Munaf Kapadia: ಸಮೋಸಾ ಮಾರಲು ಗೂಗಲ್​ ಕಂಪೆನಿಯನ್ನೇ ತೊರೆದ ಟೆಕಿ! ಈಗ ಹತ್ತಾರು ಕೋಟಿಗಳಲ್ಲಿ ವ್ಯವಹಾರ...

Published : Jun 08, 2025, 02:03 PM IST
Quits Google to sell samosas

ಸಾರಾಂಶ

ವಿದೇಶದಲ್ಲಿ ಉದ್ಯೋಗ ಅದು ಕೂಡ ಟೆಕ್​ ದೈತ್ಯ ಗೂಗಲ್​ ಕಂಪೆನಿ! ಆದರೂ ಸಮೋಸಾ ಮಾರುವುದಕ್ಕೆ ಭಾರತಕ್ಕೆ ಮರಳಿದ ಟೆಕಿಯ ಯಶೋಗಾಥೆ ಇಲ್ಲಿದೆ...

ಮನಸ್ಸೊಂದು ಇದ್ದರೆ ಜೀವನ ಸಾಗಿಸುವ ದಾರಿ ತಂತಾನೇ ತೆರೆದುಕೊಳ್ಳುತ್ತದೆ ಎನ್ನುವ ಮಾತಿದೆ. ರಸ್ತೆ ಬದಿಯಲ್ಲಿಯೇ ಆಹಾರಗಳನ್ನು ನೀಡಿ ಸಹಸ್ರಾರು ಮಂದಿ ಬದುಕು ಕಟ್ಟಿಕೊಳ್ಳುತ್ತಿರುವುದೂ ಅಲ್ಲದೇ ಒಳ್ಳೆಯ ಲೈಫ್​ ಕೂಡ ನಡೆಸುತ್ತಿರುವುದು ನಮ್ಮ ಕಣ್ಣಮುಂದೆಯೇ ಇದೆ. ಕೆಲಸ ಸಿಕ್ಕಿಲ್ಲ, ಶಿಕ್ಷಣಕ್ಕೆ ತಕ್ಕಂತ ಸಂಬಳ ಇಲ್ಲ, ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ ಎಂದೆಲ್ಲಾ ಕಿರುಚಾಡುವವರ ನಡುವೆಯೇ ಸದ್ದಿಲ್ಲದೇ ಎಷ್ಟೋ ಮಂದಿ ಇದ್ದ ಸೌಲಭ್ಯಗಳನ್ನೇ ಬಳಸಿಕೊಂಡು ಸುಂದರ ಬದುಕು ರೂಪಿಸಿಕೊಳ್ಳುತ್ತಿದ್ದಾರೆ. ಇದು ಒಂದಾದರೆ ಇನ್ನೊಂದೆಡೆ, ಯಾರದ್ದೋ ಕೈಕೆಳಗೆ ಕೆಲಸ ಮಾಡಲು ಇಷ್ಟಪಡಲು ಮತ್ತಿಷ್ಟು ಮಂದಿ ಲಕ್ಷ ಲಕ್ಷ ಸಂಬಳ ಇದ್ದರೂ ಅದನ್ನು ತೊರೆದು ಬರುವುದೂ ಇದೆ. ಅಂಥವರಲ್ಲಿ ಒಬ್ಬರು ಮುನಾಫ್​ ಕಪಾಡಿಯಾ!

ಇವರು ಮೂಲತಃ ಟೆಕಿ. ಅದೂ ಬಹುತೇಕರ ಕನಸಾಗಿರುವ ಗೂಗಲ್​ ಎಂಬ ದೈತ್ಯ ಕಂಪೆನಿಯಲ್ಲಿ ಇವರದ್ದು ಲಕ್ಷ ಲಕ್ಷ ರೂಪಾಯಿ ಎಣಿಸುವ ಉದ್ಯೋಗ. ಗೂಗಲ್​ ಸೇರಿದಂತೆ ಹಲವಾರು ಕಂಪೆನಿಗಳು ತಮ್ಮ ಸಿಬ್ಬಂದಿಯನ್ನು ವಜಾಗೊಳಿಸುತ್ತಿರುವುದು ಇತ್ತೀಚಿನ ವರ್ಷಗಳ ಮಾತಾಯಿತು. ಆದರೆ, ಮುನಾಫ್​ ಅವರ ವಿಷಯ ಅದಲ್ಲ. ಅವರು ಕೆಲ ವರ್ಷಗಳ ಹಿಂದೆಯೇ ಉದ್ಯೋಗ ತೊರೆದರು. ಹೆಚ್ಚಿನ ಐಟಿ ವೃತ್ತಿಪರರಿಗೆ, ಗೂಗಲ್‌ನಲ್ಲಿ ಕೆಲಸ ಪಡೆಯುವುದು ಒಂದು ಕನಸು. ಅದು ಬ್ರ್ಯಾಂಡ್ ಮೌಲ್ಯವನ್ನು ಹೊಂದಿರುವುದಲ್ಲದೆ, ಉದ್ಯೋಗಿಗೆ ಉತ್ತಮ ಸಂಬಳ ಮತ್ತು ಸ್ಥಿರತೆಯನ್ನು ಖಚಿತಪಡಿಸುತ್ತದೆ. ಆದರೆ ಮುನಾಫ್​ ಕೆಲಸ ಬಿಡುವ ನಿರ್ಧಾರಕ್ಕೆ ಬಂದರು. ಹಾಗೆಂದು ಅವರಿಗೆ ಇದಕ್ಕಿಂತಲೂ ಬೃಹತ್​ ಮೊತ್ತದ ಸಂಬಳ ಸಿಕ್ಕಿತ್ತೆಂದು ಅಲ್ಲಮತ್ತೆ. ಆದರೆ ಸಮೋಸಾ ಮಾರುವುದಕ್ಕಾಗಿ! ವಿಚಿತ್ರ ಎನ್ನಿಸಿದರೂ ಅಲ್ಲದೇ ಇರುವುದು ಕುತೂಹಲದ ತಿರುವು. ಮುನಾಫ್ ಅವರ ತಾಯಿ ನಫೀಸಾ ಅವರು ಟಿವಿಯಲ್ಲಿ ಅಡುಗೆ ಕಾರ್ಯಕ್ರಮಗಳನ್ನು ನೋಡುವುದರಲ್ಲಿ ತೀವ್ರ ಆಸಕ್ತಿ ಹೊಂದಿದ್ದರು. ಅವರು ಅಡುಗೆಯನ್ನೂ ಚೆನ್ನಾಗಿ ಮಾಡುತ್ತಿದ್ದರು. ಆಹಾರ ಕ್ಷೇತ್ರದಲ್ಲಿ ಅಗಾಧ ಬೆಳವಣಿಗೆ ಇದೆ ಎನ್ನುವುದನ್ನು ಅರಿತ ಮುನಾಫ್​ ಅವರು ಇದರಲ್ಲಿಯೇ ಮುಂದುವರೆಯುವ ನಿರ್ಧಾರ ಮಾಡಿ ಉದ್ಯೋಗ ತೊರೆದರು.

 

ಅವರ ದೃಢನಿಶ್ಚಯ ಮತ್ತು ಕಠಿಣ ಪರಿಶ್ರಮ ಕೆಲವೇ ವರ್ಷಗಳಲ್ಲಿ ಫಲ ​​ನೀಡಿದೆ. ಅವರು ಆರಂಭದಲ್ಲಿ ಸಮೋಸಾ ತಯಾರಿಸಿ ಇದೀಗ ನೂರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಸುತ್ತಿದ್ದಾರೆ! ಮೊದಲಿಗೆ ಚಿಕ್ಕ ಮಟ್ಟದಲ್ಲಿ ತಯಾರಾದ ಇವರ ಸಮೋಸಾ ವ್ಯಾಪಾರ ಇದೀಗ ಮುಂಬೈನಲ್ಲಿರುವ ದಿ ಬೋಹ್ರಿ ಕಿಚನ್ (ಟಿಬಿಕೆ) ನ ಹೆಮ್ಮೆಯ ಮಾಲೀಕರಾಗಿದ್ದಾರೆ. ಅಂದಹಾಗೆ, ಮುನಾಫ್ ಎಂಬಿಎ ಪದವಿ ಪಡೆದವರು. ಭಾರತದಲ್ಲಿ ಒಂದೆರಡು ವರ್ಷಗಳ ಕಾಲ ಕೆಲಸ ಮಾಡಿದ ನಂತರ ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದರು. ಬಳಿಕ ಅವರಿಗೆ ಗೂಗಲ್‌ನಲ್ಲಿ ಉದ್ಯೋಗ ಸಿಕ್ಕಿತು. ಅಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ ನಂತರ, ಅವರು ಉತ್ತಮ ಅವಕಾಶಗಳನ್ನು ಅನ್ವೇಷಿಸಲು ಬಯಸಿದರು. ಸ್ವಂತ ವ್ಯವಹಾರವನ್ನು ಪ್ರಾರಂಭಿಸುವ ಆಲೋಚನೆಯಿಂದ ಭಾರತಕ್ಕೆ ಮರಳಿದರು. ಆರಂಭದಲ್ಲಿ ಸಣ್ಣ ಮಟ್ಟದಲ್ಲಿ ಸಮೋಸಾ ವ್ಯಾಪಾರ ಶುರು ಮಾಡಿದರು. ನಂತರ ಅದನ್ನು ವಿಸ್ತರಿಸಿದರು.
 

