ಹೊಸ ಐಟಿ ರಿಟರ್ನ್ಸ್‌ಗೆ ನೂತನ ವೆಬ್‌ಸೈಟ್‌ : ಜೂ.7ರಂದು ಬಿಡುಗಡೆ

By Kannadaprabha News  |  First Published May 21, 2021, 9:59 AM IST
  • ಆದಾಯ ತೆರಿಗೆ ಪಾವತಿ ವಿವರ ಸಲ್ಲಿಸಲು ನೂತನ ವೆಬ್ಸೈಟ್
  • ಜೂ.7ರಂದು ತೆರಿಗೆ ಇಲಾಖೆಯಿಂದ ವೆಬ್‌ಸೈಟ್ ಬಿಡುಗಡೆ
  • ನೂತನ ವೆಬ್‌ಸೈಟ್‌  www.incometax.gov.in ಜೂ.7ರಿಂದ ಕಾರ್ಯರಂಭ 

ನವದೆಹಲಿ (ಮೇ.21): ತೆರಿಗೆದಾರರು ತಮ್ಮ ಆದಾಯ ತೆರಿಗೆ ಪಾವತಿ ವಿವರ ಸಲ್ಲಿಸಲು ಈಗ ಬಳಕೆ ಮಾಡುತ್ತಿರುವ ವೆಬ್‌ಸೈಟ್‌ ಬದಲು ನೂತನ ವೆಬ್‌ಸೈಟ್‌ ಅನ್ನು ತೆರಿಗೆ ಇಲಾಖೆ ಜೂ.7ರಂದು ಬಿಡುಗಡೆ ಮಾಡಲಿದೆ.

ಈ ಹಿನ್ನೆಲೆಯಲ್ಲಿ ಅಗತ್ಯವಾದ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುವ ಸಲುವಾಗಿ ಈಗಿರುವ ವೆಬ್‌ಸೈಟ್‌  https://www.incometaxindiaefiling.gov.in/ ಜೂ.1ರಿಂದ ಜೂ.6ರವರಗೆ ಸ್ಥಗಿತಗೊಳಿಸಲಾಗುವುದು. ನೂತನ ವೆಬ್‌ಸೈಟ್‌ www.incometax.gov.in ಜೂ.7ರಿಂದ ಕಾರ್ಯರಂಭ ಮಾಡಲಿದೆ.

Tap to resize

Latest Videos

undefined

ಕೊರೋನಾ ವ್ಯಾಕ್ಸೀನ್ ಹಾಕಿಸ್ಕೊಂಡವರ ಕುಟುಂಬಕ್ಕೆ ತೆರಿಗೆ ರಿಯಾಯಿತಿ..!

ಬಳಕೆದಾರರಿಗೆ ಎದುರಾಗುವ ಸಮಸ್ಯೆಗಳನ್ನು ಜೂ. 10ರ ಬಳಿಕ ಬಗೆಹರಿಸಲು ಯತ್ನಿಸಲಾಗುವುದು. ನೂತನ ವೆಬ್‌ಸೈಟ್‌ ಅನ್ನು ಹೆಚ್ಚು ಬಳಕೆದಾರ ಸ್ನೇಹಿ ಆಗಿ ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊರೋನಾ ಎಫೆಕ್ಟ್: ಐಟಿಆರ್‌ ಸಲ್ಲಿಕೆ ಗಡುವು ಸೆ.30ರ ವರೆಗೆ ವಿಸ್ತರಣೆ

ಕೊರೋನಾ ಹಿನ್ನೆಲೆಯಲ್ಲಿ 2020-21ನೇ ಸಾಲಿನ ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆಯ ಅಂತಿಮ ಗಡುವನ್ನು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಸೆಪ್ಟೆಂಬರ್‌ 30ರವರೆಗೆ ವಿಸ್ತರಿಸಿದೆ. ಸಮಾನ್ಯ ತೆರಿಗೆದಾರರು ತಮ್ಮ ವೈಯಕ್ತಿಕ ಆದಾಯ ತೆರಿಗೆ ರಿಟರ್ನ್‌ ಅನ್ನು ಸಲ್ಲಿಸಲು ಇದ್ದ ಕೊನೆಯ ದಿನಾಂಕವನ್ನು ಜು.31ರಿಂದ ಸೆಪ್ಟೆಂಬರ್‌ 30ರ ವರೆಗೆ ವಿಸ್ತರಣೆ ಮಾಡಲಾಗಿದೆ.

ನೌಕರರಿಗೆ ಟಿಡಿಎಸ್‌ ಕಡಿತಗೊಳಿಸಲಾದ ಫಾರಂ 16 ನೀಡಲು ಜು.15 ಕೊನೆಯ ದಿನವಾಗಿದೆ. ತೆರಿಗೆ ಆಡಿಟ್‌ ವರದಿ ಸಲ್ಲಿಸಲು ಇದ್ದ ಕೊನೆಯ ದಿನಾಂಕವನ್ನು ಸೆ.30ರಿಂದ ಅಕ್ಟೋಬರ್‌ 31ರವರೆಗೆ ವಿಸ್ತರಿಸಲಾಗಿದೆ. ಪರಿಷ್ಕೃತ ಐಟಿ ರಿಟರ್ನ್‌ ಸಲ್ಲಿಕೆಗೆ 2022ರ ಜ.31ರ ವರೆಗೂ ಅವಕಾಶ ಇರಲಿದೆ ಎಂದು ಸಿಬಿಡಿಟಿ ತಿಳಿಸಿದೆ.

click me!