
ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಭವಿಷ್ಯಕ್ಕೆ ಗೋಲ್ಡ್ (Gold) ಇಲ್ಲ ವಿಮೆ (insurance) ನೆರವಾಗುತ್ತೆ. ಇದು ಗೊತ್ತಿದ್ದೂ ಜನರು ಅದನ್ನು ಖರೀದಿ ವೇಳೆ ಐದಾರು ಬಾರಿ ಆಲೋಚನೆ ಮಾಡ್ತಾರೆ. ಒಂದೇ ಬಾರಿ ದೊಡ್ಡ ಮೊತ್ತದ ಹಣವನ್ನು ಪಾವತಿ ಮಾಡಿ, ಜೀವನ ಪರ್ಯಂತ ಅದ್ರ ಲಾಭ ಪಡೆಯಿರಿ ಅಂತ ಸರ್ಕಾರ ಕೆಲ ಯೋಜನೆಗಳನ್ನು ಘೋಷಣೆ ಮಾಡಿದ್ರೂ ಅದನ್ನು ಪಡೆಯಲು ಹಿಂದೆ ಮುಂದೆ ನೋಡುವ ಜನರಿದ್ದಾರೆ. ಹಾಗಿರುವಾಗ ಸ್ಟ್ರೀಟ್ ಫುಡ್ (Street Food) ಗೆ ಯಾರು ಸಾವಿರಾರು ರೂಪಾಯಿ ಸುರೀತಾರೆ ಅಲ್ವಾ? ಹೀಗೆ ಆಲೋಚನೆ ಮಾಡಿ ವಿಶೇಷ ಸ್ಕೀಮ್ ಶುರು ಮಾಡ್ದೆ ಹೋಗಿದ್ರೆ ಈ ಪಾನಿಪುರಿ (Panipuri) ಮಾರಾಟಗಾರ ಪ್ರಸಿದ್ಧಿ ಪಡೀತಿರಲಿಲ್ಲ. ಅವನ ಪ್ಲಾನ್ ಸಕ್ಸಸ್ ಆಗ್ತಿರಲಿಲ್ಲ. ಸ್ಟ್ರೀಟ್ ಫುಡ್ ಅದ್ರಲ್ಲೂ ಪಾನಿ ಪುರಿ ಅಂದ್ರೆ ಎಲ್ಲರ ಬಾಯಲ್ಲಿ ನೀರು ಬರುತ್ತೆ. ಜನರಿಗೆ ಪಾನಿಪುರಿ ಮೇಲಿರುವ ಪ್ರೀತಿಯನ್ನು ಗಮನದಲ್ಲಿಟ್ಟುಕೊಂಡು ವ್ಯಾಪಾರಿಯೊಬ್ಬ ವಿಶೇಷ ಆಫರ್ ನೀಡಿದ್ದಾನೆ. ಅವನ ಆಫರ್ ಈಗ ಸೋಶಿಯಲ್ ಮೀಡಿಯಾ (Social Media)ದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಜೀವನ ಪರ್ಯಂತ ಸಿಗುತ್ತೆ ಪಾನಿಪುರಿ : ನೀವು ಪ್ರತಿ ಬಾರಿ ಪಾನಿಪುರಿ ತಿಂದ್ಮೇಲೆ ಬಿಲ್ ಪೇ ಮಾಡಿ ಬರ್ತಿರ್ತೀರಾ. ಆದ್ರೆ ನಾಗ್ಪುರದ ಒಂದು ಶಾಪ್ ನಲ್ಲಿ ಸ್ಪೇಷಲ್ ಆಫರ್ ಸಿಗ್ತಿದೆ. ಆ ಪಾನಿಪುರಿ ಶಾಪ್ ಗೆ ಜೀವನದಲ್ಲಿ ಒಮ್ಮೆ ನೀವು ಹಣ ನೀಡಿದ್ರೆ ಸಾಕು. ನಂತ್ರ ಯಾವಾಗ ಬೇಕಾದ್ರೂ ಅಂಗಡಿಗೆ ಬಂದು ಪಾನಿಪುರಿ ತಿಂದು ಹೋಗ್ಬಹುದು. ನಾಗ್ಪುರದ ಅಮರ್ಜ್ಯೋತಿ ಪ್ಯಾಲೇಸ್ ಬಳಿ ಸ್ಟ್ರೀಟ್ ಫುಡ್ ಮಾರಾಟಗಾರನೊಬ್ಬ ಈ ಆಫರ್ ನೀಡಿದ್ದಾನೆ. ವಿಜಯ್ ಮೇವಾಲಾಲ್ ಗುಪ್ತಾ ಆತನ ಹೆಸರು. ಆತ ಪ್ರತಿ ದಿನ ಸಂಜೆ 6 ಗಂಟೆಗೆ ಸ್ಟಾಲ್ ಓಪನ್ ಮಾಡ್ತಾನೆ. ವಿಜಯ್ ಮೇವಾಲಾಲ್ ಮಾಡೋ ಪಾನಿಪುರಿ ಎಲ್ಲರಿಗೂ ಇಷ್ಟ. ಆರಂಭದಿಂದಲೂ ಜನ ಅಲ್ಲಿಗೆ ಬಂದು, ಪಾನಿಪುರಿ ರುಚಿ ಸವಿದು ಹೋಗ್ತಿದ್ರು. ಆದ್ರೆ ಈಗ ವಿಜಯ್ ಮೇವಾಲಾಲ್ ನೀಡಿರುವ ಆಫರ್ ಎಲ್ಲರನ್ನು ಅಚ್ಚರಿಗೊಳಿಸಿದೆ.
