ಮುಖೇಶ್‌ ಅಂಬಾನಿ ಗ್ರೀನ್‌ ಸಿಗ್ನಲ್‌, 2025ರಲ್ಲಿ ರಿಲಯನ್ಸ್‌ ಜಿಯೋ ಐಪಿಒ ಬರೋದು ಖಚಿತ

By Santosh Naik  |  First Published Nov 4, 2024, 8:52 PM IST

ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ 2025 ರಲ್ಲಿ ಐಪಿಒಗೆ ಬರಲಿದೆ. ರಿಲಯನ್ಸ್ ರಿಟೇಲ್ ಐಪಿಒ ಇನ್ನೂ ತಡವಾಗಲಿದೆ. ಜಿಯೋ ಈಗ ಭಾರತದ ನಂ. 1 ಟೆಲಿಕಾಂ ಕಂಪನಿ.


ನವದೆಹಲಿ (ನ.4):ಭಾರತೀಯ ಬಿಲಿಯನೇರ್ ಮುಖೇಶ್ ಅಂಬಾನಿ ತಮ್ಮ ಟೆಲಿಕಾಂ ವ್ಯವಹಾರ ಕಂಪನಿ ಜಿಯೋವನ್ನು 2025ರಲ್ಲಿ ಐಪಿಒಗೆ ಬಿಡೋದಾಗಿ ಸೂಚನೆ ನೀಡಿದ್ದಾರೆ. ಎನ್‌ಎಸ್‌ಇ ಹಾಗೂ ಬಿಎಸ್‌ಇಯಲ್ಲಿ ಕಂಪನಿಯನ್ನು ಪಟ್ಟಿ ಮಾಡುವ ಸಾಧ್ಯತೆ ಇದೆ. ಅಂದಾಜು 100 ಶತಕೋಟಿ ಡಾಲರ್‌ ಮೌಲ್ಯವನ್ನು ಈ ಕಂಪನಿ ಹೊಂದಿದೆ. ಇನ್ನು ಅವರ ರಿಲಯನ್ಸ್‌ ರಿಟೇಲ್‌ ಐಪಿಒವನ್ನು ಇನ್ನಷ್ಟು ತಡವಾಗಿ ಐಪಿಒ ಪ್ಲ್ಯಾನ್‌ ಮಾಡಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಅಂಬಾನಿ ಅವರು 2019 ರಲ್ಲಿ ರಿಲಯನ್ಸ್ ಜಿಯೋ ಮತ್ತು ರಿಲಯನ್ಸ್ ರೀಟೇಲ್ ಐದು ವರ್ಷಗಳೊಳಗೆ ಲಿಸ್ಟೆಡ್‌ ಕಂಪನಿ ಎನಿಸಿಕೊಳ್ಳಲಿದೆ ಎಂದು ಹೇಳಿದ ನಂತರ ತಮ್ಮ ಐಪಿಒ ಟೈಮ್‌ಲೈನ್‌ಗಳ ಬಗ್ಗೆ ಮಾತನಾಡಿರಲಿಲ್ಲ.

ಇತ್ತೀಚಿನ ವರ್ಷಗಳಲ್ಲಿ, ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಅಂಬಾನಿ, ಕೆಕೆಆರ್, ಜನರಲ್ ಅಟ್ಲಾಂಟಿಕ್ ಮತ್ತು ಅಬುಧಾಬಿ ಇನ್ವೆಸ್ಟ್‌ಮೆಂಟ್ ಅಥಾರಿಟಿಯಿಂದ ಡಿಜಿಟಲ್, ಟೆಲಿಕಾಂ ಮತ್ತು ಚಿಲ್ಲರೆ ವ್ಯಾಪಾರಕ್ಕಾಗಿ ಒಟ್ಟಾರೆಯಾಗಿ $25 ಬಿಲಿಯನ್ ಸಂಗ್ರಹಿಸಿದರು, ಎರಡೂ ಉದ್ಯಮಗಳನ್ನು $100 ಶತಕೋಟಿಗಿಂತ ಹೆಚ್ಚು ಮೌಲ್ಯೀಕರಿಸಿದ್ದಾರೆ.

