ಫ್ರೀಡಂ ಪಾರ್ಕ್‌ನಲ್ಲಿಯೂ ಉದ್ಯಮ ಸೃಷ್ಟಿ ಮಾಡಿದ ಜೋಷಿ, 25ಕ್ಕೂ ಹೆಚ್ಚು ಜನರಿಗೆ ಉದ್ಯೋಗ

By Kannadaprabha NewsFirst Published Aug 9, 2023, 3:45 PM IST
Highlights

25ಕ್ಕೂ ಹೆಚ್ಚು ಜನರಿಗೆ ಕೆಲಸ ನೀಡಿ ಆಸರೆಯಾದ ವಿಜಯನಗರ ಫ್ರೀಡಂ ಪಾರ್ಕ್‌. ಖಾಸಗಿ ಮತ್ತು ಸರ್ಕಾರ ಸಹಭಾಗಿತ್ವದಲ್ಲಿ ನಿರ್ಮಾಣವಾದ ಪಾರ್ಕ್.

ವರದಿ : ನರಸಿಂಹ ಮೂರ್ತಿ ಕುಲಕರ್ಣಿ

ಕೊರೊನಾ  ಎನ್ನುವ ಮಹಾಮ್ಮಾರಿ ಇಡೀ ವಿಶ್ವವನ್ನೇ ಒಂದಷ್ಟು ತಲ್ಲಣಗೊಳಿಸಿತ್ತು. ಇರೋ ಬರೋ ಕೆಲಸ ಕಳೆದು ಕೊಂಡ ಅದೆಷ್ಟೋ ಜನರು ಕೆಲಸವಿಲ್ಲದೇ ಅಲೆದಾಡುವ ಸ್ಥಿತಿ ನಿರ್ಮಾಣವಾಯ್ತು. ಕೊರೊನಾ ಬಳಿಕ ಹೊಸ ಉದ್ಯಮಗಳು ಬರುತ್ತವೇಯೋ ಮೊದಲಿನಂತೆ ಕೆಲಸ ಕೈಂಕರ್ಯಗಳು ನಡೆಯುತ್ತವೇಯೋ ಇಲ್ವೋ ಅನ್ನೋ ಚಿಂತೆಯಲ್ಲಿ ಅದೆಷ್ಟೋ ಯುವಕರು ಸಂಕಷ್ಟದಲ್ಲಿದ್ರು. ಆದ್ರೇ, ಇದೆ ವೇಳೆ ನೂತನ ವಿಜಯನಗರ ಜಿಲ್ಲೆಯ ಕೇಂದ್ರ ಸ್ಥಾನವಾದ ಹೊಸಪೇಟೆಯಲ್ಲಿ ಕಳೆದ ಮೂರು ವರ್ಷದ ಶ್ರಮದಿಂದ ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರದ ವತಿ ಯಿಂದ ಕಳೆದ ವರ್ಷ ನಿರ್ಮಾಣ ವಾದ ಫ್ರೀಡಂ ಪಾರ್ಕ್ ನಿರ್ಮಾಣ ಮಾಡಲಾಯಿತು.

