ್ಕೆ ಸುಮಾರು .27 ಸಾವಿರ ಕೋಟಿ ಇದದ್ದನ್ನು ಸದ್ಯದ ಬಜೆಟ್‌ .20 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ಅಲ್ಲದೆ ಮಹಿಳೆಯರು ಕೈಗಾರಿಕೆ ತೆರೆಯಲು ಮಹಿಳಾ ಸಮ್ಮಾನ ಯೋಜನೆ, ಹೊಸ ಉದ್ಯೋಗ ಸೃಷ್ಟಿಗೆ ಸಾವಿರಾರು ಕೋಟಿ ಮೀಸಲು ಅದರಂತೆ ಪಿ.ಎಂ. ಆವಾಸ ಯೋಜನೆಗೆ .79 ಸಾವಿರ ಕೋಟಿ ಮೀಸಲಿಡಲಾಗಿದೆ. ಮುಖ್ಯವಾಗಿ ಹಲವಾರು ವರ್ಷಗಳ ಬೇಡಿಕೆಯಾದ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದ್ದಲ್ಲದೇ .5630 ಕೋಟಿ ಮೀಸಲಿಟ್ಟಿರುವುದು ಸ್ವಾಗತಾರ್ಹ ಎಂದಿದ್ದಾರೆ.

click me!