ಮುಂದಿನ ಭವಿಷ್ಯದ ಬಗ್ಗೆ ಪ್ರತಿಯೊಬ್ಬರೂ ಆಲೋಚನೆ ಮಾಡುತ್ತಾರೆ. 60ರ ನಂತರ ಏನು ಎಂಬ ಚಿಂತೆ ಕಾಡುತ್ತದೆ. ಕೇಂದ್ರ, ರಾಜ್ಯ ಸರ್ಕಾರಿ ನೌಕರಿಯಲ್ಲಿರುವವರಿಗೆ ಪಿಂಚಣಿ ವೃದ್ಧಾಪ್ಯದಲ್ಲಿ ಆಸರೆಯಾಗುತ್ತದೆ. ಆದ್ರೆ ಪಿಂಚಣಿ ಸಿಗದ ಉದ್ಯೋಗ ಮಾಡುವವರಿಗೆ ಹಣ ಹೂಡಿಕೆ ಸುಲಭವಲ್ಲ. ಅಂತವರಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ ನೆರವಾಗಲಿದೆ. ರಾಷ್ಟ್ರೀಯ ಪಿಂಚಣಿ ಯೋಜನೆ ಬಗ್ಗೆ ಇಲ್ಲಿದೆ ಮಾಹಿತಿ.
ನಿವೃತ್ತಿಯ (Retirement) ನಂತರದ ಬದುಕು ಸರಳವಾಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಜೀವನಕ್ಕಾಗಿ ಜನರು ವಿಮೆ ಕಟ್ಟುತ್ತಾರೆ. ಕೆಲವರು ವಿವಿಧ ಬ್ಯಾಂಕ್ ಗಳಲ್ಲಿ ಹಣ ಕೂಡಿಡುತ್ತಾರೆ. ನಿವೃತ್ತಿಯಾದ ನಂತರ ಎಲ್ಲರಿಗೂ ಪಿಂಚಣಿ (Pension) ಸಿಗುವುದಿಲ್ಲ. ಇನ್ನೂ ಕೆಲವರ ಆರ್ಥಿಕ ಪರಿಸ್ಥಿತಿ ಹೇಗಿರುತ್ತದೆ ಎಂದರೆ ಅವರ ಬಳಿ ಬ್ಯಾಂಕ್, ವಿಮೆ ಮುಂತಾದ ಕಡೆ ಕೂಡಿಡುವಷ್ಟು ಹಣ ಇರುವುದಿಲ್ಲ. ನಾನಾ ಸಮಸ್ಯೆಗಳಿಂದ ಹಣ ಕೂಡಿಡಲು ಸಾಧ್ಯವಿಲ್ಲ,ಪಿಂಚಣಿ ಸಿಗುವುದಿಲ್ಲ ಎನ್ನುವವರು ಸರ್ಕಾರದ ಪಿಂಚಣಿ ಯೋಜನೆ ಲಾಭ ಪಡೆಯಬಹುದು. ಇಂಥವರಿಗೆ ನ್ಯಾಶನಲ್ ಪೆನ್ಷನ್ ಸ್ಕೀಮ್ (NPS) ಬಹಳ ಉಪಯುಕ್ತವಾಗಿದೆ. ನೀವು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಯಲ್ಲಿ ಹಣ ಇಟ್ಟರೆ ನಿಮ್ಮ ನಿವೃತ್ತಿಯ ಸಮಯದಲ್ಲಿ ನಿಮಗೆ ಸುಮಾರು 34 ಲಕ್ಷ ರೂಪಾಯಿ ಸಿಗುತ್ತದೆ. ಇದಕ್ಕಾಗಿ ನೀವು ಪ್ರತಿ ದಿನ 50 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ 4 ವಲಯಗಳಿವೆ :
ಕೇಂದ್ರ ಸರ್ಕಾರ - ಇದು ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ
ರಾಜ್ಯ ಸರ್ಕಾರ - ಇದು ರಾಜ್ಯ ಸರ್ಕಾರಿ ನೌಕರರಿಗೆ
ಕಾರ್ಪೊರೇಟ್ ವಲಯ - ಇದು ಖಾಸಗಿ ವಲಯದ ಉದ್ಯೋಗಿಗಳಿಗೆ
ಎಲ್ಲಾ ನಾಗರಿಕ ಮಾದರಿ – ಇದರಲ್ಲಿ ಭಾರತದ ನಾಗರಿಕರು ಖಾತೆ ತೆರೆಯಬಹುದು.
undefined
ಅಂದ್ರೆ ಪಿಂಚಣಿ ಪಡೆಯಲು ಕೆಲಸ ಇರಲೇಬೇಕೆಂಬ ನಿಯಮವಿಲ್ಲ. ಕಂಪನಿಯಲ್ಲಿ ಉದ್ಯೋಗ (Job) ಮಾಡದ ವ್ಯಕ್ತಿ ಕೂಡ ಈ ಯೋಜನೆಯಡಿ ಹೂಡಿಕೆ ಮಾಡಬಹುದು. ನಿವೃತ್ತಿ ಜೀವನವನ್ನು ಯಾವುದೇ ಟೆನ್ಷನ್ ಇಲ್ಲದೆ ಕಳೆಯಬಹುದು.
