ಏಷ್ಯಾ ಶ್ರೀಮಂತ ವ್ಯಕ್ತಿ ಪಟ್ಟಿ ಬಿಡುಗಡೆ; ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟ ಗೌತಮ್ ಅದಾನಿ!

By Suvarna NewsFirst Published May 20, 2021, 9:10 PM IST
Highlights
  • ಏಷ್ಯಾದ ಶ್ರೀಮಂತಗಳ ವ್ಯಕ್ತಿ ಪಟ್ಟಿ ಬಿಡುಗಡೆ ಮಾಡಿದ ಬ್ಲೂಮ್‌ಬರ್ಗ್ ಇಂಡೆಕ್ಸ್
  • 2ನೇ ಸ್ಥಾನಕ್ಕೆ ಲಗ್ಗೆ ಇಟ್ಟ ಭಾರತದ ಉದ್ಯಮಿ ಗೌತಮ್ ಅದಾನಿ
  • ಏಷ್ಯಾ ಶ್ರೀಮಂತ ಪಟ್ಟಿಯ ಟಾಪ್ 2 ಸ್ಥಾನದಲ್ಲಿ ಭಾರತೀಯರು

ನವದೆಹಲಿ(ಮೇ.20): ಕೊರೋನಾ ಸಂಕಷ್ಟದಲ್ಲಿ ಎಲ್ಲರ ಆದಾಯ ಕ್ಷೀಣಿಸುತ್ತಿದೆ. ಉದ್ಯಮ, ವ್ಯವಾಹರಗಳು ಬಂದ್ ಆಗಿವೆ. ಉದ್ಯೋಗ ಕಡಿತ, ವೇತನ ಕಡಿತ, ನಿರುದ್ಯೋಗ ಸೇರಿದಂತೆ ಸಾವಿರ ಸವಾಲುಗಳು ಎದುರಾಗಿದೆ. ಇದರ ನಡುವೆ ಸಮಯ ಹಾಗೂ ಸಂದರ್ಭಕ್ಕೆ ತಕ್ಕಂತೆ ಉದ್ಯಮ ಸಾಮ್ರಾಜ್ಯ ವಿಸ್ತರಿಸಿ ಆದಾಯ ಗಳಿಸುವುದು ಎಲ್ಲಕ್ಕಿಂತ ಹೆಚ್ಚಿನ ಚಾಲೆಂಜ್. ಈ ರೀತಿ ಸಂಕಷ್ಟದ ಸಮಯದಲ್ಲಿ ಆದಾಯ ವೃದ್ಧಿಸಿದ ಭಾರತದ ಉದ್ಯಮಿ ಗೌತಮ್ ಅದಾನಿ ಇದೀಗ ಏಷ್ಯಾದ 2ನೇ ಶ್ರೀಮಂತ ವ್ಯಕ್ತಿ ಅನ್ನೋ ಹೆಗ್ಗಳಿಗೆ ಪಾತ್ರರಾಗಿದ್ದಾರೆ.

ಎಲನ್ ಮಸ್ಕ್, ಬೆಜೋಸ್ ಹಿಂದಿಕ್ಕಿದ ಗೌತಮ್ ಅದಾನಿ: ಸಿರಿವಂತಿಕೆ ಸೃಷ್ಟಿಯಲ್ಲಿ ಅಗ್ರಸ್ಥಾನ!

ಚೀನಾದ ಝೋಂಗ್ ಶನ್ಶಾನ್ ಉದ್ಯಮಿಯನ್ನು ಹಿಂದಿಕ್ಕಿದ ಗೌತಮ್ ಅದಾನಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಬ್ಲೂಮ್‌ಬರ್ಗ್ ಬಿಲೇನಿಯರ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಅದಾನಿ ಅದಾಯ ಏರಿಕೆ ಕಂಡಿರುವ ಕಾರಣ 2ನೇ ಸ್ಥಾನ ಅಲಂಕರಿಸಿದ್ದಾರೆ.  ಅದಾನಿ ಆದಾಯ 4,85,77,98,400 ರೂಪಾಯಿಗೆ ಏರಿಕೆಯಾಗಿದೆ. 

ಅದಾನಿ 2ನೇ ಸ್ಥಾನ ಅಲಂಕರಿಸೋ ಮೂಲಕ ಏಷ್ಯಾದ ಶ್ರೀಮಂತ ಟಾಪ್ 2 ಪಟ್ಟಿಯಲ್ಲಿ ಭಾರತೀಯರೇ ವಿರಾಜಮಾನರಾಗಿದ್ದಾರೆ. ಫೆಬ್ರವರಿ ತಿಂಗಳಲ್ಲಿ ರಿಲಾಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದರು. 

ಭಾರತದ ಆರ್ಥಿಕತೆ ಮತ್ತೆ ಪುಟಿದೇಳಲಿದೆ; ಗೌತಮ್ ಅದಾನಿ.

ಅದಾನಿ ಗ್ರೂಪ್ ಕಂಪನಿಗಳಾದ ಅದಾನಿ ಗ್ರೀನ್, ಅದಾನಿ ಎಂಟರ್‌ಪ್ರೈಸಸ್, ಅದಾನಿ ಗ್ಯಾಸ್ ಮತ್ತು ಅದಾನಿ ಟ್ರಾನ್ಸ್‌ಮಿಷನ್ ಷೇರುಗಳು ಏರಿಕೆಯಾಗಿದೆ.  ಅದಾನಿ ಟೋಟಲ್ ಗ್ಯಾಸ್ ಕಳೆದ ಒಂದು ವರ್ಷದಲ್ಲಿ 1145% ಏರಿಕೆಯಾಗಿದ್ದರೆ, ಅದಾನಿ ಎಂಟರ್‌ಪ್ರೈಸಸ್ ಮತ್ತು ಅದಾನಿ ಟ್ರಾನ್ಸ್‌ಮಿಷನ್ ಷೇರುಗಳು ಕ್ರಮವಾಗಿ 827% ಮತ್ತು 617% ರಷ್ಟು ಪ್ರಗತಿ ಸಾಧಿಸಿವೆ. ಈ ಅವಧಿಯಲ್ಲಿ ಅದಾನಿ ಗ್ರೀನ್ ಎನರ್ಜಿ ಮತ್ತು ಅದಾನಿ ಪವರ್ ಕ್ರಮವಾಗಿ 433% ಮತ್ತು 189% ಗಳಿಸಿವೆ, ಅದಾನಿ ಪವರ್ 142% ರಷ್ಟು ಪ್ರಗತಿ ಸಾಧಿಸಿದೆ. ಈ ಕಾರಣ ಆದಾನಿ ಆದಾಯ ಡಬಲ್ ಆಗಿದೆ.

click me!