ನೆಲಕಚ್ಚಿದ ಕೈಗಾರಿಕೆ: ಉತ್ತೇಜನಕ್ಕೆ ಮೋದಿ ತಂತ್ರಗಾರಿಕೆ!

Suvarna News   | Asianet News
Published : Feb 01, 2020, 03:34 PM ISTUpdated : Feb 01, 2020, 05:05 PM IST
ನೆಲಕಚ್ಚಿದ ಕೈಗಾರಿಕೆ: ಉತ್ತೇಜನಕ್ಕೆ ಮೋದಿ ತಂತ್ರಗಾರಿಕೆ!

ಸಾರಾಂಶ

ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಳಿಸಿದ ನಿರ್ಮಲಾ ಸೀತಾರಾಮನ್| ಕೈಗಾರಿಕಾ ವಲಯದ ಉತ್ತೇಜನಕ್ಕೆ ಮೋದಿ ಸರ್ಕಾರದ ಕ್ರಮ| ಮೂಲ ಸೌಕರ್ಯ ಕ್ಷೇತ್ರದತ್ತ ಕೇಂದ್ರದ ಹೆಚ್ಚಿನ ಗಮನ| ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಬಂಪರ್ ಕೊಡುಗೆ| ಸ್ಟಾರ್ಟ್ ಅಪ್ ಕಂಪನಿಗಳಿಗೂ ಭರ್ಜರಿ ಕೊಡುಗೆ | ಮೂಲಸೌಕರ್ಯ ಅಭಿವೃದ್ಧಿಗೆ 22 ಸಾವಿರ ಕೋಟಿ ರೂ.|

ನವದೆಹಲಿ(ಫೆ.01): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಪ್ರಸಕ್ತ ಬಜೆಟ್‌ನಲ್ಲಿ ಹಲವು ಪ್ರಮುಖ ಅಂಶಗಳಿದ್ದು, ಪ್ರಮುಖವಾಗಿ ತೆರಿಗೆದಾರರಿಗೆ ವಿನಾಯ್ತಿ ಘೋಷಿಸಿರುವುದು ಕೇಂದ್ರ ಬಜೆಟ್‌ನ ಆಕರ್ಷಣೆಯಾಗಿದೆ.

ನೆಲಕಚ್ಚಿರುವ ಕೈಗಾರಿಕಾ ವಲಯವನ್ನು ಮೇಲೆತ್ತಲು ಈ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ಘೋಷಿಸಲಾಗಿದ್ದು, ಪ್ರಮುಖವಾಗಿ ಮೂಲ ಸೌಕರ್ಯ ಕ್ಷೇತ್ರದತ್ತ ಹೆಚ್ಚಿನ ಗಮನ ಹರಿಸಲಾಗಿದೆ.

ಕೇಂದ್ರ ಬಜೆಟ್ 2020: ಯಾವುದು ಅಗ್ಗ? ಯಾವುದು ದುಬಾರಿ: ಇಲ್ಲಿದೆ ಪಟ್ಟಿ

ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಬಂಪರ್ ಕೊಡುಗೆ ನೀಡಲಾಗಿದ್ದು, ಡೆವಲಪರ್ಸ್ ಕಂಪನಿಗಳಿಗೆ ಒಂದು ವರ್ಷ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಡೆವಲಪರ್ಸ್ ಗಳಿಸುವ ಲಾಭಕ್ಕೆ ತೆರಿಗೆ ಪಾವತಿಗೆ ವಿನಾಯ್ತಿ ನೀಡಲಾಗಿದ್ದು,
ವಸತಿಕ್ಷೇತ್ರದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ತೆರಿಗೆ ವಿನಾಯ್ತಿ ನೀಡಲಾಗಿದೆ ಎಂದು ನಿರ್ಮಲಾ ಸ್ಪಷ್ಟಪಡಿಸಿದ್ದಾರೆ.

ಸ್ಟಾರ್ಟ್ ಅಪ್ ಕಂಪನಿಗಳಿಗೂ ಭರ್ಜರಿ ಕೊಡುಗೆ ನೀಡಿರುವ ವಿತ್ತ ಸಚಿವೆ,  5 ವರ್ಷ ಸ್ಟಾರ್ಟ್ ಅಪ್ ಕಂಪನಿಗಳಿಗೆ ಯಾವುದೇ ತೆರಿಗೆ ಇಲ್ಲ ಎಂದು ಘೋಷಿಸಿದ್ದಾರೆ. ಸ್ಟಾರ್ಟ್ ಅಪ್ ಕಂಪನಿಗಳ ಉತ್ತೇಜನಕ್ಕೆ ಇದು ಕೇಂದ್ರದ ಕೊಡುಗೆ ಎಂದು ನಿರ್ಮಲಾ ಹೇಳಿದ್ದಾರೆ.

ತೆರಿಗೆದಾರರಿಗೆ ಬಿಗ್ ರಿಲೀಫ್ : ಇಲ್ಲಿದೆ ಟ್ಯಾಕ್ಸ್ ಕಡಿತದ ಫುಲ್ ಡಿಟೇಲ್ಸ್!

ಅದರಂತೆ ಮೂಲಸೌಕರ್ಯ ಅಭಿವೃದ್ಧಿಗೆ 22 ಸಾವಿರ ಕೋಟಿ ರೂ. ಅನುದಾನ ನೀಡಲಾಗಿದ್ದು, ಕೈಗಾರಿಕೆ ಕ್ಷೇತ್ರಗಳ ಅಭಿವೃದ್ಧಿಗಾಗಿ ಮೂಲಸೌಕರ್ಯಕ್ಕೆ ಆದ್ಯತೆ ನೀಡಲಾಗುವುದು ಎಂದು ನಿರ್ಮಲಾ ತಿಳಿಸಿದ್ದಾರೆ.

ಇನ್ನು ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೂ ಕೇಂದ್ರ ಸರ್ಕಾರ ಒತ್ತು ನೀಡಿದ್ದು,  MSMEs ಸಾಲ ವ್ಯವಸ್ಥೆಯನ್ನು ಇನ್ನೊಂದು ವರ್ಷ ವಿಸ್ತರಣೆ ಮಾಡುವಂತೆ ಆರ್‌ಬಿಐ ಗೆ ಮನವಿ ಮಾಡಲಾಗಿದೆ.

"

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!