ಗೌರಿಬಿದನೂರಿನಲ್ಲಿ 288 ಕೋಟಿ ರೂ. ವೆಚ್ಚದಲ್ಲಿ ನಿಫ್ಕೊ ಕಂಪನಿ ಘಟಕ ಸ್ಥಾಪನೆ: ಸ್ಥಳೀಯರ ಉದ್ಯೋಗಕ್ಕೆ ಆದ್ಯತೆ

Published : Nov 29, 2023, 08:57 PM IST
ಗೌರಿಬಿದನೂರಿನಲ್ಲಿ 288 ಕೋಟಿ ರೂ. ವೆಚ್ಚದಲ್ಲಿ ನಿಫ್ಕೊ ಕಂಪನಿ ಘಟಕ ಸ್ಥಾಪನೆ: ಸ್ಥಳೀಯರ ಉದ್ಯೋಗಕ್ಕೆ ಆದ್ಯತೆ

ಸಾರಾಂಶ

* ಕರ್ನಾಟಕದಲ್ಲಿ 288 ಕೋಟಿ ಹೂಡಿಕೆಗೆ  ರಾಜ್ಯ ಸರ್ಕಾರದ ಜೊತೆ ನಿಫ್ಕೊ ಕಂಪನಿ ಒಪ್ಪಂದ * ಗೌರಿಬಿದನೂರಿನಲ್ಲಿ ತಯಾರಿಕಾ ಘಟಕ ಸ್ಥಾಪನೆ *  400 ಜನರಿಗೆ ಉದ್ಯೋಗ ಅವಕಾಶಗಳು. ಶೇ 65ರಷ್ಟು ಉದ್ಯೋಗಗಳು ಮಹಿಳೆಯರಿಗೆ  

ಬೆಂಗಳೂರು (ನ.29): ರಾಜ್ಯದಲ್ಲಿ ವಾಹನ ಪ್ಲಾಸ್ಟಿಕ್ ಬಿಡಿಭಾಗ ತಯಾರಿಕಾ ಘಟಕ ಸ್ಥಾಪಿಸಲು ಕೊರಿಯಾ ಮೂಲದ ನಿಫ್ಕೊ ಕಂಪನಿಯ ಅಂಗಸಂಸ್ಥೆಯಾಗಿರುವ ನಿಫ್ಕೊ ಸೌತ್‌ ಇಂಡಿಯಾ ಮ್ಯಾನ್ಯುಫ್ಯಾಕ್ಚರಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಜೊತೆ ಕರ್ನಾಟಕ ಸರ್ಕಾರವು ಬುಧವಾರ ಒಡಂಬಡಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಿದೆ. 

ಬೃಹತ್ ಮತ್ತು ಮಧ್ಯಮ ಕೈಗಾರಿಕೆ  ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ  ಎಂ.ಬಿ.ಪಾಟೀಲ ಅವರು, ನಿಫ್ಕೊ ಸೌತ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷ  ಶ್ರೀ ಹ್ಯುನ್-ಡಾನ್ ಚೋಯ್ ಅವರ ಜೊತೆ ವಿಸ್ತೃತವಾಗಿ ಚರ್ಚಿಸಿದರು. ಕಂಪನಿಗೆ ರಾಜ್ಯ ಸರ್ಕಾರವು ಕೊಡಮಾಡಲಿರುವ ಸೌಲಭ್ಯಗಳು ಮತ್ತು ಉತ್ತೇಜನೆಗಳ ಬಗ್ಗೆ ಸಚಿವರು ಚೋಯ್‌ ಅವರಿಗೆ ವಿವರಿಸಿದರು. ತದನಂತರ ಸಚಿವರ ಸಮ್ಮುಖದಲ್ಲಿ ‘ಎಂಒಯು’ಗೆ ಸಹಿ ಹಾಕಲಾಯಿತು.