479 ಮಿಲಿಯನ್ ಯೂಸರ್‌ಗಳನ್ನು ಹೊಂದುವ ಮೂಲಕ ಭಾರತದ ನಂ. 1 ಟೆಲಿಕಾಂ ಕಂಪನಿ ಆಗಿರುವ ಜಿಯೋ, ಸ್ಥಿರವಾದ ವ್ಯಾಪಾರ ಮತ್ತು ಆದಾಯದ ಸ್ಟ್ರೀಮ್ ಅನ್ನು ಸಾಧಿಸಿದೆ. ಆ ಕಾರಣದಿಂದ ರಿಲಯನ್ಸ್ ಈಗ 2025 ರಲ್ಲಿ ರಿಲಯನ್ಸ್ ಜಿಯೋ ಐಪಿಒವನ್ನು ಪ್ರಾರಂಭಿಸುವ ಯೋಜನೆಗಳನ್ನು ದೃಢಪಡಿಸಿದೆ ಎಂದು ಎರಡು ಮೂಲಗಳು ತಿಳಿಸಿವೆ.

ಆದರೆ, 2025ರಲ್ಲಿ ರಿಲಯನ್ಸ್‌ ರಿಟೇಲ್‌ ಐಪಿಒ ಬರುವ ಯಾವುದೇ ಸಾಧ್ಯತೆ ಇಲ್ಲ. ಅದಕ್ಕೂ ಮುನ್ನ ಕಂಪನಿಯು ಕೆಲವು ಆಂತರಿಕ ವ್ಯವಹಾರ ಮತ್ತು ಕಾರ್ಯಾಚರಣೆಯ ಸವಾಲುಗಳನ್ನು ಪರಿಹರಿಸಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.

Tap to resize

Latest Videos

'ಭಾರತದ ಸಂಕಲ್ಪವನ್ನು ಇಂಥ ಕೃತ್ಯ ದುರ್ಬಲ ಮಾಡೋದಿಲ್ಲ..' ಕೆನಡಾ ಹಿಂದೂ ದೇವಾಲಯ ದಾಳಿಗೆ ಮೋದಿ ಖಂಡನೆ

ರಿಲಯನ್ಸ್ ಜಿಯೋ ಎಲೋನ್ ಮಸ್ಕ್ ಭಾರತದಲ್ಲಿ ತನ್ನ ಸ್ಟಾರ್‌ಲಿಂಕ್ ಇಂಟರ್ನೆಟ್ ಸೇವೆಯನ್ನು ಪ್ರಾರಂಭಿಸಿದರೆ ಅವರೊಂದಿಗೆ ಹೋರಾಟ ಮಾಡಲು ಸಜ್ಜಾಗಿದೆ.ಗೂಗಲ್ ಮತ್ತು ಮೆಟಾದಿಂದ ಬೆಂಬಲಿತವಾಗಿರುವ ಜಿಯೋ, ಎಐ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಎನ್‌ವಿಡಿಯಾದೊಂದಿಗೆ ಪಾಲುದಾರಿಕೆ ಹೊಂದಿದೆ.

1 ವರ್ಷ ವ್ಯಾಲಿಡಿಟಿ, ಫ್ರೀ ಕಾಲಿಂಗ್, 1.5GB ಡೇಟಾ, 100% ಕ್ಯಾಶ್‌ಬ್ಯಾಕ್; ಜಿಯೋ ಆಫರ್ ಕಂಡು ಎಲ್ಲರೂ ಕಕ್ಕಾಬಿಕ್ಕಿ

ರಿಲಯನ್ಸ್ ಜಿಯೊದ ಮೌಲ್ಯಮಾಪನದ ಕುರಿತು ಇನ್ನೂ ಯಾವುದೇ ಆಂತರಿಕ ನಿರ್ಧಾರವಾಗಿಲ್ಲ ಮತ್ತು ಬ್ಯಾಂಕರ್‌ಗಳನ್ನು ಇನ್ನೂ ನೇಮಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ, ಆದರೆ ಜುಲೈನಲ್ಲಿ ಜೆಫರೀಸ್ ಕಂಪನಿಯ ಅಂದಾಜು IPO ಮೌಲ್ಯಮಾಪನವನ್ನು $112 ಶತಕೋಟಿ ಎಂದು ನಿಗದಿಪಡಿಸಿದೆ.

click me!