ನಯನತಾರಾ ಜನಪ್ರಿಯ ನಟಿ ಮಾತ್ರವಲ್ಲ,ಯಶಸ್ವಿ ಉದ್ಯಮಿ ಕೂಡ ಹೌದು.ಇತ್ತೀಚೆಗೆ ನಿಯತಕಾಲಿಕವೊಂದು ಪ್ರಕಟಿಸಿದ 'ಉದ್ಯಮದಲ್ಲಿ ಪ್ರಭಾವಿ ಮಹಿಳೆಯರು' ಪಟ್ಟಿಯಲ್ಲಿ ಇವರು ಕೂಡ ಇದ್ದಾರೆ.
Business Desk:'ಲೇಡಿ ಸೂಪರ್ ಸ್ಟಾರ್' ಎಂದೇ ಜನಪ್ರಿಯತೆ ಗಳಿಸಿರುವ ತಮಿಳು ನಟಿ ನಯನತಾರಾ ಯಶಸ್ವಿ ಮಹಿಳಾ ಉದ್ಯಮಿ ಕೂಡ ಹೌದು. ಆಕೆ ಹೆಸರು ಇತ್ತೀಚೆಗೆ ನಿಯತಕಾಲಿಕವೊಂದು ಹೆಸರಿಸಿರುವ 'ಉದ್ಯಮದಲ್ಲಿ ಪ್ರಭಾವಿ ಮಹಿಳೆಯರು' ಎಂಬ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ನಯನತಾರಾ ಜೊತೆಗೆ ಇತರ ಮೂವರು ಮಹಿಳೆಯರು ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 'ದಿ ಆರ್ಚೈವ್ಸ್' ನಿರ್ದೇಶಕಿ ಹಾಗೂ ಟೈಗರ್ ಬೇಬಿ ಪ್ರೊಡಕ್ಷನ್ ಹೌಸ್ ಸಹಸಂಸ್ಥಾಪಕಿ ಝೋಯ ಅಖ್ತರ್, ಸೆಬಿ ಮುಖ್ಯಸ್ಥೆ ಮಧಬಿಪುರಿ ಬುಚ್ ಹಾಗೂ ಅಪೊಲೋ ಹಾಸ್ಪಿಟಲ್ ಎಂಟರ್ ಪ್ರೈಸರ್ಸ್ ಜಂಟಿ ಎಂಡಿ ಸಂಗೀತಾ ರೆಡ್ಡಿ ಕೂಡ 'ಬ್ಯುಸಿನೆಸ್ ಟುಡೇ' ನಿಯತಕಾಲಿಕ ಪ್ರಕಟಿಸಿರುವ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಬಗ್ಗೆಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಶೇರ್ ಮಾಡಿಕೊಂಡಿರುವ ನಯನತಾರಾ, ತನ್ನ ಈ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವ ಪತಿ ವಿಘ್ನೇಶ್ ಶಿವನ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಹಾಗೆಯೇ ಇಂಥ ಗೌರವ ನೀಡಿರೋದಕ್ಕೆ ನಿಯತಕಾಲಿಕ್ಕೆ ಕೂಡ ಧನ್ಯವಾದ ತಿಳಿಸಿದ್ದಾರೆ.
'ದೊಡ್ಡ ಕನಸು ಕಾಣಲು ಕಲಿಸಿಕೊಟ್ಟ ನನ್ನ ಪ್ರೀತಿಯ ಪತಿಗೆ ಧನ್ಯವಾದ' ಎಂದು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ವಿಷ್ನೇಶ್ ಶಿವನ್ ಗೆ ಧನ್ಯವಾದ ಅರ್ಪಿಸಿದ್ದಾರೆ. ಹಾಗೆಯೇ ಅವರ ವಿವಿಧ ಉದ್ಯಮಗಳಲ್ಲಿ ಕಾರ್ಯನಿವರ್ಹಿಸುತ್ತಿರುವ ಉದ್ಯೋಗಗಳ ಬೆಂಬಲವನ್ನು ಕೂಡ ನಟಿ ಈ ಸಂದರ್ಭದಲ್ಲಿ ಸ್ಮರಿಸಿದ್ದಾರೆ. ಮಹಿಳಾ ಉದ್ಯಮಿಯಾಗಿ ನಾನು ನನ್ನ ಉದ್ಯಮದಲ್ಲಿ ಕೆಲವೊಂದು ಪ್ರಮುಖ ಮೌಲ್ಯಗಳನ್ನು ಕೂಡ ಅನುಸರಿಸುತ್ತಿರೋದಾಗಿ ತಿಳಿಸಿದ್ದಾರೆ. 'ನಿಜ, ಉದ್ಯಮದಿಂದ ನಾವು ಹಣ ಗಳಿಸುತ್ತೇವೆ. ಆದರೆ, ಇದರಿಂದ ಜನರ ಬದುಕಿನಲ್ಲಿ ಕೂಡ ಸಕಾರಾತ್ಮಕ ಬದಲಾವಣೆಯಾಗಬೇಕು' ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಪ್ಪಟ ಬ್ರಾಹ್ಮಣ ಹುಡುಗಿ ಪುಸ್ತಕದಲ್ಲಿ ಕದ್ದುಮುಚ್ಚಿ ನೋಡ್ತಿರೋದೇನು? ನಯನತಾರಾ ವಿಡಿಯೋ ರಿಲೀಸ್
ನಟನೆ ಹೊರತಾಗಿ 'ಜವಾನ್' ಬೆಡಗಿ 'ರೌಡಿ ಪಿಕ್ಚರ್ಸ್' ಬ್ಯಾನರ್ ಅಡಿಯಲ್ಲಿ ಪತಿ ವಿಘ್ನೇಶ್ ಅವರ ಜೊತೆಗೆ ಸೇರಿ ಫಿಲ್ಮಂಗಳನ್ನು ಕೂಡ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಇತ್ತೀಚೆಗೆ ನಾಯನತಾರಾ 9Skin ಎಂಬ ಬ್ಯೂಟಿ ಬ್ರ್ಯಾಂಡ್ ಕೂಡ ಪ್ರಾರಂಭಿಸಿದ್ದಾರೆ. ಇದರ ಹೊರತಾಗಿ ಅವರು ಲಿಪ್ ಬಾಮ್ ಉತ್ಪಾದನಾ ಕಂಪನಿ ಹಾಗೂ 'ಫೆಮಿ' ಎಂಬ ಹೆಸರಿನ ಸ್ಯಾನಿಟರಿ ಪ್ಯಾಡ್ ಕಂಪನಿಯನ್ನು ಕೂಡ ಹೊಂದಿದ್ದಾರೆ.