ಈ ಯೋಜನೆಯಲ್ಲಿ ಬಡ್ಡಿ ದರವು ಪ್ರತಿಶತ 9-12 ರಷ್ಟು ಇರುತ್ತದೆ. ಒಬ್ಬ ವ್ಯಕ್ತಿ ತನ್ನ 25 ನೇ ವರ್ಷದಲ್ಲಿ NPSನಲ್ಲಿ ಪ್ರತಿ ತಿಂಗಳು 1,500 ರೂಪಾಯಿ ಹೂಡಿಕೆ ಮಾಡಲು ಶುರು ಮಾಡಿದರೆ, ಸತತ 35 ವರ್ಷ ಹಣ ಹೂಡಿಕೆ ಮಾಡಬೇಕು. 35 ವರ್ಷದಲ್ಲಿ ಹೂಡಿಕೆ ಮಾಡಿದ ಹಣ ಒಟ್ಟೂ 6.30 ಲಕ್ಷ ರೂಪಾಯಿಯಾಗುತ್ತದೆ. ಆ ಮೊತ್ತಕ್ಕೆ ಬಡ್ಡಿಯ ಹಣ ಸೇರಿದರೆ ಸುಮಾರು 27.9 ಲಕ್ಷ ರೂಪಾಯಿಯಾಗುತ್ತದೆ.
25ನೇ ವಯಸ್ಸಿನಲ್ಲಿಯೇ ಇದ್ರಲ್ಲಿ ಹೂಡಿಕೆ ಮಾಡಿದರೆ ನಿವೃತ್ತಿ ಸಮಯದಲ್ಲಿ ಎಲ್ಲ ಸೇರಿ ಸುಮಾರು 34 ಲಕ್ಷ ರೂಪಾಯಿ ಸಿಗುತ್ತದೆ. ಈ ಯೋಜನೆಯಲ್ಲಿ ತೆರಿಗೆ ಉಳಿತಾಯ ಮಾಡಬಹುದು. ಒಟ್ಟೂ 1.89 ಲಕ್ಷ ರೂಪಾಯಿವರೆಗೆ ತೆರಿಗೆ ಉಳಿತಾಯ ಮಾಡಬಹುದಾಗಿದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಹೂಡಿಕೆ ಮಾಡಿದ ನಂತರ ವ್ಯಕ್ತಿ ನಿವೃತ್ತಿಯಲ್ಲಿ ಪ್ರತಿಶತ 60 ರಷ್ಟು ಹಣವನ್ನು ಮಾತ್ರ ತೆಗೆಯಬಹುದು. ಅಂದರೆ ಆ ವ್ಯಕ್ತಿಗೆ ಸುಮಾರು 20.51 ಲಕ್ಷ ಮಾತ್ರ ಸಿಗುತ್ತದೆ. ಉಳಿದ ಪ್ರತಿಶತ 60 ರಷ್ಟು ಹಣವನ್ನು ಯಾವುದಾದರೂ ವಾರ್ಷಿಕ ಯೋಜನೆಯಲ್ಲಿ ಇಟ್ಟು ಪ್ರತಿ ತಿಂಗಳು ಮಾಸಿಕ ಪಿಂಚಣಿ ಪಡೆಯಬಹುದು.
ಈ ಯೋಜನೆಗೆ ಸರಕಾರ ಪ್ರತಿಶತ 8 ರಷ್ಟು ಬಡ್ಡಿ ನೀಡಿದರೆ, ನಿಮಗೆ ಮಾಸಿಕ ಪಿಂಚಣಿ 9000 ರೂಪಾಯಿ ಸಿಗುತ್ತದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಒಮ್ಮೆಲೇ ಎಲ್ಲ ಹಣವನ್ನೂ ಕೊಡಲಾಗುವುದಿಲ್ಲ. ಈ ಯೋಜನೆಯಲ್ಲಿ ನಿಮಗೆ ಪ್ರತಿಶತ 60 ರಷ್ಟು ಹಣವನ್ನು ಮಾತ್ರ ಕೊಡಲಾಗುತ್ತದೆ. ಉಳಿದ ಪ್ರತಿಶತ 40 ರಷ್ಟು ಹಣವನ್ನು ನೀವು ಯಾವುದಾದರೂ ವಾರ್ಷಿಕ ಯೋಜನೆಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.
ಯಾರು ಹೂಡಿಕೆ (Investment) ಮಾಡಬಹುದು?:
18 ರಿಂದ 65 ವರ್ಷದೊಳಗಿನ ಯಾರಾದರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಆನ್ಲೈನ್ ಮೂಲಕ ಎನ್‌ಪಿಎಸ್‌ನಲ್ಲಿ ಸುಲಭವಾಗಿ ಹೂಡಿಕೆ ಮಾಡಬಹುದು. ಬ್ಯಾಂಕ್‌ನಲ್ಲಿ ಎನ್‌ಪಿಎಸ್ ಖಾತೆಯನ್ನು ಹೊಂದಿದ್ದರೆ, ಬ್ಯಾಂಕಿನ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಬಹುದು.