ಭಾರತದ ಅತ್ಯಂತ ಯಶಸ್ವಿ ಉದ್ಯಮಿಗಳ ಮೊದಲ ಜಾಬ್‌ ಏನಾಗಿತ್ತು? ಇಲ್ಲಿದೆ ಡೀಟೇಲ್ಸ್‌..

By Santosh Naik  |  First Published Nov 4, 2024, 7:19 PM IST

ಭಾರತದ ಪ್ರಮುಖ ಉದ್ಯಮಿಗಳಾದ ಧೀರೂಭಾಯಿ ಅಂಬಾನಿ, ರತನ್ ಟಾಟಾ, ಕಿರಣ್ ಮಜುಂದಾರ್ ಶಾ, ಗೌತಮ್ ಅದಾನಿ, ಸುಧಾ ಮೂರ್ತಿ, ಇಂದ್ರಾ ನೂಯಿ ಮತ್ತು ಅರ್ದೇಶಿರ್ ಗೋದ್ರೇಜ್ ಅವರ ವೃತ್ತಿಜೀವನದ ಆರಂಭಿಕ ಹಂತಗಳನ್ನು ಈ ಲೇಖನವು ವಿವರಿಸುತ್ತದೆ. ಅವರ ಮೊದಲ ಕೆಲಸಗಳು ಮತ್ತು ಅವುಗಳು ಅವರ ಯಶಸ್ಸಿನ ಹಾದಿಯಲ್ಲಿ ಹೇಗೆ ಪ್ರಭಾವ ಬೀರಿದವು ಎಂಬುದನ್ನು ತಿಳಿಯಿರಿ.


ಶಸ್ಸು ಕೇವಲ ಅದೃಷ್ಟದ ಮಾತ್ರ ಸಿಗೋದಿಲ್ಲ. ಇದು ಕಠಿಣ ಪರಿಶ್ರಮ, ನಿರ್ಧಾರ ಮತ್ತು ತಾಳ್ಮೆಯೇ ತುಂಬಿರುವ ದೀರ್ಘ ಪ್ರಯಾಣ. ಭಾರತದ ಅತ್ಯಂತ ಯಶಸ್ವಿ ವ್ಯಕ್ತಿಗಳು, ಆ ಸ್ಥಾನಕ್ಕೆ ಏರುವ ಮುನ್ನ ಅವರ ಆರಂಭ ಹೆಜ್ಜೆ ಏನಾಗಿತ್ತು ಅನ್ನೋದರ ಬಗ್ಗೆ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಪ್ರಮುಖ ಜಾಗತಿಕ ಸಂಸ್ಥೆಗಳ ಮುಖ್ಯಸ್ಥರಿಂದ ಹಿಡಿದು ಅಪಾರ ಸಂಪತ್ತು ಸೃಷ್ಟಿಸಿಕೊಂಡ ಉದ್ಯಮಿಗಳವರೆಗೆ.. ಇವರ ಕಥೆಗಳು ಆರಂಭವಾಗಿದ್ದು ಒಂದು ಚಿಕ್ಕ ಕೆಲಸದಿಂದ..ಅಂಥ ಉದ್ಯಮಿಗಳು ಹಾಗೂ ಜಾಗತಿಕ ಸಂಸ್ಥೆಗಳ ಮುಖ್ಯಸ್ಥರ ಲಿಸ್ಟ್‌ ಇಲ್ಲಿದೆ. ಇವರುಗಳ ಮೊದಲ ಜಾಬ್‌ ಏನಾಗಿತ್ತು ಅನ್ನೋದರ ವಿವರ ಇಲ್ಲಿದೆ.