ಇನ್ನು ನಯನತಾರಾ ಅವರ ಉದ್ಯಮಗಳಲ್ಲಿ ಪತಿ ವಿಘ್ನೇಶ್ ಶಿವನ್ ಪಾಲುದಾರರಾಗಿದ್ದಾರೆ. ಶಿವನ್ ಉದ್ಯಮ ಅವಕಾಶಗಳ ಬಗ್ಗೆ ವಿಶ್ಲೇಷಣೆ ನಡೆಸುತ್ತಾರೆ ಎಂದು ತಿಳಿಸಿದ್ದಾರೆ. ಅಲ್ಲದೆ, ಅವರು ಗುಣಮಟ್ಟದ ಜೊತೆಗೆ ರಾಜೀ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ಇದೇ ಕಾರಣಕ್ಕೆ ತನ್ನ ಹಾಗೂ ಪತಿ ಅನುಮತಿಯಿಲ್ಲದೆ ಯಾವ ಉತ್ಪನ್ನ ಕೂಡ ಹೊರಹೋಗುವುದಿಲ್ಲ ಎಂಬ ಮಾಹಿತಿ ನೀಡಿದ್ದಾರೆ.
ಜವಾನ್ ಸಿನಿಮಾ ಬಳಿಕ ನಟಿ ನಯನತಾರಾ ಅಭಿನಯದ ‘ಅನ್ನಪೂರ್ಣಿ’ ಸಿನಿಮಾ ಡಿಸೆಂಬರ್ 1 ರಂದು ರಿಲೀಸ್ ಆಗಿತ್ತು. ನೀಲೇಶ್ ಕೃಷ್ಣ ನಿರ್ದೇಶನದ ಈ ಸಿನಿಮಾ ಹೇಳಿಕೊಳ್ಳುವ ಯಶಸ್ಸು ನೀಡಲಿಲ್ಲ. ಜವಾನ್ ಸಿನಿಮಾಗೆ ನಯನತಾರಾ10 ಕೋಟಿ ರೂ. ಸಂಭಾವನೆ ತೆಗೆದುಕೊಂಡಿದ್ದರು. ಅನ್ನಪೂರ್ಣಿಯಲ್ಲಿ 12 ಕೋಟಿ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.ದಶಕಗಳಿಂದಲೂ ಚಿತ್ರೋದ್ಯಮದಲ್ಲಿ ಸಕ್ರಿಯರಿರುವ ಈ ನಟಿ, ಅಮ್ಮನಾದ ಮೇಲೂ ಸೌತ್‌ನ ಟಾಪ್ ನಟಿ. ಜೊತೆಗೆ ಬಿಗ್ ಬಜೆಟ್ ಸಿನಿಮಾಗಳಿಗೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.
ಬಾಲಿವುಡ್‌ನಲ್ಲಿನ್ನು ನಟಿಸೋಲ್ಲ ಎಂದ ನಯನಾತಾರ! ಜವಾನ್‌ನಲ್ಲಿ ಡಿಪ್ಪಿ ಹೈಲೈಟ್ ಆಗಿದ್ದಕ್ಕೆ ಸಿಟ್ಟಾ?
ಇನ್ನು ನಯನತಾರಾ ಇತ್ತೀಚೆಗಷ್ಟೇ ಇನ್ಸ್ಟಾಗ್ರಾಮ್‌ಗೆ ಎಂಟ್ರಿ ನೀಡಿದ್ದು, ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ. ಈಗಾಗಲೇ 7 ಮಿಲಿಯನ್‌ಗೂ ಹೆಚ್ಚು ಜನರು ನಟಿಯನ್ನು ಫಾಲೋ ಮಾಡುತ್ತಿದ್ದಾರೆ. ಸದ್ಯ ನಟಿ ನಯನತಾರಾ ಪತಿ ಹಾಗೂ ಅವಳಿ ಮಕ್ಕಳೊಂದಿಗೆ ಹ್ಯಾಪಿಯಾಗಿದ್ದಾರೆ.