ಬ್ಯಾಂಕ್ ಎಫ್ ಡಿ ಬಡ್ಡಿದರದಲ್ಲಿ ಬದಲಾವಣೆ;ಎಸ್ ಬಿಐ, ಪಿಎನ್ ಬಿ, ಎಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕುಗಳಲ್ಲಿ ಎಷ್ಟಿದೆ?

By Suvarna NewsFirst Published Apr 19, 2024, 6:13 PM IST
Highlights

ಎಸ್ ಬಿಐ, ಪಿಎನ್ ಬಿ, ಎಚ್ ಡಿಎಫ್ ಸಿ ಸೇರಿದಂತೆ ಪ್ರಮುಖ ಬ್ಯಾಂಕುಗಳಲ್ಲಿ ಎಫ್ ಡಿ ಮೇಲಿನ ಬಡ್ಡಿದರದಲ್ಲಿ ಪರಿಷ್ಕರಣೆ ಮಾಡಲಾಗಿದೆ. ಹಾಗಾದ್ರೆ ಈ ಬ್ಯಾಂಕುಗಳಲ್ಲಿ ಎಫ್ ಡಿ ಬಡ್ಡಿದರ ಎಷ್ಟಿದೆ?
 

Business Desk: ಬ್ಯಾಂಕ್ ಸ್ಥಿರ ಠೇವಣಿ ಹೂಡಿಕೆದಾರರ ನೆಚ್ಚಿನ ಆಯ್ಕೆಗಳಲ್ಲಿ ಒಂದು. ಸ್ಥಿರ ಠೇವಣಿಯನ್ನು (ಎಫ್ ಡಿ) ಅವಧಿ ಠೇವಣಿ ಅಥವಾ ಟರ್ಮ್ ಡೆಫಾಸಿಟ್ ಎಂದು ಕೂಡ ಕರೆಯಲಾಗುತ್ತದೆ. ಎಫ್ ಡಿಯಲ್ಲಿ ಹೂಡಿಕೆ ಮಾಡಿದ್ರೆ ಅಪಾಯ ಕಡಿಮೆಯಿರುವ ಕಾರಣ ಬಹುತೇಕರು ಇದನ್ನು ಹೂಡಿಕೆಗೆ ಆಯ್ದುಕೊಳ್ಳುತ್ತಾರೆ. ನಿಗದಿತ ಅವಧಿ ಅಥವಾ ಮೆಚ್ಯೂರಿಟಿ ತನಕ ನಿಗದಿತ ಅವಧಿಯಲ್ಲಿ ಈ ಠೇವಣಿಗೆ ಸ್ಥಿರವಾದ ಆದಾಯ ಸಿಗುತ್ತದೆ. ಎಫ್ ಡಿ ಮೇಲಿನ ಬಡ್ಡಿದರ ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುತ್ತದೆ. ವಿವಿಧ ಬ್ಯಾಂಕ್ ಗಳು ಎಫ್ ಡಿ ಮೇಲೆ ಶೇ.3ರಿಂದ ಶೇ.7.50ರಷ್ಟು ಬಡ್ಡಿದರ ನೀಡುತ್ತವೆ. ಇನ್ನು ಹಿರಿಯ ನಾಗರಿಕರು ಹೆಚ್ಚುವರಿ ಶೇ.0.5ರಷ್ಟು ಬಡ್ಡಿದರ ಪಡೆಯುತ್ತಾರೆ. ಹೀಗಾಗಿ ಎಫ್ ಡಿಗಳಲ್ಲಿ ಹೂಡಿಕೆ ಮಾಡುವ ಮುನ್ನ ಯಾವ ಬ್ಯಾಂಕಿನಲ್ಲಿ ಎಷ್ಟು ಬಡ್ಡಿದರ ನೀಡುತ್ತಾರೆ ಎಂಬುದನ್ನು ಪರಿಶೀಲಿಸೋದು ಅಗತ್ಯ. ಬ್ಯಾಂಕ್ ಗಳಲ್ಲಿನ ಎಫ್ ಡಿ ದರ ಆಗಾಗ ಬದಲಾಗುತ್ತಿರುತ್ತದೆ. ಹಾಗಾದ್ರೆ ಯಾವೆಲ್ಲ ಬ್ಯಾಂಕುಗಳಲ್ಲಿ ಎಫ್ ಡಿ ಮೇಲಿನ ಬಡ್ಡಿದರ ಎಷ್ಟಿದೆ?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ಈ ಬ್ಯಾಂಕಿನ ಸ್ಥಿರ ಠೇವಣಿಯಲ್ಲಿ (ಎಫ್ ಡಿ) ಹೂಡಿಕೆ ಮಾಡುವ ಗ್ರಾಹಕರಿಗೆ ಶೇ.3ರಿಂದ ಶೇ.7ರಷ್ಟು ಬಡ್ಡಿದರ ಸಿಗುತ್ತದೆ. ಇನ್ನು ಹಿರಿಯ ನಾಗರಿಕರಿಗೆ 50 ಬೇಸಿಸ್ ಪಾಯಿಂಟ್ಸ್ ಹೆಚ್ಚುವರಿ ಬಡ್ಡಿ ನೀಡಲಾಗುತ್ತದೆ. ಅದರಲ್ಲೂ ಒಂದು ವರ್ಷದ ಅವಧಿಯಲ್ಲಿ ಮೆಚ್ಯೂರ್ ಆಗುವ ಎಫ್ ಡಿಗಳಿಗೆ ಬ್ಯಾಂಕ್ ಗಳು ಶೇ.6.8ರಷ್ಟು ಬಡ್ಡಿದರ ನೀಡುತ್ತವೆ. ಇನ್ನು ಎರಡು ವರ್ಷ ಅಥವಾ ಮೂರು ವರ್ಷಕ್ಕಿಂತ ಕಡಿಮೆ ಅವಧಿಯ ಎಫ್ ಡಿ ಮೇಲೆ ಶೇ.7ರಷ್ಟು ಬಡ್ಡಿದರ ನೀಡುತ್ತವೆ. 

