ಬ್ಯಾಂಕ್‌ ಠೇವಣಿ ವಿಮೆ 1 ಲಕ್ಷದಿಂದ 5 ಲಕ್ಷ ರೂ.ಗೆ ಹೆಚ್ಚಳ!

By Suvarna News  |  First Published Feb 1, 2020, 3:01 PM IST

ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಳಿಸಿದ ನಿರ್ಮಲಾ ಸೀತಾರಾಮನ್| ಬ್ಯಾಂಕಿಂಗ್ ಕ್ಷೇತ್ರದ ಅಭಿವೃದ್ಧಿಗೆ ಒತ್ತು| ಬ್ಯಾಂಕ್ ಗಳಲ್ಲಿ ಠೇವಣಿದಾರರ ಹಣ ಸುರಕ್ಷಿತ| ಬ್ಯಾಂಕ್‌ಗಳಲ್ಲಿ ಠೇವಣಿದಾರರ ವಿಮೆ ಹಣ ಹೆಚ್ಚಳ| 1 ಲಕ್ಷ ರೂಪಾಯಿಯಿಂದ 5 ಲಕ್ಷ ರೂಗೆ ಹೆಚ್ಚಳ| ಸಹಕಾರ ಬ್ಯಾಂಕ್ಸ್ ಕ್ಷೇತ್ರದ ಅಭಿವೃದ್ಧಿಗೂ ಆದ್ಯತೆ|


ನವದೆಹಲಿ(ಫೆ.01): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಪ್ರಸಕ್ತ ಬಜೆಟ್‌ನಲ್ಲಿ ಹಲವು ಪ್ರಮುಖ ಅಂಶಗಳಿದ್ದು, ಪ್ರಮುಖವಾಗಿ ತೆರಿಗೆದಾರರಿಗೆ ವಿನಾಯ್ತಿ ಘೋಷಿಸಿರುವುದು ಕೇಂದ್ರ ಬಜೆಟ್‌ನ ಆಕರ್ಷಣೆಯಾಗಿದೆ.

ಇನ್ನು ಬ್ಯಾಂಕ್‌ಗಳಲ್ಲಿನ ಠೇವಣಿದಾರರ ಹಣ ಸುರಕ್ಷಿತವಾಗಿದೆ ಎಂದು ಹೇಳಿರುವ ನಿರ್ಮಲಾ, 3.50 ಲಕ್ಷ ಕೋಟಿ ರೂ. ಗಳನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಪುನರ್ಧನ ಯೋಜನೆಯಡಿ ಬಂಡವಾಳ ಒದಗಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು. 

Latest Videos

undefined

ಕೇಂದ್ರ ಬಜೆಟ್ 2020: ಯಾವುದು ಅಗ್ಗ? ಯಾವುದು ದುಬಾರಿ: ಇಲ್ಲಿದೆ ಪಟ್ಟಿ

ಬ್ಯಾಂಕ್‌ಗಳಲ್ಲಿ ಇರುವ ಠೇವಣಿ ವಿಮೆಯನ್ನು  1 ಲಕ್ಷದಿಂದ 5 ಲಕ್ಷ ರೂಗೆ ಹೆಚ್ಚಿಸಲಾಗಿದ್ದು, ಬ್ಯಾಂಕಿಂಗ್ ವ್ಯವಸ್ಥೆ ಸುಧಾರಣೆಗೆ ಸಾಕಷ್ಟು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ನಿರ್ಮಲಾ ಸದನಕ್ಕೆ ಮಾಹಿತಿ ನೀಡಿದರು. 

ಐಡಿಬಿಐ ಬ್ಯಾಂಕ್‌ಗೆ ಇನ್ನಷ್ಟು ಖಾಸಗಿ ಬಂಡವಾಳ ಹರಿದುಬರುವಂತೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದ್ದು, ಸಾರ್ವಜನಿಕ ನಿವೃತ್ತಿ ವೇತನ ವ್ಯವಸ್ಥೆ ಜಾರಿ ಮಾಡುವ ಘೋಷಣೆ ಮಾಡಲಾಗಿದೆ. 

LIC ಖಾಸಗೀಕರಣಕ್ಕೆ ಗ್ರೀನ್ ಸಿಗ್ನಲ್: ಏನಾಗಲಿದೆ ನಿಮ್ಮ ಇನ್ಸೂರೆನ್ಸ್ ಪಾಲಿಸಿ?

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಬ್ಯಾಂಕ್‌ಗಳ ಮೂಲಕ ಅಗತ್ಯ ಬಂಡವಾಳ ಒದಗಿಸಲು ಕ್ರಮ ಕೈಗೊಳ್ಳಲಾಗಿದ್ದು, ಸಾಲ ಮರುಹೊಂದಾಣಿಕೆಯಿಂದ 5 ಲಕ್ಷಕ್ಕೂ ಹೆಚ್ಚು ಉದ್ಯಮಿಗಳಿಗೆ ಅನುಕೂಲವಾಗಿದೆ. 

ಈ ಯೋಜನೆಯನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಲು ಸರ್ಕಾರ ಆರ್‌ಬಿಐಗೆ ಮನವಿ ಮಾಡಿದ್ದು, ಹಲವು ಮಧ್ಯಮ ಗಾತ್ರದ ಕಂಪನಿಗಳು ದೇಶೀಯ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿವೆ ಎಂದು ನಿರ್ಮಲಾ ತಿಳಿಸಿದರು.

ತೆರಿಗೆದಾರರಿಗೆ ಬಿಗ್ ರಿಲೀಫ್ : ಇಲ್ಲಿದೆ ಟ್ಯಾಕ್ಸ್ ಕಡಿತದ ಫುಲ್ ಡಿಟೇಲ್ಸ್!

ಬಾಂಡ್‌ (ಸಾಲಪತ್ರ) ವ್ಯವಹಾರ ವಿಸ್ತರಣೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದ್ದು, ಸರ್ಕಾರದ ಹಲವು ರೀತಿಯ ಸಾಲಪತ್ರಗಳಲ್ಲಿ ವಿದೇಶಿ ಹೂಡಿಕೆಗೂ ಅವಕಾಶ ಮಾಡಿಕೊಡುವುದಾಗಿ ನಿರ್ಮಲಾ ಘೋಷಿಸಿದರು. ಸರ್ಕಾರದ ಸಾಲಪತ್ರಗಳಿಗಾಗಿ ಬಂಡವಾಳ ಸಂಚಯಕ್ಕಾಗಿ ರೂಪಿಸಿದ ‘ಭಾರತ್ ಬಾಂಡ್’ ಎಟಿಎಫ್‌ನ್ನು ನಿರ್ಮಲಾ  ಉಲ್ಲೇಖಿಸಿದರು.

click me!