ಧೀರೂಬಾಯಿ ಅಂಬಾನಿ (Dhirubhai Ambani): ಮುಖೇಶ್‌ ಅಂಬಾನಿ ತಂದೆ ಧೀರೂಬಾಯಿ ಅಂಬಾನಿ ಕೂಡ ಯಶಸ್ವಿ ಉದ್ಯಮಿ. ಗುಜರಾತ್‌ನ ಹಳ್ಳಿಯೊಂದರಲ್ಲಿ ಬಡ ಕುಟುಂಬದಲ್ಲಿ ಜನಿಸಿದ್ದ ಧೀರೂಬಾಯಿ ಕುಟುಂಬಕ್ಕೆ ಸಹಾಯ ಮಾಡಲು ಶಾಲೆಯನ್ನು ಬೇಗನೆ ಬಿಡಬೇಕಾಯಿತು. ಇದಕ್ಕಾಗಿ ಅವರು ಮಾಡದ ಕೆಲಸವೇ ಇಲ್ಲ.ಅವರ ಮೊದಲ ಕೆಲಸ ಬ್ರಿಟಿಷ್ ವಸಾಹತು ಪ್ರದೇಶವಾದ ಅಡೆನ್‌ನಲ್ಲಿನ ಗ್ಯಾಸ್ ಸ್ಟೇಷನ್‌ನಲ್ಲಿತ್ತು, ಅಲ್ಲಿ ಅವರು ತಮ್ಮ ಮೊದಲ ಸಂಬಳವನ್ನು ಪಡೆದರು. 17ನೇ ವರ್ಷದಲ್ಲಿ ಏಡೆನ್‌ಗೆ ತೆರಳಿದ ಅವರು ರಾಮ್ನಿಕ್ಲಾಲ್ ಅಂಬಾನಿಯವರ ಕಂಪನಿ, ಎ. ಬೆಸ್ಸೆ & ಕೋ.ಗೆ ಕೆಲಸ ಮಾಡಿದರು.ಮೊದಲಿಗೆ ಇಲ್ಲಿ ಸಂಬಳಕ್ಕಿಂತ ಹೆಚ್ಚಾಗಿ ಅನುಭವ ಪಡೆಯುವ ಬಗ್ಗೆ ಪ್ರಾಶಸ್ತ್ಯ ನೀಡಿದರು. ಗ್ಯಾಸ್‌ ಸ್ಟೇಷನ್‌ನಲ್ಲಿ ಕೆಲಸ ಮಾಡುತ್ತಿದ್ದರಿಂದ ಮೊದಲ ಸಂಬಳವಾಗಿ 300 ರೂಪಾಯಿ ಪಡೆದಿದ್ದರು.

Tap to resize

Latest Videos

ರತನ್‌ ಟಾಟಾ (Ratan Tata): ಭಾರತದ ಅತ್ಯಂತ ಯಶಸ್ವಿ ಉದ್ಯಮಿಗಳಲ್ಲೊಬ್ಬರು. ತಮ್ಮ ಸ್ಮಾರ್ಟ್‌ ಬ್ಯುಸಿನೆಸ್‌ ಐಡಿಯಾಗಳಿಂದ ಮಾತ್ರವಲ್ಲದೆ, ಅವರ ಸರಳ ಸ್ವಭಾವದಿಂದ ಜನಮೆಚ್ಚಿದವರಾಗಿದ್ದರು. ಇವರು ಮೊದಲಿಗೆ ಟಾಟಾ ಸ್ಟೀಲ್‌ನ ಶಾಪ್‌ ಫ್ಲೋರ್‌ನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಆ ಬಳಿಕ, ಈಗ ಟಾಟಾ ಮೋಟಾರ್ಸ್‌ ಎಂದು ಕರೆಯಲ್ಪಡುವ ಟಾಟಾ ಇಂಜಿನಿಯರಿಂಗ್ ಮತ್ತು ಲೊಕೊಮೊಟಿವ್ ಕಂಪನಿ (ಟೆಲ್ಕೊ) ಗೆ ಸೇರಿದ್ದಲ್ಲದೆ, ಅಲ್ಲಿ ಆರು ತಿಂಗಳು ಟ್ರೇನಿ ಆಗಿ ಕೆಲಸ ಮಾಡಿದ್ದರು. ಐಬಿಎಂನಲ್ಲಿ ದೊಡ್ಡ ಪ್ಯಾಕೇಜ್‌ ಇರುವ ಕೆಲಸ ಬಂದರೂ ಅವರು ತಮ್ಮ ಕಂಪನಿಯಲ್ಲಿಯೇ ಕೆಲಸ ಮಾಡಿ ಅನುಭವ ಪಡೆಯಲು ನಿರ್ಧಾರ ಮಾಡಿದ್ದರು.

