ಡಿಗ್ರಿ ಮೂಲಕ ಉದ್ಯೋಗ ಗಿಟ್ಟಿಸುವ ಕಾಲ ಹೋಯ್ತು, ಜಾಬ್ ಹುಡುಕುವವರಿಗೆ ನಿಖಿಲ್ ಕಾಮತ್ ಸಲಹೆ

Published : Jun 26, 2025, 03:44 PM ISTUpdated : Jun 27, 2025, 02:56 PM IST
Zerodha co-founder Nikhil Kamath'

ಸಾರಾಂಶ

ನಾಲ್ಕು ವರ್ಷ ಡಿಗ್ರಿ ಪಡೆದು ಉದ್ಯೋಗ ಪಡೆದುಕೊಳ್ಳುವ ಕಾಲ ಹೋಯಿತು ಎಂದು ಉದ್ಯಮಿ ನಿಖಿಲ್ ಕಾಮತ್ ಹೇಳಿದ್ದಾರೆ. 2030ರ ವೇಳೆ 92 ಮಿಲಿಯನ್ ಉದ್ಯೋಗ ಕಣ್ಮರೆಯಾಗುತ್ತಿದೆ. ಇದೇ ವೇಳೆ 170 ಮಿಲಿಯನ್ ಹೊಸ ಉದ್ಯೋಗ ಸೃಷ್ಟಿಯಾಗುತ್ತಿದೆ.ಈ ಉದ್ಯೋಗ ಗಿಟ್ಟಿಸಿಕೊಳ್ಳಲು ಏನು ಮಾಡಬೇಕು? ನಿಖಿಲ್ ಸಲಹೆ ಏನು?

ಬೆಂಗಳೂರು(ಜೂ.26) ಝಿರೋಧಾ ಸಹ ಸಂಸ್ಥಾಪಕ, ಯುವ ಉದ್ಯಮಿ ನಿಖಿಲ್ ಕಾಮತ್ ಇದೀಗ ವಿದ್ಯಾರ್ಥಿಳಿಗೆ ಮಹತ್ವದ ಸಲಹ ನೀಡಿದ್ದಾರೆ. ನಾಲ್ಕು ವರ್ಷ ಡಿಗ್ರಿ ಅಥವಾ ಇನ್ಯಾವುದೇ ಪದವಿ ಪಡೆದು ಉದ್ಯೋಗ ಅರಸುತ್ತಾ ಫೀಲ್ಡಿಗೆ ಬರುವಾಗ ಮಾರುಕಟ್ಟೆಯಲ್ಲಿ ನೀವು ಪಡೆದ ಡಿಗ್ರಿಗೆ ಉದ್ಯೋಗವೇ ಇರುವುದಿಲ್ಲ. ಕಾರಣ 2030ರ ವೇಳೆಗೆ 92 ಮಿಲಿಯನ್ ಉದ್ಯೋಗ ಕಣ್ಮರೆಯಾಗಲಿದೆ. 78 ಮಿಲಿಯನ್ ಉದ್ಯೋಗಗಳು ಅಸ್ಥಿರತೆ ಎದುರಿಸಲಿದೆ ಎಂದು ನಿಖಿಲ್ ಕಾಮತ್ ಹೇಳಿದ್ದಾರೆ. ಹಾಗಂತ ಆತಂಕ ಪಡುವ ಅಗತ್ಯವಿಲ್ಲ. 2023ರ ವೇಳೆ 170 ಮಿಲಿಯನ್ ಹೊಸ ಉದ್ಯೋಗ ಸೃಷ್ಟಿಯಾಗಲಿದೆ.ಈ ಉದ್ಯೋಗ ಗಿಟ್ಟಿಸಿಕೊಳ್ಳಲು ಡಿಗ್ರಿ ಅರ್ಹತೆಯಾಗುವುದಿಲ್ಲ ಎಂದು ನಿಖಿಲ್ ಕಾಮತ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

