EPF Interest Credit: 21.38 ಕೋಟಿ ಇಪಿಎಫ್ ಖಾತೆಗೆ ಬಡ್ಡಿ ಜಮೆ, ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?

Suvarna News   | Asianet News
Published : Dec 02, 2021, 12:14 PM IST
EPF Interest Credit: 21.38 ಕೋಟಿ ಇಪಿಎಫ್ ಖಾತೆಗೆ ಬಡ್ಡಿ ಜಮೆ, ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?

ಸಾರಾಂಶ

ಕೇಂದ್ರ ಸರ್ಕಾರ ಇತ್ತೀಚೆಗೆ ನೌಕರರ ಭವಿಷ್ಯ ನಿಧಿ (EPF) ಖಾತೆಗೆ 2020-21ನೇ ಸಾಲಿನ ಬಡ್ಡಿ ಹಣ ಜಮೆ ಮಾಡಿದೆ. ನಿಮ್ಮ ಖಾತೆಗೆ ಬಡ್ಡಿ ಹಣ ಬಂದಿದೆಯೋ ಇಲ್ಲವೋ ಚೆಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ

ನೀವು ನೌಕರರ ಭವಿಷ್ಯ ನಿಧಿ (EPF) ಖಾತೆ ಹೊಂದಿದ್ರೆ, ಸರ್ಕಾರದ ಕಡೆಯಿಂದ ನಿಮಗೊಂದು ಶುಭ ಸುದ್ದಿಯಿದೆ.  2020​​-21ನೇ ಸಾಲಿನಲ್ಲಿ ನೌಕರರ ಭವಿಷ್ಯ ನಿಧಿಯ (  Employees Provident Fund ) ಖಾತೆಗೆ ಶೇ.8.5ರಷ್ಟು ಬಡ್ಡಿ (Interest) ನೀಡಲು ಕೇಂದ್ರ ಸರ್ಕಾರ (Central Govt) ಅಕ್ಟೋಬರ್ ನಲ್ಲಿಅನುಮೋದನೆ ನೀಡಿತ್ತು. ಅಲ್ಲದೆ, ಇಪಿಎಫ್ ಖಾತೆಗಳಿಗೆ 2020-21ನೇ ಸಾಲಿನ ಬಡ್ಡಿ ಹಣ ಮಂಜೂರು ಮಾಡೋದಾಗಿ ಹಣಕಾಸು ಇಲಾಖೆ ತಿಳಿಸಿತ್ತು. ಅದರಂತೆ ಈಗ 21.38 ಕೋಟಿ ಇಪಿಎಫ್ ಖಾತೆಗಳಿಗೆ ಬಡ್ಡಿ ಹಣ ಜಮೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ. ಆದಕಾರಣ ಕೂಡಲೇ ನಿಮ್ಮ ಇಪಿಎಫ್ ಖಾತೆಯ ಬ್ಯಾಲೆನ್ಸ್ ಚೆಕ್ ಮಾಡಿ. ಈ 21.38 ಕೋಟಿ ಖಾತೆಗಳಲ್ಲಿ ನಿಮ್ಮದೂ ಸೇರಿರಬಹುದು. ವರದಿಗಳ ಪ್ರಕಾರ ಮುಂದಿನ ತಿಂಗಳ ಅಂತ್ಯದೊಳಗೆ ಆರು ಕೋಟಿ ಇಪಿಎಫ್ ಖಾತೆದಾರರು ಬಡ್ಡಿ ಹಣ ಪಡೆಯಲಿದ್ದಾರೆ. 

EPF ಬಡ್ಡಿ ಬದಲಾಯಿಸದಿಲು ನಿರ್ಧಾರ
ಈ ವರ್ಷದ ಪ್ರಾರಂಭದಲ್ಲಿ ಇಪಿಎಫ್ಒ (EPFO) 2020-21ನೇ ಸಾಲಿನಲ್ಲಿ ಪಿಎಫ್ ಖಾತೆಯಲ್ಲಿರೋ ಹಣದ ಮೇಲಿನ ಬಡ್ಡಿಯನ್ನು ಬದಲಾಯಿಸದಿರಲು ನಿರ್ಧರಿಸಿತ್ತು. ಹೀಗಾಗಿ ಈ ಮೊದಲಿನಂತೆ ಶೇ.8.5 ಬಡ್ಡಿ ನೀಡಲು ನಿರ್ಧರಿಸಿತ್ತು.ಕೋವಿಡ್ ಹಿನ್ನೆಲೆಯಲ್ಲಿ 2020-21ನೇ ಆರ್ಥಿಕ ಸಾಲಿನಲ್ಲಿ ಹೂಡಿಕೆಗಿಂತ ಹಣ ಹಿಂಪಡೆದವರ ಸಂಖ್ಯೆಯೇ ಹೆಚ್ಚಿತ್ತು. ಈ ಸಾಲಿನಲ್ಲಿ ಬಡ್ಡಿದರ ಅತ್ಯಂತ ಕಡಿಮೆಯಾಗಿತ್ತು ಕೂಡ. 