ಕಿರಣ್‌ ಮಜುಂದಾರ್‌ ಶಾ (Kiran Mazumdar Shaw): ಭಾರತದ ಯಶಸ್ವಿ ಮಹಿಳಾ ಉದ್ಯಮಿಗಳಲ್ಲಿ ಒಬ್ಬರು. ಅವರು ಬೆಂಗಳೂರಿನಲ್ಲಿ ಜೈವಿಕ ತಂತ್ರಜ್ಞಾನದ ಮೇಲೆ ಕೇಂದ್ರೀಕರಿಸುವ ಬಯೋಕಾನ್ ಲಿಮಿಟೆಡ್ ಎಂಬ ಕಂಪನಿಯನ್ನು ಪ್ರಾರಂಭ ಮಾಡಿದ್ದಾರೆ. ಇದರ ಚೇರ್ಮನ್‌ ಹಾಗೂ ವ್ಯವಸ್ಥಾಪಕ ನಿರ್ದೇಶಕರೂ ಆಗಿದ್ದಾರೆ. ಇವರು ತಮ್ಮ ಕೆರಿಯರ್‌ಅನ್ನು ಮೊದಲು ಆರಂಭಿಸಿದ್ದು ಆಸ್ಟ್ರೇಲಿಯಾದಲ್ಲಿ.ಅಲ್ಲಿನ ಬ್ರೂವರೀಸ್‌ನಲ್ಲಿ ಟ್ರೇನಿ ಬ್ರೀವರ್‌ ಆಗಿ ಕೆಲಸ ಮಾಡಿದ್ದರು. ಬ್ರೂಯಿಂಗ್‌ನಲ್ಲಿ ತನ್ನ ವೃತ್ತಿಜೀವನವನ್ನು ಮುಂದುವರಿಸಲು ಅವರು ಭಾರತಕ್ಕೆ ಹಿಂತಿರುಗಿದಾಗ ತಾರತಮ್ಯವನ್ನು ಎದುರಿಸಿದರು. ಆ ಬಳಿಕವೇ ಅವರು ಬಯೋಕಾನ್‌ ಆರಂಭ ಮಾಡಿದ್ದರು.

ಗೌತಮ್‌ ಅದಾನಿ (Gautam Adani): ಮೊದಲ ತಲೆಮಾರಿನ ಉದ್ಯಮಿ ಗೌತಮ್ ಅದಾನಿ ಅವರು ಅದಾನಿ ಗ್ರೂಪ್‌ನ ಸ್ಥಾಪಕ ಮತ್ತು ಅಧ್ಯಕ್ಷ. 2024ರ ಏಪ್ರಿಲ್ 13ರಂತೆ $83.4 ಬಿಲಿಯನ್ ನಿವ್ವಳ ಮೌಲ್ಯ ಹೊಂದಿದ್ದಾರೆ. 1978ರಲ್ಲಿ ತಮ್ಮ ಹರೆಯದಲ್ಲಿ ಮುಂಬೈಗೆ ಹೋಗಿದ್ದ ಅವರು, ಅಲ್ಲಿನ ಮಹೇಂದ್ರ ಬ್ರದರ್ಸ್‌ಗೆ ವಜ್ರಗಳನ್ನು ವಿಂಗಡಿಸುವ ಕೆಲಸವನ್ನು ಮಾಡುತ್ತಿದ್ದರು. ಅಲ್ಲಿ ಸುಮಾರು ಎರಡು ಮೂರು ವರ್ಷಗಳ ಕಾಲ ಕೆಲಸ ಮಾಡಿದ ನಂತರ ಮುಂಬೈನ ಝವೇರಿ ಬಜಾರ್ ನಲ್ಲಿ ಸ್ವಂತ ವಜ್ರದ ವ್ಯಾಪಾರ ಆರಂಭಿಸಿದರು.