ಇದರ ಸಹಕಾರಿ ಸಹಭಾಗಿತ್ವದಲ್ಲಿ ಇದರ ನಿರ್ವಹಣೆ ಹೊತ್ತಿರೋ ಅನಂತ ಜೋಷಿ, ಆರಕ್ಕೂ ಹೆಚ್ಚು ಮಳಿಗೆಯಲ್ಲಿ ಉತ್ತರ ಮತ್ತು ದಕ್ಷಿಣ ಭಾಗದ ತಿಂಡಿ ತಿನಿಸುಗಳು ಮಾಡೋದ್ರ ಜೊತೆ ಪಾರ್ಕ್ ಗೆ ಬಂದ ಮಹಿಳೆಯರು ಮಕ್ಕಳು ಸೇರಿದಂತೆ ಎಲ್ಲ ವರ್ಗದ  ಜನರಿಗೆ ಬೇಕಾದ ಮನೋರಂಜನೆ ಆಟಗಳನ್ನಾಡೋ ವಸ್ತುಳನ್ನು ಇಲ್ಲಿರಿಸಿದ್ದಾರೆ. ಪಾರ್ಕ್ ನಿರ್ವಹಣೆ  ಸೇರಿದಂತೆ ಮಳಿಗೆಯಲ್ಲಿ ಕೆಲಸ ಮಾಡೋರು ಸೇರಿ ಒಟ್ಟು 25ಕ್ಕೂ ಹೆಚ್ಚು ಜನರಿಗೆ ಕೆಲಸ ನೀಡಿದ್ದಾರೆ. ಕೇವಲ  ಹೊಸಪೇಟೆ ಜನರಗಷ್ಟೇ ಅಲ್ಲದೇ ಕೊಪ್ಪಳ, ಬಳ್ಳಾರಿ, ಸೇರಿದಂತೆ ಕಲ್ಯಾಣ ಕರ್ನಾಟಕದ  ನಾಲ್ಕಾರು ಜಿಲ್ಲೆಯ ಜನರಿಗೆ ಮನರಂಜನಾ ಕೇಂದ್ರವಾಗಿದೆ.

ವಿದ್ಯೆ ಕೈ ಹಿಡಿಯದಿದ್ದರೇನು ಬದುಕು ಸಾಗಬೇಕಲ್ಲ? ಜೀವನಕ್ಕೆ ಜೇನು ಕೃಷಿಯ ಖುಷಿ

15 ನವೋದ್ಯಮಗಳು ಸ್ವಾವಲಂಬನೆ ಜೀವನಕ್ಕೆ ದಾರಿಯಾಗಿದೆ ಪಾರ್ಕ್:
ಫ್ರೀಡಂ ಪಾರ್ಕ್ ಎಂದ ತಕ್ಷಣ ನಮ್ಮ ಗಮನ ಹರಿಯೊದು ಬೆಂಗಳೂರಿನ ಫ್ರೀಡಂ ಪಾರ್ಕ್ ರಾಜಕಾರಣಿಗಳಿಂದ ಹಿಡಿದು ಪ್ರತಿಯೊಬ್ಬರು ತಮ್ಮ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟಿಸಲು ಮಾಡಿಕೊಂಡ ವೇದಿಕೆಯಾಗಿದೆ ಫ್ರೀಡಂ ಪಾರ್ಕ್. ಆದ್ರೇ, ಹೊಸಪೇಟೆಯ ಈ ಪಾರ್ಕ್ ಅದಕ್ಕಿಂತ ಸಾಕಷ್ಟು ಭಿನ್ನವಾಗಿದೆ.

ಸ್ಥಳೀಯ ಜನಪ್ರತಿನಿಧಿಗಳು ಆಸಕ್ತಿಯಿಂದ ಸರ್ಕಾರಿ ಸ್ಥಳದಲ್ಲಿ ಈ ಭಾಗದ ಉದ್ಯಮಿಗಳ ಸಹಕಾರದೊಂದಿಗೆ ಅವರ ಸಾಮಾಜಿಕ ಹೊಣೆಗಾರಿಕೆಯ ನಿಧಿಯಲ್ಲಿ ಅಂದಾಜು 12ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ ಫ್ರೀಡಂ ಪಾರ್ಕ್  ನಿರ್ಮಾಣ ಮಾಡಲಾಗಿದೆ. ಎಸ್.ಕೆ.ಎಂ.ಪಿ.ಎಲ್,  ಜಿಂದಾಲ್ ಹಾಗೂ ಜಿಲ್ಲಾ ಖನಿಜ ನಿಧಿಯ ಸಹಕಾರದೊಂದಿಗೆ ಹೊಸಪೇಟೆ ಸ್ಟೇಷನ್ ರಸ್ತೆಯ  ಕನಕದಾಸ ವೃತ್ತದಲ್ಲಿ ನಿರ್ಮಾಣ ಮಾಡಿದ ಈ ಫ್ರೀಡಂ ಪಾರ್ಕ್ ಕೇವಲ ಉದ್ಯಾನವನವಾಗದೆ, ಮನೋರಂಜನೆಯ ತಾಣವಾಗಿದೆ.  15 ನವೋದ್ಯಮಗಳು ಆರಂಭವಾಗಿ ಸ್ವಾವಲಂಭಿ ಜೀವನಕ್ಕೆ ದಾರಿಯಾಗಿದೆ ಈ ಪಾರ್ಕ್. ಅಲ್ಲದೇ ಈ ಪಾರ್ಕ್ ನಲ್ಲಿ ಇರುವ ಸಣ್ಣಪುಟ್ಟ ಅಂಗಡಿ,ಆಟದ ವಸ್ತುಗಳ ನಿರ್ವಹಣೆ ಮಾಡೋರು ಸೇರಿ 25 ಜನ ಉದ್ಯೋಗ ಕಂಡುಕೊಂಡಿದ್ದಾರೆ. ಇದರ ಮತ್ತೊಂದು ವಿಶೇಷ ಎಂದರೆ ಪಾರ್ಕ್ ನಿರ್ವಹಣೆ ಒಂದು ಸಹಕಾರಿ ಸಂಸ್ಥೆ ನಡೆಸುತ್ತಿರುವುದು ಆಂದೋಲನದ ಮೈಲುಗಲ್ಲು ಆಗಿದೆ.

