ಡಿಸೆಂಬರ್ ತಿಂಗಳಲ್ಲಿ ಈ ನಿಯಮಗಳಲ್ಲಿ ಬದಲಾವಣೆ; ಜೇಬಿನ ಮೇಲೆ ಹೆಚ್ಚಲಿದೆಯಾ ಹೊರೆ?

By Suvarna News  |  First Published Nov 30, 2022, 2:33 PM IST

ಪ್ರತಿ ತಿಂಗಳ ಪ್ರಾರಂಭದಲ್ಲಿ ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಒಂದಿಷ್ಟು ಬದಲಾವಣೆಗಳಾಗೋದು ಸಹಜ. ಡಿಸೆಂಬರ್ ತಿಂಗಳು ಕೂಡ ಇದಕ್ಕೆ ಹೊರತಾಗಿಲ್ಲ.ಹಾಗಿದ್ರೆ ಡಿಸೆಂಬರ್ ತಿಂಗಳಲ್ಲಿ ಯಾವೆಲ್ಲ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ? ಇಲ್ಲಿದೆ ಮಾಹಿತಿ. 
 


Business Desk:ನಾಳೆಯಿಂದ ಡಿಸೆಂಬರ್ ತಿಂಗಳು ಪ್ರಾರಂಭವಾಗಲಿದೆ. ಪ್ರತಿ ಹೊಸ ತಿಂಗಳು ಆರಂಭವಾಗುವಾಗ ಕೆಲವು ನಿಯಮಗಳಲ್ಲಿ ಬದಲಾವಣೆಯಾಗೋದು ಸಹಜ. ಅದ್ರಂತೆ ಡಿಸೆಂಬರ್ ತಿಂಗಳಲ್ಲಿ ಕೂಡ ಕೆಲವು ಮಹತ್ವದ ಬದಲಾವಣೆಗಳು ಆಗಲಿದ್ದು, ಅವು ನೇರವಾಗಿ ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರಲಿವೆ. ಡಿಸೆಂಬರ್ ಈ ವರ್ಷದ ಕೊನೆಯ ತಿಂಗಳು ಕೂಡ ಹೌದು. ಹೀಗಾಗಿ ಕೆಲವು ಮುಖ್ಯ ಬದಲಾವಣೆಗಳು ಆಗಲಿದ್ದು, ಅವುಗಳನ್ನು ಗಮನಿಸೋದು ಅಗತ್ಯ. ಏಕೆಂದರೆ ಆರ್ಥಿಕ ಬದಲಾವಣೆಗಳು ನಮ್ಮ ವೆಚ್ಚ-ಉಳಿತಾಯದ ಮೇಲೆ ನೇರ ಪರಿಣಾಮ ಬೀರುತ್ತವೆ.  ಕೆಲವು ಆರ್ಥಿಕ ಬದಲಾವಣೆಗಳು  ನಮಗೆ ಲಾಭ ಉಂಟು ಮಾಡಿದರೆ, ಇನ್ನೂ ಕೆಲವು ನಷ್ಟ ಉಂಟು ಮಾಡಬಲ್ಲವು. ಪ್ರತಿ ಹೊಸ ತಿಂಗಳಿನ ಪ್ರಾರಂಭದಲ್ಲಿ ಎಲ್ ಪಿಜಿ ದರದಲ್ಲಿ ವ್ಯತ್ಯಯವಾಗೋದು ಸಹಜ. ಹೀಗಾಗಿ ಡಿಸೆಂಬರ್ 1ರಂದು ಕೂಡ ಎಲ್ ಪಿಜಿ ದರದಲ್ಲಿ ಬದಲಾವಣೆ ಆಗಲಿದೆ. ಇನ್ನು ಡಿಸೆಂಬರ್ ತಿಂಗಳಲ್ಲಿ ಚಳಿಗಾಲ ಪ್ರಾರಂಭವಾಗುವ ಕಾರಣ ರೈಲಿನ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಲಿದೆ. ಪಿಂಚಣಿದಾರರು ನವೆಂಬರ್ 30ರೊಳಗೆ ಜೀವನಪ್ರಮಾಣ ಪತ್ರ ಸಲ್ಲಿಕೆ ಮಾಡದಿದ್ರೆ ಡಿಸೆಂಬರ್ ತಿಂಗಳಿಂದ ಪಿಂಚಣಿ ಸ್ಥಗಿತಗೊಳ್ಳಲಿದೆ. ಹಾಗಾದ್ರೆ ಡಿಸೆಂಬರ್ ತಿಂಗಳಲ್ಲಿ ಯಾವೆಲ್ಲ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ? ಇಲ್ಲಿದೆ ಮಾಹಿತಿ.

ಜೀವನ ಪ್ರಮಾಣಪತ್ರ ಸಲ್ಲಿಕೆ 
ಪಿಂಚಣಿ ಪಡೆಯೋರು ಪ್ರತಿ ವರ್ಷ ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡೋದು ಕಡ್ಡಾಯ. ಈ ವರ್ಷದ ಜೀವನ ಪ್ರಮಾಣ ಪತ್ರ ಸಲ್ಲಿಕೆಗೆ 2022ರ ನವೆಂಬರ್ 30 ಅಂತಿಮ ದಿನಾಂಕ. ಹೀಗಾಗಿ ಇಂದು ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡದೇ ಹೋದ್ರೆ ಮುಂದೆ ಈ ಕೆಲಸ ಮಾಡಲು ಅವಕಾಶವಿಲ್ಲ. ಅಲ್ಲದೆ, ಪಿಂಚಣಿ ಕೂಡ ಸ್ಥಗಿತಗೊಳ್ಳಲಿದೆ.