ಊಟದ ವ್ಯವಸ್ಥೆ ಮಾಡಿದರು. ಹೀಗೆ ಅವರ ದಿ ಬೋಹ್ರಿ ಕಿಚನ್ ಹುಟ್ಟಿತು. ಇದಕ್ಕೀಗ ಪ್ರಸಿದ್ಧ ಸೆಲೆಬ್ರಿಟಿಗಳೂ ಬರುತ್ತಾರೆ. ಪಂಚತಾರಾ ಹೋಟೆಲ್‌ಗಳಲ್ಲಿ ಇವರ ಸಮೋಸಾಗಳಿಗೆ ಸಕತ್​ ಬೇಡಿಕೆಯಿದೆ. ಸಮೋಸಾಗಳನ್ನು ಹೊರತುಪಡಿಸಿ ನರ್ಗಿಸ್ ಕಬಾಬ್, ಡಬ್ಬಾ ಗೋಶ್ಟ್ ಮತ್ತು ಇತರ ಹಲವು ಭಕ್ಷ್ಯಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ. ಅವರ ರೆಸ್ಟೋರೆಂಟ್ ಎಷ್ಟು ಪ್ರಸಿದ್ಧವಾಗಿದೆ ಎಂದರೆ ವಿಶೇಷವಾಗಿ ಸಮೋಸಾ ಸೇವಿಸಲು ಕ್ಯೂ ನಿಲ್ಲುತ್ತಾರೆ. ಇವರ ಈ ಸಾಧನೆ ಎಷ್ಟರಮಟ್ಟಿಗೆ ಬೆಳೆದಿದೆ ಎಂದರೆ ಫೋರ್ಬ್ಸ್ ಅಂಡರ್ 30 ಪಟ್ಟಿಯಲ್ಲಿ ಮುನಾಫ್ ಕಾಣಿಸಿಕೊಂಡಿದ್ದಾರೆ ಮತ್ತು ಅವರ ಸಂಪೂರ್ಣ ಯಶಸ್ಸನ್ನು ಅವರ ತಾಯಿಗೆ ಸಲ್ಲುತ್ತಾರೆ. ತಮ್ಮ ಈ ಜರ್ನಿ ಕುರಿತು ಅವರು ಪುಸ್ತಕವನ್ನೂ ಬರೆದಿದ್ದಾರೆ! 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಈ ರಾಶಿ ಜನರು ಹೊಸ ವರ್ಷ 2026 ರಲ್ಲಿ ಲಕ್ಷಾಧಿಪತಿಗಳಾಗುತ್ತಾರೆ, ಬಂಪರ್ ಯಶಸ್ಸು, ಸಂತೋಷ ಮತ್ತು ಸಮೃದ್ಧಿ
2026 ರಲ್ಲಿ ಮೇಷ ರಾಶಿಯವರ ಆರ್ಥಿಕ ಸ್ಥಿತಿ ಹೇಗಿರುತ್ತದೆ? AI ಪ್ರಕಾರ ಲಾಭನಾ ಅಥವಾ ನಷ್ಟನಾ?