ಆ.15ರ ಮೋದಿ ಕೆಂಪು ಕೋಟೆ ಭಾಷಣದ ವೇಳೆ ಅಮೆರಿಕ ಸಂಸದರು ಭಾಗಿ

ದೇಶಿಯ ಆಹಾರದ ಸೊಬಗು ಯುವಕರ ಕೈಗೆ ಕೆಲಸ
ಇಲ್ಲಿ ನಿತ್ಯ ಬರೋ ಜನರಿಗೆ ಪಾರ್ಕ್ ನಲ್ಲಿ ಸಿಗೋ ಏಂಜಾಯ್ ಮೆಂಟ್ ಜೊತೆ ದೇಶಿಯ ಆಹಾರದ ಸವಿಯಲು ವಿಶೇಷ ಮಳಿಗೆ ಮಾಡಲಾಗಿದೆ. ದೇಶಿಯ ಬಿಸಿ ವಗ್ಗರಣಿ,  ಮಿರ್ಚಿ, ವಡಾ ಬೊಂಡಾಗಳಿಂದ ಹಿಡಿದು ಆಧುನೀಕ ತಿಂಡಿಗಳಾದ ನೋಡಲ್ಸ್, ಗೋಬಿ ರೈಸ್ ಗಳ ವರೆಗೂ ವೈವಿಧ್ಯಮಯ ತಿಂಡಿ ತಿನಿಸುಗಳು ಆಗರವಾಗಿ ಈ ಪಾರ್ಕ್. ಇನ್ನೂ ಇಲ್ಲಿ ಮಕ್ಕಳಿಂದ ವೃದ್ಧರವರೆಗೂ ಆಟವಾಡಲು ಜೋಕಾಲಿ,  ಬಾಣ ಬಿರುಸು ಪ್ರದರ್ಶನ ( ವಾರಂತ್ಯ) ಶ್ಯೂಟಿಂಗ್, ಕುದುರೆ ಸವಾರಿ, ಮಕ್ಕಳಿಗೆ ಕಾರು, ರೈಲು, ಕುಣಿದಾಡಲು ಜಂಪ್ಂಗ್, ಬಲೂನ್ ಬೌಂಸ್ಸಿ ಮಾತ್ರವಲ್ಲದೇ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯೂ ಲಭ್ಯವಿದೆ. ಫೀಶ್ ಸ್ಪಾ, ಏರ್ ಹಾಕಿ,  360 ಡಿಗ್ರಿ ಸೇಲ್ಪಿ ಯಂತ್ರ ಸಹ ನಮ್ಮ ವೈವಿದ್ಯಮಯ ಚಿತ್ರತೆಗೆಯುವ ಆಟವನ್ನು ಸಹ ಆಡಬಹುದಾಗಿದೆ. ಪ್ರತಿಯೊಂದು ಆಟವಾಡೋ ಸ್ಥಳದಲ್ಲಿ ಮತ್ತು ಆಹಾರ ಮಳಿಗೆಯಲ್ಲಿ ಸಿಬ್ಬಂದಿ ನಿಯೋಜನೆ ಮಾಡೋ ಮೂಲಕ  ಇಲ್ಲಿ 25 ಜನರು ನಿತ್ಯ ಕೆಲಸ ಮಾಡುತ್ತಾರೆ.

