ಬೆಂಗಳೂರಿಗರಿಗೆ ಮುತೂಟ್ ಬೃಹತ್ ಕೊಡುಗೆ... ಗೋಲ್ಡ್ ಪಾಯಿಂಟ್ ವಿಶೇಷ ಏನು?

Published : Mar 05, 2021, 07:54 PM ISTUpdated : Mar 05, 2021, 07:58 PM IST
ಬೆಂಗಳೂರಿಗರಿಗೆ ಮುತೂಟ್ ಬೃಹತ್ ಕೊಡುಗೆ... ಗೋಲ್ಡ್ ಪಾಯಿಂಟ್ ವಿಶೇಷ ಏನು?

ಸಾರಾಂಶ

ಮುತೂಟ್ ಪಪ್ಪಾಚನ್ ಗ್ರೂಪ್‌ನಿಂದ ಬೆಂಗಳೂರಲ್ಲಿ ಮುತ್ತೂಟ್ ಗೋಲ್ಡ್ ಪಾಯಿಂಟ್ ಸ್ಥಾಪನೆ/ ಭಾರತದ 12 ನಗರಗಳಲ್ಲಿ ಚಿನ್ನ ರಿಸೈಕಲ್ ಘಟಕ ವಿಸ್ತರಣೆ ಬೆಂಗಳೂರಿನಲ್ಲಿ ಭಾರತದ 2ನೇ ಮುತ್ತೂಟ್ ಗೋಲ್ಡ್ ಪಾಯಿಂಟ್‌ನ ಮೊಬೈಲ್ ವ್ಯಾನ್ ಸ್ಥಾಪನೆ./ ಇದು ಬೆಂಗಳೂರಿನ 2ನೇ ಟಚ್‌ಪಾಯಿಂಟ್/ ದೇಶದಲ್ಲಿ 13ನೇಯದ್ದು. ಭಾರತದಲ್ಲಿ ಗೋಲ್ಡ್ riಸೈಕಲನ್ನು ಪ್ರಮೋಟ್ ಮಾಡಲು ಸ್ಥಾಪನೆಯಾದ ಘಟಕ

ಬೆಂಗಳೂರು(ಮಾ. 05) ಪ್ರಖ್ಯಾತ ಬಂಗಾರ ಮಾರಾಟ ಸಂಸ್ಥೆ ಮುತೂಟ್ ಪಪ್ಪಚನ್ ಗ್ರೂಪಿನಿಂದ (ಮುತ್ತೂಟ್ ಬ್ಲೂ ಎಂದೇ ಪ್ರಖ್ಯಾತಿ) ಬೆಂಗಳೂರಿನ ದಕ್ಷಣ ಭಾಗದಲ್ಲಿ  ಎರಡನೇ ಮೊಬೈಲ್ ಮುತ್ತೂಟ್ ಗೋಲ್ಡ್ ಪಾಯಿಂಟನ್ನು ಸ್ಥಾಪಿಸಿದೆ. 2015ರಲ್ಲಿ ಇಂಥದ್ದೇ ಕೇಂದ್ರವನ್ನು ಕೋಯಮತ್ತೂರಿನಲ್ಲಿ ಆರಂಭಿಸಲಾಗಿತ್ತು. ಆ ನಂತರ ಅಹಮದಾಬಾದ್, ಬೆಂಗಳೂರು, ಚೆನ್ನೈ, ದಿಲ್ಲಿ, ಕೋಲ್ಕತ್ತಾ, ಲುದಿಯಾನಾ, ಮಧುರೈ, ವಿಜಯವಾಡ, ಬೇಹರ್‌ಪುರ್, ಎರ್ನಾಕುಲಂ (ಕೊಚ್ಚಿ) ಮತ್ತು ತಿರುಚ್ಚಿಲ್ಲಿಯೂ ಇಂಥದ್ದೆ ಕೇಂದ್ರವನ್ನು ಸ್ಥಾಪಿಸಲಾಯಿತು.