2030ರ ವೇಳೆ ಪದವಿ ವಿದ್ಯಾಭ್ಯಾಸ ಔಟ್‌ಡೇಟೆಡ್

2030ರ ವೇಳೆ ನಾಲ್ಕು, ಮೂರು ವರ್ಷದ ಡಿಗ್ರಿ ಕೋರ್ಸ್‌ಗಳು ಅರ್ಥ ಕಳೆದುಕೊಳ್ಳಲಿದೆ. ಕಾರಣ ಈ ಡಿಗ್ರಿ ಕೌಶಲ್ಯ ಅಥಾ ಸರ್ಟಿಫಿಕೇಟ್ ಔಟ್‌ಡೇಟೆಡ್ ಆಗಲಿದೆ. ಡಿಗ್ರಿ ಪಡೆದು ಕೆಲಸಕ್ಕಾಗಿ ಅಲೆದರೆ ಒಂದು ಕೆಲಸವೂ ಸಿಗುವುದಿಲ್ಲ. ಕಾರಣ 2030ರ ವೇಳೆಗೆ ಉದ್ಯೋಗ ಪಡೆಯುವ ಸ್ವರೂಪವೇ ಬದಲಾಗಲಿದೆ ಎಂದು ನಿಖಿಲ್ ಕಾಮತ್ ಹೇಳಿದ್ದಾರೆ. ನಿಖಿಲ್ ಕಾಮತ್ WEF ಅಧ್ಯಯನ ವರದಿ ಉಲ್ಲೇಖಿಸಿ ಈ ಮಾತು ಹೇಳಿದ್ದಾರೆ.

 

 

ಉದ್ಯೋಗ ಪಡೆಯಲು ಕೌಶಲ್ಯ, ಪ್ರತಿಭೆ ಮಾನದಂಡ

ಶಾಲೆ, ಕಾಲೇಜುಗಳಲ್ಲಿ ಕಲಿಯುವ ಕೋರ್ಸ್ ಒಬ್ಬ ವ್ಯಕ್ತಿಯನ್ನು ಶಿಕ್ಷಿತ ಎಂಬ ಕಿರೀಟ ನೀಡಲಿದೆ. ಆದರೆ ಇದು ಉಧ್ಯೋಗ ನೀಡಲು ವಿಫಲವಾಲಿದೆ. ಕಾರಣ ಮುಂದಿನ ಆಯಾ ಕ್ಷೇತ್ರದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಪ್ರಮುಖವಾಗಿ ಕೌಶಲ್ಯ ಹಾಗೂ ಪ್ರತಿಭೆ ಮುಖ್ಯ. ಟಾಸ್ಕ್ ನೀಡಿದರೆ ಅದನ್ನು ಪೂರ್ಣಗೊಳಿಸಲು ಸಾಮರ್ಥ್ಯ, ಎದುರಾಗುವ ಸವಾಲು ನಿವಾರಿಸುವ ಸಾಮರ್ಥ್ಯವಿರಬೇಕು. ಇದು ಶಾಲಾ ಕಾಲೇಜುಗಳ ಪಠ್ಯಗಳಿಂದ ಸಾಧ್ಯವಿಲ್ಲ. ಕಾರಣ 2030ರ ವೇಳೆ ತಂತ್ರಜ್ಞಾನದಲ್ಲಿ ಆಗುವ ಬದಲಾವಣೆ, ಉದ್ಯೋಗ ಕ್ಷೇತ್ರದ ಬೇಡಿಕೆಯನ್ನು ಬದಲಿಸಲಿದೆ ಎಂದು ನಿಖಿಲ್ ಕಾಮತ್ WEF ಅಧ್ಯಯನ ವರದಿ ಉಲ್ಲೇಖಿಸಿ ಹೇಳಿದ್ದಾರೆ.

2030ರ ವೇಳೆ ಶೇ.34ರಷ್ಟು ಕೆಲಸಕ್ಕೆ ಟೆಕ್

ಆರ್ಟಿಫೀಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನ ಇದೀಗ ಎಲ್ಲಾ ಕ್ಷೇತ್ರದಲ್ಲಿ ಬಳಕೆಯಾಗುತ್ತಿದೆ. ಈಗಾಗಲೇ ಹಲವರು ಎಐ ಕಾರಣದಿಂದ ಉದ್ಯೋಗ ಕಳೆದುಕೊಂಡಿದ್ದಾರೆ. 2030ರ ವೇಳೆ ಶೇಕಡಾ 34ರಷ್ಟು ಕೆಲಸವನ್ನು ತಂತ್ರಜ್ಞಾನ ಮಾಡಲಿದೆ. ಶೇಕಡಾ 33 ರಷ್ಟು ಉದ್ಯೋಗಕ್ಕೆ ಟೆಕ್ ಹಾಗೂ ಮಾನವ ಸಂಪನ್ಮೂಲ ಬಳಕೆಯಾಗಲಿದೆ. ಆಂದರೆ 10 ಜನ ಮಾಡುವ ಕೆಲಸವನ್ನು ತಂತ್ರಜ್ಞಾನದಿಂದ ಒಬ್ಬ ಮಾಡಲು ಸಾಧ್ಯವಿದೆ. ಇಲ್ಲೂ ಕೂಡ ಕೆಲಸ ಕಡಿತವಾಗಲಿದೆ ಎಂದು WEF ಅಧ್ಯಯನ ವರದಿ ಹೇಳಿದೆ.