ಸುಧಾ ಮೂರ್ತಿ (Sudha Murty): ಶಿಗ್ಗಾಂವ್‌ನಲ್ಲಿ 1950ರಲ್ಲಿ ಜನಿಸಿದ ಸುಧಾ ಮೂರ್ತಿ, ಇಂಜಿನಿಯರಿಂಗ್‌ ಪದವೀಧರರು. ಪ್ರಸ್ತುತ ಇನ್ಫೋಸಿಸ್‌ ಫೌಂಡೇಷನ್‌ ಅಧ್ಯಕ್ಷರು ಹಾಗೂ ಇನ್ಫೋಸಿಸ್‌ ಸಹ ಸಂಸ್ಥಾಪಕ ಎನ್‌ಆರ್‌ ನಾರಾಯಣ ಮೂರ್ತಿ ಅವರ ಪತ್ನಿ. ಪದವಿ ಮುಗಿದ ಬಳಿಕ, ಟೆಲ್ಕೋ ಚೇರ್ಮನ್‌ಗೆ ಪೋಸ್ಟ್‌ ಕಾರ್ಡ್‌ ಕಳಿಸಿದ್ದ ಅವರು, ನಿಮ್ಮ ಕಂಪನಿ ಮಹಿಳೆಯರನ್ನು ಭಿನ್ನವಾಗಿ ನಡೆಸಿಕೊಂಡಿದ್ದು ಇಷ್ಟವಾಗಲಿಲ್ಲ  ಎಂದು ಕಳಿಸಿದ್ದರು. ಅವರು ಅವಳೊಂದಿಗೆ ಮಾತನಾಡಿ ತಕ್ಷಣ ಅವಳಿಗೆ ಕೆಲಸ ನೀಡಿದರು. ಅವರು ಪ್ರಸ್ತುತ ಟಾಟಾ ಮೋಟಾರ್ಸ್‌ ಆಗಿರುವ ಟಾಟಾ ಇಂಜಿನಿಯರಿಂಗ್ ಮತ್ತು ಲೊಕೊಮೊಟಿವ್ ಕಂಪನಿ (ಟೆಲ್ಕೊ) ನಲ್ಲಿ ನೇಮಕಗೊಂಡ ಮೊದಲ ಮಹಿಳಾ ಇಂಜಿನಿಯರ್ ಎನಿಸಿಕೊಂಡರು. ಡೆವಲಪ್‌ಮೆಂಟ್‌ ಇಂಜಿನಿಯರ್‌ ಆಗಿ ಪುಣೆಯಲ್ಲಿ ಕೆಲಸ ಮಾಡಿದ್ದರು. ನಂತರ ಮುಂಬೈ ಹಾಗೂ ಜೆಮ್ಶೆಡ್ಪುರದಲ್ಲೂ ಕೆಲಸ ಮಾಡಿದ್ದ ಸುಧಾ ಮೂರ್ತಿ, ನಂತರ,  ಪುಣೆಯ ವಾಲ್‌ಚಂದ್ ಗ್ರೂಪ್ ಆಫ್ ಇಂಡಸ್ಟ್ರೀಸ್‌ನಲ್ಲಿ ಹಿರಿಯ ಸಿಸ್ಟಮ್ಸ್ ವಿಶ್ಲೇಷಕರಾಗಿ ಕೆಲಸ ಮಾಡಿದರು.

ಹಿಂದಿನಂತಿರಲ್ಲ ಟಾಟಾ ಗ್ರೂಪ್‌, ರತನ್‌ ಟಾಟಾ ನಿಧನದ ಬೆನ್ನಲ್ಲೇ ಟಾಟಾ ಟ್ರಸ್ಟ್‌ನ ಉನ್ನತಾಧಿಕಾರಿಗಳಿಗೆ ಗೇಟ್‌ಪಾಸ್‌!

ಇಂದ್ರಾ ನೂಯಿ (Indra Nooyi): ವಿಶ್ವದ ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿರುವ ಪೆಪ್ಸಿಕೋಗೆ 12 ವರ್ಷಗಳ ಕಾಲ ಇವರು ಸಿಇಒ ಆಗಿದ್ದರು. 1955ರಲ್ಲಿ ಭಾರತದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ಈಕೆ ಎಲ್ಲರಂತೆ ಇದ್ದಿರಲಿಲ್ಲ. ಕ್ರಿಕೆಟ್‌ ಆಡುವುದನ್ನು ಹಾಗೂ ಗಿಟಾರ್‌ ಬಾರಿಸುವುದನ್ನು ಆ ಕಾಲದಲ್ಲಿಯೇ ಮಾಡುತ್ತಿದ್ದರು. 1974 ರಲ್ಲಿ ತನ್ನ 18 ನೇ ವಯಸ್ಸಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದ ನಂತರ ಮೊದಲ ಕೆಲಸವನ್ನು ಬ್ರಿಟಿಷ್ ಜವಳಿ ಸಂಸ್ಥೆಯಲ್ಲಿ ಮತ್ತು ನಂತರ ಜಾನ್ಸನ್ ಮತ್ತು ಜಾನ್ಸನ್‌ನಲ್ಲಿ ಪ್ರಾಡಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡಿದರು. ಮುಂಬೈನ ಜಾನ್ಸನ್ ಮತ್ತು ಜಾನ್ಸನ್‌ನಲ್ಲಿ ಕೆಲಸ ಮಾಡುವಾಗ ಭಾರತಕ್ಕೆ ಮುಟ್ಟಿನ ಪ್ಯಾಡ್‌ಗಳನ್ನು ಪರಿಚಯಿಸಿದ್ದರು.