ಗ್ರಾಹಕರ ಮನೆ ಅಂಗಳದಲ್ಲಿಯೇ ಬಂಗಾರ ಕೊಳ್ಳಲು ನೆರವಾಗುವಂಥ ಈ ಮೊಬೈಲ್  ಗೋಲ್ಡ್ ಪಾಯಿಂಟ್ ಆರಂಭಿಸಿದ್ದು, ಬೆಂಗಳೂರು ದೇಶದ 2ನೇ ಕೇಂದ್ರವಾಗಿದೆ. ವೈಜ್ಞಾನಿಕ ವಿಧಾನದ ಮೂಲಕ, ಪಾರದರ್ಶಕವಾದ ಮತ್ತು ಗ್ರಾಹಕರ ಕೇಂದ್ರಿತ ಹಾಗೂ ಆಧುನಿಕ ಸಾಧನಗಳ ಮೂಲಕ ಬಂಗಾರವನ್ನು ಪರೀಕ್ಷಿಸಿ ಕೊಳ್ಳಲಾಗುತ್ತದೆ. ಚಿನ್ನದ ಪರೀಕ್ಷೆ, ಪರಿಶೀಲನೆ, ಮೌಲ್ಯ ಮಾಪನ ಮತ್ತು ದರ ನಿಗದಿ ಎಲ್ಲವೂ ಗ್ರಾಹಕರಿಗೆ ಅನುಕೂಲವಾಗುವಂತೆ ಇರುವುದು ಈ ಘಟಕದ ವಿಶೇಷ. ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಈಗಾಗಲೇ ಒಂದು ಪಾಯಿಂಟ್ ಕಾರ್ಯನಿರ್ವಹಿಸುತ್ತಿದೆ.

ಇಂದಿನ ಚಿನ್ನದ ರೇಟ್ ಬಗ್ಗೆ ತಿಳಿದುಕೊಳ್ಳಿ

ಚಿನ್ನದ ಉದ್ಯಮದಲ್ಲಿ ರಿಸೈಕಲ್ ಈ ಘಟಕದ ಮುಖ್ಯ ಉದ್ದೇಶ. ಗೋಲ್ಡ್ ಪಾಯಿಂಟ್ ಸೆಂಟರ್‌ ಮೂಲಕ ಮುತೂಟ್ ಪಪ್ಪಾಚನ್ ಗ್ರೂಪ್ ಗ್ರಾಹಕರ ವಿಶ್ವಾಸ ಗಳಿಸಿಕೊಂಡು ಪಾರದರ್ಶಕ ವ್ಯವಹಾರ ಮಾಡಿ, ನಂಬಿಕೆಯಿಂದ ಬಳಸಿದ ಹಳೆ ಬಂಗಾರವನ್ನು ಕೊಂಡು ಕೊಳ್ಳುತ್ತದೆ. ಆ ಚಿನ್ನವನ್ನು ಮತ್ತು ಪ್ರೊಸೆಸ್ ಮಾಡಿ, ಸಂಸ್ಕರಿಸುವ ಮೂಲಕ ಮತ್ತು ಬಳಕೆಗೆ ಯೋಗ್ಯವಾಗುವಂತೆ ಗಟ್ಟಿ ರೂಪದಲ್ಲಿ  ಗ್ರಾಹಕರಿಗೆ ನೀಡವ ಕೆಲಸ ಮಾಡುತ್ತದೆ.

ಘಟನೆ ಸ್ಥಾಪನೆ ಬಗ್ಗೆ ಮುತೂಟ್ ಗೋಲ್ಡ್ ಪಾಯಿಂಟ್‌ನ ಸಿಇಒ ಕೆಯೂರ್ ಶಾ  ಮಾತನಾಡಿ,   ಸಾಮಾನ್ಯ ಜನರಿಗೆ  ನೆರವಾಗುವ ಉದ್ದೇಶದಿಂದ ಈ ಸೇವೆ  ಆರಂಭ  ಮಾಡಿದ್ದೇವೆ.  ಸಾಮಾನ್ಯ ವಕ್ತಿ ತನ್ನ ಚಿನ್ನಾಭರಣದ  ಹಣವನ್ನು ಉತ್ಪಾದಕ ರೀತಿ ಬಳೆಕೆ ಮಾಡಿಕೊಳ್ಳಬಹುದು.  ಇದು ದೇಶ ಮತ್ತು ವ್ಯಕ್ತಿಯ ಆರ್ಥಿಕ ಅಭಿವೃದ್ಧಿಗೆ ಕಾರಣವಾಗಲಿದೆ ಎಂದರು.

