ಬೆಂಗಳೂರಿನ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ದಿವಾಳಿಯಾಗಿದೆ. ಈ ಕುರಿತು ಆರ್‌ಬಿಐ ಸ್ಪಷ್ಟನೆ ನೀಡಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ 13 ಶಾಖೆ ಹೊಂದಿರುವ ಬ್ಯಾಂಕ್ ಸಾವಿರಾರು ಗ್ರಾಹಕರನ್ನು ಹೊಂದಿದೆ. ಇದೀಗ ಗ್ರಾಹಕರ ಆತಂಕಕ್ಕೆ ಆರ್‌ಸಿಬಿ ಉತ್ತರ ನೀಡಿದೆ.
ಬೆಂಗಳೂರು(ಜು.25) ಬೆಂಗಳೂರಿನ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ದಿವಾಳಿಯಾಗಿದೆ ಎಂದು ಆರ್‌ಬಿಐ ಘೋಷಿಸಿದೆ. ಇದರ ಬೆನ್ನಲ್ಲೇ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಮೇಲೆ ಆರ್‌ಬಿಐ ಹಲವು ನಿರ್ಬಂಧ ವಿಧಿಸಿದೆ. ಆರ್‌ಬಿಐ ಘೋಷಣೆ ಇದೀಗ ಬ್ಯಾಂಕ್ ಗ್ರಾಹಕರ ಆತಂಕ ಹೆಚ್ಚಿಸಿದೆ. ಬೆಂಗಳೂರು, ಮೈಸೂರಿನಲ್ಲಿ ಒಟ್ಟು 13 ಶಾಖೆಗಳನ್ನು ಹೊಂದಿರುವ ನ್ಯಾಷನಲ್ ಕೋ ಆಫರೇಟಿವ್ ಬ್ಯಾಂಕ್ ಲಕ್ಷಾಂತರ ಗ್ರಾಹಕರನ್ನು ಹೊಂದಿದೆ. ಈ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಿದ ಗ್ರಾಹಕರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿವಾಳಿಯಾಗಿರುವ ನ್ಯಾಷನಲ್ ಕೋ ಆಫರೇಟಿವ್ ಬ್ಯಾಂಕ್ ಮೇಲೆ ಆರ್‌ಬಿಐ ಹಲವು ನಿರ್ಬಂಧ ವಿಧಿಸಿದೆ.
ಆರ್ಥಿಕ ಮುಗ್ಗಟ್ಟಿನಲ್ಲಿರುವ ಬೆಂಗಳೂರು ನ್ಯಾಷನಲ್ ಕೋ ಆಫರೇಟಿವ್ ಬ್ಯಾಂಕ್ ಸಾಲ ನೀಡುವಂತಿಲ್ಲ ಎಂದು RBI ಹೇಳಿದೆ. ಇಷ್ಟೇ ಅಲ್ಲ ಗ್ರಾಹಕರಿಂದ ಹಣ ಜಮಾವಣೆ ಮಾಡಲು ಅನುಮತಿ ಪಡೆಯಬೇಕು.ಸದ್ಯ ಗ್ರಾಹಕರು 50,000 ರೂಪಾಯಿ ವರೆಗೆ ಮಾತ್ರ ಹಣ ಹಿಂಪಡೆಯಲು ಸಾಧ್ಯ ಎಂದು RBI ಹೇಳಿದೆ. ಈಗಾಗಲೇ ಲಕ್ಷ ಲಕ್ಷ ರೂಪಾಯಿ ಹೂಡಿಕೆ ಮಾಡಿದ ಗ್ರಾಹಕರ ಆತಂಕ ಹೆಚ್ಚಾಗಿದೆ.
undefined
ಕಳೆದ ಹಣಕಾಸು ವರ್ಷದಲ್ಲಿ ಬ್ಯಾಂಕ್‌ಗಳಿಂದ 2.09 ಲಕ್ಷ ಕೋಟಿ ಬ್ಯಾಡ್ ಲೋನ್ ರೈಟ್ ಆಫ್!