ಬೆಂಗಳೂರು ಟೆಕ್ ಸಮ್ಮಿಟ್: ಬದಿಗೆ ಸರಿದ ತಂತ್ರಜ್ಞಾನ, ಮೆರೆದ ರಾಜಕಾರಣಿಗಳು..!

ಈ  ಒಪ್ಪಂದದ ಪ್ರಕಾರ ನಿಫ್ಕೊ ಸೌತ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಕಂಪನಿಯು, ವಾಹನಗಳ ಪ್ಲಾಸ್ಟಿಕ್ ಬಿಡಿಭಾಗಗಳನ್ನು ತಯಾರಿಸುವ ಹೊಸ ಘಟಕವನ್ನು ಗೌರಿಬಿದನೂರಿನಲ್ಲಿ ಸ್ಥಾಪಿಸಲು ₹ 288 ಕೋಟಿ ಹೂಡಿಕೆ ಮಾಡಲಿದೆ. ಈ ತಯಾರಿಕಾ ಘಟಕದಲ್ಲಿ 400 ಜನರಿಗೆ ಉದ್ಯೋಗ ಅವಕಾಶಗಳು ಲಭ್ಯ ಇರಲಿವೆ. ಇದರಲ್ಲಿ ಶೇ 65ರಷ್ಟು ಉದ್ಯೋಗಗಳು ಮಹಿಳೆಯರಿಗೆ ದೊರೆಯಲಿವೆ. ಈ ಯೋಜನೆಯು  ಐದು ವರ್ಷಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ.  ಸಚಿವರ ಸಮ್ಮುಖದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್ ಮತ್ತು ನಿಫ್ಕೊ ಸೌತ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷ  ಹ್ಯುನ್-ಡಾನ್ ಚೋಯ್ ಅವರು  ಒಪ್ಪಂದಕ್ಕೆ ಸಹಿ ಹಾಕಿ, ದಾಖಲೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ಈ ವೇಲೆ ಕೈಗಾರಿಕೆ ಇಲಾಖೆಯ ಆಯುಕ್ತರಾದ  ಗುಂಜನ್ ಕೃಷ್ಣ ಇದ್ದರು.

ಪುತ್ತೂರು ಬಸ್‌ ನಿಲ್ದಾಣದಲ್ಲಿ ಹಾಸನದ ಮಹಿಳೆ ಮೇಲೆ ಅತ್ಯಾಚಾರ: ನೀರಿನ ಬಾಟಲಿಗೆ ಮದ್ಯ ಮಿಶ್ರಣ ಮಾಡಿ ಕುಡಿಸಿ ಕೃತ್ಯ

ರಾಜ್ಯದಲ್ಲಿ ಸದ್ಯಕ್ಕೆ ಚಾಲ್ತಿಯಲ್ಲಿರುವ ನೀತಿ / ನಿಯಮಗಳು ಮತ್ತು ನಿಬಂಧನೆಗಳ ಅನುಸಾರ  ಸಂಬಂಧಪಟ್ಟ ಇಲಾಖೆಗಳಿಂದ ಅಗತ್ಯ ಅನುಮತಿ  / ನೋಂದಣಿ   ಪಡೆಯಲು ಕರ್ನಾಟಕ ಸರ್ಕಾರವು ನಿಫ್ಕೊ ಸೌತ್‌ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್‌ ಕಂಪನಿಗೆ ಅಗತ್ಯ ನೆರವು ಕಲ್ಪಿಸಲಿದೆ. ಹುಂಡೈ ಮೋಟರ್‌ ಇಂಡಿಯಾ, ಕಿಯಾ ಮೋಟರ್ಸ್‌, ನಿಸಾನ್‌, ಫೋರ್ಡ್‌ ಮತ್ತು ಟೊಯೊಟಾ ಮುಂತಾದವು ನಿಫ್ಕೊದ ಭಾರತದಲ್ಲಿನ ಪ್ರಮುಖ ಗ್ರಾಹಕ ಕಂಪನಿಗಳಾಗಿವೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!