ಬ್ಯಾಂಕ್ ಎಫ್ ಡಿಯಿಂದ ಅಧಿಕ ರಿಟರ್ನ್ಸ್ ಗಳಿಸ್ಬೇಕಾ? ಹಾಗಾದ್ರೆ ಲ್ಯಾಡರಿಂಗ್ ವಿಧಾನ ಅನುಸರಿಸಿ

ಪಂಜಾಬ್ ನ್ಯಾಷನಲ್ ಬ್ಯಾಂಕ್:  ಈ ಬ್ಯಾಂಕಿನ ಎಫ್ ಡಿ ಮೇಲೆ ಶೇ.3.50ರಿಂದ ಶೇ. 7.50ರಷ್ಟು ಬಡ್ಡಿದರ ನೀಡಲಾಗುತ್ತದೆ. ಅದರಲ್ಲೂ ಒಂದು ವರ್ಷದಲ್ಲಿ ಮೆಚ್ಯೂರ್ ಆಗುವ ಸ್ಥಿರ ಠೇವಣಿಗಳಿಗೆ ಶೇ.6.75ರಷ್ಟು ಬಡ್ಡಿದರ ನೀಡಲಾಗುತ್ತದೆ. ಇನ್ನು ಒಂದು ವರ್ಷದ ಅವಧಿಯಲ್ಲಿ ಮೆಚ್ಯೂರ್ ಆಗುವ ಎಫ್ ಡಿಗಳಿಗೆ ಶೇ.6.75ರಷ್ಟು ಬಡ್ಡಿದರ ನೀಡಲಾಗುತ್ತದೆ. ಒಂದು ವರ್ಷದ ಅವಧಿಯ ಎಫ್ ಡಿಗೆ ಹಿರಿಯ ನಾಗರಿಕರಿಗೆ ಶೇ.7.25ರಷ್ಟು ಬಡ್ಡಿ ನೀಡಲಾಗುತ್ತದೆ. 