ಹೆಚ್ಚು ಹೆಚ್ಚು ಜನರು ಬರೋದ್ರಿಂದ  ಗಟ್ಟಿಗೊಳ್ಳುತ್ತಿದೆ ಉದ್ಯಮ:
ಇನ್ನು ಉದ್ಯಾನವನದಲ್ಲಿ ನೈಸರ್ಗಿಕ ತೆಂಗಿನ ಕಂಬಗಳಿಂದ ಸಿದ್ಧಪಡಿಸಿದ ಆಸನಗಳು ನಡುವೆ ದೆಹಲಿಯ ಕೆಂಪು ಕೋಟೆಯನ್ನು ಹೋಲುವ ಕೋಟಗೆ ನಮ್ಮ ಸಾಂಪ್ರದಾಯಿಕ ಮೇಳಗಳನ್ನು ಹಿಡಿದು ನಿಂತ ಪರಿಚಾರಕರ ಮೂರ್ತಿ ಗಳು ನೈಜತೆಯ ನೆನಪು ಮಾಡಿಕೊಡುವಂತೆ ಸ್ವಾಗತಿಸಲು ದ್ವಾರ ಪಾಲಕರು ನಿಯೋಜನೆ ಮಾಡಲಾಗಿದೆ.  ಚಿತ್ರಗೀತೆಗಳಿಗೆ ತಕ್ಕಂತೆ ನೃತ್ಯ ಕಾರಂಜಿ, ಪ್ರಾಣವನ್ನು ಬಲಿ ಕೊಟ್ಟ  ರಾಷ್ಟ್ರನಾಯಕರ ಚಿತ್ರ, ಕಾರ್ಗಿಲ್ ವಿಜಯ ದಿವಸದ ಸವಿನೆನಪಿಗಾಗಿ  ಸೈನಿಕರು ರಾಷ್ಟ್ರ ಧ್ವಜವನ್ನು ನೆಡುತ್ತಿರುವ ಕಂಚಿನ ಪ್ರತಿಮೆ ಸೇರಿದಂತೆ ಹಲವು ವಿಶೇತೆಗಳಿರೋ ಹಿನ್ನೆಲೆ ಇಲ್ಲಿ ನಿತ್ಯ ಸಾವಿರಾರು ಜನರು ಬರುತ್ತಾರೆ. ಎಷ್ಟು ಆಕರ್ಷಣಿಯವಾಗಿ ಮಾಡುತ್ತೇವೆ ಅಷ್ಟೊಂದು ಜನರು ಬರುತ್ತಾರೆ ಇದರಿಂದ ನಮ್ಮ ಉದ್ಯಮ ಗಟ್ಟಿಯಾಗುತ್ತದೆ ಎನ್ನುತ್ತಾರೆ ನಿರ್ವಹಣೆ ಹೊತ್ತಿರೋ ಅನಂತ ಜೋಷಿ. ಇನ್ನು ಪ್ರತಿನಿತ್ಯವೂ ಇಲ್ಲಿ ಬೆಳಿಗ್ಗೆ 5.30 ರಿಂದ 7ಗಂಟೆಯ ವರೆಗೂ ಉಚಿತ ಯೋಗ ತರಬೇತಿಯನ್ನು ಪತಂಜಲಿ ಯೋಗ ಸಮಿತಿಯ ಸಹಯೋಗದಲ್ಲಿ ನಡೆಸುತ್ತಿರುವುದು ಒಂದು ವಿಶೇಷವಾಗಿದೆ.

click me!