Halekai House: ಸಮುದ್ರಮುಖಿಯಾಗಿರುವ ರತನ್‌ ಟಾಟಾ ₹150 ಕೋಟಿ ಮೌಲ್ಯದ ಮನೆಗೆ ಈಗ ಇವರೇ ಮಾಲೀಕರು!

ಅರ್ದೇಶಿರ್ ಗೋದ್ರೇಜ್ (Ardeshir Godrej): ಗೋದ್ರೇಜ್‌ ಬ್ರದರ್ಸ್‌ ಕಂಪನಿಯನ್ನು ಆರಂಭ ಮಾಡಿದ ವ್ಯಕ್ತಿ. ಭಾರತ ಸ್ವಾತಂತ್ರ್ಯ ಪಡೆಯುವುದಕ್ಕಿಂತ ಮೊದಲೇ ಈ ಕಂಪನಿಯನ್ನು ಆರಂಭ ಆಡಿದ್ದರು. ಈಗ ಗೋದ್ರೇಜ್ ಗ್ರೂಪ್ ಎಂದು ಕರೆಯಲ್ಪಡುವ ಬ್ರ್ಯಾಂಡ್ ಬ್ರಿಟಿಷರ ಆಳ್ವಿಕೆಯಲ್ಲಿ ಇಂಗ್ಲೆಂಡ್‌ನಿಂದ ಆಮದು ಮಾಡಿಕೊಂಡಿದ್ದಕ್ಕಿಂತ ಉತ್ತಮವಾದ ಬೀಗಗಳನ್ನು ತಯಾರಿಸುವಲ್ಲಿ ಹೆಸರುವಾಸಿಯಾಗಿತ್ತು. ಸಣ್ಣ ಶೆಡ್‌ನಲ್ಲಿ ವ್ಯಾಪಾರ ಆರಂಭ ಮಾಡಿದ್ದರು. ಇವರ ಬೀಗಗಳು ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಿದ್ದವು. ಮತ್ತು ಸಾಮಾನ್ಯವಾಗಿ ಬೇಗ ಮುರಿಯುತ್ತಿರಲಿಲ್ಲ.
ಭಾರತಕ್ಕೆ ಮರಳಿದ ನಂತರ, ಅವರು ರಸಾಯನಶಾಸ್ತ್ರಜ್ಞರ ಅಂಗಡಿಯಲ್ಲಿ ಸಹಾಯಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಅದು ಅವರಿಗೆ ಶಸ್ತ್ರಚಿಕಿತ್ಸೆಗಾಗಿ ಉಪಕರಣಗಳನ್ನು ತಯಾರಿಸುವ ಕುತೂಹಲವನ್ನು ಉಂಟುಮಾಡಿತು. ಅದು ಸರಿ ಹೋಗದಿದ್ದರೂ, ಅದನ್ನು ಕಾರ್ಯರೂಪಕ್ಕೆ ತರಲು ಅವರು ಪ್ರಯತ್ನಿಸುತ್ತಲೇ ಇದ್ದರು. ಇದು ಅವರ ಮೊದಲ ವ್ಯವಹಾರವಾಯಿತು. ನಂತರ, ಮೆರ್ವಾಂಜಿ ಕಾಮಾ ಎಂಬ ಉದ್ಯಮಿ ಬೀಗಗಳನ್ನು ತಯಾರಿಸುವ ಹೊಸ ಕಂಪನಿಯನ್ನು ಪ್ರಾರಂಭಿಸಲು ಹಣವನ್ನು ಸಾಲವಾಗಿ ನೀಡಿದರು.
 

click me!