ಐಸಿಐಸಿಐ ಬ್ಯಾಂಕ್: ಐಸಿಐಸಿಐ ಬ್ಯಾಂಕಿನ ಎಫ್ ಡಿ ಯೋಜನೆಗಳ ಮೇಲೆ ಶೇ.3ರಿಂದ ಶೇ.7.50ರಷ್ಟು ಬಡ್ಡಿದರ ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ಶೇ. 0.5ರಷ್ಟು ಹೆಚ್ಚುವರಿ ಬಡ್ಡಿದರ ನೀಡಲಾಗುತ್ತದೆ. ಒಂದು ವರ್ಷದ ಅವಧಿಯಲ್ಲಿ ಮೆಚ್ಯುರ್ ಆಗುವ ಎಫ್ ಡಿಗೆ ಶೇ.6.7ರಷ್ಟು ಬಡ್ಡಿದರ ನೀಡಲಾಗುತ್ತದೆ. 

ಎಚ್ ಡಿಎಫ್ ಸಿ ಬ್ಯಾಂಕ್: ಒಂದು ವರ್ಷದ ಅವಧಿಯ ಎಫ್ ಡಿ ಮೇಲೆ ಎಚ್ ಡಿಎಫ್ ಸಿ ಬ್ಯಾಂಕ್ ಉತ್ತಮ ಬಡ್ಡಿದರ ನೀಡುತ್ತದೆ. ಸಾಮಾನ್ಯ ಹೂಡಿಕೆದಾರರು ಒಂದು ವರ್ಷದ ಅವಧಿಯ ಎಫ್ ಡಿ ಮೇಲೆ ಶೇ.6.60ಷ್ಟು ಬಡ್ಡಿದರ ಪಡೆದರೆ, ಹಿರಿಯ ನಾಗರಿಕರು ಶೇ.7.10ರಷ್ಟು ಹೆಚ್ಚುವರಿ ಬಡ್ಡಿದರ ಪಡೆಯುತ್ತಾರೆ. 

ಈ ಬ್ಯಾಂಕ್‌ಗಳಲ್ಲಿ ಎಫ್‌ಡಿ ಮೇಲೆ ಸಿಗುತ್ತೆ 9%ಕ್ಕಿಂತ ಹೆಚ್ಚಿನ ಬಡ್ಡಿ

ಕಳೆದ ಆರು ತಿಂಗಳಿಂದ ಆರ್ ಬಿಐ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಹೀಗಾಗಿ ಕೆಲವು ಬ್ಯಾಂಕುಗಳು ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರದಲ್ಲಿ ಕೂಡ ಗಮನಾರ್ಹ ಬದಲಾವಣೆ ಮಾಡಿಲ್ಲ. ರೆಪೋ ದರದಲ್ಲಿ ಹೆಚ್ಚಳವಾದ್ರೆ ಬ್ಯಾಂಕ್ ಎಫ್ ಡಿ ಬಡ್ಡಿದರದಲ್ಲಿ ಕೂಡ ಏರಿಕೆಯಾಗುತ್ತದೆ. ಅದೇ ರೆಪೋ ದರದಲ್ಲಿ ಇಳಿಕೆಯಾದ್ರೆ ಬ್ಯಾಂಕ್ ಎಫ್ ಡಿ ಮೇಲಿನ ಬಡ್ಡಿದರದಲ್ಲಿ ಇಳಿಕೆ ಮಾಡಲಾಗುತ್ತದೆ. ಹೀಗಾಗಿ ಸಾಲಗಾರರಿಗೆ ರೆಪೋ ದರದಲ್ಲಿ ಏರಿಕೆಯಾದ್ರೆ ಇಎಂಐ ಹೆಚ್ಚಳವಾಗುವ ಮೂಲಕ ಜೇಬಿನ ಹೊರೆ ಹೆಚ್ಚುತ್ತದೆ. ಅದೇ ಎಫ್ ಡಿ ಹೂಡಿಕೆದಾರರಿಗೆ ರೆಪೋ ದರ ಹೆಚ್ಚಳವಾದ್ರೆ ಬಡ್ಡಿದರ ಏರಿಕೆಯಾಗುತ್ತದೆ. ಇದರಿಂದ ಅವರಿಗೆ ಗಳಿಕೆ ಹೆಚ್ಚುತ್ತದೆ. 

click me!