
ಬೆಂಗಳೂರು (ಡಿ.2): ಕಳೆದ ಕೆಲವು ದಿನಗಳಿಂದ ಚಿನ್ನ(Gold) ಹಾಗೂ ಬೆಳ್ಳಿ(Silver) ದರ (Price) ಇಳಿಕೆಯತ್ತ ಮುಖ ಮಾಡಿದೆ. ಆದ್ರೆ,ಇಂದು (ಡಿ.2) ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bangalore) ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.ಆದ್ರೆ ಬೆಳ್ಳಿ ದರ ಮಾತ್ರ ಎಂದಿನಂತೆ ಇಳಿಕೆಯಾಗಿದೆ. ಬೆಂಗಳೂರು ಹೊರತುಪಡಿಸಿದ್ರೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರದಲ್ಲಿ ಅಲ್ಪ ಇಳಿಕೆಯಾಗಿದ್ದು, ಬೆಳ್ಳಿ ದರದಲ್ಲಿ ಮಾತ್ರ ಕೆ.ಜಿ.ಗೆ 1000ರೂ. ಇಳಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಇಳಿಕೆಯಾಗುತ್ತಿದ್ದು, ಖರೀದಿಸೋ ಪ್ಲ್ಯಾನ್ ಹೊಂದಿರೋರು ಇಂದು ಈ ಬಗ್ಗೆ ಯೋಚಿಸಬಹುದು. ಇಲ್ಲವೇ ಇನ್ನೂ ಒಂದೆರಡು ದಿನ ಕಾದು ನೋಡೋ ತಂತ್ರ ಅನುಸರಿಸಬಹುದು. ಚಿನ್ನದ ಬೆಲೆಯಲ್ಲಿ ಗಮನಾರ್ಹ ಇಳಿಕೆಯಾಗದ ಕಾರಣ ಚಿನ್ನ ಖರೀದಿ ಪ್ಲ್ಯಾನ್ ಮುಂದೆ ಹಾಕೋದು ಒಳ್ಳೆಯದು. ದೇಶದ ಪ್ರಮುಖ ನಗರಗಳಲ್ಲಿ ಇಂದು (ಡಿ.2) ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರಿನಲ್ಲಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 44,600ರೂ. ಇದ್ದು, ನಿನ್ನೆ ಕೂಡ ಇಷ್ಟೇ ಇತ್ತು. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 48,650 ರೂ.ಇದ್ದು, ಇಂದು ಕೂಡ ಅದೇ ಬೆಲೆಯಿದೆ. ಇನ್ನು ಬೆಳ್ಳಿ ದರದಲ್ಲಿ ಇಂದು ಗಣನೀಯ ಇಳಿಕೆ ಕಂಡುಬಂದಿದೆ. ನಿನ್ನೆಗಿಂತ ಇಂದು 1000ರೂ. ಇಳಿಕೆಯಾಗಿದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 61,700ರೂ.ಇತ್ತು. ಆದ್ರೆ ಇಂದು 60,700ರೂ.ಗೆ ಇಳಿಕೆಯಾಗಿದೆ.
10ಲಕ್ಷಕ್ಕಿಂತ ಕಡಿಮೆ ವೇತನ ಹೊಂದಿದ್ದೀರಾ? ಮಾಸಿಕ ಕೇವಲ 3,306ರೂ.ಉಳಿಸಿ 9 ಕೋಟಿ ಒಡೆಯರಾಗೋದು ಹೇಗೆ ಗೊತ್ತಾ?
ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು 46,740ರೂ.ಆಗಿದ್ದು, ನಿನ್ನೆ46,750ರೂ.ಇತ್ತು. ಅಂದ್ರೆ ನಿನ್ನೆಗಿಂತ ಇಂದು 10ರೂ.ಇಳಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ 10ರೂ.ಇಳಿಕೆಯಾಗಿದೆ. ನಿನ್ನೆ 51,000 ರೂ. ಇತ್ತು,ಇಂದು 50,990 ರೂ. ಆಗಿದೆ. ಬೆಳ್ಳಿ ದರದಲ್ಲಿ 1000ರೂ.ಇಳಿಕೆಯಾಗಿದೆ. ನಿನ್ನೆ ಒಂದು ಕೆ.ಜಿ. ಬೆಳ್ಳಿಗೆ 61,700ರೂ.ಇತ್ತು. ಆದ್ರೆ ಇಂದು 60,700ರೂ. ಆಗಿದೆ.
ಮುಂಬೈನಲ್ಲಿ ಎಷ್ಟಿದೆ ದರ?
ಮುಂಬೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 47,120ರೂ.ಇದ್ದು,ಇಂದು ಕೂಡ ಅಷ್ಟೇ ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ48,120 ರೂ. ಇತ್ತು,ಇಂದು ಕೂಡ ಅಷ್ಟೇ ಇದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 61,700 ರೂ. ಇತ್ತು. ಆದ್ರೆ ಇಂದು 60,700ರೂ. ಆಗಿದೆ. ಅಂದ್ರೆ ನಿನ್ನೆಗಿಂತ ಇಂದು 1000 ರೂ. ಇಳಿಕೆಯಾಗಿದೆ.
ಬಿಟ್‌ಕಾಯಿನ್‌ಗೆ ಕರೆನ್ಸಿ ಮಾನ್ಯತೆ ನೀಡಲ್ಲ: ಕೇಂದ್ರ
ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 44,860ರೂ. ಇದೆ. ನಿನ್ನೆ 44,880ರೂ. ಇತ್ತು. ಅಂದ್ರೆ ನಿನ್ನೆಗಿಂತ ಇಂದು 20ರೂ.ಇಳಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ ನಿನ್ನೆಗಿಂತ ಇಂದು 20ರೂ. ಇಳಿಕೆಯಾಗಿದೆ. ನಿನ್ನೆ 48,960 ರೂ.ಇತ್ತು,ಇಂದು 48,940 ರೂ. ಇದೆ. ಒಂದು ಕೆ.ಜಿ. ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.ಒಂದು ಕೆ.ಜಿ. ಬೆಳ್ಳಿಗೆ 66,300ರೂ. ಇದೆ.
"
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.