ಗ್ರಾಹಕರು 5 ಲಕ್ಷ ರೂಪಾಯಿವರೆಗೆ ವಿಮಾ ಹಣ ಪಡೆಯಲು RBI ಅವಕಾಶ ನೀಡಿದೆ. ಆದರೆ ಬ್ಯಾಂಕ್ ಲೈಸೆನ್ಸ್ ರದ್ದು ಮಾಡಿಲ್ಲ ಎಂದು RBI ಸ್ಪಷ್ಟಪಡಿಸಿದೆ. ಇದೇ ವೇಳೆ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ವ್ಯವಹಾರ ಮುಂದುವರಿಸಲಿದೆ. ಬ್ಯಾಂಕ್‌ನ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ RBI ಕ್ರಮ ಕೈಗೊಳ್ಳಲಿದೆ ಎಂದಿದೆ.
ಬೆಂಗಳೂರು ಮೂಲದ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಒಟ್ಟು 13 ಶಾಖೆಗಳನ್ನು ಹೊಂದಿದೆ. ಗಾಂಧಿ ಬಜಾರ್, ಜಯನಗರ 5ನೇ ಬ್ಲಾಕ್, ಬನಶಂಕರಿ 2ನೇ ಹಂತ, ಕೋರಮಂಗಲ, ಸದಾಶಿವನಗರ, ಅಗ್ರಹಾರ ದಾಸರಹಳ್ಳಿ, ಬನಶಂಕರಿ 3ನೇ ಹಂತ, ಇಂದಿರಾನಗರ, ಯಶವಂತಪುರ, ರಾಜರಾಜೇಶ್ವರಿನಗರ, ಬಾಣಸವಾಡಿ ಹಾಗೂ ಮೈಸೂರಿನ ಕುವೆಂಪು ನಗರ ಸೇರಿದಂತೆ 13 ಶಾಖೆಗಳು ಕಾರ್ಯನಿರ್ವಹಿಸುತ್ತಿದೆ. ಆದರೆ ದಿವಾಳಿಯಾಗಿರುವ ಕಾರಣ ಇದೀಗ ಬ್ಯಾಂಕ್ ವ್ಯವಹಾರಕ್ಕೆ ನಿರ್ಬಂಧ ವಿಧಿಸಲಾಗಿದೆ. RBI ನಿರ್ಬಂಧದಿಂದ ಠೇವಣಿದಾರರಲ್ಲಿ ಆತಂಕ ಹೆಚ್ಚಾಗಿದೆ.
ಅಮೆರಿಕದ ಮತ್ತೊಂದು ಬ್ಯಾಂಕ್ ಪತನ: ದೊಡ್ಡಣ್ಣನಿಗೆ ಸರಣಿ ಶಾಕ್
ಬ್ಯಾಂಕ್ ಆರ್ಥಿಕತೆಯನ್ನು ಸರಿದಾರಿಗೆ ತರಲು ಆರ್‌ಬಿಐ ಮಹತ್ವದ ನಿರ್ದೇಶ ನೀಡಿದೆ. ಹೀಗಾಗಿ ಕೆಲ ನಿರ್ಬಂಧ ವಿಧಿಸಿದೆ. ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಆರ್‌ಬಿಐ ಹೇಳಿದೆ. ಬೆಂಗಳೂರಿನ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಮುಂದಿನ ವ್ಯವಹಾರ ಆರ್‌ಬಿಐ ನಿಗಾದಲ್ಲಿ ನಡೆಯಲಿದೆ. ಆರ್‌ಬಿಐ ಸೂಚನೆಯಂತೆ ಎಲ್ಲಾ ವ್ಯವಹಾರಗಳನ್ನು ಕೋ ಆಪರೇಟಿವ್ ಬ್ಯಾಂಕ್ ಮಾಡಲಿದೆ.