₹60 ಲಕ್ಷಕ್ಕಿಂತ ಕಡಿಮೆ ಸಂಬಳವಿದ್ದವರು ಬಡವರು, ಶೇ.70 ರಷ್ಟು ಟ್ಯಾಕ್ಸ್ ಕತೆ ಬಿಚ್ಚಿಟ್ಟ ಟೆಕ್ಕಿ!
ವಿಜಯ್ ಮೇವಾಲಾಲ್ ಅಂಗಡಿ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಅದ್ರ ಪ್ರಕಾರ, ನೀವು 99 ಸಾವಿರ ರೂಪಾಯಿಯನ್ನು ಒಮ್ಮೆ ವಿಜಯ್ ಗೆ ನೀಡಿದ್ರೆ ಮುಗೀತು. ನೀವು ಜೀವನ ಪರ್ಯಂತ ಪಾನಿಪುರಿ ತಿನ್ನಬಹುದು. ಇದಲ್ಲದೆ ಕೆಲ ವಿಶೇಷ ಆಫರ್ ನೀಡಲಾಗಿದೆ.
ಆಫರ್ ವಿವರ :
1. ಹೆಣ್ಮಕ್ಕಳು, ಮಹಿಳೆಯರಿಗೆ 60 ರೂಪಾಯಿಗೆ ಅನ್ ಲಿಮಿಟೆಡ್ ಪಾನಿಪುರಿ
2. 195 ರೂಪಾಯಿಗೆ ವಿಶೇಷ ಪಾನಿಪುರಿ ಪ್ಲೇಟ್
3. ವಾರ್ಷಿಕವಾಗಿ 5 ಸಾವಿರ ಪಾವತಿ ಮಾಡಿ, 10,000 ಮೌಲ್ಯದ ಪಾನಿಪುರಿ ತಿನ್ನಿ.
4. 151 ರೂಪಾಯಿ ಪಾನಿಪುರಿ ತಿಂದ್ರೆ 21 ಸಾವಿರ ರೂಪಾಯಿ ಮೌಲ್ಯದ ಉಡುಗೊರೆ ಗೆಲ್ಲುವ ಅವಕಾಶ
ಅಂಬಾನಿ ಜಿಯೋ ಘೋಷಣೆಗೆ ಹಲವರು ಶಾಕ್, ದಿನ 2ಜಿಬಿ ಡೇಟಾ, ಫ್ರಿ ಚಾನೆಲ್ ಸೇರಿ ಹಲವು
ಈ ವಿಶೇಷ ಆಫರ್ ಹಿಂದಿದೆ ಈ ಕಾರಣ : ಉತ್ತರ ಪ್ರದೇಶದ ಜೋದ್ಪುರ ಮೂಲದ ವ್ಯಕ್ತಿ ವಿಜಯ್ ಗುಪ್ತಾ ಅನೇಕ ವರ್ಷದಿಂದ ಪಾನಿಪುರಿ ಮಾರಾಟ ಮಾಡ್ತಿದ್ದಾನೆ. ಕಾರ್ಪೋರೇಟ್ ಡಿಸ್ಕೌಂಟ್ ಹಾಗೂ ಗೋಲ್ಡ್ ಲೋನ್ ಗಳನ್ನು ನೋಡಿ, ಅದ್ರಿಂದ ಪ್ರೇರೇಪಿತರಾಗಿ ಗುಪ್ತಾ ಈ ರೀತಿಯ ಆಫರ್ ನೀಡುವ ನಿರ್ಧಾರಕ್ಕೆ ಬಂದಿದ್ದಾನೆ.
ಈಗಾಗಲೇ ನಾಗ್ಪುರದ ವ್ಯಕ್ತಿಯೊಬ್ಬರು 99 ಸಾವಿರ ನೀಡಿ, ಲೈಫ್ ಟೈಂ ಆಫರ್ ಪಡೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಆದ್ಮೇಲೆ ಗುಪ್ತಾ ಅಂಗಡಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಅನೇಕರು ಲೈಫ್ ಟೈಂ ಆಫರ್ ಪಡೆಯಲು ಯೋಗ್ಯವಾಗಿದೆಯಾ ಎಂಬುದನ್ನು ಚೆಕ್ ಮಾಡಲು ಬರ್ತಿದ್ದಾರೆ, ಗುಪ್ತಾ ಪತ್ನಿ ಹಾಗೂ ಸಿಬ್ಬಂದಿ, ಗ್ರಾಹಕರನ್ನು ಸಂಭಾಳಿಸ್ತಿದ್ದಾರೆ. ಗುಪ್ತಾ ಈ ವಿಶೇಷ ಆಫರ್, ಉಳಿದ ಸ್ಟ್ರೀಟ್ ಫುಡ್ ಮಾರಾಟಗಾರರಿಗೆ ಸ್ಫೂರ್ತಿ ನೀಡಿದೆ, ಹೊಸ ಟ್ರೆಂಡ್ ಸೃಷ್ಟಿಗೆ ಗುಪ್ತಾ ಕಾರಣವಾಗಿದ್ದಾನೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.