ವಿಮಾನ ನಿಲ್ದಾಣದಲ್ಲಿ ಸಿಕ್ಕ ಚಿನ್ನ ಕಂಡು ದಂಗಾದ ಅಧಿಕಾರಿಗಳು

 ಮುತೂಟ್ ಪಪ್ಪಚನ್ ಕಾರ್ಯಕಾರಿ ನಿರ್ದೇಶಕ ಥಾಮಸ್ ಮಾತನಾಡಿ,  ನಾವು ಅನೇಕ ಮಾಹಿತಿ ಆಧರಿಸಿ ಈ ಘಟಕ ಸ್ಥಾಪನೆ ಮಾಡಿದ್ದೇವೆ. ನಮ್ಮ ರಾಷ್ಟ್ರೀಯತೆ ಬಲಪಡಿಸುವಲ್ಲಿಯೂ ಇದು ನೆರವಾಗಲಿದೆ.  ಈ ಘಟಕ ಅತಿ ವೇಗವಾಗಿ ಬೆಳೆಯುತ್ತಿರುವ ಉದ್ದಿಮೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು. ಗ್ರಾಹಕರಿಗೆ ಪ್ರೀತಿ ಪಾತ್ರವಾಗುವ ರೀತಿ ನಮ್ಮ ಕಾರ್ಯಕ್ರಮ ಇರಲಿದೆ ಎಂದು ತಿಳಿಸಿದರು.

ಮುತೂಟ್ ಗೋಲ್ಡ್ ಪಾಯಿಂಟ್ 2013 ರಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಮತ್ತು ಅಂದಿನಿಂದ ಗಮನಾರ್ಹವಾಗಿ ಬೆಳೆದಿದೆ.  ಶುದ್ಧ, ನಿಜವಾದ ಮತ್ತು ಕೈಗೆಟುಕುವ ದರದಲ್ಲಿಯೇ ವ್ಯವಹಾರ ಮಾಡಲಾಗಿದೆ.   ಪರಿಣಾಮಕಾರಿಯಾಗಿ ಜನರಿಗೆ ಸರಳವಾದ ರೀತಿ ಸ್ಪಂದಿಸುತ್ತಿದೆ ಎಂದು ತಿಳಿಸಿದರು.

 ಮುತೂಟ್ ಪಪ್ಪಾಚನ್ ಗ್ರೂಪ್ ಮುತೂಟ್ ಬ್ಲೂ ಎಂದೇ ಕರೆಸಿಕೊಳ್ಳುತ್ತದೆ. ಚಿನ್ನದ ಸಾಲಗಳು, ಎಂಎಸ್‌ಎಂಇ ಸಾಲಗಳು, ದ್ವಿಚಕ್ರ ವಾಹನ ಹಣಕಾಸು, ಮೈಕ್ರೋ ಫೈನಾನ್ಸ್, ಕೈಗೆಟುಕುವ ವಸತಿ ಹಣಕಾಸು, ಆರೋಗ್ಯ ವಿಮೆಯಲ್ಲಿಯೂ  ತೊಡಗಿಕೊಂಡಿದೆ.  ಹೊಸ ಆವಿಷ್ಕಾರಗಳನ್ನು ಅಳವಡಿಕೆ ಮಾಡಿಕೊಂಡು ಜನರಿಗೆ ಸರಳ ಸೇವೆ ನೀಡುತ್ತಿದೆ. 

 

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!