ನೀವಿನ್ನೂ ಈ ಅಪ್ಡೇಟ್‌ ಮಾಡದಿದ್ದರೆ, ಮುಂದಿನ ತಿಂಗಳಿನಿಂದ EPF ಹಣ ಬಂದ್!

EPF ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?
ಇಪಿಎಫ್ ಖಾತೆಗೆ ಬಡ್ಡಿ ಹಣ ಜಮೆ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಬಹುತೇಕರು ತಾವು ಕೆಲಸ ಮಾಡುತ್ತಿರೋ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ (HR) ಮೊರೆ ಹೋಗುತ್ತಾರೆ. ಆದ್ರೆ ನೀವೇ ನಿಮ್ಮ ಪಿಎಫ್ ಖಾತೆಯಲ್ಲಿನ ಬ್ಯಾಲೆನ್ಸ್ ಚೆಕ್ ಮಾಡಬಹುದು. ಇದಕ್ಕಾಗಿ ಅನೇಕ ವಿಧಾನಗಳಿದ್ದು, ಅವುಗಳ ಮಾಹಿತಿ ಇಲ್ಲಿದೆ.
ಇ-ಸೇವಾ ಪೋರ್ಟಲ್(e-Sewa Portal) 
EPFO ಪೋರ್ಟಲ್ ಮೂಲಕ ನೀವು ನಿಮ್ಮ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಈ ಪೋರ್ಟಲ್ ನಿರ್ವಹಣೆಯನ್ನು ಸರ್ಕಾರ ಮಾಡುತ್ತದೆ. ನೌಕರರ ಯುಎಎನ್ (Universal Account Number ) ಬಳಸಿಕೊಂಡು ಅವರ ಖಾತೆಯ ಮಾಹಿತಿಯನ್ನು ಇಲ್ಲಿ ಪಡೆಯಬಹುದು. ಈ ಪೋರ್ಟಲ್ ಮೂಲಕ ನೀವು ನಿಮ್ಮ ಇ-ಪಾಸ್ ಬುಕ್ ಡೌನ್ಲೋಡ್ ಮಾಡಬಹುದು ಹಾಗೂ ಪ್ರಿಂಟ್ ಕೂಡ ತೆಗೆಯಬಹುದು. ಹಾಗಾದ್ರೆ EPFO ಪೋರ್ಟಲ್ ನಲ್ಲಿ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?
- EPFO ಅಧಿಕೃತ ವೆಬ್ ಸೈಟ್ www.epfindia.gov.in ಕ್ಕೆ ಲಾಗ್ ಇನ್ ಆಗಿ. ಅಲ್ಲಿ ‘For Employees’ ಎಂಬ ಆಯ್ಕೆ ಕಾಣಿಸುತ್ತದೆ. ಅದರಡಿಯಲ್ಲಿ 'Our Services’ ಆಯ್ಕೆ ಮಾಡಿ.
-ಆ ಬಳಿಕ ‘Services’ ಆಯ್ಕೆ ಅಡಿಯಲ್ಲಿರೋ ‘Member Passbook’ ಆಯ್ಕೆ ಮೇಲೆ ಕ್ಲಿಕ್ ಮಾಡಿ.ಇಲ್ಲಿ ನೀವು ನಿಮ್ಮ ಯುಎಎನ್ ಸಂಖ್ಯೆ ಹಾಗೂ ಪಾಸ್ ವರ್ಡ್ ನೋಂದಾಯಿಸಿದ್ರೆ ನಿಮ್ಮ ಪಾಸ್ ಬುಕ್ ಕಾಣಿಸುತ್ತದೆ. 
-ನೀವು ಯುಎಎನ್ ಹೊಂದಿದ್ರೆ ಮಾತ್ರ ಈ ಮಾದರಿಯಲ್ಲಿ ಪಾಸ್ಬುಕ್ ನೋಡಲು ಸಾಧ್ಯ.
-ಒಂದು ವೇಳೆ ನಿಮ್ಮ ಬಳಿ ಯುಎಎನ್ ಇಲ್ಲದಿದ್ರೆ, epfoservices.in/epfo/ ಲಿಂಕ್ ಮೇಲೆ ಕ್ಲಿಕ್ ಮಾಡಿ. ಆ ಬಳಿಕ ನಿಮ್ಮ ರಾಜ್ಯ ಆಯ್ಕೆ ಮಾಡಿ. ನಂತರ ನಿಮ್ಮ ಆಫೀಸ್ ಲಿಂಕ್ ಕ್ಲಿಕ್ ಮಾಡಿ.
-ಈಗ ನಿಮ್ಮ ಪಿಎಫ್ ಖಾತೆ ಸಂಖ್ಯೆ, ಹೆಸರು ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆ ದಾಖಲಿಸಿ ‘Submit’ ಮೇಲೆ ಕ್ಲಿಕ್ ಮಾಡಿ. ಈಗ ನಿಮಗೆ ನಿಮ್ಮ ಪಿಎಫ್ ಬ್ಯಾಲೆನ್ಸ್ ಕಾಣಿಸುತ್ತದೆ.