2023ರ ವೇಳೆ ಯಾವ ಕೆಲಸಕ್ಕೆ ಬೇಡಿಕೆ?

2030ರ ವೇಳೆಗೆ ಕಾರ್ಮಿಕರು, ಡ್ರೈವರ್, ಪ್ಲಂಬರ್ ಸೇರಿದಂತೆ ಹಲವು ಫಿಸಿಕಲ್ ಉದ್ಯೋಗಗಳಿಗೆ ಭಾರಿ ಬೇಡಿಕೆ ಬರಲಿದೆ ಅನ್ನೋ ಮಾತುಗಳು ಕಳೆದ ಹಲವು ದಿನಗಳಿಂದ ಕೇಳಿ ಬರುತ್ತಿದೆ. ಇದೀಗ WEF ಅಧ್ಯಯನ ವರದಿ ಪ್ರಕಾರ ಯಾವ ಕೆಲಸಗಳಿಗೆ ಬೇಡಿಕೆ ಅನ್ನೋ ಮಾಹಿತಿಯನ್ನು ನಿಖಿಲ್ ಕಾಮತ್ ಹೇಳಿದ್ದಾರೆ. ಎಐ, ಬಿಗ್ ಡೇಟಾ, ಸೈಬರ್ ಸೆಕ್ಯೂರಿಟಿ, ಕ್ರಿಯೇಟಿವ್ ಥಿಂಕಿಂಗ್, ಪರಿಸರ ಸರಂಕ್ಷಣೆ ಸೇರಿದಂತೆ ಕೆಲ ಕ್ಷೇತ್ರಗಳಲ್ಲಿ ಉದ್ಯೋಗ ಬೇಡಿಕೆ ಭಾರಿ ಹೆಚ್ಚಾಗಲಿದೆ ಎಂದಿದ್ದಾರೆ. ಹೀಗಾಗಿ ನೀವು ದಶಕಗಳ ಹಿಂದೆ ಏನೋ ಕಲಿತಿದ್ದೀರಿ, ಅದೇ ಕೌಶಲ್ಯದಲ್ಲಿ ಕೆಲಸ ಮಾಡುತ್ತಿದ್ದೀರಿ ಎಂದರೆ 2030ರ ವೇಳೆಗೆ ನೀವು ಅಪ್‌ಗ್ರೇಡ್ ಆಗದಿದ್ದರೆ ಕೆಲಸ ಕಳದುಕೊಳ್ಳುತ್ತೀರಿ ಎಂದು ನಿಖಿಲ್ ಕಾಮತ್ ಸೂಚಿಸಿದ್ದಾರೆ.

ಕಾರ್ಮಿಕ ವಲಯದಲ್ಲಿ ಭಾರಿ ಬದಲಾವಣೆಗಳು ಆಗುತ್ತಿದೆ. ಇದು ಉದ್ಯೋಗಗಳಿಗೆ ಹೊಸ ಬೆಳಕು ಚೆಲ್ಲಲಿದೆ. ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಕಾರಣದಿಂದ ಹಲವು ಉದ್ಯೋಗ ಕಡಿತಗೊಂಡರೆ ದುಪ್ಪಟ್ಟು ಉದ್ಯೋಗ ಸೃಷ್ಟಿಯಾಗಲಿದೆ. ಹೀಗೆ ಸೃಷ್ಟಿಯಾಗುವ ಉದ್ಯೋಗಕ್ಕೆ ನಿಮ್ಮಲ್ಲಿ ಕೌಶಲ್ಯವಿರಬೇಕು. ಕೌಶಲ್ಯವಿಲ್ಲದಿದ್ದರೆ ಅಥವಾ ಅಪ್‌ಗ್ರೇಡ್ ಆಗದಿದ್ದರೆ ಮಾರುಕಟ್ಟೆಯಲ್ಲಿ ನೀವು ಅಪ್ರಸ್ತುತವಾಗುತ್ತೀರಿ ಎಂದು ನಿಖಿಲ್ ಕಾಮತ್ ಎಚ್ಚರಿಸಿದ್ದಾರೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!