SBI ಎಟಿಎಂಗೆ ತೆರಳೋವಾಗ ತಪ್ಪದೆ ಮೊಬೈಲ್ ಕೊಂಡುಹೋಗಿ. ಏಕೆಂದ್ರೆ 10 ಸಾವಿರ ರೂ.ಗಿಂತ ಹೆಚ್ಚು ಹಣ ಡ್ರಾ ಮಾಡಲು ಈ ಹಿಂದೆಯೇ OTP ಕಡ್ಡಾಯ ಮಾಡಲಾಗಿದೆ. ಆದ್ರೆ ಕೆಲವು ಗ್ರಾಹಕರಿಗೆ ಈ ಬಗ್ಗೆ ಮಾಹಿತಿಯಿಲ್ಲದೆ ಹಣ ಡ್ರಾ ಮಾಡಲು ತೊಂದರೆ ಅನುಭವಿಸುತ್ತಿದ್ದಾರೆ.
ಈಗ ಮೊಬೈಲ್ ಇಲ್ಲದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಎಟಿಎಂ (ATM) ಕೇಂದ್ರಗಳಿಗೆ ಭೇಟಿ ನೀಡಿದ್ರೆ ಹಣ ವಿತ್ ಡ್ರಾ ಮಾಡಲು ಸಾಧ್ಯವಾಗೋದಿಲ್ಲ. ಎಟಿಎಂನಿಂದ ಹಣ ಹಿಂಪಡೆಯೋ (withdraw) ನಿಯಮಗಳಲ್ಲಿ SBI ಬದಲಾವಣೆ ಮಾಡಿದ್ದು,ಹೊಸ ನಿಯಮಗಳನ್ನುಜಾರಿಗೊಳಿಸಿದೆ. ಇದರ ಅನ್ವಯ ಇನ್ನು ಮುಂದೆ SBI ಎಟಿಎಂನಿಂದ ಹಣ ಪಡೆಯಲು ಒನ್ ಟೈಮ್ ಪಾಸ್ ವರ್ಡ್ (OTP) ಅಗತ್ಯ. ಗ್ರಾಹಕರು ಎಟಿಎಂ ಬಳಸೋ ಸಮಯದಲ್ಲಿಅವರ ಮೊಬೈಲ್ ಗೆ ಒಟಿಪಿ ಕಳುಹಿಸಲಾಗುತ್ತದೆ. ಅದನ್ನು ನಮೂದಿಸಿದ ಬಳಿಕವಷ್ಟೇ ಹಣ ಸಿಗುತ್ತದೆ. ಆದ್ರೆ ಈ ನಿಯಮ 10 ಸಾವಿರ ರೂ.ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಹಣ ವಿತ್ ಡ್ರಾ ಮಾಡಲು ಮಾತ್ರ ಅನ್ವಯಿಸುತ್ತದೆ. ಆದ್ರೆ ಕೆಲವು ಗ್ರಾಹಕರಿಗೆ ಈ ಬಗ್ಗೆ ಮಾಹಿತಿಯಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನೂ ಕೆಲವರು ಹಣ ವಿತ್ ಡ್ರಾ ಮಾಡಲು ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದಾರೆ. OTP ಬರುತ್ತಿಲ್ಲ ಎಂಬ ದೂರನ್ನು ಕೆಲವು ಗ್ರಾಹಕರು ನೀಡಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿರೋದಾಗಿ ತಿಳಿಸಿರೋ SBI, ಏನೇ ಸಮಸ್ಯೆಯಾದ್ರೂ ಬ್ಯಾಂಕ್ ಅನ್ನು ಸಂಪರ್ಕಿಸುವಂತೆ ತಿಳಿಸಿದೆ.
21.38 ಕೋಟಿ ಇಪಿಎಫ್ ಖಾತೆಗೆ ಬಡ್ಡಿ ಜಮೆ, ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?
undefined
ವಂಚನೆ ತಡೆಗೆ ಈ ಕ್ರಮ
ಇತ್ತೀಚಿನ ದಿನಗಳಲ್ಲಿ ಎಟಿಎಂನಿಂದ ಹಣ ವಿತ್ ಡ್ರಾ ಮಾಡೋ ವಿಚಾರದಲ್ಲಿ ಸಾಕಷ್ಟು ವಂಚನೆ ಪ್ರಕರಣಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ತನ್ನ ಗ್ರಾಹಕರು ಇಂಥ ವಂಚನೆಗೊಳಗಾಗದಂತೆ ತಡೆಯಲು SBI ಎಟಿಎಂನಿಂದ ಹಣ ವಿತ್ ಡ್ರಾ ಮಾಡಲು ಒಟಿಪಿ ಕಡ್ಡಾಯ ಮಾಡಿದೆ. ಇದ್ರಿಂದ ವಂಚಕರು ನಿಮ್ಮ ಖಾತೆಯಿಂದ ಹಣ ವಿತ್ ಡ್ರಾ ಮಾಡಲು ಸಾಧ್ಯವಾಗೋದಿಲ್ಲ. ಏಕೆಂದ್ರೆ ಎಟಿಎಂಗೆ ನಿಮ್ಮ ಡೆಬಿಟ್ ಕಾರ್ಡ್ ಹಾಕಿದ ತಕ್ಷಣ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರೋ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ.ಈ ಒಟಿಪಿಯನ್ನು ನಮೂದಿಸಿದ್ರೆ ಮಾತ್ರ ಹಣ ವಿತ್ ಡ್ರಾ ಮಾಡಬಹುದು. ಎಟಿಎಂ ವಂಚನೆಯಿಂದ ಗ್ರಾಹಕರನ್ನು ರಕ್ಷಿಸಲು ಇದು ನೆರವು ನೀಡುತ್ತದೆ. ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರೋ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 'SBI ಎಟಿಎಂಗಳಲ್ಲಿ ನಡೆಯೋ ವಹಿವಾಟುಗಳಿಗೆ ಒಟಿಪಿ ಆಧಾರಿತ ವಿತ್ ಡ್ರಾ ವ್ಯವಸ್ಥೆ ವಂಚಕರಿಂದ ಗ್ರಾಹಕರಿಗೆ ರಕ್ಷಣೆ ನೀಡೋ ವ್ಯಾಕ್ಸಿನೇಷನ್ ಆಗಿದೆ. ನಿಮ್ಮನ್ನು ವಂಚನೆಯಿಂದ ರಕ್ಷಿಸೋದು ನಮ್ಮ ಆದ್ಯ ಕರ್ತವ್ಯವಾಗಿದೆ. OTP ಆಧರಿತ ನಗದು ವ್ಯವಸ್ಥೆ ಬಗ್ಗೆ ಗ್ರಾಹಕರು ಮಾಹಿತಿ ಹೊಂದಿರೋದು ಅಗತ್ಯ' ಎಂದು ತಿಳಿಸಿದೆ.