 ಎಸ್ಎಂಎಸ್ ಮೂಲಕ ಬ್ಯಾಲೆನ್ಸ್ ಚೆಕ್
-ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಲು“EPFOHO UAN ENG” ಎಂದು ಟೈಪ್ ಮಾಡಿ 7738299899 ಸಂಖ್ಯೆಗೆ ಎಸ್ಎಂಎಸ್ ಕಳುಹಿಸಬೇಕು. ಇಲ್ಲಿ 'ENG’ ಅಂದ್ರೆ ಇಂಗ್ಲಿಷ್. ಒಂದು ವೇಳೆ ನೀವು ಕನ್ನಡದಲ್ಲಿ ಎಸ್ಎಂಎಸ್ ಪಡೆಯಲು ಬಯಸಿದ್ರೆ 'KAN' ಎಂದು ಟೈಪ್ ಮಾಡಿ. ಈ ಸೇವೆ ಇಂಗ್ಲಿಷ್, ಹಿಂದೆ, ಕನ್ನಡ ಸೇರಿದಂತೆ 10 ಭಾಷೆಗಳಲ್ಲಿದೆ. ಎಸ್ಎಂಎಸ್ ಕಳುಹಿಸಿದ ಬಳಿಕ ನಿಮ್ಮ ಮೊಬೈಲ್ ಗೆ ಎಸ್ಎಂಎಸ್ ಮೂಲಕ ಖಾತೆಯಲ್ಲಿರೋ ಬ್ಯಾಲೆನ್ಸ್ ಮಾಹಿತಿ ಬರುತ್ತದೆ. 

ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ವರ್ಷಕ್ಕೆ ಬಂಪರ್ ಕೊಡುಗೆ

ಮಿಸ್ಡ್ ಕಾಲ್ ಸೇವೆ
-011-22901406 ಸಂಖ್ಯೆಗೆ ಮಿಸ್ ಕಾಲ್ ನೀಡೋ ಮೂಲಕ ಕೂಡ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಆದ್ರೆ ಇದಕ್ಕೆ ನೀವು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿದ್ರೆ ಮಾತ್ರ ಮಾಹಿತಿ ಲಭಿಸುತ್ತದೆ. 

Umang App ಮೂಲಕ
ಸರ್ಕಾರದ Umang App ಬಳಸಿ ಕೂಡ ನೀವು ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಆದ್ರೆ ಇದಕ್ಕೆ ನೀವು ಉಮಂಗ್ ಅಪ್ಲಿಕೇಷನ್ ಡೌನ್ಲೋಡ್ ಮಾಡಿ ಅದ್ರಲ್ಲಿ ಮೊಬೈಲ್ ಸಂಖ್ಯೆ ನೋಂದಾಯಿಸಬೇಕು. ಉಮಂಗ್ ಅಪ್ಲಿಕೇಷನ್ ನಲ್ಲಿ 
ಇಪಿಎಫ್ಒಗೆ ತೆರಳಿ ನೌಕರರ ಕೇಂದ್ರಿತ ಸೇವೆಗಳ ಮೇಲೆ ಕ್ಲಿಕ್ ಮಾಡಿ passbook view ಆಯ್ಕೆ ಮಾಡಬೇಕು. ಆ ಬಳಿಕ ಯುಎಎನ್ ಮೂಲಕ ಲಾಗಿಇನ್ ಆಗಬೇಕು. 

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Gold Silver Price Today: ಚಿನ್ನದ ದರದಲ್ಲಿ ಏರಿಕೆನಾ? ಇಳಿಕೆನಾ?
ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