ನಾವು ಮರೆತ ಭಾರತದ ಗೋಲಿ ಸೋಡಾಗೆ ಅಮೆರಿಕಾ, ಯೂರೋಪ್, ಗಲ್ಫ್ ರಾಷ್ಟ್ರದಲ್ಲಿ ಭಾರಿ ಬೇಡಿಕೆ

ಗೋಲಿ ಸೋಡಾ ಭಾರತದ ಸಂಪ್ರಾದಾಯಿಕ ಡ್ರಿಂಕ್. ಆದರೆ ಭಾರತೀಯರು ಮರತೇ ಹೋಗಿದ್ದಾರೆ. ಇದೀಗ ಗೋಲಿ ಸೋಡಾಗೆ ಅಮೆರಿಕಾ, ಯುರೋಪ್, ಗಲ್ಫ್ ರಾಷ್ಟ್ರಗಳಲ್ಲಿ ಭಾರಿ ಬೇಡಿಕೆ ವ್ಯಕ್ತವಾಗಿದೆ. 

Neglected Indian traditional goli soda gains demand in UK US Europe gulf countries

ನವದೆಹಲಿಯ(ಮಾ.23) ಭಾರತದ ಸಾಂಪ್ರದಾಯಿಕ ಡ್ರಿಂಕ್ ಗೋಲಿ ಸೋಡಾ ನಾವು ಮರೆತಿದ್ದೇವೆ. 80, 90ರ ದಶಕದಲ್ಲಿ ಗೋಲಿ ಸೋಡಾ ಭಾರಿ ಫೇಮಸ್ಸು. 2000ನೇ ಇಸವಿ ಬಳಿಕ ಗೋಲಿ ಸೋಡಾ ಜಾಗದಲ್ಲಿ ವಿದೇಶಿ ಸಾಫ್ಟ್ ಡ್ರಿಂಕ್‌ಗಳು ಮೇಳೈಸಿತು. ವಿದೇಶಿ ವಸ್ತುಗಳ ವ್ಯಾಮೋಹ ಹೆಚ್ಚಿರುವ ಭಾರತೀಯರು ವಿದೇಶಿ ಡ್ರಿಂಕ್ ಮೇಲೆ ಅವಲಂಬಿತವಾಗಿದ್ದರೆ, ವಿದೇಶಿಗರು ಇದೀಗ ಭಾರತೀಯ ಮೂಲದ ಸಾಂಪ್ರದಾಯಿಕ ಗೋಲಿ ಸೋಡಾ ಬಯಸುತ್ತಿದ್ದಾರೆ. ಅಮೆರಿಕ, ಯೂರೋಪ್, ಗಲ್ಫ್ ರಾಷ್ಟ್ರಗಳಲ್ಲಿ ಭಾರತದ ಗೋಲಿ ಸೋಡಾಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. 

ಭಾರತದ ಗೋಲಿ ಸೋಡಾ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಇದೀಗ ಭಾರತದಲ್ಲಿ ಉತ್ಪಾದನೆ ಹೆಚ್ಚಾಗುತ್ತಿದೆ. ವಿದೇಶಕ್ಕೆ ರಫ್ತು ಮಾಡಲಾಗುತ್ತಿದೆ. ಅತೀ ದೊಡ್ಡ ಉದ್ಯಮವಾಗಿ ಇದೀಗ ಗೋಲಿ ಸೋಡಾ ಬೆಳೆದು ನಿಂತಿದೆ. ಭಾರತದಲ್ಲಿ ಈಗಲೂ ಗೋಲಿ ಸೋಡಾ ಅಲ್ಲೊಂದು ಇಲ್ಲೊಂದು ಕಡೆ ಮಾತ್ರ ಇದೆ. ಎಲ್ಲಾ ಶಾಪ್‌ಗಳಲ್ಲಿ ಲಭ್ಯವಿದ್ದ ಗೋಲಿ ಸೋಡಾ ಇದೀಗ ಅತೀ ದೊಡ್ಡ ಬ್ರ್ಯಾಂಡ್ ರೆಸ್ಟೋರೆಂಟ್‌ಗಳಲ್ಲಿ ಲಭ್ಯವಿದೆ. ಆದರೆ ವಿದೇಶಗಳಲ್ಲಿ ಗೋಲಿ ಸೋಡಾ ಎಲ್ಲಾ ಸೂಪರ್ ಮಾರ್ಕೆಟ್, ಶಾಪಿಂಗ್ ಮಾಲ್ ಸೇರಿದಂತೆ ಸಣ್ಣ ಸಣ್ಣ ಶಾಪ್‌ಗಳಲ್ಲೂ ಲಭ್ಯವಿದೆ.