10ಲಕ್ಷಕ್ಕಿಂತ ಕಡಿಮೆ ವೇತನ ಹೊಂದಿದ್ದೀರಾ? ಮಾಸಿಕ ಕೇವಲ 3,306ರೂ.ಉಳಿಸಿ 9 ಕೋಟಿ ಒಡೆಯರಾಗೋದು ಹೇಗೆ ಗೊತ್ತಾ?
OTP ಆಧರಿತ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ?
ನೀವು ನಿಮ್ಮ ಖಾತೆಯಿಂದ ಹಣ ಹಿಂಪಡೆಯಲು ಎಟಿಎಂ ಕೇಂದ್ರಗಳಿಗೆ ಭೇಟಿ ನೀಡುತ್ತೀರಿ. ಎಟಿಎಂ ಮಷಿನ್ ಗೆ ಡೆಬಿಟ್ ಕಾರ್ಡ್ ಹಾಕಿದ ತಕ್ಷಣ ನಿಮ್ಮ ಪಿನ್ (Pin) ಕೇಳುತ್ತದೆ. ಪಿನ್ ಸಂಖ್ಯೆ ನಮೂದಿಸಿದ ಬಳಿಕ ಸಾಮಾನ್ಯವಾಗಿ ನಿಮಗೆ ವಿತ್ ಡ್ರಾ ಮಾಹಿತಿ ಪರದೆ ಮೇಲೆ ಕಾಣಿಸುತ್ತದೆ. ವಿತ್ ಡ್ರಾ ಐಕಾನ್ ಮೇಲೆ ಕ್ಲಿಕ್ ಮಾಡಿದ ಬಳಿಕ ನೀವು ಎಷ್ಟು ಮೊತ್ತದ ನಗದು ಪಡೆಯಲು ಬಯಸುತ್ತೀರಿ ಎಂಬುದನ್ನು ನಮೂದಿಸಬೇಕು. ಆದ್ರೆ 10 ಸಾವಿರ ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ತೆಗೆಯಲು ಬಯಸಿದ್ರೆ ತಕ್ಷಣ ನಿಮ್ಮ ಮೊಬೈಲ್ ಗೆ ಒಟಿಪಿ ಬರುತ್ತದೆ. ಈ ಒಟಿಪಿ ನಾಲ್ಕು ಅಂಕಕೆಗಳನ್ನೊಳಗೊಂಡಿರುತ್ತದೆ. ಈ ನಾಲ್ಕು ಸಂಖ್ಯೆಗಳನ್ನು ನಮೂದಿಸಿದ ಬಳಿಕವಷ್ಟೇ ನಿಮಗೆ ಹಣ ವಿತ್ ಡ್ರಾ ಮಾಡಲು ಸಾಧ್ಯವಾಗುತ್ತದೆ. ಒಂದು OTP ಒಂದು ವ್ಯವಹಾರಕ್ಕಷ್ಟೇ ಸೀಮಿತವಾಗಿರುತ್ತದೆ. ಮತ್ತೊಮ್ಮೆ ಹಣ ಪಡೆಯಬೇಕೆಂದ್ರೆ ಹೊಸ OTP ನಿಮ್ಮ ಮೊಬೈಲ್ ಗೆ ಬರುತ್ತದೆ. ಅದನ್ನೇ ನೋಂದಾಯಿಸಬೇಕು. ನಿಮ್ಮ ಮೊಬೈಲ್ ಸಂಖ್ಯೆ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿರುತ್ತದೆ. ಒಂದು ವೇಳೆ ಇನ್ನೂ ಲಿಂಕ್ ಆಗಿಲ್ಲವೆಂದ್ರೆ ಕೂಡಲೇ ಬ್ಯಾಂಕ್ ಗೆ ತೆರಳಿ ನೋಂದಣಿ ಮಾಡಿಸಿ. ಹಣ ವಿತ್ ಡ್ರಾ ಮಾಡಲು SBI ಎಟಿಎಂ ಕೇಂದ್ರಗಳಿಗೆ ತೆರಳೋವಾಗ ನಿಮ್ಮ ಮೊಬೈಲ್ ಕೊಂಡು ಹೋಗಲು ಮರೆಯಬೇಡಿ.