Tap to resize

Latest Videos

Digital Rupee: ಡಿ.1 ರಿಂದ ಪ್ರಾಯೋಗಿಕವಾಗಿ ರಿಟೇಲ್‌ ಡಿಜಿಟಲ್‌ ರೂಪಾಯಿ ಆರಂಭ: ಆರ್‌ಬಿಐ ಘೋಷಣೆ!

ರೈಲ್ವೆ ವೇಳಾಪಟ್ಟಿಯಲ್ಲಿ ಬದಲಾವಣೆ
ಡಿಸೆಂಬರ್ ತಿಂಗಳಲ್ಲಿ ಚಳಿ ಹಾಗೂ ಮಂಜು ಹೆಚ್ಚಿರುವ ಕಾರಣ ಅನೇಕ ರೈಲುಗಳ ಸಮಯದಲ್ಲಿ ಬದಲಾವಣೆಯಾಗಲಿದೆ. ಅನೇಕ ರೈಲುಗಳು ಕೂಡ ರದ್ದುಗೊಂಡಿವೆ. ಇಂಥ ಪರಿಸ್ಥಿತಿಯಲ್ಲಿ ಸೂಕ್ತ ಯೋಜನೆ ರೂಪಿಸಿ ಪ್ರಯಾಣ ಮಾಡೋದು ಉತ್ತಮ.

ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ವ್ಯತ್ಯಯ
ಪ್ರತಿ ತಿಂಗಳ ಪ್ರಾರಂಭದಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯಾಗುತ್ತದೆ. ತಿಂಗಳ ಮೊದಲ ದಿನ ತೈಲ ಕಂಪನಿಗಳು ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ ಮಾಡುತ್ತವೆ. ಹೀಗಾಗಿ ಸಿಲಿಂಡರ್ ದರದಲ್ಲಿ ಹೆಚ್ಚಳವಾದ್ರೆ ಅದು ನಮ್ಮ ಜೇಬಿನ ಮೇಲೆ ಪರಿಣಾಮ ಬೀರಲಿದೆ. ಇದರೊಂದಿಗೆ ಗ್ಯಾಸ್ ಸಿಲಿಂಡರ್ ಹೊಸ ದರಗಳು ಕೂಡ ಬಿಡುಗಡೆಯಾಗಲಿವೆ. ಕಳೆದ ತಿಂಗಳು ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ದರವನ್ನು ಕಂಪನಿಗಳು ಕಡಿತಗೊಳಿಸಿವೆ.

ಬ್ಯಾಂಕುಗಳಿಗೆ 13 ದಿನಗಳ ಕಾಲ ರಜೆ
ಡಿಸೆಂಬರ್ ತಿಂಗಳಲ್ಲಿ ಬ್ಯಾಂಕುಗಳಿಗೆ 13 ದಿನಗಳ ಕಾಲ ರಜೆ ಇರಲಿದೆ. ಆದರೆ, ಎಟಿಎಂ ಬ್ಯಾಂಕಿಂಗ್, ಆನ್ ಲೈನ್ ವಹಿವಾಟುಗಳು ಎಂದಿನಂತೆ ನಡೆಯಲಿವೆ. ಆದಕಾರಣ ಡಿಸೆಂಬರ್ ನಲ್ಲಿ ನೀವು ಬ್ಯಾಂಕಿಗೆ ಭೇಟಿ ನೀಡುವ ಮುನ್ನ ಯಾವೆಲ್ಲ ದಿನ ರಜೆಯಿದೆ ಎಂದು ನೋಡಿಕೊಂಡು ಹೋಗೋದು ಉತ್ತಮ. 

ಎಲ್ಐಸಿಯ ಈ ಯೋಜನೆಯಲ್ಲಿ ದಿನಕ್ಕೆ ಕೇವಲ 150 ರೂ. ಪ್ರೀಮಿಯಂ ಪಾವತಿಸಿದ್ರೆ ಸಾಕು, ನಿಮ್ಮ ಮಕ್ಕಳ ಭವಿಷ್ಯ ಸುರಕ್ಷಿತ!

ಎಟಿಎಂನಿಂದ ಹಣ ಡ್ರಾ ಮಾಡೋ ನಿಯಮ ಬದಲು
ಡಿಸೆಂಬರ್ ತಿಂಗಳಲ್ಲಿ ಎಟಿಎಂನಿಂದ ಹಣ ವಿತ್ ಡ್ರಾ ನಿಯಮದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. ಕೆಲವು ವರದಿಗಳ ಪ್ರಕಾರ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ಡಿಸೆಂಬರ್ ನಲ್ಲಿ ಎಟಿಎಂನಿಂದ ಹಣ ವಿತ್ ಡ್ರಾ ಮಾಡುವ ಪ್ರಕ್ರಿಯೆಯಲ್ಲಿ ಬದಲಾವಣೆ ತರುವ ಸಾಧ್ಯತೆಯಿದೆ. ವರದಿಗಳ ಪ್ರಕಾರ ಡಿಸೆಂಬರ್ ನಲ್ಲಿ ಎಟಿಎಂನಲ್ಲಿ ಕಾರ್ಡ್ ಬಳಸುತ್ತಿದ್ದಂತೆ ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ. ಇದನ್ನು ಎಟಿಎಂ ಸ್ಕ್ರೀನ್ ನಲ್ಲಿ ನೀಡಿರುವ ಸ್ಥಳದಲ್ಲಿ ಭರ್ತಿ ಮಾಡಿದ ಬಳಿಕವೇ ನಗದು ಸಿಗಲಿದೆ.
 

click me!