Latest Videos

ಬೇಸಿಗೆಯಲ್ಲಿ ಸಬ್ಜಾ ಸೀಡ್ಸ್ ತಿಂದ್ರೆ ಏನಾಗುತ್ತೆ..? ತಿಳಿದರೆ ಅಚ್ಚರಿ ಪಡುತ್ತೀರಿ, ನೋಡಿ..

ವಿದೇಶದಲ್ಲಿ ಗೋಲಿ ಪಾಪ್ ಸೋಡಾ ಎಂದು ಮರುನಾಮಕರಣ ಮಾಡಲಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿ ಲುಲು ಮಾರ್ಕೆಟ್ ಮೂಲಕ ಗೋಲಿ ಸೋಡಾ ಸರಬರಾಜಾಗುತ್ತಿದೆ. ಇನ್ನು ಯುಕೆ, ಅಮೆರಿಕ ಸೇರಿದಂತೆ ಯೂರೋಪ್ ರಾಷ್ಟ್ರಗಳಿಗೂ ಇದೀಗ ಗೋಲಿ ಸೋಡಾ ಅತ್ಯಧಿಕ ಮಟ್ಟದಲ್ಲಿ ಪೂರೈಕೆಯಾಗುತ್ತಿದೆ. ಅದರಲ್ಲೂ ಜಿಂಜರ್ ಫ್ಲೇವರ್ ಸೋಡಾಗೆ ಭಾರಿ ಬೇಡಿಕೆ ಇದೆ. ಗೋಲಿ ಪಾಪ್ ಸೋಡಾದಲ್ಲಿ ಹಲವು ಫ್ಲೇವರ್‌ಗಳಿವೆ. 

ಭಾರತದ ಗೋಲಿ ಸೋಡಾಗೆ ಹೆಚ್ಚಿನ ಬೇಡಿಕೆ ಇರುವ ಕಾರಣ ಇದೀಗ ಯೂರೋಪ್ ರಾಷ್ಟ್ರಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಗೋಲಿ ಸೋಡಾ ಉತ್ಪಾದನೆಗಳು ಆರಂಭಗೊಂಡಿದೆ. ಇಷ್ಟಾದರೂ ಭಾರತದ ಗೋಲಿ ಸೋಡಾಗೆ ಬೇಡಿಕೆ ಕಡಿಮೆಯಾಗಿಲ್ಲ. ವಿದೇಶಿಗರು ಭಾರತದ ಸಾಂಪ್ರದಾಯಿಕ ಆಹಾರಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಆದರೆ ಭಾರತ ಈ ಸಾಂಪ್ರದಾಯಿಕ ಆಹಾರ, ಉತ್ಪನ್ನಗಳನ್ನು ಮರೆತು ದಶಕಗಳೇ ಉರುಳಿದೆ. ಆರೋಗ್ಯ ದೃಷ್ಟಿಯಿಂದ ಭಾರತದ ಸಾಂಪ್ರದಾಯಿಕ ಆಹಾರ ಉತ್ಪನ್ನಗಳು ಉತ್ತಮ. ಇದೀಗ ಭಾರತದ ಉತ್ಪನ್ನಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಪಡೆಯುತ್ತಿರುವುದು ವ್ಯಾಪಾರ ವಹಿವಾಟನ್ನು ಹೆಚ್ಚಿಸುತ್ತಿದೆ.

ಕಬ್ಬಿಲ್ಲದೇ ಮನೆಯಲ್ಲೇ ಬೆಲ್ಲದಿಂದ ಕಬ್ಬಿನ ಜ್ಯೂಸ್ ಮಾಡುವುದು ಹೇಗೆ? ರೆಸಿಪಿ ಇಲ್ಲಿದೆ
 

tags
vuukle one pixel image
click me!